newsfirstkannada.com

ಭಾರತ ಎಂದು ಮರುನಾಮಕರಣ; ಇಂಡಿಯಾ ಹೆಸರು ಬದಲಿಸೋಕೆ ಕಾರಣವೇನು?

Share :

06-09-2023

    'ಭಾರತ' ಹೆಸರಿಗೆ ಪ್ರತಿಪಕ್ಷಗಳು ವಿರೋಧ ಮಾಡ್ತಿರೋದೇಕೆ?

    ಇಂಡಿಯಾ ಇನ್ಮುಂದೆ 'ಭಾರತ'.. ಕೇಂದ್ರದ ಅಚ್ಚರಿ ನಿರ್ಧಾರ!

    ದೇಶದ ಹೆಸರನ್ನು ಬದಲಾಯಿಸುತ್ತಿರುವ ಕೇಂದ್ರ ಸರ್ಕಾರ

ಕಳೆದ 75 ವರ್ಷದಿಂದ ನಮ್ಮ ದೇಶದ ಹೆಸರು ಇಂಡಿಯಾ. ಆದರೇ, ಈಗ ಧಿಡೀರನೇ ದೇಶದ ಹೆಸರನ್ನೇ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ನಾಮಕರಣ ಮಾಡಲು ಮುಂದಾಗಿದೆ. ಪ್ರತಿಪಕ್ಷಗಳು ಒಗ್ಗೂಡಿ ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟ ಬಳಿಕ ದೇಶದ ಹೆಸರು ಬದಲಾಯಿಸಿ ಭಾರತ ಎಂದು ಮರು ನಾಮಕರಣ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ದೇಶದ ಹೆಸರನ್ನು ಬದಲಾಯಿಸುತ್ತಿರುವ ಕೇಂದ್ರ ಸರ್ಕಾರ!
ಇಂಡಿಯಾ ಬದಲು ಭಾರತ ಅಂತ ಮರು ನಾಮಕರಣ!

ನಮ್ಮ ದೇಶವನ್ನು ಕಳೆದ 75 ವರ್ಷದಿಂದ ಇಂಡಿಯಾ ಅಂತಾನೇ ಕರೆಯಲಾಗುತ್ತಿದೆ. ದೇಶದ ಸಂವಿಧಾನದಲ್ಲಿ ರಿಪಬ್ಲಿಕ್ ಆಫ್ ಇಂಡಿಯಾ ಎಂದು ಉಲ್ಲೇಖಿಸಲಾಗಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ನಮ್ಮ ದೇಶವನ್ನು ಇಂಡಿಯಾ ಎಂದೇ ಕರೆಯಲಾಗುತ್ತೆ. ಇಂಡಿಯಾದ ಹೆಸರಿನಲ್ಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೀಗ ಇದ್ದಕ್ಕಿದ್ದಂತೆ ಕೇಂದ್ರ ಸರ್ಕಾರಕ್ಕೆ ಇಂಡಿಯಾ ಪದದ ಬಗ್ಗೆ ಅಸಮಾಧಾನ ಸೃಷ್ಟಿಯಾಗಿದೆ. ದೇಶದ ವಿರೋಧ ಪಕ್ಷಗಳಲ್ಲೇ ಸೇರಿ ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಿವೆ. ಇದಾದ ಬಳಿಕ ಬಿಜೆಪಿ ಪಕ್ಷದ ನಾಯಕರು ಇಂಡಿಯಾ ಹೆಸರಿಗೆ ವಿರೋಧ ವ್ಯಕ್ತಪಡಿಸಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ದೇಶದ ಹೆಸರು ಇಂಡಿಯಾ ಎಂದು ಇದ್ದಿದ್ದನ್ನು ಬದಲಾಯಿಸಿ ಭಾರತ ಎಂದು ಬರೆದುಕೊಂಡಿದ್ದರು. ಅಸ್ಸಾಂ ಸಿಎಂ ಹೀಮಂತ್ ಬಿಸ್ವಾ ಶರ್ಮಾ ಟ್ವೀಟರ್ ನಲ್ಲಿ ದೇಶದ ಹೆಸರನ್ನು ಭಾರತ ಎಂದು ಬದಲಾಯಿಸಿಕೊಂಡಿದ್ದರು.

ಆದರೆ ಈಗ ಅಧಿಕೃತವಾಗಿ ದೇಶದ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಹೆಸರನ್ನು ಇಂಡಿಯಾ ಅನ್ನೋ ಬದಲಿಗೆ ಭಾರತ ಎಂದು ನಾಮಕರಣ ಮಾಡಲು ನಿರ್ಧರಿಸಿದೆಯಂತೆ. ಸೆಪ್ಟೆಂಬರ್ 18 ರಿಂದ 23 ರವರೆಗೆ ಸಂಸತ್‌ನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ವಿಶೇಷ ಅಧಿವೇಶನದಲ್ಲೇ ದೇಶದ ಹೆಸರನ್ನು ಬದಲಾಯಿಸುವ ನಿರ್ಣಯ ಅಂಗೀಕರಿಸಲು ಪ್ಲ್ಯಾನ್ ಮಾಡಿದೆಯಂತೆ. ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಾಯಿಸುವ ಬಗ್ಗೆ ಕೇಂದ್ರ ಸರ್ಕಾರದ ಯಾವೊಬ್ಬ ಸಚಿವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ ಮೋದಿ ಸರ್ಕಾರ ಎಲ್ಲವನ್ನೂ ರಹಸ್ಯವಾಗಿಯೇ ಮಾಡಿ ಮುಗಿಸುತ್ತೆ. ಕೊನೆ ಕ್ಷಣದವರೆಗೂ ತಮ್ಮ ಮುಂದಿನ ಹೆಜ್ಜೆ ಏನು ಎನ್ನುವ ಬಗ್ಗೆ ಯಾರಿಗೂ ಗುಟ್ಟು ಬಿಟ್ಟುಕೊಡಲ್ಲ. ಈಗ ದೇಶದ ಹೆಸರು ಬದಲಾವಣೆ ಬಗ್ಗೆಯೂ ಅದೇ ರೀತಿಯ ರಹಸ್ಯ, ಮೌನ ಕಾಪಾಡಿಕೊಳ್ಳುತ್ತಿದೆ.

ದೇಶದ ಹೆಸರು ಬದಲಾವಣೆ ಮಾಡಲಾಗುತ್ತೆ ಎಂಬ ಚರ್ಚೆಗೆ ಪುಷ್ಟಿ ನೀಡಿರೋದು ರಾಷ್ಟ್ರಪತಿ ಭವನದಿಂದ ಕಳಿಸಿದ ಡಿನ್ನರ್ ಪಾರ್ಟಿಯ ಆಹ್ವಾನ ಪತ್ರಿಕೆ. ಇದೇ ಸೆಪ್ಟೆಂಬರ್ 9ರಂದು ಜಿ-20 ಶೃಂಗಸಭೆಯ ಗಣ್ಯರಿಗೆ ಆಯೋಜಿಸಿರುವ ಡಿನ್ನರ್ ಪಾರ್ಟಿಗೆ ರಾಷ್ಟ್ಪಪತಿ ಭವನದಿಂದ ಆಹ್ವಾನ ಪತ್ರಿಕೆ ಕಳಿಸಲಾಗಿದೆ. ಈ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂದು ಬರೆಯುವ ಬದಲು ಪ್ರೆಸಿಡೆಂಟ್ ಆಫ್ ಇಂಡಿಯಾ ಎಂದು ಬರೆಯಲಾಗಿದೆ. ಇದು ದೇಶದ ಹೆಸರನ್ನು ಬದಲಾಯಿಸುವ ಚರ್ಚೆಗೆ ಪುಷ್ಟಿ ನೀಡಿದೆ. ಇನ್ನೂ ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ಜೈರಾಮ್ ರಮೇಶ್, ಈ ಸುದ್ದಿ ನಿಜವಾಗಿದೆ.

ರಾಷ್ಟ್ರಪತಿ ಭವನದಿಂದ ಪ್ರೆಸಿಡೆಂಟ್ ಆಫ್ ಭಾರತ ಹೆಸರಿನಲ್ಲಿ ಆಹ್ವಾನ ಪತ್ರಿಕೆ ಕಳಿಸಲಾಗಿದೆ. ಈಗ ಸಂವಿಧಾನದ ಆರ್ಟಿಕಲ್ ಒಂದನ್ನು ಭಾರತ, ಯೂನಿಯನ್ ಆಫ್ ಸ್ಟೇಟ್ ಎಂದು ಓದಬೇಕು. ಆದರೇ, ಈಗಲೂ ಯೂನಿಯನ್ ಸ್ಟೇಟ್ ಮೇಲೆ ದಾಳಿಯಾಗುತ್ತಿದೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ಇನ್ನೂ ಅಸ್ಸಾಂ ರಾಜ್ಯದ ಬಿಜೆಪಿ ಸಿಎಂ ಹೀಮಂತ್ ಬಿಸ್ವಾ ಶರ್ಮಾ ಕೂಡ ಮಾರ್ಮಿಕ ಟ್ವೀಟ್ ಮಾಡಿದ್ದಾರೆ. ರಿಪಬ್ಲಿಕ್ ಆಫ್ ಭಾರತ, ನಮ್ಮ ನಾಗರಿಕತೆ ಅಮೃತ ಕಾಲದತ್ತ ದಿಟ್ಟವಾಗಿ ಹೆಜ್ಜೆ ಇಡುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆ ಆಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ದೇಶವನ್ನು ಭಾರತ ಎಂದು ಕರೆಿಯಿರಿ ಎಂದಿದ್ದ ಮೋಹನ್ ಭಾಗವತ್
ಆರ್‌ಎಸ್ಎಸ್ ಮುಖ್ಯಸ್ಥರ ಮಾತು ಜಾರಿಗೊಳಿಸುತ್ತಿದೆಯೇ ಕೇಂದ್ರ?

ಕೆಲ ದಿನಗಳ ಹಿಂದೆ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ್ದ ಆರ್‌ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ನಮ್ಮ ದೇಶವನ್ನು ಭಾರತ ಎಂದು ಕರೆಯಬೇಕು ಎಂದಿದ್ದರು. ಭಾರತ ಎಂದು ಕರೆದಾಗ ಕೆಲವರಿಗೆ ಅರ್ಥವಾಗದಿದ್ದರೂ ಚಿಂತೆ ಇಲ್ಲ. ಅವರಿಗೆ ಅಗತ್ಯ ಇದ್ದರೇ, ಅರ್ಥ ಮಾಡಿಕೊಳ್ಳುತ್ತಾರೆ. ಈಗ ಜಗತ್ತಿಗೆ ಭಾರತದ ಅವಶ್ಯಕತೆ ಇದೆ. ಭಾರತಕ್ಕೆ ಜಗತ್ತಿನ ಅವಶ್ಯಕತೆ ಇಲ್ಲ ಎಂದು ನೇರವಾಗಿ ಹೇಳಿದ್ದರು. ಆರ್‌.ಎಸ್.ಎಸ್. ಬಿಜೆಪಿಯ ಮಾತೃ ಸಂಘಟನೆ. ಆರ್.ಎಸ್.ಎಸ್ ಹೇಳಿದ್ದನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತೆ. ಆರ್.ಎಸ್.ಎಸ್. ಸಿದ್ದಾಂತ, ಒಲವು, ನಿಲುವುಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸುತ್ತೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವುದನ್ನು ಆರ್.ಎಸ್.ಎಸ್. ಪ್ರತಿಪಾದಿಸಿತ್ತು. ಅದನ್ನು ಈಗ ಕೇಂದ್ರ ಸರ್ಕಾರ ಪೂರ್ಣಗೊಳಿಸಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಆರ್.ಎಸ್.ಎಸ್. ಅಜೆಂಡಾದ ಅಂಶ. ಅದು ಕೂಡ ಈಗ ಪೂರ್ಣವಾಗುತ್ತಿದೆ. ಈಗ ಆರ್.ಎಸ್.ಎಸ್. ಮುಖ್ಯಸ್ಥರು ಹೇಳಿದ್ದನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಜೊತೆಗೆ ಪ್ರಧಾನಿ ಮೋದಿ ಅವರು ಬ್ರಿಟಿಷರ ಕಾಲದ ಸಂಸ್ಕೃತಿ, ಪರಂಪರೆ, ಹೆಸರುಗಳನ್ನು ತೆಗೆದು ಹಾಕಿ ದೇಶೀಕರಣ ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ ಈಗ ಬ್ರಿಟಿಷರು ನಮ್ಮ ದೇಶಕ್ಕೆ ಇಂಡಿಯಾ ಎಂದು ಕರೆದಿದ್ದನ್ನು ತೆಗೆದು ಹಾಕಿ ಭಾರತ ಎಂದು ಮರು ನಾಮಕರಣ ಮಾಡುತ್ತಿದ್ದಾರಾ ಎಂಬ ಚರ್ಚೆಯೂ ನಡೆಯುತ್ತಿದೆ. ಇನ್ನೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು, ಇಂಡಿಯಾ ಮೈತ್ರಿಕೂಟದಿಂದ ಜನರು ಇಷ್ಟೊಂದು ಗಾಬರಿಯಾಗಿ ದೇಶದ ಹೆಸರು ಅನ್ನೇ ಬದಲಾವಣೆ ಮಾಡುತ್ತಿದ್ದಾರೆ. ಒಂದು ವೇಳೆ ನಾವು ನಮ್ಮ ಮೈತ್ರಿಕೂಟದ ಹೆಸರನ್ನು ಭಾರತ ಎಂದು ಬದಲಾಯಿಸಿದರೇ, ಆಗ ಭಾರತದ ಹೆಸರನ್ನು ಬದಲಾಯಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ನಮ್ಮ ದೇಶವನ್ನು ಮೊದಲಿನಿಂದಲೂ ಭರತ ಖಂಡ, ಭರತ ದೇಶ ಅಂತ ಕರೆಯಲಾಗುತ್ತಿದೆ. ಆದರೀಗ ಅಧಿಕೃತವಾಗಿ ಭಾರತ ಎಂದು ಮರು ನಾಮಕರಣ ಮಾಡುವತ್ತ ಕೇಂದ್ರ ಸರ್ಕಾರ ಹೆಜ್ಜೆ ಇಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಖಾತೆ ಸಚಿವ ರಾಜೀವ್ ಚಂದ್ರಶೇಖರ್, ನಾನು ಭಾರತ ವಾಸಿ, ನಮ್ಮ ದೇಶ ಭಾರತ, ಯಾವಾಗಲೂ ಭಾರತವಾಗಿಯೇ ಇರಲಿದೆ ಎಂದು ಹೇಳುವ ಮೂಲಕ ದೇಶದ ಹೆಸರು ಬದಲಾವಣೆಯ ಚರ್ಚೆಗೆ ಪುಷ್ಟಿ ನೀಡಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಭಾರತ್ ಮಾತಾಕೀ ಜೈ ಎಂದು ಟ್ವೀಟ್ ಮಾಡುವ ಮೂಲಕ ಹೆಸರು ಬದಲಾವಣೆಗೆ ಬೆಂಬಲ ಸೂಚಿಸಿದ್ದಾರೆ. ಒಟ್ಟಿನಲ್ಲಿ ದೇಶದ ಹೆಸರು ಬದಲಾವಣೆಯು ಈಗ ರಾಜಕೀಯ ಚರ್ಚೆಗೂ ಕಾರಣವಾಗಿದೆ. ಬಿಜೆಪಿ ನಾಯಕರು ಹೆಸರು ಬದಲಾವಣೆ ಸಮರ್ಥಿಸಿಕೊಳ್ಳುತ್ತಿದ್ದರೇ, ವಿಪಕ್ಷಗಳು ವಿರೋಧಿಸುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತ ಎಂದು ಮರುನಾಮಕರಣ; ಇಂಡಿಯಾ ಹೆಸರು ಬದಲಿಸೋಕೆ ಕಾರಣವೇನು?

https://newsfirstlive.com/wp-content/uploads/2023/09/india-3.jpg

Load More