newsfirstkannada.com

4 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ.. ತೆಂಡುಲ್ಕರ್ ಮುಂದೇನೇ 50ನೇ ಶತಕ ಸಿಡಿಸಿದ ವಿರಾಟ್

Share :

16-11-2023

    ಸೇಡಿನ ಸಮರ ಗೆದ್ದ ಭಾರತ ವಿಶ್ವಕಪ್ ಫೈನಲ್​ಗೆ

    ಮುಂಬೈನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆಯ ಶತಕ

    7 ಸ್ಟಾರ್ ಶಮಿ ದಾಳಿಗೆ ನ್ಯೂಜಿಲೆಂಡ್ ಉಡೀಸ್

ವಾಂಖೆಡೆ ಮೈದಾನದಲ್ಲಿ ಕೊಹ್ಲಿ ವಿಶ್ವದಾಖಲೆಯ ಶತಕ, ಲೋಕಲ್ ಬಾಯ್ ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್, ಟೀಮ್ ಇಂಡಿಯಾಕ್ಕೆ ಭರ್ಜರಿ ಗೆಲುವು ತಂದುಕೊಡ್ತು. ನ್ಯೂಜಿಲೆಂಡ್ ದಾಳಿಯನ್ನ ಧೂಳಿಪಟ ಮಾಡಿದ ರೋಹಿತ್ ಬಾಯ್ಸ್​, ವಿಶ್ವಕಪ್ ಫೈನಲ್ ಪ್ರವೇಶಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ, ಕಿವೀಸ್ ವಿರುದ್ಧ 4 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡಿತು.

ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ, ಮೊದಲು ಬ್ಯಾಟಿಂಗ್ ನಡೆಸಿತು. ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್, ತಂಡಕ್ಕೆ ಭರ್ಜರಿ ಸ್ಟಾರ್ಟ್ ನೀಡಿದ್ರು. ಮೊದಲ ವಿಕೆಟ್​ಗೆ ಈ ಜೋಡಿ 71 ರನ್​ಗಳ ಕಾಣಿಕೆ ನೀಡಿತು.

ರೋಹಿತ್ 4’S & 6’S

ಆರಂಭದಿಂದಲೂ ಅಗ್ರೆಸಿವ್ ಅಪ್ರೋಚ್ ತೋರಿದ ನಾಯಕ ರೋಹಿತ್, 4 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 47 ರನ್​ಗಳಿಸಿ ಔಟಾದ್ರು. ತಾಳ್ಮೆ ಮತ್ತು ಎಚ್ಚರಿಕೆ ಆಟದಿಂದ ಕ್ರೀಸ್​​ನಲ್ಲಿ ಸೆಟಲ್​ ಆಗಿದ್ದ ಗಿಲ್, ಗಾಯಗೊಂಡು ರಿಟೈರ್ಡ್​​ ಹರ್ಟ್ ಆದ್ರು.

3ನೇ ವಿಕೆಟ್​​ಗೆ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್, ಬಿರುಸಿನ ಬ್ಯಾಟಿಂಗ್ ನಡೆಸಿದ್ರು. 128 ಎಸೆತಗಳಲ್ಲಿ 163 ರನ್​ ಚಚ್ಚಿದ ಈ ಜೋಡಿ, ವಾಂಖೆಡೆಯಲ್ಲಿ ರನ್​ ಸುನಾಮಿ ಎಬ್ಬಿಸಿತು. ಸಾಲಿಡ್ ಇನ್ನಿಂಗ್ಸ್ ಆಡಿದ ಕೊಹ್ಲಿ, ಏಕದಿನ ಕ್ರಿಕೆಟ್​​ನಲ್ಲಿ ವಿಶ್ವದಾಖಲೆಯ 50ನೇ ಶತಕ ಸಿಡಿಸಿ ಸಂಭ್ರಮಿಸಿಕೊಂಡ್ರು. ಆ ಮೂಲಕ ಕೊಹ್ಲಿ, ಗಾಡ್ ಆಫ್ ಕ್ರಿಕೆಟ್​​ ಸಚಿನ್ ತೆಂಡುಲ್ಕರ್​​​ ಹೆಸರಿನಲ್ಲಿದ್ದ 49 ಶತಕಗಳ ದಾಖಲೆಯನ್ನ, ಬ್ರೇಕ್ ಮಾಡಿದ್ರು.

ಇದನ್ನು ಓದಿ: 50ನೇ ಶತಕ ಸಿಡಿಸಿ ಸಚಿನ್​​ ರೆಕಾರ್ಡ್​​ ಉಡೀಸ್ ಮಾಡಿದ ಕೊಹ್ಲಿ.. ಈ ಬಗ್ಗೆ ಹೇಳಿದ್ದೇನು ಗೊತ್ತಾ?

ಕೊಹ್ಲಿ ಶತನ

9 ಬೌಂಡ್ರಿ, 2 ಸಿಕ್ಸರ್​​​​​​​ಗಳ ನೆರವಿನಿಂದ 117 ರನ್​ಗಳಿಸಿದ ಕೊಹ್ಲಿ, ಟಿಮ್ ಸೌಥಿ ಬೌಲಿಂಗ್​ನಲ್ಲಿ ಔಟಾದ್ರು.

ಕೊಹ್ಲಿ ಔಟ್​

ಮತ್ತೊಂದೆಡೆ ಕೆ.ಎಲ್.ರಾಹುಲ್ ಜತೆ ಅರ್ಧಶತಕದ ಜತೆಯಾಟವಾಡಿದ ಸೆನ್ಸೇಷನಲ್ ಶ್ರೇಯಸ್, ಹೋಂ ಗ್ರೌಂಡ್​​ನಲ್ಲಿ ಶತಕ ಸಿಡಿಸಿ ಮಿಂಚಿ, ಮರೆಯಾದ್ರು.

ಇದನ್ನು ಓದಿ: ಬರೋಬ್ಬರಿ 8 ಸಿಕ್ಸರ್​​.. 7 ಫೋರ್​​.. ಅಬ್ಬರದ ಶತಕ ಸಿಡಿಸಿದ ಶ್ರೇಯಸ್​ ಬ್ಯಾಟಿಂಗ್​ ಹೇಗಿತ್ತು ಗೊತ್ತಾ?

ಶ್ರೇಯಸ್​ 100 ರನ್ಸ್​

ಅಂತಿಮವಾಗಿ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್​ಗಳಿಸಿತು. ಗಿಲ್ 80 ರನ್​ಗಳಿಸಿ ನಾಟೌಟ್ ಆದ್ರು. ಕಿವೀಸ್ ಪರ ಟಿಮ್ ಸೌಥಿ 3 ವಿಕೆಟ್ ಪಡೆದ್ರು.

398 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ್ದ ನ್ಯೂಜಿಲೆಂಡ್ ತಂಡಕ್ಕೆ, ವೇಗಿ ಶಮಿ ಆರಂಭದಲ್ಲೇ ಶಾಕ್ ಮೇಲೆ ಶಾಕ್ ನೀಡಿದ್ರು.

ಕೇನ್ ವಿಲಿಯಮ್ಸನ್

3ನೇ ವಿಕೆಟ್​​ಗೆ ಕೇನ್ ವಿಲಿಯಮ್ಸನ್ ಮತ್ತು ಡ್ಯಾರೆಲ್ ಮಿಚ್ಚೆಲ್, ಭರ್ಜರಿ ಜತೆಯಾಟವಾಡಿದ್ರು. 181 ರನ್​​ ಕಲೆಹಾಕಿದ ಈ ಜೋಡಿ, ಟೀಮ್ ಇಂಡಿಯಾ ಬೌಲರ್​ಗಳ ಮೇಲೆ ಒತ್ತಡ ಹಾಕಿದ್ರು. ಈ ನಡುವೆ ವಿಲಿಯಮ್ಸನ್ 69ರನ್​ಗಳಿಸಿ ಔಟಾಗ್ತಿದಂತೆ ನ್ಯೂಜಿಲೆಂಡ್ ಪತನ ಶುರುವಾಯ್ತು.

ಅಂತಿಮವಾಗಿ ನ್ಯೂಜಿಲೆಂಡ್ 48.5 ಓವರ್​ಗಳಲ್ಲಿ 327 ರನ್​ಗಳಿಗೆ ಆಲೌಟಾಯ್ತು. ಡ್ಯಾರೆಲ್ ಮಿಚ್ಚೆಲ್ 134 ರನ್​ಗಳಿಸಿದ್ರು. ಟೀಮ್ ಇಂಡಿಯಾ ಪರ ವೇಗಿ ಮೊಹಮ್ಮದ್ ಶಮಿ, 7 ವಿಕೆಟ್ ಪಡೆದು ಮಿಂಚಿದ್ರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ, ವಿಶ್ವಕಪ್ ಫೈನಲ್​ಗೆ ಗ್ರ್ಯಾಂಡ್ ಎಂಟ್ರಿ ಕೊಡ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

4 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ.. ತೆಂಡುಲ್ಕರ್ ಮುಂದೇನೇ 50ನೇ ಶತಕ ಸಿಡಿಸಿದ ವಿರಾಟ್

https://newsfirstlive.com/wp-content/uploads/2023/11/Team-India-6.jpg

Load More