newsfirstkannada.com

ICC World Cup: ಏಕದಿನ ವಿಶ್ವಕಪ್‌ಗೆ ಟೀಮ್‌ ಇಂಡಿಯಾ ಪ್ರಕಟ.. ತಂಡದಲ್ಲಿ ಯಾಱರಿಗೆ ಸ್ಥಾನ?

Share :

05-09-2023

  ಸಂಜು ಸ್ಯಾಮ್ಸನ್, ಚಹಾಲ್, ತಿಲಕ್ ವರ್ಮಾಗೆ ಸ್ಥಾನ ಸಿಕ್ಕಿತೇ?

  ಅಚ್ಚರಿ ಎಂಬಂತೆ ಆಯ್ಕೆಯಾದ ಸೂರ್ಯಕುಮಾರ್ ಯಾದವ್

  ನಾಯಕ ರೋಹಿತ್ ಶರ್ಮಾವಾದರೆ, ಉಪನಾಯಕನ ಪಟ್ಟ..?

2023ರ ವಿಶ್ವಕಪ್​ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಕೊನೆಗೂ ಪ್ರಕಟ ಮಾಡಿದೆ. 15 ಆಟಗಾರರ ಹೆಸರನ್ನು ವಿಶ್ವಕಪ್​ಗೆ ಅನೌನ್ಸ್ ಮಾಡಿದೆ. ವಿಕೇಟ್​ ಕೀಪರ್ ಕಂ ಬ್ಯಾಟ್ಸ್​ಮನ್​ ಕೆ.ಎಲ್​ ರಾಹುಲ್ ಅವರು ಸ್ಥಾನ ಪಡೆದಿದ್ದಾರೆ.

ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ಸ್ಥಾನ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಸೂರ್ಯಕುಮಾರ್ ಸ್ಥಾನ ಪಡೆದಿರುವುದು ಎಲ್ಲರಿಗೂ ಅಚ್ಚರಿ ಮೂಡಿದೆ. ಒಳ್ಳೆಯ ಫಾರ್ಮ್​ನಲ್ಲಿರುವ ಇಶನ್ ಕಿಶನ್​ ಸ್ಥಾನ ಪಡೆದಿದ್ದು ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ತಂಡದಲ್ಲಿದ್ದಾರೆ. ಆದರೆ ಸಂಜು ಸ್ಯಾಮ್ಸನ್, ಚಹಾಲ್ ಮತ್ತು ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ ಅವರನ್ನು ತಂಡದಿಂದ ಹೊರಗಿಡಲಾಗಿದೆ.

ಆಲ್​ ರೌಂಡರ್​ಗಳಾಗಿ ತಂಡಕ್ಕೆ ಮೂವರನ್ನು ಆಯ್ಕೆ ಮಾಡಲಾಗಿದ್ದು ವೈಸ್ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಅಕ್ಷರ್​ ಪಟೇಲ್​ರನ್ನು ಆಯ್ಕೆ ಮಾಡಲಾಗಿದೆ. ಚಹಾಲ್​ ಬದಲಿಗೆ ಕುಲ್​ದೀಪ್​ ಯಾದವ್​ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

2023ರ ವಿಶ್ವಕಪ್​ಗೆ ಟೀಮ್​ ಇಂಡಿಯಾದ ಆಟಗಾರರು

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ICC World Cup: ಏಕದಿನ ವಿಶ್ವಕಪ್‌ಗೆ ಟೀಮ್‌ ಇಂಡಿಯಾ ಪ್ರಕಟ.. ತಂಡದಲ್ಲಿ ಯಾಱರಿಗೆ ಸ್ಥಾನ?

https://newsfirstlive.com/wp-content/uploads/2023/09/TEAM_INDIA-2.jpg

Load More