ಬಾಬರ್ ಪಡೆಯ ಗೇಮ್ಪ್ಲಾನ್ಗೆ ಟಕ್ಕರ್ ಕೊಟ್ಟ ಭಾರತ
ಒಂದು ವೇಳೆ ಇಂದು ಮಳೆ ಬಂದರೇ ಭಾರತಕ್ಕೆ ಹೇಗೆ ಲಾಸ್?
ಪಾಕ್ ಬೌಲರ್ಗಳಿಗೆ ಬೆವರಿಳಿಸಿದ ಓಪನರ್ ಬ್ಯಾಟ್ಸ್ಮನ್ಸ್
ಮತ್ತೆ ನಿರಾಸೆ.. ಫುಲ್ ಮಜಾ ಸವಿಯುವ ಅಭಿಮಾನಿಗಳ ನಿರೀಕ್ಷೆಗೆ ಮಳೆರಾಯ ತಣ್ಣೀರೆರೆಚಿದ. ಭಾರತ-ಪಾಕಿಸ್ತಾನ ನಡುವಿನ ಸೂಪರ್-4 ಪಂದ್ಯಕ್ಕೆ ಮಳೆ ಅವಕೃಪೆ ತೋರಿತು. ಆದರೂ ಬೇಸರ ಪಡಬೇಕಿಲ್ಲ. ಏಕೆಂದರೆ ಪಂದ್ಯಕ್ಕೆ ರಿಸರ್ವ್ ಡೇ ಇರೋದ್ರಿಂದ ಇವತ್ತು ಪಂದ್ಯ ಮುಂದುವರೆಯಲಿದೆ.
ಕೊಲೊಂಬೋದಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಟೀಮ್ ಇಂಡಿಯಾ ಬದ್ಧವೈರಿ ಪಾಕ್ಗೆ ಮುಟ್ಟಿನೋಡಿಕೊಳ್ಳುವಂತ ಆನ್ಸರ್ ನೀಡಿತು. ಮತ್ತೊಮ್ಮೆ ಟಾಪ್ ಆರ್ಡರ್ ಕಟ್ಟಿಹಾಕುವ ಬಾಬರ್ ಪಡೆಯ ಸ್ಟ್ರಾಟಜಿಯನ್ನ ಭಾರತದ ಓಪನರ್ಸ್ ಬುಡಮೇಲು ಮಾಡಿದ್ರು.
ರೋಹಿತ್-ಗಿಲ್ ರಣಾರ್ಭಟಕ್ಕೆ ಉಡೀಸ್..!
ಮೊದಲ ಮುಖಾಮುಖಿಯಲ್ಲಿ ಪಾಕ್ ಬೌಲರ್ಸ್ ಎದುರು ತಗ್ಗಿಸಿದ ಇಂಡಿಯನ್ ಓಪನರ್ಸ್ ನಿನ್ನೆ ತಲೆ ಎತ್ತಿ ನಿಲ್ಲುವಂತ ಆಟವಾಡಿದ್ರು. ಬಲಿಷ್ಠ ಪಾಕ್ ಪೇಸ್ ಬ್ಯಾಟರಿಯನ್ನ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಉಡೀಸ್ ಮಾಡಿದ್ರು. ಕೊಲಂಬೋದಲ್ಲಿ ಅಕ್ಷರಶಃ ರೌದ್ರ ನರ್ತನ ತೋರಿದ ಓಪನಿಂಗ್ ಜೋಡಿ ಬೊಂಬಾಟ್ ಶತಕದ ಜೊತೆಯಾಟವಾಡಿ ವಿಜೃಂಭಿಸಿತು.
ಅರ್ಧಶತಕದೊಂದಿಗೆ ಪಾಕ್ ಬೌಲರ್ಸ್ ಜನ್ಮಜಾಲಾಡಿದ ಗಿಲ್
ಮೊದಲ ಮುಖಾಮುಖಿಯಲ್ಲಿ ರನ್ ಗಳಿಸಲು ತಿಣುಕಾಡಿದ್ದ ಶುಭ್ಮನ್ ಗಿಲ್ ನಿನ್ನೆ ಉಗ್ರರೂಪವನ್ನೇ ತಾಳಿದ್ರು. ಮೊದಲ ಎಸೆತದಿಂದಲೇ ಪಾಕ್ ಬೌಲರ್ ಜನ್ಮಜಾಲಾಡಿದ ಪ್ರಿನ್ಸ್ 37 ಎಸೆತಗಳಲ್ಲಿ ಸ್ಫೋಟಕ ಹಾಫ್ಸೆಂಚುರಿ ಸಿಡಿಸಿ ಪೆವಿಲಿಯನ್ ಸೇರಿದರು.
ರೋಹಿತ್ ಅಂದ್ರೆ ಫ್ಲವರ್ ಅಲ್ಲ, ಫಯರ್..!
ರೋಹಿತ್ ಅಂದ್ರೆ ಫ್ಲವರ್ ಅಂದುಕೊಂಡಿದ್ದ ಪಾಕ್ ಬೌಲರ್ ಯೋಚನೆಯನ್ನ ಹಿಟ್ಮ್ಯಾನ್ ತಲೆಕೆಳಗಾಗಿಸಿದ್ರು. ಸಿಕ್ಸರ್-ಬೌಂಡ್ರಿಗಳ ಭೋರ್ಗರೆತದ ಮೂಲಕ ನಾನು ಫ್ಲವರ್ ಅಲ್ಲ, ಫಯರ್ ಅನ್ನೋದನ್ನ ತೋರಿಸಿದ್ರು. 4 ಬೌಂಡ್ರಿ, 6 ಸಿಕ್ಸರ್ ಸಹಿತ ಅರ್ಧಶತಕ ಸಿಡಿಸಿ ಕಮಾಲ್ ಮಾಡಿದ್ರು.
ಪಂದ್ಯಕ್ಕೆ ಮಳೆ ಅಡ್ಡಿ..ಇಂದಿಗೆ ಮುಂದೂಡಿಕೆ..
ಓಪನರ್ಸ್ ನಿರ್ಗಮಿಸಿದ ಬಳಿಕ ಕಿಂಗ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಕೂಡಿಕೊಂಡು ತಾಳ್ಮೆಯುತ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ್ರು. ಉತ್ತಮ ಸ್ಥಿತಿಯಲ್ಲಿದ್ದ ಭಾರತ 147 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಬಳಿಕ ಪಂದ್ಯ ಶುರುವಾಗಲಿಲ್ಲ. ಕೊನೆಗೆ ರಾತ್ರಿ 8.45ಕ್ಕೆ ಅಂಪೈರ್ಗಳು ಉಭಯ ಕ್ಯಾಪ್ಟನ್ಗಳ ಜೊತೆ ಚರ್ಚಿಸಿ ಪಂದ್ಯ ಇಂದಿಗೆ ಮುಂದೂಡಿದ್ರು.
ಇಂದೂ ಮಳೆ ಬಂದರೆ ಏನಾಗುತ್ತೆ..?
ನಿನ್ನೆ ಆಟಕ್ಕಿಂತ ಮಳೆರಾಯನೇ ಹೆಚ್ಚು ಸದ್ದು ಮಾಡಿದ. ಒಂದು ವೇಳೆ ಇಂದು ಮಳೆ ಬರದೇ ಹೋದಲ್ಲಿ ಸಂಪೂರ್ಣ 50 ಓವರ್ಗಳ ಆಟ ನಡೆಯಲಿದೆ. ಭಾರತ 147 ರನ್ನಿಂದ ಇನ್ನಿಂಗ್ಸ್ ಮುಂದುವರಿಸಲಿದೆ. ಇಷ್ಟಾಗಿಯೂ ಮತ್ತೆ ಮಳೆ ಅವಕೃಪೆ ತೋರಿದ್ರೆ ಡೆಕ್ವರ್ತ್ ಲೂಯಿಸ್ ನಿಯಮದನ್ವಯ ಓವರ್ ಕಡಿತ ಮಾಡಿ ಆಡಿಸಲಾಗುತ್ತೆ. ಹಾಗೊಂದು ವೇಳೆ ಆಡಲು ಸ್ವಲ್ಪ ಅನುವು ಮಾಡಿಕೊಡದಿದ್ದಲ್ಲಿ ಪಂದ್ಯವನ್ನ ರದ್ದು ಮಾಡಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತೆ.
ಮಳೆ ರದ್ದಿನಿಂದ ಭಾರತಕ್ಕೆ ಆಗುವ ನಷ್ಟವೇನು ?
ಇಂದೂ ನಿಜಕ್ಕೂ ಮಳೆ ಬಾರದಿರಲಿ. ಯಾಕಂದ್ರೆ ಬಂದಿದ್ದೇ ಆದಲ್ಲಿ ಅದರಿಂದ ಟೀಮ್ ಇಂಡಿಯಾಗೆ ಹೆಚ್ಚು ಲಾಸ್. ರದ್ದಿನಿಂದ 1 ಅಂಕ ಪಡೆಯುವ ಭಾರತ ಉಳಿದೆರಡು ಪಂದ್ಯಗಳನ್ನ ಗೆಲ್ಲಲೇಕಾಗುತ್ತೆ. ಜೊತೆಗೆ ನೆಟ್ರನ್ಗೇಟ್ ಕೂಡ ಉತ್ತಮಪಡಿಸಿಕೊಳ್ಳಬೇಕು. ಆಗಲಷ್ಟೇ 5 ಅಂಕ ಪಡೆದು ಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲಿದೆ. ಎರಡರ ಪೈಕಿ ಒಂದು ಪಂದ್ಯ ಸೋತರೂ ಫೈನಲ್ ಹಾದಿ ದುರ್ಗಮವಾಗಲಿದೆ. ಇಂದೂ ಸಂಪೂರ್ಣ ಪಂದ್ಯ ನಡೆಯಲಿ. ರೋಹಿತ್ ಪಡೆ ಬದ್ಧವೈರಿ ಪಾಕ್ ಮಣಿಸಿ ಸೂಪರ್- 4ನಲ್ಲಿ ಶುಭಾರಂಭ ಮಾಡಲಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ