ಮಾಜಿ ಸೇನಾಧಿಕಾರಿಗಳು, ನ್ಯಾಯಾಧೀಶರನ್ನು ದೂಷಿಸಿದ ಷರೀಫ್
ಬೆಲೆ ಏರಿಕೆ, ಆಹಾರ ಪದಾರ್ಥಗಳ ಅಭಾವದಿಂದ ಪಾಕ್ ಜನ ತತ್ತರ..!
ದಿವಾಳಿಯಾದ ಪಾಕ್.. ವಿಶ್ವದ ಶ್ರೀಮಂತ ದೇಶಗಳ ಬಳಿ ಭಿಕ್ಷೆ ಬೇಡ್ತಿದೆ
1947ರಲ್ಲಿ ಮನೆ ಒಡೆದುಕೊಂಡು ಹೋಗಿದ್ದ ಪಾಕಿಸ್ತಾನ ಇಂದು ದಿವಾಳಿಯಾಗಿದೆ. ಸರ್ಕಾರಗಳು ಬದಲಾದ್ರೂ ಹಣೆಬರಹ ಮಾತ್ರ ಬದಲಾಗಿಲ್ಲ. ಹಣದುಬ್ಬರ ಅಬ್ಬರಿಸ್ತಿದೆ. ಎಲ್ಲವೂ ದುಬಾರಿ. ಬದುಕು ಬರ್ಬಾದ್ ಆಗಿದೆ. ಕಳೆದ ಕೆಲ ವರ್ಷಗಳಿಂದಂತೂ ಅಮ್ಮ ತಾಯಿ ಅಂತ ಇತರ ದೇಶಗಳ ಬಳಿ ಕೈವೊಡ್ಡಿ ನಿಲ್ತಿದೆ. ಉಗ್ರರ ಸ್ವರ್ಗ ಪಾಕಿಸ್ತಾನದ ಪರಿಸ್ಥಿತಿಯನ್ನು ಬಚ್ಚಿಡಬೇಕಿದ್ದ ಮಾಜಿ ಪ್ರಧಾನಿಯೇ ಈಗ ಬಿಚ್ಚಿಟ್ಟಿದ್ದಾರೆ.
2022ರ ಏಪ್ರಿಲ್ನಲ್ಲಿ ಪಾಕಿಸ್ತಾನದಲ್ಲಿ ನಡೆದಿದ್ದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಇಮ್ರಾನ್ ಖಾನ್ ಪ್ರಧಾನಿ ಕುರ್ಚಿಯಿಂದ ಕೆಳಗಿಳಿದು ಶಹಬಾಜ್ ಷರೀಫ್ ಪ್ರಧಾನಿಯಾಗಿದ್ದರು. ಇದೆಲ್ಲ ಒಂದು ಹಂತಕ್ಕೆ ಸರಿಹೋಯ್ತು ಅನ್ನುವಷ್ಟರಲ್ಲಿ ಅಪ್ಪಳಿಸಿದ್ದ ಮಳೆ, ಪ್ರವಾಹ ಪಾಕಿಸ್ತಾನವನ್ನು ಗುಡಿಸಿ ಹಾಕಿತ್ತು.. ಬೆಲೆ ಏರಿಕೆ, ಆಹಾರ ಪದಾರ್ಥಗಳ ಅಭಾವದಿಂದ ಪಾಕಿಸ್ತಾನದ ಜನ ತತ್ತರಿಸಿದ್ದರು. ಆರ್ಥಿಕವಾಗಿ ದಿವಾಳಿಯಾದ ಪಾಕಿಸ್ತಾನ ವಿಶ್ವದ ಶ್ರೀಮಂತ ದೇಶಗಳ ಬಳಿ ದೇಹಿ ಎನ್ನುತ್ತಿದೆ. ಇದೇ ವೇಳೆ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿರುವ ಮಾತುಗಳು ಪಾಕಿಸ್ತಾನವನ್ನ ನಡು ಬೀದಿಯಲ್ಲಿ ನಿಲ್ಲಿಸಿದೆ.
‘ಭಾರತ ಚಂದ್ರನ ಅಂಗಳ ತಲುಪಿದೆ.. ಆದ್ರೆ ಪಾಕಿಸ್ತಾನ ಭಿಕ್ಷೆ ಬೇಡುತ್ತಿದೆ’
3 ಬಾರಿ ಪ್ರಧಾನಿ 9 ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ. ಪನಾಮಾ ಪೇಪರ್ಸ್ ಹಗರಣದಲ್ಲಿ ಸುಪ್ರೀಂಕೋರ್ಟ್ನಿಂದ ಅನರ್ಹರಾಗಿರುವ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ದೇಶದ ದಿವಾಳಿ ಸ್ಥಿತಿಯನ್ನು ವಿಶ್ವದ ಎದುರು ಮತ್ತಷ್ಟು ಬೆತ್ತಲಾಗಿಸಿದ್ದಾರೆ. ಲಂಡನ್ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಷರೀಫ್ ಭಾರತವನ್ನು ಹೊಗಳಿ ಪಾಕಿಸ್ತಾನವನ್ನು ತೆಗಳಿದ್ದಾರೆ. ಭಾರತ ಚಂದ್ರನನ್ನು ತಲುಪಿ ಜಿ-20 ಶೃಂಗಸಭೆಯನ್ನು ಆಯೋಜನೆ ಮಾಡುವ ಮಟ್ಟಕ್ಕೆ ಬೆಳೆದಿದೆ. ನಮ್ಮ ದೇಶ ಮಾತ್ರ ವಿಶ್ವದ ರಾಷ್ಟ್ರಗಳಲ್ಲಿ ಹಣಕ್ಕಾಗಿ ಭಿಕ್ಷೆ ಬೇಡುವ ಹಂತ ತಲುಪಿದೆ ಅಂತ ವ್ಯಂಗ್ಯವಾಡಿದ್ದಾರೆ.
2017ರಲ್ಲಿ ಪಾಕಿಸ್ತಾನದ ಸ್ಥಿತಿ ಹೇಗಿತ್ತು, ಇಂದು ಹೇಗಿದೆ.. ಇವತ್ತು ಭಾರತ ಚಂದ್ರಲೋಕಕ್ಕೆ ಹೋಗಿದೆ.. ಜಿ-20 ಶೃಂಗಸಭೆಯನ್ನು ಆಯೋಜಿಸಿದೆ.. ಭಾರತ ಮಾಡಿದ ಸಾಧನೆ ಪಾಕಿಸ್ತಾನಕ್ಕೆ ಏಕೆ ಸಾಧ್ಯವಾಗಲಿಲ್ಲ. ಇದಕ್ಕೆ ಇಲ್ಲಿ ಯಾರು ಹೊಣೆ.. 1990ರಲ್ಲಿ ಪಾಕಿಸ್ತಾನದ ಆರ್ಥಿಕ ಸುಧಾರಣೆಗಳನ್ನ ಭಾರತ ಕಾಪಿ ಮಾಡಿತ್ತು-ನವಾಜ್ ಷರೀಫ್, ಪಾಕಿಸ್ತಾನದ ಮಾಜಿ ಪ್ರಧಾನಿ
ವಾಜಪೇಯಿ ಭಾರತದ ಪ್ರಧಾನಿಯಾಗಿದ್ದಾಗ ವಿದೇಶಿ ವಿನಿಮಯ ಎಷ್ಟಿತ್ತು. ಈಗ ಅದೆಲ್ಲಿಗೆ ತಲುಪಿದೆ. ಇಂದು ಪಾಕಿಸ್ತಾನದ ಪ್ರಧಾನಿ ಹಣಕ್ಕಾಗಿ ವಿದೇಶಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಭಾರತದ ವಿದೇಶಿ ವಿನಿಮಯ ಕೇವಲ ಒಂದು ಶತಕೋಟಿ ಡಾಲರ್‌ಗಳಷ್ಟಿತ್ತು. ಆದರೆ ಈಗ ಭಾರತದ ವಿದೇಶಿ ವಿನಿಮಯ ಸಂಗ್ರಹವು 600 ಶತಕೋಟಿ ಡಾಲರ್‌ಗೆ ಏರಿದೆ. ಅದು ಹೇಗೆ ಸಾಧ್ಯವಾಯ್ತು.. ಇವತ್ತು ಪಾಕಿಸ್ತಾನ ಒಂದೊಂದು ಡಾಲರ್ಗೂ ದೇಶ-ದೇಶಗಳಲ್ಲಿ ಭಿಕ್ಷೆ ಬೇಡುತ್ತಿದೆ-ನವಾಜ್ ಷರೀಫ್, ಪಾಕಿಸ್ತಾನದ ಮಾಜಿ ಪ್ರಧಾನಿ
ಮಾಜಿ ಸೇನಾಧಿಕಾರಿಗಳು, ನ್ಯಾಯಾಧೀಶರನ್ನು ದೂಷಿಸಿದ ಷರೀಫ್!
ಪಾಕಿಸ್ತಾನದ ಇಂದಿನ ಸ್ಥಿತಿಗೆ ದೇಶದ ಮಾಜಿ ಜನರಲ್‌ಗಳು ಹಾಗೂ ನ್ಯಾಯಾಧೀಶರು ಕಾರಣ ಅಂತ ನವಾಜ್ ಷರೀಫ್ ದೂಷಿಸಿದ್ದಾರೆ. ಪಾಕ್ನ ಆರ್ಥಿಕತೆಯು ಹಲವು ವರ್ಷಗಳಿಂದ ಪತನದ ಹಾದಿಯಲ್ಲಿದೆ. ಎರಡಂಕಿ ತಲುಪಿರುವ ಹಣದುಬ್ಬರವನ್ನು ನಿಯಂತ್ರಣ ಸಾಧ್ಯವಾಗದೇ ಅದನ್ನು ದೇಶದ ಜನಸಾಮಾನ್ಯರ ಮೇಲೆ ಹೇರಲಾಗ್ತಿದೆ ಎಂದು ಕಿಡಿಕಾರಿದ್ದಾರೆ.
Nawaz Sharif on India! pic.twitter.com/qATYhjKwGY
— Prof.N John Camm (@njohncamm) September 19, 2023
ಕಳೆದೊಂದು ದಶಕದಿಂದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಸದ್ಯ ಪೆಟ್ರೋಲ್ ದರ 325 ರೂ. ದಾಟಿದೆ. ಜನಸಾಮಾನ್ಯರು ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. 3 ತಿಂಗಳಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ನವಾಜ್ ಷರೀಫ್ ಸರ್ಕಾರ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ. ಯಾವ ಸರ್ಕಾರ ಬಂದರೂ ಪಾಕಿಸ್ತಾನದ ಸ್ಥಿತಿ ಭವತಿ ಭಿಕ್ಷಾಂದೇಹಿ ಅನ್ನೋದಂತೂ ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ