newsfirstkannada.com

ಟೀಮ್​ ಇಂಡಿಯಾಕ್ಕೆ 9 ಪ್ಲೇಯರ್ಸ್​ ಫಿಕ್ಸ್​​.. ಉಳಿದ 6 ಸ್ಥಾನಕ್ಕೆ ಆಟಗಾರರ ಮಧ್ಯೆ ಬಿಗ್​ ಫೈಟ್​​​!

Share :

Published August 22, 2024 at 11:27am

    ಈ ಬಾರಿ ತಂಡದಲ್ಲಿ ವಿರಾಟ್​ ಕೊಹ್ಲಿಗೆ ಸ್ಥಾನ ಸಿಗೋದು ಡೌಟಾ..?

    ಯಶಸ್ವಿ ಜೈಸ್ವಾಲ್​ ಹಾಗೂ ಶುಭ್​ಮನ್ ಗಿಲ್​​ ನಡುವೆ ಪೈಪೋಟಿ

    ಸರಣಿಯಲ್ಲಿ ಕನ್ನಡಿಗ KL ರಾಹುಲ್​ರನ್ನ ಆಡಿಸ್ತಾರಾ, ಕೈ ಬಿಡ್ತಾರಾ..?

ಭಾರತ- ಬಾಂಗ್ಲಾ ಟೆಸ್ಟ್ ಸರಣಿಗೆ ಹೆಚ್ಚೇನು ದಿನ ಬಾಕಿ ಇಲ್ಲ. ಕೆಲವೇ ವಾರಗಳಲ್ಲಿ ಸರಣಿ ಆರಂಭವಾಗಲಿದ್ದು, ರೋಹಿತ್​ ಪಡೆ ಸುಲಭವಾಗಿ ಬಾಂಗ್ಲಾ ಹುಲಿಗಳನ್ನ ಬೇಟೆಯಾಡೋ ಲೆಕ್ಕಾಚಾರದಲ್ಲಿದೆ. ಆದ್ರೆ, ಅದಕ್ಕೂ ಮುನ್ನ ಟೀಮ್​ ಇಂಡಿಯಾದ ಸೆಲೆಕ್ಷನ್​ಗೆ​ ದೊಡ್ಡ ತಲೆನೋವು ಸೃಷ್ಟಿಯಾಗಿದೆ. ಈ ಕಗ್ಗಂಟನ್ನ ಹೇಗೆ ಬಗೆಹರಿಸಬೇಕು ಅನ್ನೋದೆ ಅಜಿತ್ ಅಗರ್ಕರ್​​ ಆ್ಯಂಡ್ ಟೀಮ್​ಗೆ ತಿಳಿಯದಾಗಿದೆ.

ಟೀಮ್​ ಇಂಡಿಯಾದ 15 ಸ್ಲಾಟ್​​ಗೆ 22 ಆಟಗಾರರ ರೇಸ್​​.!

ಸೆಪ್ಟೆಂಬರ್​​ 19 ರಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ​ ಆರಂಭಗೊಳ್ಳಲಿದೆ. ಎರಡು ಪಂದ್ಯಗಳ ಟೆಸ್ಟ್​​​​ ಕದನಕ್ಕೆ ಭಾರತ ಆತಿಥ್ಯ ವಹಿಸಿದ್ದು, ಆಯ್ಕೆ ಸಮಿತಿ ಇನ್ನಷ್ಟೇ ತಂಡವನ್ನ ಪ್ರಕಟಿಸಬೇಕಿದೆ. ಈ ಸರಣಿಯ ತಂಡದಲ್ಲಿ 9 ಪ್ಲೇಯರ್ಸ್​ ಸ್ಲಾಟ್​​​​ ಫಿಕ್ಸ್ ಆಗಿದೆ. ಆದ್ರೆ, ಇನ್ನುಳಿದ 6 ಸ್ಥಾನಕ್ಕಾಗಿ 13 ಮಂದಿ ಮಧ್ಯೆ ಮೆಗಾ ಫೈಟ್​​ ಏರ್ಪಟ್ಟಿದೆ. ಇದು ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್ ​ಕೋಚ್​ ಗೌತಮ್​ ಗಂಭೀರ್​​​, ಸೆಲೆಕ್ಷನ್​ ಕಮಿಟಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: 8 ತಿಂಗಳಿಂದ ಫಾರಿನ್​ನಲ್ಲಿರೋ ಕೊಹ್ಲಿ.. ‘ವಿರುಷ್ಕಾ’ ಜೋಡಿ ಲಂಡನ್​​​​​ನಲ್ಲಿ ಇರಲು ಇವೆ 5 ಕಾರಣ?

ಓಪನರ್ ಸ್ಥಾನಕ್ಕೆ ಜೈಸ್ವಾಲ್​​​​-ಗಿಲ್​ ಮೆಗಾ ಫೈಟ್​​​..!

ಆರಂಭಿಕನಾಗಿ ಕ್ಯಾಪ್ಟನ್ ರೋಹಿತ್​ ಶರ್ಮಾ ಆಡುವುದು ಕನ್ಫರ್ಮ್​. ರೋಹಿತ್​ ಜೊತೆಗಾರನಾಗಿ ಆಡಲು ಯಶಸ್ವಿ ಜೈಸ್ವಾಲ್​ ಹಾಗೂ ಶುಭ್​ಮನ್ ಗಿಲ್​​ ನಡುವೆ ಫೈಟ್​ ಇದೆ. ಜೈಸ್ವಾಲ್​​ ಹಿಂದಿನ ಸರಣಿಗಳಲ್ಲಿ ಉತ್ತಮವಾಗಿ ಆಡಿದ್ದು, ಆಯ್ಕೆಗಾರರ ನಂಬಿಕೆ ಉಳಿಸಿಕೊಂಡಿದ್ದಾರೆ. ಒಂದು ವೇಳೆ ಗಿಲ್​​​ಗೆ ಓಪನಿಂಗ್ ಸ್ಥಾನ ಮಿಸ್ ಆದ್ರೆ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇಂಗ್ಲೆಂಡ್​​ ವಿರುದ್ಧ ಇದೇ ಸ್ಲಾಟ್​ನಲ್ಲಿ ಆಡಿದ್ರು.

ಕೊಹ್ಲಿ ಎಂಟ್ರಿ..ಮಧ್ಯಮ ಕ್ರಮಾಂಕದ ಆಯ್ಕೆ ತಲೆನೋವು..!

ಇಂಗ್ಲೆಂಡ್​ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಕಿಂಗ್ ಕೊಹ್ಲಿ ಬಾಂಗ್ಲಾ ಸಿರೀಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. 4ನೇ ಸ್ಲಾಟ್​ನಲ್ಲಿ ಅವರು ದರ್ಬಾರ್ ನಡೆಸಲಿದ್ದಾರೆ. ಇವರ ಸ್ಥಾನದಲ್ಲಿ ಆಡಿದ್ದ ಸರ್ಫರಾಜ್​​ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್​ ಜೊತೆ ಪೈಪೋಟಿಗೆ ಇಳಿಯಲಿದ್ದಾರೆ. ಈ ತ್ರಿಮೂರ್ತಿಗಳಲ್ಲಿ ಯಾರನ್ನ 5ನೇ ಸ್ಲಾಟ್​ಗೆ ಆಯ್ಕೆ ಮಾಡಬೇಕು ? ಯಾರನ್ನ ಡ್ರಾಪ್ ಮಾಡ್ಬೇಕು ಅನ್ನೋದು ಆಯ್ಕೆ ಸಮಿತಿಗೆ ದೊಡ್ಡ ಸವಾಲಾಗಿದೆ.

ಸ್ಪಿನ್ ಕೋಟಾದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ

ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್​​ ಸ್ಪಿನ್ ಆಲ್​ರೌಂಡರ್​ಗಳಾಗಿ, ಸ್ಪೆಷಲಿಸ್ಟ್​ ಸ್ಪಿನ್ನರ್​ ಆಗಿ ಆರ್​.ಅಶ್ವಿನ್​ ಸ್ಥಾನ ಪಡೆಯೋದು ಬಹುತೇಕ ಫಿಕ್ಸ್​​​. ಇವ್ರ ಹೊರತಾಗಿ ಕುಲ್​ದೀಪ್​​ ಯಾದವ್​​​​​​ ಹಾಗೂ ವಾಷಿಂಗ್ಟನ್ ಸುಂದರ್​​ ನಡುವೆ ಸ್ಥಾನಕ್ಕಾಗಿ ಫೈಟ್​​​ ಇದೆ. ಇಬ್ಬರಲ್ಲಿ ಉತ್ತಮರ ಆಯ್ಕೆ ಕಠಿಣವೆನಿಸಿದೆ.

ಇದನ್ನೂ ಓದಿ: ಸಮಂತಾ ಫಾಲೋ ಮಾಡ್ತಿರೋ ದಗ್ಗುಬಾಟಿ ಫ್ಯಾಮಿಲಿ.. ನಾಗ ಚೈತನ್ಯ ಭಾವಿ ಪತ್ನಿನಾ ಕಡೆಗಣಿಸಿದ್ರಾ?

ಎರಡು ಸ್ಥಾನಕ್ಕೆ ಆರು ಬೌಲರ್ಸ್ ನಡುವೆ​ ಕಾದಾಟ..!

ಜಸ್​ಪ್ರೀತ್​​​ ಬೂಮ್ರಾ ಬಾಂಗ್ಲಾ ಸರಣಿಯಿಂದ ರೆಸ್ಟ್​ ಪಡೆಯೋ ಸಾಧ್ಯತೆ ಇದೆ. ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್​​ ವಿಭಾಗದ ಜವಾಬ್ದಾರಿ ಹೆಗಲಿಗೇರಲಿದೆ. ಇವರ ಜೊತೆ ಅರ್ಷ್​ದೀಪ್ ಸಿಂಗ್​​, ಖಲೀಲ್​ ಅಹ್ಮದ್​​​, ಆವೇಶ್ ಖಾನ್​​, ಮುಕೇಶ್ ಕುಮಾರ್ ಹಾಗೂ ಆಕಾಶ್​ ದೀಪ್ ಆಶಾವಾದಿಗಳಾಗಿದ್ದಾರೆ. ಆದ್ರೆ ಈ ಪೈಕಿ ಯಾರಿಗೆ ಚಾನ್ಸ್ ಸಿಗುತ್ತೆ ಅನ್ನೋದು ಯಕ್ಷಪ್ರಶ್ನೆ.

ದುಲೀಪ್​ ಟ್ರೋಫಿಯಲ್ಲಿ ಸಿಗಲಿದೆ ಸ್ಪಷ್ಟ ಚಿತ್ರಣ..!

ಸದ್ಯಕ್ಕೆ ಬಾಂಗ್ಲಾ ಎದುರಿನ ಟೆಸ್ಟ್ ಸರಣಿ ಟೀಮ್ ಇಂಡಿಯಾ ಆಯ್ಕೆ ಜಟಿಲವಾಗಿದೆ. ಹಲವು ಸ್ಲಾಟ್​ನಲ್ಲಿ ಸ್ಥಾನಕ್ಕಾಗಿ ತೀವ್ರ ಸ್ಪರ್ಧೆ ಇದೆ. ಯಾರನ್ನ ಆಯ್ಕೆ ಮಾಡ್ಬೇಕು ಅನ್ನೋ ಗೊಂದಲ ಆಯ್ಕೆ ಸಮಿತಿಗೆ ಇದೆ. ಸೆ. 5ರಿಂದ ದೇಶಿ ಕ್ರಿಕೆಟ್​ ಟೂರ್ನಿ ದುಲಿಫ್ ಟ್ರೋಫಿ ಆರಂಭಗೊಳ್ಳಲಿದೆ. ಟೆಸ್ಟ್​ ಆಡುವ ಬಹುತೇಕ ಆಟಗಾರರು ಇದ್ರಲ್ಲಿ ಆಡಲಿದ್ದಾರೆ. ಈ ಟೂರ್ನಿಯ ಪರ್ಫಾಮೆನ್ಸ್ ಆಧಾರದಲ್ಲಿ ಆಟಗಾರರಿಗೆ ಟೀಮ್​ ಇಂಡಿಯಾ ಡೋರ್​ ಓಪನ್​ ಆಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾಕ್ಕೆ 9 ಪ್ಲೇಯರ್ಸ್​ ಫಿಕ್ಸ್​​.. ಉಳಿದ 6 ಸ್ಥಾನಕ್ಕೆ ಆಟಗಾರರ ಮಧ್ಯೆ ಬಿಗ್​ ಫೈಟ್​​​!

https://newsfirstlive.com/wp-content/uploads/2024/03/ROHIT_GILL_KHAN_PADIKAL.jpg

Load More