newsfirstkannada.com

‘ಖಲಿಸ್ತಾನಿ ಉಗ್ರನ ಹತ್ಯೆ ಆರೋಪ ಅಸಂಬದ್ಧ, ನಿಮ್ಮ ಸಹಾನುಭೂತಿ ಕಳವಳಕಾರಿ’ ಕೆನಡಾಗೆ ತಿರುಗೇಟು ಕೊಟ್ಟ ಭಾರತ..!

Share :

19-09-2023

    ಖಲಿಸ್ತಾನಿ ಉಗ್ರನ ಹತ್ಯೆ ಆರೋಪ ತಿರಸ್ಕರಿಸಿದ ಭಾರತ

    ಕೆನಡಾ ಹಿಂಸಾಚಾರದಲ್ಲಿ ಭಾರತ ಸರ್ಕಾರದ ಪಾಲಿಲ್ಲ

    ಭಾರತ ವಿರೋಧಿ ಚಟುವಟಿಕೆಗಳ ವಿರುದ್ಧ ಕ್ರಮ ಆಗಲಿ

ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಆರೋಪವನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ನಿನ್ನೆ ಕೆನಡಾ ಸಂಸತ್​ನಲ್ಲಿ ಮಾತನಾಡಿದ್ದ ಪ್ರಧಾನಿ ಜಸ್ಟಿನ್ ಟ್ರಡೊ, ನಮ್ಮ ನಾಗರಿಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತ ಪ್ರತಿನಿಧಿಯ ಪಾತ್ರ ಇದೆ ಎಂದು ಆರೋಪಿಸಿದ್ದರು. ಈ ಬೆನ್ನಲ್ಲೇ ಕೆನಡಾ ಸರ್ಕಾರ ಅಲ್ಲಿರುವ ಭಾರತದ ರಾಯಭಾರಿಯನ್ನು ಹೊರ ಹಾಕಿತ್ತು.

ಕೆನಡಾ ಆರೋಪವನ್ನು ಖಂಡಿಸಿರುವ ಭಾರತ ಸರ್ಕಾರ.. ಕೆನಡಾ ಸಂಸತ್ತಿನಲ್ಲಿ ಅಲ್ಲಿನ ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಹೇಳಿಕೆಯನ್ನು ಕೇಳಿದ್ದೇವೆ. ಕೆನಡಾ ಆರೋಪವನ್ನು ಭಾರತ ಸರ್ಕಾರ ತಿರಸ್ಕರಿಸುತ್ತದೆ ಮತ್ತು ಖಂಡಿಸುತ್ತದೆ. ಕೆನಡಾದಲ್ಲಿ ನಡೆದಿರುವ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರದ ಪಾಲಿಲ್ಲ. ಆರೋಪಗಳೆಲ್ಲ ಸಂಪೂರ್ಣ ಅಸಂಬದ್ಧ ಎಂದು ತಿರುಗೇಟು ಕೊಟ್ಟಿದೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ನಮ್ಮ ಪ್ರಧಾನಿ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ಭಾರತವು ಕಾನೂನು ಮತ್ತು ಪ್ರಜಾಪ್ರಭುತ್ವದ ಆಡಳಿತಕ್ಕೆ ಬದ್ಧವಾಗಿರುವ ದೇಶ ಎಂದು ಉತ್ತರ ನೀಡಿದೆ.

ಇದನ್ನೂ ಓದಿಭಾರತದ ವಿರುದ್ಧ ಕೆನಡಾ ಪ್ರತಿಕಾರ; ರಾಯಭಾರಿಯನ್ನು ಹೊರ ಹಾಕಿದ ಜಸ್ಟಿನ್ ಟ್ರುಡೊ ಸರ್ಕಾರ

ಕೆನಡಾದ ಆರೋಪಗಳು ಆಧಾರ ರಹಿತ

ಇಂತಹ ಆಧಾರ ರಹಿತ ಆರೋಪಗಳ ಮೂಲಕ ಖಲಿಸ್ತಾನಿ ಭಯೋತ್ಪಾದಕರ ಮತ್ತು ಉಗ್ರರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ. ಖಾಲಿಸ್ತಾನಿಗಳಿಗೆ ಕೆನಡಾದಲ್ಲಿ ಆಶ್ರಯ ನೀಡಲಾಗಿದೆ. ಈ ಜನರು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಹಾಕುತ್ತಿದ್ದಾರೆ. ಖಲಿಸ್ತಾನಿ ಮತ್ತು ಉಗ್ರಗಾಮಿ ವಿಚಾರದಲ್ಲಿ ಕೆನಡಾ ಸರ್ಕಾರದ ನಡೆ ಸರಿ ಇಲ್ಲ ಎಂದು ಟೀಕಿಸಿದೆ.

ಇದನ್ನೂ ಓದಿ: ಖಲಿಸ್ತಾನಿ ಭಯೋತ್ಪಾದಕನ ಹತ್ಯೆ ಹಿಂದೆ ಭಾರತದ ಕೈವಾಡ ಇದೆ -ಭಾರತದ ಮೇಲೆ ಕೆನಡಾ ಗೂಬೆ

ಕೆನಡಾದ ರಾಜಕೀಯ ನಾಯಕರಿಗೆ ಖಲಿಸ್ತಾನಿಗಳು ಮತ್ತು ಉಗ್ರರ ಬಗ್ಗೆ ಸಹಾನುಭೂತಿ ಇದೆ. ಇದು ತುಂಬಾ ಕಳವಳಕಾರಿ ಸಂಗತಿ. ಕೊಲೆ, ಮಾನವ ಕಳ್ಳಸಾಗಣೆ, ಸಂಘಟಿತ ಅಪರಾಧ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಕೆನಡಾದಲ್ಲಿ ಹೊಸದಲ್ಲ. ಅಂತಹ ಯಾವುದೇ ಬೆಳವಣಿಗೆಗಳನ್ನು ಭಾರತದ ಮೇಲೆ ಕೂರಿಸೋದು ಸರಿಯಲ್ಲ. ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ವಿರುದ್ಧ ಅಲ್ಲಿನ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಖಲಿಸ್ತಾನಿ ಉಗ್ರನ ಹತ್ಯೆ ಆರೋಪ ಅಸಂಬದ್ಧ, ನಿಮ್ಮ ಸಹಾನುಭೂತಿ ಕಳವಳಕಾರಿ’ ಕೆನಡಾಗೆ ತಿರುಗೇಟು ಕೊಟ್ಟ ಭಾರತ..!

https://newsfirstlive.com/wp-content/uploads/2023/09/MODI-14.jpg

Load More