/newsfirstlive-kannada/media/post_attachments/wp-content/uploads/2023/08/ROHIT_JADEJA.jpg)
ಕೊನೆಗೂ ಏಷ್ಯಾಕಪ್ ತಂಡದ​​ ಆಯ್ಕೆ ಸರ್ಕಸ್​​​​ಗೆ ತೆರೆ ಬಿದ್ದಿದೆ. ಆದ್ರೆ, ಟೀಮ್ ಅನೌನ್ಸ್​​ ಆಗಿದ್ದು ಖುಷಿಗಿಂತ ಹೆಚ್ಚು ಬೇಸರವಾಗಿದೆ. ಯಾಕಂದ್ರೆ, ಸೆಲೆಕ್ಷನ್​ ಕಮಿಟಿ ಈ ಹಿಂದೆ ಮಾಡಿದ ತಪ್ಪನ್ನ ತಿದ್ದಿಕೊಂಡಿಲ್ಲ. ಮತ್ತೆ ಅದೇ ಎಡವಟ್ಟು ಈ ಬಾರಿ ರಿಪೀಟ್​ ಆಗಿವೆ.
ಅಂತೂ ಇಂತೂ ಕೊನೆಗೂ ಏಷ್ಯಾಕಪ್ ಟೂರ್ನಿಗೆ ಬಲಿಷ್ಠ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಅನುಭವಿಗಳು- ಯಂಗ್​ಸ್ಟರ್​​ಗಳಿಂದ ಕೂಡಿದ 17 ಸದಸ್ಯರ ತಂಡ ಫೈನಲ್ ಆಗಿದೆ. ಆದ್ರೆ ಬ್ಯಾಲೆನ್ಸ್​​ಡ್​​​​​​ ತಂಡ ಕಟ್ಟಿದ್ದೇವೆ ಹೇಳಿಕೊಳ್ಳುವ ಅಜಿತ್ ಅಗರ್ಕರ್ ಟೀಮ್​ ಆಯ್ಕೆಯಲ್ಲಿ 4 ಮಹಾ ಎಡವಟ್ಟುಗಳನ್ನ ಮಾಡಿದೆ.
[caption id="attachment_6807" align="aligncenter" width="800"]
ನಾಯಕ ರೋಹಿತ್, ರಾಹುಲ್ ದ್ರಾವಿಡ್, ಅಜಿತ್ ಅಗರ್ಕರ್[/caption]
ರಾಹುಲ್​​​​ ಆಡದಿದ್ರೆ ಸ್ಯಾಮ್ಸನ್​ ಬ್ಯಾಕ್​ಅಪ್ ಯಾಕೆ..?
ಕನ್ನಡಿಗ ಕೆ.ಎಲ್ ರಾಹುಲ್​ ಏಷ್ಯಾಕಪ್​​​​​ಗೆ ಆಯ್ಕೆಯಾಗಿದ್ರು ಅವರಿನ್ನೂ ಫುಲ್​ ಫಿಟ್ ಇಲ್ಲ. ಆರಂಭಿಕ ಪಂದ್ಯಗಳನ್ನ ಮಿಸ್​​ ಮಾಡಿಕೊಳ್ಳಲಿದ್ದಾರೆ ಎಂದು ಸ್ವತಃ ಚೀಫ್ ಸೆಲೆಕ್ಟರ್ ಅಜಿತ್​​ ಅಗರ್ಕರ್​​ ಹೇಳಿದ್ದಾರೆ. ಹಾಗೊಂದು ವೇಳೆ ರಾಹುಲ್ ಆಡದಿದ್ದಲ್ಲಿ ಅವರ ಬದಲಿ ಇಶಾನ್ ಕಿಶನ್​​ ಆಡಲಿದ್ದಾರೆ. ಹಾಗಿದ್ರೆ ಸ್ಯಾಮ್ಸನ್​​ರನ್ನ ಬ್ಯಾಕ್​​​ಅಪ್​​ ಆಟಗಾರರನಾಗಿ ತಂಡಕ್ಕೆ ಆಯ್ಕೆ ಮಾಡಿದ್ದೇಕೆ? ಚಾನ್ಸ್ ಸಿಗದಿದ್ರೂ ಬರೀ ಬೆಂಚ್​​ ಕಾಯಿಸಲು ಅವಕಾಶ ನೀಡಬೇಕಿತ್ತಾ ಎನ್ನುವ ಪ್ರಶ್ನೆ ಕಾಡ್ತಿದೆ.
ಶ್ರೇಯಸ್ ಫಿಟ್​​​ ಆಗಿದ್ರೆ ಸೂರ್ಯ-ತಿಲಕ್​​ಗೆ ಚಾನ್ಸ್ ಯಾಕೆ..?
ಮುಂಬೈಕರ್​ 4ನೇ ಸ್ಥಾನದಲ್ಲಿ ಆಡುವುದು ಖಚಿತವಾಗಿದೆ. ಹಾಗಿದ್ದ ಮೇಲೆ ಸೂರ್ಯಕುಮಾರ್​​​ ಯಾದವ್​​​​-ತಿಲಕ್ ವರ್ಮಾ ಆಯ್ಕೆ ವ್ಯರ್ಥ. ಯಾಕಂದ್ರೆ ಶ್ರೇಯಸ್​ ಅನ್​ಫಿಟ್ ಆದಲ್ಲಿ ಮಾತ್ರ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್ ಸಿಗಬಹುದು. ಸದ್ಯ ಆ ಅವಕಾಶವಿಲ್ಲ. ಏಕದಿನ ಮಾದರಿಯಲ್ಲಿ ಸೂರ್ಯಕುಮಾರ್​ ಪರ್ಫಾಮೆನ್ಸ್​​​​ ಉತ್ತಮವಾಗಿಲ್ಲ. ಟಿ20 ಪ್ರದರ್ಶನದ ಮೇಲೆ ತಿಲಕ್​​ಗೆ ಏಕದಿನಕ್ಕೆ ಆಯ್ಕೆ ಮಾಡಿದ್ದು ಎಷ್ಟು ಸರಿ ಅನ್ನೋ ಡಿಬೇಟ್​​ ಜೋರಾಗಿ ನಡೆಯುತ್ತಿದೆ.
ಆಫ್​​ ಸ್ಪಿನ್ನರ್​​​-ಲೆಗ್​ ಸ್ಪಿನ್ನರ್​ಗೆ​​​​​​ ಚಾನ್ಸ್​ ಯಾಕಿಲ್ಲ..?
ಈ ವಿಚಾರದಲ್ಲಿ ಆಯ್ಕೆ ಸಮಿತಿ ಕಣ್ಣಿದ್ದು ನಿಜಕ್ಕೂ ಕುರುಡಾಗಿದೆ. ಟೀಮ್ ಇಂಡಿಯಾ ಎಲ್ಲ ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಲಿದೆ. ಇಲ್ಲಿ ಪಿಚ್ ಸ್ಪಿನ್ ಸ್ನೇಹಿಯಾಗಿವೆ. ಇದು ಗೊತ್ತಿದ್ರೂ ತಂಡದಲ್ಲಿ ಆಫ್ ಸ್ಸಿನ್ನರ್​ ಹಾಗೂ ಲೆಗ್ ಸ್ಪಿನ್ನರ್​​ಗೆ ಚಾನ್ಸ್ ನೀಡಿಲ್ಲ. ಜಡ್ಡು-ಅಕ್ಷರ್ ಪಟೇಲ್​​​​ ಲೆಫ್ಟ್​​ ಆರ್ಮ್​ ಸ್ಪಿನ್ನರ್​​ಗಳಾಗಿದ್ರೆ, ಕುಲ್ದೀಪ್​ ಯಾದವ್​​ ರಿಸ್ಟ್ ಸ್ಪಿನ್ನರ್​​. ಅಶ್ವಿನ್​​​ ತರಹದ ಆಫ್​ ಸ್ಪಿನ್ನರ್ ಆಗಲಿ​​​​​, ಚಹಲ್​ ರೀತಿ ಲೆಗ್​​ ಸ್ಪಿನ್ನರ್​​ ಆಗಲಿ ಇಲ್ಲ. ಪಾಕ್​​​​, ಲಂಕಾ ಹಾಗೂ ಬಾಂಗ್ಲಾ ತಂಡದಲ್ಲಿ ಐದಕ್ಕಿಂತ ಹೆಚ್ಚಿನ ಎಡಗೈ ಬ್ಯಾಟ್ಸ್​​ಮನ್​ಗಳಿದ್ದಾರೆ. ಇವರನ್ನ ಕಟ್ಟಿಹಾಕಲು ಆಫ್​​​ ಸ್ಪಿನ್ನರ್ ​​-ಲೆಗ್ ಸ್ಪಿನ್ನರ್ ನೆರವಾಗ್ತಿದ್ರು ಅನ್ನೋದನ್ನ ಆಯ್ಕೆ ಸಮಿತಿ ಮರೆತಿದೆ.
[caption id="attachment_5611" align="aligncenter" width="800"]
ಮೊಹಮ್ಮದ್ ಸಿರಾಜ್[/caption]
6 ಪೇಸರ್​​ಗಳಿದ್ರೂ ತಂಡದಲ್ಲಿಲ್ಲ ಎಡಗೈ ವೇಗಿ
ಈ ವಿಚಾರದಲ್ಲಿ ಟೀಮ್​ ಇಂಡಿಯಾ ಅದ್ಯಾವಾಗ ಪಾಠ ಕಲಿಯುತ್ತೋ ಗೊತ್ತಿಲ್ಲ. ಆಯ್ಕೆಯಾದ ಆರಕ್ಕೆ 6 ಜನ ರೈಟ್​​​ ಹ್ಯಾಂಡ್​ ಪೇಸರ್​​​​​ಗಳು. ಒಬ್ಬೇ ಒಬ್ಬ ಲೆಫ್ಟ್​ ಹ್ಯಾಂಡ್​ ಬೌಲರ್​​ ತಂಡದಲ್ಲಿಲ್ಲ. ಅರ್ಷ್​ದೀಪ್ ಸಿಂಗ್​​​​, ಉನಾದ್ಕತ್​​​​​ ರನ್ನ ಕಡೆಗಣಿಸಲಾಗಿದೆ. ಒಂದು ವೇಳೆ ಇಬ್ಬರ ಪೈಕಿ ಇಬ್ಬರು ಏಷ್ಯಾಕಪ್​​ಗೆ ಆಯ್ಕೆಯಾಗಿದ್ರೆ, ಎದುರಾಳಿ ತಂಡಗಳ ಎಡಗೈ ಬೌಲರ್​​ಗಳನ್ನ ಪೇಸ್ ಮಾಡಲು ಹೆಲ್ಪ್​​​ ಆಗ್ತಿತ್ತು. ಸದ್ಯ ಆ ಅವಕಾಶವನ್ನ ಸೆಲೆಕ್ಟರ್ಸ್​ ಕೈ ಚೆಲ್ಲಿದ್ದಾರೆ.
ಪರ್ಫೆಕ್ಟ್​ ತಂಡ ಕಟ್ಟುವಲ್ಲಿ ಆಯ್ಕೆಸಮಿತಿ ಫೇಲ್ಯೂರ್​ ಆದಂತಿದೆ. ಆಯ್ಕೆ ಸಮಿತಿ ಸೆಲೆಕ್ಷನ್​ ಮಾಡಿ ಮುಗಿಸಿದೆ. ಇನ್ನೇನಿದ್ರೂ, ಕ್ಯಾಪ್ಟನ್ ರೋಹಿತ್ ಶರ್ಮಾಗೆ ಈ ಮಿಸ್ಟೇಕ್ಸ್​​ ಸವಾಲಾಗಿ ಪರಿಣಮಿಸಲಿವೆ. ಏಷ್ಯಾಕಪ್ ಅಖಾಡದಲ್ಲಿ ಇದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದೆ ಸದ್ಯಕ್ಕಿರೋ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us