newsfirstkannada.com

ಕೆಮ್ಮಿನ ಸಿರಪ್ ಬಾಟಲ್ ನುಂಗಿದ ನಾಗರ ಹಾವು.. ಆಮೇಲೆ ಏನಾಯಿತು?

Share :

Published July 4, 2024 at 6:27am

  ಹಸಿವು ತಾಳಲಾರದೇ ಸಿರಪ್ ಬಾಟಲ್ ನುಂಗಿತಾ ಹಾವು?

  ಹೊಟ್ಟೆಯಲ್ಲಿ ಬಾಟಲ್ ಅರಗಿಸಿಕೊಳ್ಳಲಾಗದೇ ಸಂಕಷ್ಟ

  ನಾಗರ ಹಾವು ಅಷ್ಟು ದೊಡ್ಡ ಬಾಟಲ್ ನುಂಗಿದ್ದು ಹೇಗೆ?

ಭುವನೇಶ್ವರ್​: ನಾಗರ ಹಾವೊಂದು ಕೆಮ್ಮಿನ ಸಿರಪ್ ಬಾಟಲಿಯನ್ನು ನುಂಗಿರುವ ಘಟನೆ ಒಡಿಶಾದ ಭುವನೇಶ್ವರ್ ಬಳಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್​​ಗೆ ಚಾಕು ಇರಿತ, ಸಾವು

ಆಹಾರವಿಲ್ಲದೇ ಹಸಿದಿದ್ದ ನಾಗರ ಹಾವು ಅವಸರದಲ್ಲಿ ಕೆಮ್ಮಿನ ಸಿರಪ್ ಬಾಟಲಿಯನ್ನು ನುಂಗಿದೆ. ನುಂಗಿದ ಬಳಿಕ ಹೊಟ್ಟೆಯಲ್ಲಿ ಅದನ್ನು ಅಗಗಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ. ಇದರಿಂದ ನೋವು ತಡೆಯಲಾಗದೇ ಬಿದ್ದು ಹೊರಳಾಡಲು ಪ್ರಾರಂಭಿಸಿದೆ. ಇದೇ ವೇಳೆ ಹಾವನ್ನು ನೋಡಿದ ಕೆಲ ಜನರು ಸ್ನೇಕ್ ಹೆಲ್ಪ್ ಲೈನ್‌ ಅನ್ನು ಸಂಪರ್ಕ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಹೆಲ್ಪ್ ಲೈನ್‌ ಸಿಬ್ಬಂದಿ ಹಾವಿನ ಹೊಟ್ಟೆಯಿಂದ ಬಾಟಲ್ ನಿಧಾನವಾಗಿ ಹೊರಗಡೆ ತೆಗೆದು ಜೀವ ಉಳಿಸಿದ್ದಾರೆ. ಈ ನಾಗರ ಹಾವಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?

ಈಶಾನ್ಯ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿವೆ. ಜನರು, ಪ್ರಾಣಿ, ಪಕ್ಷಿಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯ ಸಂಭವವಿದೆ ಎಂದು ಹೇಳಲಾಗ್ತಿದೆ. ಅಸ್ಸಾಂ ರಾಜ್ಯವೊಂದರಲ್ಲೇ 45ಕ್ಕೂ ಹೆಚ್ಚು ಜನರು ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಮ್ಮಿನ ಸಿರಪ್ ಬಾಟಲ್ ನುಂಗಿದ ನಾಗರ ಹಾವು.. ಆಮೇಲೆ ಏನಾಯಿತು?

https://newsfirstlive.com/wp-content/uploads/2024/07/SNAKE-1.jpg

Load More