newsfirstkannada.com

ವಿಶ್ವಕಪ್​ ಟೂರ್ನಿಗೆ ಇಂದು ಟೀಮ್ ಇಂಡಿಯಾ ಪ್ರಕಟ.. ಕನ್ನಡಿಗ KL ರಾಹುಲ್​ ಸ್ಥಾನ ಪಡೆಯುತ್ತಾರಾ?

Share :

05-09-2023

    ವಿಶ್ವಕಪ್​ ಟೂರ್ನಿ, ಕನ್ನಡಿಗ ಕೆ.ಎಲ್ ರಾಹುಲ್ ಮೇಲೆ ಎಲ್ಲರ ಚಿತ್ತ

    ಏಷ್ಯಾಕಪ್​ನ ಎರಡು ಪಂದ್ಯ ಮಿಸ್ ಮಾಡಿಕೊಂಡಿರೋ ರಾಹುಲ್

    ಈಗಾಗಲೇ ವಿಶ್ವಕಪ್ ತಂಡವನ್ನು ಫೈನಲ್ ಮಾಡಿರೋ ಅಗರ್ಕರ್​​

ಏಕದಿನ ವಿಶ್ವಕಪ್​​​​ ಟೂರ್ನಿಗೆ ಇಂದು ಟೀಮ್ ಇಂಡಿಯಾ ಪ್ರಕಟವಾಗುವುದು ಬಹುತೇಕ ಕನ್ಫರ್ಮ್ ಆಗಿದ್ದು ಇಂಜುರಿ ಹಿನ್ನೆಲೆಯಲ್ಲಿ ಈಗಾಗಲೇ ಏಷ್ಯಾಕಪ್​ ಟೂರ್ನಿಯ 2 ಪಂದ್ಯ ಕಳೆದುಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ವರ್ಲ್ಡ್​​ಕಪ್​ನ 15 ಸದಸ್ಯರ ತಂಡವನ್ನು ಇಂದು ಮಧ್ಯಾಹ್ನ 1:30ಕ್ಕೆ ಪ್ರಕಟ ಮಾಡಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ.

ಕಳೆದ ಐಪಿಎಲ್​ ಟೂರ್ನಿಯಲ್ಲಿ ಗಾಯಕ್ಕೆ ತುತ್ತಾಗಿದ್ದ ವಿಕೆಟ್​ ಕೀಪರ್ ಕಂ ಬ್ಯಾಟ್ಸ್​ಮನ್​ ಕೆ.ಎಲ್ ರಾಹುಲ್ ಅವರು ಬಳಿಕ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು. ಆದ್ರೆ ಇದೀಗ ನಡೆಯುತ್ತಿರುವ ಏಷ್ಯಾಕಪ್​ನ ಮೊದಲೆರಡು ಪಂದ್ಯಗಳನ್ನು ರಾಹುಲ್ ಮಿಸ್​ ಮಾಡಿಕೊಂಡಿದ್ದಾರೆ. ಹೀಗಾಗಿ ಏಕದಿನ ವಿಶ್ವಕಪ್​ಗೆ ಆಯ್ಕೆ ಆಗುತ್ತಾರೋ, ಇಲ್ವೋ ಎಂಬ ಕುತೂಹಲ ಕ್ರಿಕೆಟ್​ ಅಭಿಮಾನಿಗಳನ್ನ ಕಾಡತೊಡಗಿದೆ.

ಭಾರತದ ಆಟಗಾರ ಕೆ.ಎಲ್ ರಾಹುಲ್

ಕಳೆದ ವಾರ ಅಜಿತ್ ಅಗರ್ಕರ್ ಅವರು ಶ್ರೀಲಂಕಾಗೆ ತೆರಳಿ ಕ್ಯಾಪ್ಟನ್​ ರೋಹಿತ್ ಶರ್ಮಾ, ಮುಖ್ಯಕೋಚ್ ರಾಹುಲ್ ದ್ರಾವಿಡ್​ರನ್ನ ಭೇಟಿ ಮಾಡಿ ವಿಶ್ವಕಪ್​ ತಂಡವನ್ನು ಫೈನಲ್ ಲಿಸ್ಟ್ ಸಿದ್ಧ ಮಾಡಿದ್ದಾರೆ. ಈ ಲಿಸ್ಟ್​​ನಲ್ಲಿ ಗಾಯದಿಂದ ಬಳಲಿ ಚೇತರಿಸಿಕೊಂಡಿದ್ದ ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲವೇ ಕೆಲ ಸ್ಟಾರ್ ಆಟಗಾರರ ಹೆಸರು ಪರಿಗಣಿಸಲಾಗಿದಿಯೋ ಅಥವಾ ಕೈ ಬಿಡಲಾಗಿದಿಯೋ ಎಂಬುದು ಇಂದು ಅಧಿಕೃತವಾಗಿ ಗೊತ್ತಾಗಲಿದೆ ಎಂದು ತಿಳಿದು ಬಂದಿದೆ.

ಇನ್ನು ಅಕ್ಟೋಬರ್ 5 ರಿಂದ ಗುಜರಾತ್​ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್‌ನ ಮೊದಲ ಪಂದ್ಯ ಪ್ರಾರಂಭವಾಗಲಿದೆ. ಹೀಗಾಗಿ ತಾತ್ಕಾಲಿಕವಾಗಿ ಆಟಗಾರರ ಲಿಸ್ಟ್​ ಬಿಸಿಸಿಐ ಇಂದು ಘೋಷಣೆ ಮಾಡಲಿದೆ. ಪಟ್ಟಿಯಲ್ಲಿ ಇನ್ನಷ್ಟು ಪ್ರಮುಖ ಬದಲಾವಣೆಗಳನ್ನು ಸೆಪ್ಟೆಂಬರ್ 28ರೊಳಗೆ ಮಾಡಬಹುದು. ತದನಂತರ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಟೂರ್ನಿಗೆ ಇಂದು ಟೀಮ್ ಇಂಡಿಯಾ ಪ್ರಕಟ.. ಕನ್ನಡಿಗ KL ರಾಹುಲ್​ ಸ್ಥಾನ ಪಡೆಯುತ್ತಾರಾ?

https://newsfirstlive.com/wp-content/uploads/2023/09/KL_RAHUL-1.jpg

Load More