newsfirstkannada.com

VIDEO: ಭಾರತದ ಅತ್ಯಂತ ಹಿರಿಯ ಆನೆ ಇನ್ನಿಲ್ಲ.. 89 ವರ್ಷ ಬಿಜುಲಿ ಪ್ರಸಾದ್ ಬದುಕಿದ್ದೇ ರೋಚಕ

Share :

Published August 21, 2023 at 9:24pm

    89 ವರ್ಷದ ಅತ್ಯಂತ ಹಳೆಯ ಸಾಕಾನೆ ಬಿಜುಲಿ ಪ್ರಸಾದ್ ಇನ್ನಿಲ್ಲ

    ದಿ ವಿಲಿಯನ್ಸನ್ ಮಾಗೊರ್ ಗ್ರೂಪ್‌ಗೆ ಹೆಮ್ಮೆಯ ಸಂಕೇತವಾಗಿತ್ತು

    ಬೆಹಾಲಿ ಟೀ ಎಸ್ಟೇಟ್‌ನಲ್ಲಿ ಕೊನೆಯುಸಿರೆಳೆದ ಬಿಜುಲಿ ಪ್ರಸಾದ್

ದಿಸ್ಪುರ್: ಭಾರತದ ಅತ್ಯಂತ ಹಳೆಯ ಆನೆ ಬಿಜುಲಿ ಪ್ರಸಾದ್ ಇನ್ನಿಲ್ಲ. ದೇಶೀಯ ಏಷ್ಯಾಟಿಕ್ ಸಾಕಾನೆ ಮೃತಪಟ್ಟಿದೆ ಎಂದು ಅಸ್ಸಾಂ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿಜುಲಿ ಪ್ರಸಾದ್ ಇಂದು ಬೆಳಗಿನ ಜಾವ 3.30ರ ಸುಮಾರಿಗೆ ದಿ ವಿಲಿಯನ್ಸನ್ ಮಾಗೊರ್ ಗ್ರೂಪ್‌ನ ಬೆಹಾಲಿ ಟೀ ಎಸ್ಟೇಟ್‌ನಲ್ಲಿ ಕೊನೆಯುಸಿರೆಳೆದಿದೆ. ಬಿಜುಲಿ ಪ್ರಸಾದ್ ಆನೆಯ ವಯಸ್ಸು 89 ವರ್ಷ ಎಂದು ಅಂದಾಜಿಸಲಾಗಿದೆ.

ಬಿಜುಲಿ ಪ್ರಸಾದ್​ ಆನೆಯು ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಚಹಾ ತೋಟದ ಕೆಲಸಗಾರರು ಮತ್ತು ಸ್ಥಳೀಯರು ಸೇರಿದಂತೆ ಅನೇಕರು ಬಿಜುಲಿ ಪ್ರಸಾದ್ ಸಾವಿಗೆ ಸಂತಾಪ ಸೂಚಿಸಿದರು. ಬಿಜುಲಿ ಪ್ರಸಾದ್ ದಿ ವಿಲಿಯನ್ಸನ್ ಮಾಗೊರ್ ಗ್ರೂಪ್‌ಗೆ ಹೆಮ್ಮೆಯ ಸಂಕೇತವಾಗಿತ್ತು. ಇದನ್ನು ಮೊದಲು ಬಾರ್‌ಗಾಂಗ್ ಟೀ ಎಸ್ಟೇಟ್‌ಗೆ ಪುಟಾಣಿ ಕರುವಾಗಿದ್ದ ತರಲಾಗಿತ್ತು. ನಂತರ ಬಾರ್‌ಗಾಂಗ್ ಟೀ ಎಸ್ಟೇಟ್ ಅನ್ನು ಕಂಪನಿಯು ಮಾರಾಟ ಮಾಡಿದ ನಂತರ ಇಲ್ಲಿಗೆ ಸ್ಥಳಾಂತರಿಸಲಾಯಿತು. ವಿಶೇಷ ಎಂದರೆ ಬಿಜುಲಿ ಪ್ರಸಾದ್ ಭಾರತದಲ್ಲಿ ದಾಖಲಾದ ಅತ್ಯಂತ ಹಳೆಯ ಸಾಕಾನೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂದು ಆನೆ ಶಸ್ತ್ರಚಿಕಿತ್ಸಕ ಡಾ.ಕುಶಾಲ್ ಕನ್ವರ್ ಶರ್ಮಾ ಹೇಳಿದ್ದಾರೆ.

ಸಾಮಾನ್ಯವಾಗಿ ಏಷ್ಯಾದ ಕಾಡು ಆನೆಗಳು 62 ರಿಂದ 65 ವರ್ಷಗಳವರೆಗೆ ಬದುಕುತ್ತವೆ. ಆದರೆ ಈ ಆನೆಯು ಸರಿಯಾದ ಕಾಳಜಿಯೊಂದಿಗೆ ಸುಮಾರು 89 ವರ್ಷಗಳವರೆಗೆ ಬದುಕಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಭಾರತದ ಅತ್ಯಂತ ಹಿರಿಯ ಆನೆ ಇನ್ನಿಲ್ಲ.. 89 ವರ್ಷ ಬಿಜುಲಿ ಪ್ರಸಾದ್ ಬದುಕಿದ್ದೇ ರೋಚಕ

https://newsfirstlive.com/wp-content/uploads/2023/08/elephant-2-1.jpg

Load More