newsfirstkannada.com

ಚೀನಾ, ಬ್ರೆಜಿಲ್‌ ಹಿಂದಿಕ್ಕಿದ ಭಾರತ ಈಗ ವಿಶ್ವದಲ್ಲೇ ನಂ.1 ದೇಶ; ಏನಿದು ಹೊಸ ದಾಖಲೆ?

Share :

10-06-2023

    ಡಿಜಿಟಲ್ ಭಾರತಕ್ಕೆ ಈಗ ವಿಶ್ವದಲ್ಲೇ ನಂ.1 ಪಟ್ಟ

    9 ವರ್ಷದ ಸಂಭ್ರಮಾಚರಣೆ ಹೆಚ್ಚಿಸಿದ ಹೊಸ ಕ್ರಾಂತಿ

    ಹೊಸ ದಾಖಲೆಗೆ ಪ್ರಧಾನಿ ನರೇಂದ್ರ ಮೋದಿ ಸಂತಸ

ನವದೆಹಲಿ: ಡಿಜಿಟಲ್ ಇಂಡಿಯಾ, ಡಿಜಿಟಲ್ ದುನಿಯಾದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. 2022ರ ಡಿಜಿಟಲ್ ಪೇಮೆಂಟ್‌ನಲ್ಲೀಗ ಭಾರತವೇ ವಿಶ್ವದ ನಂಬರ್ 1 ದೇಶವಾಗಿದೆ. ಈ ಡಿಜಿಟಲ್ ಕ್ರಾಂತಿಯಲ್ಲಿ ಭಾರತ, ಚೀನಾ, ಬ್ರೆಜಿಲ್ ದೇಶವನ್ನು ಹಿಂದಿಕ್ಕಿರೋದು ಮತ್ತೊಂದು ವಿಶೇಷದ ಸಂಗತಿಯಾಗಿದೆ.

2022ರ ಡಿಜಿಟಲ್‌ ಪೇಮೆಂಟ್‌ನಲ್ಲಿ ಭಾರತ ಈಗ ವಿಶ್ವದ ನಂ 1 ದೇಶ. ಕೇಂದ್ರ ಸರ್ಕಾರ ಈ ಕುರಿತು ಅಂಕಿ ಅಂಶವನ್ನು ಬಿಡುಗಡೆ ಮಾಡಿದ್ದು, 2022ರಲ್ಲಿ ಭಾರತದ ಡಿಜಿಟಲ್ ಪೇಮೆಂಟ್‌ ಶೇಕಡಾ 46ರಷ್ಟು ಹೆಚ್ಚಾಗಿದೆ. ಭಾರತೀಯರು ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಹಣವನ್ನ ವರ್ಗಾವಣೆ ಮಾಡಲು ಆಸಕ್ತಿ ಹೊಂದಿದ್ದಾರೆ.

2022ರ ಹಣಕಾಸಿನ ವರ್ಷದಲ್ಲಿ ಭಾರತ ಬರೋಬ್ಬರಿ 89.5 ಮಿಲಿಯನ್ ಹಣವನ್ನು ಡಿಜಿಟಲ್ ವಹಿವಾಟು ನಡೆಸಿದೆ. ಇದು ಭಾರತದ ಡಿಜಿಟಲ್ ವ್ಯವಹಾರದ ಇತಿಹಾಸದಲ್ಲೇ ಐತಿಹಾಸಿಕ ದಾಖಲೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ನಗದು ರಹಿತ ವ್ಯವಹಾರಗಳಿಂದ ಈ ದಾಖಲೆ ಸಾಧ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದ ಬಳಿಕ ಡಿಜಿಟಲ್ ಪೇಮಂಟ್‌ನಲ್ಲಿ ಬ್ರೆಜಿಲ್ ದೇಶ 2ನೇ ಸ್ಥಾನದಲ್ಲಿದೆ. 2022ರ ಹಣಕಾಸು ವರ್ಷದಲ್ಲಿ ಬ್ರೇಜಿಲ್ 29.2 ಮಿಲಿಯನ್ ವಹಿವಾಟು ನಡೆಸಿದ್ರೆ ಚೀನಾ 17.6 ಮಿಲಿಯನ್ ವಹಿವಾಟಿನಿಂದ 3ನೇ ಸ್ಥಾನ ಕಾಯ್ದುಕೊಂಡಿದೆ. ಥಾಯ್‌ಲ್ಯಾಂಡ್‌, ದಕ್ಷಿಣ ಕೋರಿಯಾ ನಂತರದ ಸ್ಥಾನದಲ್ಲಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷದ ಸಂಭ್ರಮಾಚರಣೆಯಲ್ಲಿದೆ. ಈ ಸಂದರ್ಭದಲ್ಲೇ ಡಿಜಿಟಲ್ ಇಂಡಿಯಾ ವಿಶ್ವದಲ್ಲೇ ನಂ.1 ಪಟ್ಟಕ್ಕೇರಿರುವುದು ಗಮನಾರ್ಹವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ಈಗ ನಂಬರ್ 1. ವಿಶ್ವದಲ್ಲೇ ಅತಿ ಕಡಿಮೆ ಬೆಲೆಯಲ್ಲಿ ಮೊಬೈಲ್ ಡೇಟಾ ಸಿಗುವ ದೇಶ ಕೂಡ ಭಾರತವಾಗಿದೆ. ದೇಶದ ಗ್ರಾಮೀಣ ಅರ್ಥವ್ಯವಸ್ಥೆಯು ರೂಪಾಂತರಗೊಳ್ಳುತ್ತಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಚೀನಾ, ಬ್ರೆಜಿಲ್‌ ಹಿಂದಿಕ್ಕಿದ ಭಾರತ ಈಗ ವಿಶ್ವದಲ್ಲೇ ನಂ.1 ದೇಶ; ಏನಿದು ಹೊಸ ದಾಖಲೆ?

https://newsfirstlive.com/wp-content/uploads/2023/06/India-3.jpg

Load More