newsfirstkannada.com

ಟಾಸ್ ಗೆದ್ದ ರೋಹಿತ್​ ಶರ್ಮಾ, ಬ್ಯಾಟಿಂಗ್ ಆಯ್ಕೆ.. ಟೀಮ್ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಯಾಱರಿಗೆ ಸ್ಥಾನ?

Share :

02-09-2023

    ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ಫ್ಯಾನ್ಸ್ ಕಾತುರ

    ಶಾಹೀನ್ ಆಫ್ರಿದಿ ಬೌಲಿಂಗ್​ಗೆ ಉತ್ತರ ಕೊಡಬೇಕು..!

    ಪಾಕಿಸ್ತಾನವನ್ನು ಫೀಲ್ಡಿಂಗ್ ಆಹ್ವಾನಿಸಿದ ರೋಹಿತ್​

ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್​ ಪಂದ್ಯದಲ್ಲಿ ಭಾರತ ಟಾಸ್ ಗೆದ್ದುಕೊಂಡು ಬ್ಯಾಟಿಂಗ್ ಆಯ್ದುಕೊಂಡಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಎದುರಾಳಿ ಪಾಕ್ ಅನ್ನು ಫೀಲ್ಡಿಂಗ್​ ಆಹ್ವಾನಿಸಿದ್ದಾರೆ.

ಓಪನರ್ ಆಗಿ ಕ್ರೀಸ್​ಗೆ ರೋಹಿತ್ ಶರ್ಮಾ ಜೊತೆ ಶುಭ್​ಮನ್​ ಗಿಲ್​ ಆಗಮಿಸಿದ್ದಾರೆ. ವಿರಾಟ್ ಕೊಹ್ಲಿ ಭಾರತದ ಪರ ಸ್ಟಾರ್ ಬ್ಯಾಟ್ಸ್​ಮನ್ ಆಗಿದ್ದು 3ನೇ ಅಥವಾ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರಬಹುದು. ಕೆ.ಎಲ್​ ರಾಹುಲ್​ ಅನುಪಸ್ಥಿತಿಯಲ್ಲಿ ಇಶನ್ ಕಿಶನ್ ಬ್ಯಾಟಿಂಗ್​ ಹಾಗೂ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಆಲ್​ ರೌಂಡರ್​ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಂಡಕ್ಕೆ ಉತ್ತಮ ಸಾಥ್ ಕೊಡುವ ನಿರೀಕ್ಷೆಯಲ್ಲಿದ್ದಾರೆ. ಜಡೇಜಾ ಮೇಲೆ ಸಾಕಷ್ಟು ಭರವಸೆಯನ್ನು ಇಡಲಾಗಿದೆ. ತಂಡದಲ್ಲಿ ಮೊಹಮ್ಮದ್ ಶಮಿ ಇಲ್ಲದ ಕಾರಣ ಜಸ್ಪ್ರೀತ್ ಬುಮ್ರಾ ಅವರು ಭಾರತದ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ.

ರೋಹಿತ್ ಶರ್ಮಾ ಮತ್ತು ಬಾಬರ್

2023ರ ಏಷ್ಯಾಕಪ್​ ಟೂರ್ನಿಯ ಹೈವೋಲ್ಟೇಜ್​ ಮ್ಯಾಚ್​ ಇದಾಗಿದ್ದು ಭಾರತ ಏಷ್ಯಾಕಪ್​ನ​ ಮೊದಲ ಪಂದ್ಯವನ್ನೇ ಬದ್ಧವೈರಿ ಪಾಕ್​ ವಿರುದ್ಧ ಆಡುತ್ತಿದೆ. ಈಗಾಗಲೇ ನೇಪಾಳ ವಿರುದ್ಧ ಆಡಿರುವ ಪಾಕ್ ಬೃಹತ್ ರನ್​ಗಳಿಂದ ಗೆಲುವು ಪಡೆದಿತ್ತು. ಇಂದು ನಡೆಯುತ್ತಿರುವ ಪಂದ್ಯವನ್ನು ರೋಹಿತ್ ಶರ್ಮಾ ಪಡೆ ಗೆಲ್ಲುವ ವಿಶ್ವಾಸದಲ್ಲಿದೆ. ಇನ್ನು ಪಾಕ್ ಬಾಬಾರ್ ಅಝಂ ಸಾರಥ್ಯದಲ್ಲಿ ಕಣಕ್ಕೆ ಇಳಿದರೆ, ಟೀಮ್ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುನ್ನಡೆಯಲಿದೆ.

ಇನ್ನು ಪಾಕಿಸ್ತಾನದ ಬಹುತೇಕ ಆಟಗಾರರು ನೇಪಾಳ ವಿರುದ್ಧ ಆಡಿದ ಪ್ಲೇಯರ್ಸ್​ ಕ್ರೀಡಾಂಗಾಣಕ್ಕೆ ಇಳಿದಿದ್ದಾರೆ. ಹೀಗಾಗಿ ಹೇಗಾದ್ರೂ ಮಾಡಿ ಟೀಮ್ ಇಂಡಿಯಾ ವಿರುದ್ಧ ಪಂದ್ಯ ಗೆಲ್ಲಲು ಭಾರೀ ರಣತಂತ್ರವನ್ನು ಬಾಬರ್​ ಪಡೆ ರೂಪಿಸಿದೆ ಎನ್ನಲಾಗಿದೆ. ಶಾಹೀನ್ ಆಫ್ರಿದಿ ಎಂದಿನಂತೆ ಪೇಸ್​ ಬೌಲಿಂಗ್ ಮಾಡಲಿದ್ದಾರೆ.

ಟೀಮ್ ಇಂಡಿಯಾದ ಪ್ಲೇಯಿಂಗ್-11 ಹೇಗಿದೆ?

ಕ್ಯಾಪ್ಟನ್​ ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್,

ಪಾಕ್ ತಂಡದ ಪ್ಲೇಯಿಂಗ್-11

ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಝಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟಾಸ್ ಗೆದ್ದ ರೋಹಿತ್​ ಶರ್ಮಾ, ಬ್ಯಾಟಿಂಗ್ ಆಯ್ಕೆ.. ಟೀಮ್ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಯಾಱರಿಗೆ ಸ್ಥಾನ?

https://newsfirstlive.com/wp-content/uploads/2023/09/ROHIT_SHARMA.jpg

Load More