newsfirstkannada.com

India TV-CNX ಭವಿಷ್ಯ: 2024ರ ಲೋಕಸಭೆ ಚುನಾವಣೆಯಲ್ಲೂ ಮೋದಿ ನೇತೃತ್ವದ NDA ಒಕ್ಕೂಟಕ್ಕೆ ಬಹುಪರಾಕ್..!

Share :

30-07-2023

  543 ಕ್ಷೇತ್ರಗಳ ಪೈಕಿಯಲ್ಲಿ NDAಗೆ ಎಷ್ಟು ಸ್ಥಾನ ಸಿಕ್ಕಿದೆ..?

  ಕಳೆದ ಬಾರಿಗಿಂತ ಕಾಂಗ್ರೆಸ್ ಪ್ರದರ್ಶನದಲ್ಲಿ ಬೆಳವಣಿಗೆ

  ದೇಶದ ಅತೀದೊಡ್ಡ 4ನೇ ಪಕ್ಷವಾಗಿ ಹೊರಹೊಮ್ಮಲಿದೆ YSR

2024ರ ಲೋಕಸಭೆ ಚುನಾವಣೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ಈ ಬಾರಿ ಯಾವ ಸರ್ಕಾರ ಬರುತ್ತೆ? ಎನ್​​ಡಿಎನಾ? ಇಂಡಿಯಾನಾ? ಎಂಬ ಮಾತುಗಳು ಶುರುವಾಗಿವೆ. ಇದರ ಮಧ್ಯೆ India TV-CNX ನಡೆಸಿದ ಸಮೀಕ್ಷೆ ಹೊರಬಿದ್ದಿದ್ದು, NDAಗೆ ಫುಲ್​​ ಮಾರ್ಕ್ಸ್​ ನೀಡಿದೆ.

ಸಮೀಕ್ಷೆ ಪ್ರಕಾರ, 543 ಲೋಕಸಭೆ ಕ್ಷೇತ್ರಗಳ ಪೈಕಿಯಲ್ಲಿ 318 ಸ್ಥಾನಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಒಕ್ಕೂಟ ಪಡೆಯಲಿದೆ ಎಂದು ಹೇಳಿದೆ. ಕಾಂಗ್ರೆಸ್​ ನೇತೃತ್ವದ ಇಂಡಿಯಾ ಕೇವಲ 175 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆಯಂತೆ. ಬಿಜೆಪಿ ಕಳೆದ ಬಾರಿಗಿಂತ ಈ ಸಲ ಕಡಿಮೆ ಸ್ಥಾನವನ್ನು ಪಡೆಯಲಿದ್ದು, 303 ಕ್ಷೇತ್ರಗಳಲ್ಲಿದ್ದ ಹಿಡಿತ 290ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ. ಆದರೂ ಗೆಲುವಿನ ನಾಗಲೋಟದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.

ಇನ್ನು ಕಾಂಗ್ರೆಸ್​ 52 ಕ್ಷೇತ್ರದಿಂದ 66 ಸ್ಥಾನಗಳವರೆಗೆ ಹೆಚ್ಚಿಸಿಕೊಂಡು ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್​, ಲೋಕಸಭೆ ಚುನಾವಣೆಯಲ್ಲಿ 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ 7 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಇನ್ನು ಆಂಧ್ರದ ಆಡಳಿತ ಪಕ್ಷ ವೈಎಸ್​ಆರ್​, 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ಯಂತೆ. ಆದರೆ 4 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT), ಒಟ್ಟು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ಯಂತೆ. ಇನ್ನು ಕಳೆದ ಬಾರಿ ಶಿವಸೇನೆ ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್​ ಆದ್ಮಿ ಪಾರ್ಟಿಯೂ ಕೂಡ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ.

ಯಾವ ರಾಜ್ಯದಲ್ಲಿ ಯಾರಿಗೆ ಮತ?

 • ಉತ್ತರ ಪ್ರದೇಶ (80): NDA 73, INDIA 7
 • ಬಿಹಾರ (40): NDA 24, INDIA 16
 • ಮಹಾರಾಷ್ಟ್ರ (48): NDA 24, INDIA 24
 • ತಮಿಳುನಾಡು (39): NDA 9 INDIA 30
 • ವೆಸ್ಟ್​ ಬೆಂಗಾಲ್ (42): NDA 12, INDIA 30
 • ಕರ್ನಾಟಕ (28): NDA 20, INDIA 7, ಇತರೆ 1
 • ಗುಜರಾತ್ (26): NDA 26, INDIA 0
 • ಕೇರಳ (20): NDA 0 , INDIA 20
 • ರಾಜಸ್ಥಾನ್ (25): NDA 21, INDIA 4
 • ಆಂಧ್ರ ಪ್ರದೇಶ (25): NDA 0, INDIA 0, ಇತರೆ 25
 • ಒಡಿಶಾ (21) : NDA 8, INDIA 0, ಇತರೆ 13
 • ಮಧ್ಯ ಪ್ರದೇಶ (29): NDA 24, INDIA 5
 • ತೆಲಂಗಾಣ (17): NDA 6, INDIA 2, ಇತರೆ 9
 • ಅಸ್ಸಾಂ (14): NDA 12, INDIA 1, ಇತರೆ 1
 • ಛತ್ತೀಸ್​ಗಢ (11): NDA 7, INDIA 4
 • ಜಾರ್ಖಂಡ್​ (14): NDA 13, INDIA 1
 • ಹರಿಯಾಣ (10): NDA 8, INDIA 2
 • ಪಂಜಾಬ್ (13): NDA 0, INDIA 13
 • ದೆಹಲಿ (7): NDA 5, INDIA 2
 • ಉತ್ತರಾಖಂಡ್ (5): NDA 5, INDIA 0
 • ಜಮ್ಮು ಕಾಶ್ಮೀರ ಮತ್ತು ಲಡಾಖ್ (6): NDA 3, INDIA 2, ಇತರೆ 1
 • ಹಿಮಾಚಲ ಪ್ರದೇಶ (4): NDA 3, INDIA 1
 • ಮಣಿಪುರ (2): NDA 0, INDIA 2
 • ಇತರೆ ಈಶಾನ್ಯ ರಾಜ್ಯ (9): NDA 9, INDIA 0
 • ಗೋವಾ (2): NDA 2 , INDIA 0
 • ಲಡಾಖ್, ಕೇಂದ್ರಾಡಳಿ (6): NDA 4, INDIA 2
 • ಒಟ್ಟು 543: NDA 318, INDIA 175, ಇತರೆ 50

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India TV-CNX ಭವಿಷ್ಯ: 2024ರ ಲೋಕಸಭೆ ಚುನಾವಣೆಯಲ್ಲೂ ಮೋದಿ ನೇತೃತ್ವದ NDA ಒಕ್ಕೂಟಕ್ಕೆ ಬಹುಪರಾಕ್..!

https://newsfirstlive.com/wp-content/uploads/2023/07/MODI-3-1.jpg

Load More