ಟೀಂ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ
ಐಪಿಎಲ್, ಡೊಮೆಸ್ಟಿಕ್ ಹೀರೋಗಳಿಗೆ ಜಾಕ್ಪಾಟ್
ಟಿ-20 ಸರಣಿಯಲ್ಲಿ ಯಾರಿಗೆಲ್ಲ ಚಾನ್ಸ್ ಸಿಗಬಹುದು ಗೊತ್ತಾ?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲು ಬಿಸಿಸಿಐಯನ್ನು ಕಂಗೆಡಿಸಿದೆ. ಮುಂದೆ ಇಂತಹ ತಪ್ಪು ಮರುಕಳಿಸದಿರಲು ಬಿಗ್ಬಾಸ್ಗಳು ಚಿಂತಿಸ್ತಿದ್ದಾರೆ. ಇದಕ್ಕಾಗಿ ಮೇಜರ್ ಸರ್ಜರಿಗೆ ಮುಂದಾಗಿದ್ದು, ಟೀಂ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ ನಿಶ್ಚಿತವಾಗಿದೆ. ಬಿಗ್ಬಾಸ್ಗಳ ಈ ನಡೆಯಿಂದ ಸೀನಿಯರ್ಗಳ ಎದೆಯಲ್ಲಿ ನಡುಕ ಶುರುವಾಗಿದೆ.
ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಸೋಲಿನಿಂದ, ಟೀಂ ಇಂಡಿಯಾ ಮಾನ ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಹರಾಜಾಗಿದೆ. ತಲೆಯೆತ್ತಿ ಮೆರೆಯುತ್ತಿದ್ದ ಬಿಸಿಸಿಐ ಎಲ್ಲರೆದುರು ತಲೆಗ್ಗಿಸುವಂತಾಗಿದೆ. ಈ ಅಪಮಾನ, ಹತಾಶೆ ಮತ್ತೊಮ್ಮೆ ಮರುಕಳಿಸದಿರಲು ಬಿಸಿಸಿಐ ನಿರ್ಧರಿಸಿದ್ದು, ತಂಡದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದೆ.
ಇಂಡೀಸ್ ಪ್ರವಾಸದಿಂದಲೇ ಮೇಜರ್ ಸರ್ಜರಿನಾ..!
ಜುಲೈ 12 ರಿಂದ ಭಾರತ-ವೆಸ್ಟ್ಇಂಡೀಸ್ ನಡುವೆ ದ್ವಿಪಕ್ಷೀಯ ಸರಣಿ ಆರಂಭಗೊಳ್ಳಲಿದೆ. ಸುದೀರ್ಘ ಒಂದು ತಿಂಗಳು ಹಣಾಹಣಿ ಏರ್ಪಡಲಿದೆ. ಮೆನ್ ಇನ್ ಬ್ಲೂ ಪಡೆಗೆ ಇದು ಬರೀ ಸರಣಿ ಮಾತ್ರ ಅಲ್ಲ. WTC 3ನೆ ಆವೃತ್ತಿ ಇಲ್ಲಿಂದಲೇ ಸ್ಟಾರ್ಟ್ ಆಗಲಿದ್ದು ಬದಲಾವಣೆಯ ರಣಕಹಳೆ ಊದಲು ಬಿಸಿಸಿಐ ಪ್ಲಾನ್ ಮಾಡಿದೆ.
‘ಯಂಗ್ ಇಂಡಿಯಾ’ ಕಟ್ಟಲು ಬಿಗ್ಬಾಸ್ಗಳು ಪ್ಲಾನ್
ಸಾಲು-ಸಾಲು ಐಸಿಸಿ ಟ್ರೋಫಿಗಳ ಸೋಲಿನಿಂದ ಬಿಸಿಸಿಐ ಅಕ್ಷಶಃ ಕಂಗೆಟ್ಟಿ ಹೋಗಿದೆ. ಕ್ರಿಕೆಟ್ ಪಡಸಾಲೆಯಲ್ಲಿ ಬದಲಾವಣೆಯ ಆಗ್ರಹ ಕೇಳಿ ಬರುತ್ತಿದೆ. ಇದು ಬಿಗ್ಬಾಸ್ಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಿಮಿಸಿದೆ. ಸದ್ಯ ಬಿಸಿಸಿಐ ಮುಂದಿರೋದು ಒಂದೇ ದಾರಿ. ಅದುವೇ ಸರ್ಜರಿ. ಇದನ್ನರಿತೆ ಮುಂಬರೋ ವೆಸ್ಟ್ ಸರಣಿಯಲ್ಲಿ ಐಪಿಎಲ್ ಹಾಗೂ ಡೊಮೆಸ್ಟಿಕ್ ಹೀರೋಗಳಿಗೆ ಮಣೆ ಹಾಕಲು ಸಿದ್ಧತೆ ನಡೆಸಿದೆ. ಹಾಗಾದ್ರೆ ಯಾವೆಲ್ಲ ಅನ್ಕ್ಯಾಪ್ಡ್ ಪ್ಲೇಯರ್ಸ್ ಕೆರಿಬಿಯನ್ನರ ನಾಡಿಗೆ ಹಾರಬಹುದು?.
ಟಿ20 ಸರಣಿಯಲ್ಲಿ ಜೈಸ್ವಾಲ್, ರಿಂಕು ಸಿಂಗ್ಗೆ ಚಾನ್ಸ್..?
ಇಂಡೀಸ್ ಎದುರಿನ ಟಿ20 ಸರಣಿಗೆ ಐಪಿಎಲ್ ಸೆನ್ಷೆಷನಲ್ ಸ್ಟಾರ್ಗಳಾದ ರಿಂಕು ಸಿಂಗ್ ಹಾಗೂ ಯಶಸ್ವಿ ಜೈಸ್ವಾಲ್ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗ್ತಿದೆ. ಇಬ್ಬರು ಯಂಗ್ಸ್ಟರ್ಸ್ ಐಪಿಎಲ್ನಲ್ಲಿ ರನ್ ಹೊಳೆ ಹರಿಸಿದ್ರು. ಟಿ20ಗೆ ಇವರು ಹೇಳಿ ಮಾಡಿಸಿದ ಆಟಗಾರರು. ಇವರ ಜೊತೆ ವೇಗಿ ಮೋಹಿತ್ ಶರ್ಮಾ, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೂಡ ರೇಸ್ನಲ್ಲಿದ್ದಾರೆ.
ದಿ ಲೆಜೆಂಡ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನ ಟಿ20 ತಂಡದಿಂದ ಕೈಬಿಡಲಾಗಿದೆ. 2022ರ ಟಿ20 ವಿಶ್ವಕಪ್ ಬಳಿಕ ಒಂದು ಟಿ20 ಪಂದ್ಯ ಆಡಿಲ್ಲ. ಇವರ ಬದಲಿಗೆ ಯುವ ಆಟಗಾರರಿಗೆ ಬುಲಾವ್ ನೀಡಲು ಬಿಸಿಸಿಐ ಯೋಚಿಸುತ್ತಿದೆ.
ರೆಡ್ಬಾಲ್ನಲ್ಲಿ ಅಬ್ಬರಿಸಲು ಜೈಸ್ವಾಲ್, ಸರ್ಫರಾಜ್ ರೆಡಿ
ಇನ್ನು ಬರೀ ಟಿ20 ಮಾತ್ರವಲ್ಲ. ಟೆಸ್ಟ್ ತಂಡದಲ್ಲೂ ಬದಲಾವಣೆಯ ಬಿರುಗಾಳಿ ಬೀಸಲಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಚೇತೇಶ್ವರ್ ಪೂಜಾರ ಹಾಗೂ ಉಮೇಶ್ ಯಾದವ್ ಆಯ್ಕೆಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರಿಗೆ ತಂಡದಿಂದ ಗೇಟ್ಪಾಸ್ ನೀಡಿ ಆಂಗ್ರಿಯಂಗ್ ಮ್ಯಾನ್ ಯಶಸ್ವಿ ಜೈಸ್ವಾಲ್, ವೇಗಿ ಮುಕೇಶ್ ಕುಮಾರ್ ಹಾಗೂ ಸರ್ಫರಾಜ್ ಖಾನ್ಗೆ ಅವಕಾಶ ನೀಡಲು ಬಿಸಿಸಿಐ ಸದ್ದಿಲ್ಲದೇ ಸಿದ್ಧತೆ ನಡೆಸಿದೆ.
ಸೈಲೆಂಟಾಗಿ ಇಂಡೀಸ್ ಪ್ರವಾಸದಲ್ಲಿ ಮೇಜರ್ ಸರ್ಜರಿ ನಡೆಸಲು ಬಿಸಿಸಿಐ ಮುಂದಾಗಿರೋದು ನಿಜ. ಆದರೆ ಮೇಲಿನ ಯಂಗ್ಸ್ಟರ್ಸ್ಗಳಲ್ಲಿ ಯಾರಿಗೆಲ್ಲ ಜಾಕ್ಪಾಟ್ ಹೊಡೆಯುತ್ತೆ, ಯಾವೆಲ್ಲಾ ಸೀನಿಯರ್ ಪ್ಲೇಯರ್ಸ್ ಕಿಕೌಟ್ ಆಗಲಿದ್ದಾರೆ ಅನ್ನೋದು ಗೊತ್ತಾಗಬೇಕಾದ್ರೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ