ಭಾರತ ತಂಡದಲ್ಲಿ ಭಾರೀ ಬದಲಾವಣೆ, ಯಂಗ್ ಪ್ಲೇಯರ್ಸ್ಗೆ ಚಾನ್ಸ್
ಭಾರೀ ಆಕ್ರೋಶದ ಬಳಿಕ ಏಕದಿನಕ್ಕೆ ಸಂಜು ಸ್ಯಾಮ್ಸನ್ ಕಮ್ಬ್ಯಾಕ್
ಸಾಮರ್ಥ್ಯ ಪ್ರದರ್ಶನ ಮಾಡಲು ಇಶನ್ ಕಿಶನ್ಗೆ ಮತ್ತೊಂದು ಚಾನ್ಸ್
ಮುಂಬರುವ ವೆಸ್ಟ್ ಇಂಡೀಸ್ ಸರಣಿಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಕೆಲ ಅಚ್ಚರಿ ನಿರ್ಧಾರಗಳನ್ನ ಕೈಗೊಂಡಿದೆ. ಭವಿಷ್ಯದ ದೃಷ್ಟಿಯಿಂದ ಹೊಸಬರಿಗೆ ಮಣೆ ಹಾಕಿ ಹಳಬರಿಗೆ ಗೇಟ್ಪಾಸ್ ನೀಡಿದೆ. ಬನ್ನಿ ಹಾಗಾದ್ರೆ ಈ ಸರಣಿಗೆಯಲ್ಲಿ ಯಾರು ಇನ್, ಯಾರು ಔಟ್ ನೋಡೋಣ.
ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಡಿ ಮುಗಿಸಿದೆ. ಮೆನ್ ಇನ್ ಬ್ಲೂ ಪಡೆಯ ಮುಂದಿನ ಟಾರ್ಗೆಟ್ ವೆಸ್ಟ್ ಇಂಡೀಸ್ ಟೂರ್. ಜುಲೈ 12 ರಿಂದ ಭಾರತ-ವೆಸ್ಟ್ ಇಂಡೀಸ್ ದ್ವಿ ಪಕ್ಷೀಯ ಸರಣಿ ಆರಂಭಗೊಳ್ಳಲಿದ್ದು, ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನ ಪ್ರಕಟಿಸಿದೆ. ಬಲಿಷ್ಠ ಸೈನ್ಯವನ್ನ ಸಜ್ಜುಗೊಳಿಸಿದ್ದು, ಟೆಸ್ಟ್ ಮತ್ತು ಏಕದಿನ ಸರಣಿಗೆ ತಂಡವನ್ನ ಅನೌನ್ಸ್ ಮಾಡಿದೆ. ಈ ಸಲ ಹಿಂದಿನ ತಪ್ಪನ್ನ ತಿದ್ದಿಕೊಂಡು ಹೊಸಬರ ಬೆನ್ನು ಬಿದ್ದಿದೆ. ಜೊತೆಗೆ ಕೆಲ ಬೋಲ್ಡ್ ಡಿಸಿಷನ್ ತೆಗೆದುಕೊಂಡು ಬದಲಾವಣೆಗೆ ಮುನ್ನುಡಿ ಬರೆದಿದೆ.
ಗಾಯಕ್ವಾಡ್-ಮುಖೇಶ್ ಕುಮಾರ್ಗೆ ‘ಡಬಲ್’ ಧಮಾಕ..!
ಪ್ರಕಟಗೊಂಡಿರೋ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ಹಾಗೂ ವೇಗಿ ಮುಕೇಶ್ ಕುಮಾರ್ಗೆ ಜಾಕ್ಪಾಟ್ ಹೊಡೆದಿದೆ. ಇಬ್ಬರೂ ಟೆಸ್ಟ್ ಮತ್ತು ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೀಮಿತ ಓವರ್ಗಳ ಸರಣಿಯಲ್ಲಿ ಗಾಯಕ್ವಾಡ್ ಟೀಮ್ ಇಂಡಿಯಾವನ್ನ ಪ್ರತಿನಿಧಿಸಿದ್ದು, ಟೆಸ್ಟ್ ಕ್ಯಾಪ್ ತೊಡಲು ಸಜ್ಜಾಗಿದ್ದಾರೆ. ಇನ್ನು ಈ ಹಿಂದೆ ಬದಲಿ ಆಟಗಾರನಾಗಿದ್ದ ಮುಕೇಶ್ ಕುಮಾರ್ಗೆ ಡಬಲ್ ಜಾಕ್ಪಾಟ್ ಹೊಡೆದಿದೆ.
ಸೈನಿಗೆ 2 ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ
ನತದೃಷ್ಟ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಮತ್ತೆ ಒನ್ಡೇ ತಂಡಕ್ಕೆ ಮರಳಿದ್ದಾರೆ. ಈ ವರ್ಷ ನಡೆದ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಏಕದಿನ ಸರಣಿಯಿಂದ ಸ್ಯಾಮ್ಸನ್ರನ್ನ ಕೈಬಿಡಲಾಗಿತ್ತು. ಇದಕ್ಕೆ ಭಾರೀ ಆಕ್ರೋಶ ಕೇಳಿ ಬಂದಿತ್ತು. ಕ್ರಿಕೆಟ್ ಎಕ್ಸ್ಫರ್ಟ್ಸ್, ಫ್ಯಾನ್ಸ್ ಆಕ್ರೋಶಕ್ಕೆ ಮಣಿದ ಆಯ್ಕೆ ಸಮಿತಿ ಕೊನೆಗೂ ಬಿಗ್ ಹಿಟ್ಟರ್ಗೆ ತಂಡದಲ್ಲಿ ಸ್ಥಾನ ನೀಡಿದೆ.
ಇನ್ನು ಸ್ಯಾಮ್ಸನ್ ಜೊತೆ ಯುವವೇಗಿ ನವ್ದೀಪ್ ಸೈನಿ ಟೆಸ್ಟ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಆ ಮೂಲಕ 2 ವರ್ಷಗಳ ಬಳಿಕ ರೆಡ್ಬಾಲ್ ಕ್ರಿಕೆಟ್ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. 2021 ರಲ್ಲಿ ಕೊನೆ ಟೆಸ್ಟ್ ಆಡಿದ್ದ ಸೈನಿ, ಇಂಜುರಿ ಕಾರಣದಿಂದ ತಂಡದಿಂದ ಕಿಕೌಟ್ ಆಗಿದ್ರು. ಬಳಿಕ ತಂಡದಲ್ಲಿ ಸ್ಥಾನ ಅನ್ನೋದು ಮರೀಚಿಕೆ ಆಗಿತ್ತು.
ಇಶನ್ ಕಿಶನ್ -ಕೆಎಸ್ ಭರತ್ ಸ್ಥಾನ ಭದ್ರ..!
ಡಬಲ್ ಸೆಂಚುರಿಮ್ಯಾನ್ ಇಶನ್ ಕಿಶನ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನ ಹಾಗೂ ಟೆಸ್ಟ್ ಸರಣಿಗೆ ಲೆಫ್ಟಿ ಬ್ಯಾಟರ್ ಆಯ್ಕೆಯಾಗಿದ್ದು, ಕೆಪಾಸಿಟಿ ಪ್ರೂವ್ ಮಾಡಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ಇವರ ಜೊತೆ ವಿಕೆಟ್ ಕೀಪರ್ ಕೆಎಸ್ ಭರತ್ ಟೆಸ್ಟ್ನಲ್ಲಿ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ. ರಿಷಬ್ ಪಂತ್ ಆಬ್ಸನ್ಸ್ ಭರತ್ಗೆ ವರದಾನವಾಗಿದೆ. ಇನ್ನು ವೇಗಿ ಜಯ್ದೇವ್ ಉನಾದ್ಕಟ್ ಸ್ಥಾನ ಭದ್ರವಾಗಿದೆ.
ಪೂಜಾರಗೆ ಕೊಕ್.. ಟೆಸ್ಟ್ ಕರಿಯರ್ ಕ್ಲೋಸ್..?
ಅಸ್ಥಿರ ಪರ್ಫಾಮೆನ್ಸ್ ನಿಂದ ಟೀಕೆಗೆ ಗುರಿ ಎದುರಿಸಿದ್ದ ಚೇತೇಶ್ವರ್ ಪೂಜಾರನ್ನ ಇಂಡೀಸ್ ಟೆಸ್ಟ್ ಸರಣಿಯಿಂದ ಡ್ರಾಪ್ ಮಾಡ್ತಾರೆ ಎಂದು ಹೇಳಾಗ್ತಿತ್ತು. ಸದ್ಯ ಅದು ನಿಜವಾಗಿದೆ. ನಂಬಿಗಸ್ಥ ಪೂಜಾರ ಅವರಿಗೆ ರೆಡ್ಬಾಲ್ ಕ್ರಿಕೆಟ್ನಿಂದ ಗೇಟ್ಪಾಸ್ ನೀಡಿದೆ. ಇವರ ಬದಲಿ ಯಂಗ್ಗನ್ ಯಶಸ್ವಿ ಜೈಸ್ವಾಲ್ಗೆ ಮಣೆ ಹಾಕಲಾಗಿದೆ. ಒಂದು ವೇಳೆ ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದ್ದೆ ಆದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರರ ಟೆಸ್ಟ್ ಕರಿಯರ್ ಬಹುತೇಕ ಕ್ಲೊಸ್ ಆಗಲಿದೆ.
ಅಜಿಂಕ್ಯಾ ರಹಾನೆಗೆ ಮತ್ತೆ ವೈಸ್ ಕ್ಯಾಪ್ಟನ್ಸಿ ಪಟ್ಟ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮೂಲಕ ತಂಡಕ್ಕೆ ಮರಳಿದ್ದ ಅಜಿಂಕ್ಯಾ ರಹಾನೆಗೆ ವೈಸ್ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗಿದೆ. ಈ ಹಿಂದೆ ರಹಾನೆ ತಂಡದ ಉಪನಾಯಕನಾಗಿದ್ರು. ಸದ್ಯ ಪೂಜಾರಗೆ ತಂಡದಿಂದ ಗೇಟ್ಪಾಸ್ ನೀಡಿದ್ದರಿಂದ ರಹಾನೆಗೆ ಈ ಜವಾಬ್ದಾರಿ ನೀಡಲಾಗಿದೆ. ಆ ಮೂಲಕ ಬಿಸಿಸಿಐ ರೋಹಿತ್ ಶರ್ಮಾ ಬಳಿಕ ರಹಾನೆಗೆ ಟೆಸ್ಟ್ ಕ್ಯಾಪ್ಟನ್ಸಿ ನೀಡುವ ಹಿಂಟ್ ನೀಡಿದೆ.
ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಿದ BCCI
ವಿಂಡೀಸ್ ಸರಣಿ ವೇಳೆ ವಿರಾಟ್ ಹಾಗೂ ರೋಹಿತ್ಗೆ ರೆಸ್ಟ್ ನೀಡೋ ಚರ್ಚೆ ನಡೆದಿತ್ತು. ಆದ್ರೆ ಸೆಲೆಕ್ಷನ್ ಕಮಿಟಿ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ಮೊಹಮ್ಮದ್ ಶಮಿಗೆ ರೆಸ್ಟ್ ನೀಡಿದೆ. ಇದೇ ಕಾರಣಕ್ಕೆ ನವದೀಪ್ ಸೈನಿಗೆ ಬುಲಾವ್ ನೀಡಿರೋ ಆಯ್ಕೆ ಸಮಿತಿ, ಟಿ20 ಸರಣಿ ವೇಳೆ ಮೊಹಮ್ಮದ್ ಶಮಿಗೆ ಚಾನ್ಸ್ ನೀಡೋ ಸಾಧ್ಯತೆ ಇದೆ.
ಆಯ್ಕೆ ಸಮಿತಿ ಅಳೆದು ತೂಗಿ ತಂಡವನ್ನ ಪ್ರಕಟಿಸಿದೆ. ಹತ್ತಾರು ಲೆಕ್ಕಚಾರಗಳು ಅಡಗಿವೆ. ಇದ್ರಲ್ಲಿ ಬಿಗ್ಬಾಸ್ಗಳು ಸಕ್ಸಸ್ ಕಾಣ್ತರಾ?, ಫೇಲಾಗ್ತಾರಾ? ಅನ್ನೋದು ಇಂಡೀಸ್ ಪ್ರವಾಸದ ಬಳಿಕವೇ ಗೊತ್ತಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ