newsfirstkannada.com

ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಐವರು.. ವರುಣಾರ್ಭಟಕ್ಕೆ ದೇಶದಲ್ಲಿ ಲೆಕ್ಕವಿಲ್ಲದಷ್ಟು ಸಾವು ನೋವು

Share :

Published July 1, 2024 at 6:35am

  ಹತ್ತಾರು ಕಾರು, ಬೈಕ್​ಗಳನ್ನ ಕೊಚ್ಚಿ ಕೊಂಡೊಯ್ತಿದೆ ನದಿ

  ಮಳೆಯಿಂದಾಗಿ ದೆಹಲಿಯಲ್ಲಿ 11, ಅಸ್ಸಾಂನಲ್ಲಿ ಇಬ್ಬರು ಸಾವು

  ರಜೆಗೆ ಜಲಪಾತ ವೀಕ್ಷಣೆಗೆ ಬಂದ ಕುಟುಂಬ ನೀರು ಪಾಲು

ಮುಂಗಾರು ಮಳೆ ನಿಧಾನಕ್ಕೆ ಸುರಿದರೆ ಸಂತಸ. ಬೇಕಾದಷ್ಟು ಬಂದ್ರೆ ಸಂಭ್ರಮ. ಹೆಚ್ಚಾದ್ರೆ ಸಂಕಷ್ಟ. ಮಳೆಯ ಜೊತೆ ಆಟ ಆಡೋದಕ್ಕೆ ನಿಂತ್ರೆ ಪ್ರಾಣ ಸಂಕಟ. ಬಿಸಿಲಿನ ಬೇಗೆಗೆ ಬೆಂಡಾಗಿದ್ದ ಜನರು, ಕಾಣದ ಕಡಲಿಗೆ ಹಂಬಲಿಸ್ತಾ ಮಳೆಗಾಗಿ ಪ್ರಾರ್ಥಿಸ್ತಿದ್ರು. ಹೀಗೆ ಬಂದ ವರುಣ ಪ್ರಾಣಕ್ಕೂ ಸಂಚಕಾರ ತರ್ತಿದ್ದಾನೆ.

ನಾಲ್ವರು ಮಕ್ಕಳು, ಓರ್ವ ಮಹಿಳೆ ನೀರುಪಾಲು

ಎಂಥಾ ಭಯಾನಕ ದೃಶ್ಯ ನೋಡಿ ಇದು.. ರಜೆ ಇದೆ ಎಂಜಾಯ್ ಮಾಡೋಣ ಅಂತಾ ಪ್ರವಾಸಕ್ಕೆ ಫ್ಯಾಮಿಲಿ ಟ್ರಿಪ್ ಹೋಗಿದ್ದವರು ಜಲಾಘಾತಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದ ಲೋನವಾಲದಲ್ಲಿರೋ ಭುಶಿ ಡ್ಯಾಮ್ ಪಕ್ಕದ ಜಲಪಾತ ವೀಕ್ಷಣೆಗೆ ಕುಟುಂಬವೊಂದು ಹೋಗಿತ್ತು. ಏಕಾಏಕಿ ಡ್ಯಾಮ್ ನೀರು ತುಂಬಿ ಹರಿದಿದೆ. ಇದರ ಪರಿಣಾಮ ಮಹಿಳೆ ಹಾಗೂ ನಾಲ್ವರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವರುಣನಿಗೂ ಎದೆನಡುಗಿಸುವಂತಿದೆ.

ನೋಡನೋಡ್ತಿದ್ದಂತೆ ಕುಸಿದೇ ಬಿಡ್ತು ರಸ್ತೆ

ಗುಜರಾತ್​ನ ಅಹಮದಾಬಾದ್ ಭಾರೀ ಮಳೆಯಿಂದಾಗಿ ನೋಡನೋಡ್ತಿದ್ದಂತೆ ರಸ್ತೆಯೊಂದು ಕುಸಿದು ಬಿಟ್ಟಿದೆ. ದೊಡ್ಡ ರಂಧ್ರವೇ ನಡುರೋಡಲ್ಲಿ ಬಿದ್ದು ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ. ನಡುರಸ್ತೆಯಲ್ಲಿ ಮಿನಿ ಜಲಪಾತ ಸೃಷ್ಟಿಯಾದಂತಿತ್ತು.

ಕುಸಿದ ರಸ್ತೆಯಲ್ಲಿ ಸಿಲುಕಿದ ಕಾರು

ಇದೇ ಗುಜರಾತ್​ನ ಗಾಂಧಿನಗರದಲ್ಲಿಯೂ ರಸ್ತೆಯೊಂದು ಮಳೆಯ ಹೊಡೆತಕ್ಕೆ ಬಾಯ್ಬಿಟ್ಟಿದೆ. ಕಾರೊಂದು ಸಿಲುಕಿಹಾಕಿಕೊಂಡಿದ್ದು, ಪರದಾಟಕ್ಕೆ ಕಾರಣವಾಯ್ತು

ಸೋರುತಿಹುದು ರೇಲ್ವೇ ನಿಲ್ದಾಣದ ಮಾಳಿಗೆ

ಗುಜರಾತ್​ನ ಆನಂದ್ ನಗರದಲ್ಲಿರೋ ರೇಲ್ವೇ ನಿಲ್ದಾಣ ಮಳೆಗೆ ಸೋರಲು ಪ್ರಾಂರಂಭಿಸಿತ್ತು. ಪ್ರಯಾಣಿಕರಿಗೆ ಪರದಾಟ ಅನಿವಾರ್ಯವಾಗಿತ್ತು.

ಇದನ್ನೂ ಓದಿ: ಭಾರತದ ಬಾಲಕಿ ಪ್ರತಿಭೆಗೆ ಹುಚ್ಚೆದ್ದು ಕುಣಿದ ಅಮೆರಿಕನ್ಸ್​​.. ಈಕೆ ವಯಸ್ಸು ಕೇಳಿದ್ರೆ ಶಾಕ್​ ಆಗ್ತೀರಾ!

ಅವ್ಯವಸ್ಥೆಯಿಂದ ಸಂಚಾರಕ್ಕೆ ಸಂಚಕಾರ

ದೆಹಲಿಯಲ್ಲಿ ವರುಣನಬ್ಬರ ಜೋರಾಗಿದೆ. ಈ ನಡುವೆ ಫರಿದಾಬಾದ್​ನ ಗ್ರೀನ್​ಫೀಲ್ಡ್​ ಕಾಲೋನಿಯಲ್ಲಿ ಮಳೆನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿರೋದ್ರಿಂದ ಕಾರೊಂದು ಸಿಕ್ಕಿಬಿದ್ದಿತ್ತು. ಪಾಪ ಆ ಲೇಡಿ ಓನರ್ ಗೋಳು ಈ ಕಣ್ಣಲ್ಲಿ ನೋಡೋಕೆ ಆಗ್ತಿಲ್ಲ

ಕಾರುಗಳನ್ನ ಕೊಚ್ಚಿ ಕೊಂಡೊಯ್ತಿದೆ ನದಿ

ಉತ್ತರಾಖಂಡ್​ನ ಹರಿದ್ವಾರದಲ್ಲಿ ಮಳೆದ್ವಾರ ಓಪನ್ ಆದಂತಿದೆ. ಶುಖಿ ನದಿ ಅಬ್ಬರದ ಹರಿವಿನಲ್ಲಿ ಕಾರುಗಳು ತರೆಗೆಲೆಗಳಾಗಿವೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಹತ್ತಾರು ಕಾರುಗಳು, ಬೈಕ್​ಗಳು ಕೊಚ್ಚಿ ಹೋಗ್ತಿವೆ. ಸುಖಿ ನದಿ ಸಾಮಾನ್ಯವಾಗಿ ಬತ್ತಿದ ಸ್ಥಿತಿಯಲ್ಲೇ ಇರುತ್ತಿತ್ತು. ನೀರಿಲ್ಲದ ಕಾರಣ ಅನೇಕರು ಎಂದಿನಂತೆ ಅಲ್ಲಿಯೇ ವಾಹನಗಳನ್ನು ನಿಲ್ಲಿಸಿದ್ದರು. ಆದ್ರೆ ಏಕಾಏಕಿ ಸುರಿದ ಭಾರೀ ಮಳೆಗೆ ಸುಖಿ ನದಿ ಉಕ್ಕಿ ಹರಿದಿದೆ. ಇದರಿಂದ ಹಲವು ಕಾರು, ಬಸ್‌ಗಳು ಕೊಚ್ಚಿ ಹೋಗಿವೆ.

ಕಾರಿನ ಮೇಲೆ ಬಿದ್ದ ಬೃಹತ್ ಮರ

ಅತ್ತ ಗುಜರಾತ್​ನಲ್ಲಿ ಗಾಳಿ ಮಳೆಗೆ ಬೃಹತ್ ಮರವೊಂದು ಬಿದ್ದಿದೆ. ಅಲ್ಲೇ ನಿಲ್ಲಿಸಿದ್ದ ಕಾರುಗಳ ಮೇಲೆ ಬಿದ್ರಿಂದ ಫುಲ್ ಜಖಂ ಆಗಿವೆ. ಎರಡು ಕಾರುಗಳ ಸೌಂದರ್ಯವನ್ನ ಮರ ಕೆಡಿಸಿದೆ. ಅತ್ತ ನಿಂತಿದ್ದ ಕಾರುಗಳಾಗಿದ್ರಿಂದ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ಸ್ಯಾಂಡಲ್​​ವುಡ್​ ಮತ್ತೋರ್ವ ನಟಿಗೂ ಅಶ್ಲೀಲ ಮೆಸೇಜ್​​ ಕಳಿಸಿದ್ದ ರೇಣುಕಾಸ್ವಾಮಿ.. ಏನಿದು ಹೊಸ ಟ್ವಿಸ್ಟ್​​?

ಮಳೆಗೆ ಮುಳುಗಿದ ಅಲ್ಕಾಪುರ ಸೊಸೈಟಿ

ಇನ್ನು, ಮಳೆಗೆ ಅಲ್ಕಾಪುರ ಸೊಸೈಟಿಯಲ್ಲಿರೋ ಮನೆಗಳು ಜಲಾವೃತಗೊಂಡಿವೆ. ಮಂಡಿವರೆಗೆ ನಿಂತ ನೀರಲ್ಲೇ ಓಡಾಡೋ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿತ್ತು.

ದೆಹಲಿಯಲ್ಲಿ 11, ಅಸ್ಸಾಂನಲ್ಲಿ ಇಬ್ಬರು ಸಾವು

ಮಳೆ ಸಂಬಂಧಿತ ಅವಘಡದಲ್ಲಿ ಈವರೆಗೆ ದೆಹಲಿಯಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ದೆಹಲಿ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು, ಅಸ್ಸಾಂನಲ್ಲೂ ವರುಣನ ಅವಾಂತರ ಜೋರಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ‘ದರ್ಶನ್​​ ನನ್ನ ಮಗು, ಅವನಷ್ಟೇ ನೋವು ತಿಂದಿದೀನಿ’- ಕೊಲೆ ಕೇಸ್​ ಬಗ್ಗೆ ಹಂಸಲೇಖ ಬೇಸರ!

ಒಟ್ಟಿನಲ್ಲಿ ಮಳೆ ಹಳ್ಳಕೊಳ್ಳ, ನದಿ, ತೊರೆ, ಜಲಪಾತಗಳಿಗೆ ಜೀವಕಳೆ ನೀಡಿದ್ರೆ, ಇನ್ನೂ ಕೆಲವೆಡೆ ಅಪಾಯಕ್ಕೂ ಆಹ್ವಾನಕೊಟ್ಟಿದೆ. ಜನರ ಜೀವವನ್ನೂ ಬಲಿ ತೆಗೆದುಕೊಳ್ಳೋದಕ್ಕೆ ಶುರುಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಐವರು.. ವರುಣಾರ್ಭಟಕ್ಕೆ ದೇಶದಲ್ಲಿ ಲೆಕ್ಕವಿಲ್ಲದಷ್ಟು ಸಾವು ನೋವು

https://newsfirstlive.com/wp-content/uploads/2024/07/Falls.jpg

Load More