ಈಗಾಗಲೇ ಗೆಲುವಿನ ಅಲೆಯಲ್ಲಿರುವ ರೋಹಿತ್ ಶರ್ಮಾ ಪಡೆ
ಬಲಿಷ್ಠ ಆಫ್ರಿಕರನ್ನು ಮಣಿಸುವುದು ಭಾರತ ತಂಡಕ್ಕೆ ಚಾಲೆಂಜ್!
ಟಾಸ್ ಗೆದ್ದುಕೊಂಡ ಭಾರತ ಬ್ಯಾಟಿಂಗ್, ಆಫ್ರಿಕಾಕ್ಕೆ ಫೀಲ್ಡಿಂಗ್
ವಿಶ್ವಕಪ್ನ ಎರಡು ಬಲಿಷ್ಠ ತಂಡಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಪಂದ್ಯವನ್ನು ಆಡುತ್ತಿದ್ದು ಟೀಮ್ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಎದುರಾಳಿ ತೆಂಬ ಬವುಮ ನೇತೃತ್ವದ ಆಫ್ರಿಕಾ ಫೀಲ್ಡಿಂಗ್ ಮಾಡಲಿದೆ.
ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಗೆಲುವಿನ ಅಲೆಯಲ್ಲಿದ್ದು ಜೊತೆಗೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಏಕದಿನ ಪಂದ್ಯದಲ್ಲಿ ರೋಹಿತ್ ಅತ್ಯಧಿಕ ವೈಯಕ್ತಿಕ 264 ರನ್ಗಳನ್ನು ಸಿಡಿಸಿರುವುದು ಇದೇ ಮೈದಾನದಲ್ಲಿ ಎನ್ನುವುದು ವಿಶೇಷ. ಹೀಗಾಗಿ ಇಂದು ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮತ್ತೆ ಆ ಅಬ್ಬರದ ಬ್ಯಾಟಿಂಗ್ ಮಾಡುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.
ಬರ್ತ್ಡೇ ಬಾಯ್ ವಿರಾಟ್ ಕೊಹ್ಲಿ ಕೂಡ ಭರ್ಜರಿ ಫಾರ್ಮ್ನಲ್ಲಿದ್ದು 49ನೇ ಸೆಂಚುರಿಯ ಹೊಸ್ತಿಲಿನಲ್ಲಿದ್ದಾರೆ. ಹುಟ್ಟುಹಬ್ಬದ ಕಾಣಿಕೆಯಾಗಿ ಅಭಿಮಾನಿಗಳಿಗೆ ಕೊಹ್ಲಿ ಮತ್ತೊಂದು ಶತಕ ನೀಡ್ತಾರೆ ಎಂದು ಹೇಳಲಾಗುತ್ತಿದೆ. ರೋಹಿತ್, ಗಿಲ್ ಓಪನರ್ ಆದ್ರೆ, ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ ಸೇರಿದಂತೆ ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಲು ರೆಡಿಯಾಗಿದ್ದಾರೆ. ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ಕಣಕ್ಕೆ ಇಳಿಯಲಿದ್ದಾರೆ. ಇನ್ನು ಭಾರತದ ಬೌಲಿಂಗ್ ಪಡೆ ಕೂಡ ಸ್ಟ್ರಾಂಗ್ ಇದ್ದು ಬೂಮ್ರಾ, ಮೊಹಮ್ಮದ್ ಶಮಿ, ಸಿರಾಜ್ ಎದುರಾಳಿಗಳನ್ನ ಕಟ್ಟಿ ಹಾಕುವ ತವಕದಲ್ಲಿದ್ದಾರೆ. ಶಮಿ ಮತ್ತೊಮ್ಮೆ 5 ವಿಕೆಟ್ಗಳ ಗೊಂಚಲು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
🚨 Toss and Team Update 🚨#TeamIndia win the toss and elect to bat first in Kolkata 👌
Follow the match ▶️ https://t.co/iastFYWeDi#CWC23 | #MenInBlue | #INDvSA pic.twitter.com/gvh49Yl6gi
— BCCI (@BCCI) November 5, 2023
ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡ ವಿಶ್ವಕಪ್ ಟೂರ್ನಿಯಲ್ಲಿ ಕಪ್ ಗೆಲ್ಲುವ ಫೆವರೀಟ್ ಟೀಮ್ ಎನಿಸಿವೆ. ಪಾಯಿಂಟ್ ಪಟ್ಟಿಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದ್ರೆ, ಆಫ್ರಿಕಾ 2 ನೇ ಸ್ಥಾನದಲ್ಲಿದೆ. ಕ್ಯಾಪ್ಟನ್ ತೆಂಬ ಬವುಮ ನೇತೃತ್ವದ ಆಫ್ರಿಕಾ ಟೀಮ್ ಬಲಿಷ್ಠವಾಗಿದೆ. ಕ್ವಿಂಟನ್ ಡಿಕಾಕ್, ಡೆಸ್ಸಾನ್, ಮರ್ಕಾರ್ಮ್, ಎನ್ರಿಚ್ ಕ್ಲಾಸಿನ್ ಸೇರಿ ಆಲ್ ರೌಂಡರ್ಗಳು ಸೇರಿದಂತೆ ತಂಡ ಎದುರಾಳಿಯನ್ನು ಸದ್ದು ಅಡಗಿಸುವಂತೆ ಇದೆ. ಆದ್ರೆ ತವರಿನಲ್ಲಿ ಟೀಮ್ ಇಂಡಿಯಾವನ್ನು ಮಣಿಸುವುದು ಕೊಂಚ ಕಷ್ಟವೇ ಸರಿ. ಏಕೆಂದರೆ ಭಾರತದ ಈ ಗೆಲುವಿನ ನಾಗಲೋಟವೇ ಕಾರಣ.
ಟೀಮ್ ಇಂಡಿಯಾದ ಪ್ಲೇಯಿಂಗ್- 11
ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯ, ರವೀಂದ್ರ ಜಡೇಜಾ, ಬೂಮ್ರಾ, ಮೊಹಮ್ಮದ್ ಶಮಿ, ಸಿರಾಜ್, ಕುಲ್ದೀಪ್ ಯಾದವ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ