newsfirstkannada.com

ಜರ್ಮನಿ ಅಧಿಕಾರಿಗಳ ವಶದಲ್ಲಿ ಭಾರತದ ಮಗು; ಪುಟ್ಟ ಕಂದಮ್ಮನನ್ನು ಕರೆಸಲು ಕೇಂದ್ರದ ಪರದಾಟ

Share :

02-06-2023

    ಜರ್ಮನಿ ಅಧಿಕಾರಿಗಳ ವಶದಲ್ಲಿ ಭಾರತದ ಮಗು

    ಪುಟ್ಟ ಕಂದಮ್ಮನನ್ನು ಕರೆಸಲು ಕೇಂದ್ರ ಸರ್ಕಾರ ಸರ್ಕಾರ ಪರದಾಟ

    ಜರ್ಮನ್​ ಸರ್ಕಾರಕ್ಕೆ ಪತ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ

ದೆಹಲಿ: ಕಳೆದ ಒಂದೂವರೆ ವರ್ಷದ ಹಿಂದೆ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಮುಂಬೈ ಮೂಲದ ಭವೇಶ್ ಷಾ, ಧಾರಾ ಎಂಬ ದಂಪತಿಗಳ ಮಗುವನ್ನು ಜರ್ಮನಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಜರ್ಮನಿಯ ಅಧಿಕಾರಿಗಳು ವಶಕ್ಕೆ ಪಡೆದಾಗ ಮಗುವಿಗೆ ಕೇವಲ 7 ತಿಂಗಳು. ಈಗ ಮಗು ವಯಸ್ಸು 2 ವರ್ಷ ದಾಟಿದೆ. ಇದುವರೆಗೂ ಪೋಷಕರಿಗೆ ಜರ್ಮನಿಯ ಅಧಿಕಾರಿಗಳು ಮಗುವನ್ನು ನೀಡಿಲ್ಲ. ಇದಕ್ಕೆ ಕಾರಣ ಮಗುವಿನ ಮೇಲೆ ಪೋಷಕರು ಹಲ್ಲೆ ನಡೆಸಿದ್ದರು ಎಂಬ ಆರೋಪ. ಈ ಕೇಸ್​ಗೆ ಈಗ ಟ್ವಿಸ್ಟ್​​ ಸಿಕ್ಕಿದೆ. ತನ್ನ ಮಗುವನ್ನು ವಾಪಸ್​ ಕೊಡಿಸುವಂತೆ ಕೇಂದ್ರದ ಮೊರೆ ಪೋಷಕರು ಹೋಗಿದ್ದಾರೆ. ಜತೆಗೆ ಖುದ್ದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಮೂಲಕ ಭಾರತ ಮೂಲದ ಮಗುವನ್ನು ಜರ್ಮನಿಯಿಂದ ವಾಪಸ್ಸು ಕರೆಸಿ ಎಂದು ಮನವಿ ಮಾಡಿದ್ದಾರೆ. ಈಗ ವಿದೇಶಾಂಗ ವ್ಯವಹಾರಗಳ ಸಚಿವಾಲಯವೇ ಜರ್ಮನ್​ ಸರ್ಕಾರಕ್ಕೆ ಪತ್ರ ಬರೆದಿದೆ. ಕೂಡಲೇ ಭಾರತ ಮೂಲದ ಮಗುವನ್ನು ದೇಶಕ್ಕೆ ಕಳಿಸಿಕೊಡಿ ಎಂದು ಮನವಿ ಮಾಡಿದೆ.

ಇತ್ತ ಕೇಂದ್ರ ಸರ್ಕಾರ ಜರ್ಮನ್​ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅತ್ತ ಜರ್ಮನ್​ ಸರ್ಕಾರ ಪೋಷಕರು ಹಲ್ಲೆ ನಡೆಸಿದ ಕಾರಣ ಮಗುವನ್ನು ವಾಪಸ್​ ನೀಡಲು ಸಾಧ್ಯವಿಲ್ಲ. ನಮ್ಮಲ್ಲೇ ಮಗು ಸೇಫ್​​ ಆಗಿದೆ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಭಾರತೀಯರು ಅರಿಹಾ ಎಂಬ ಬಾಲಕಿಯನ್ನು ತವರಿಗೆ ವಾಪಸ್‌ ಕಳುಹಿಸಿ ಎಂದು ಕ್ಯಾಂಪೇನ್​ ಮಾಡುತ್ತಿದ್ದಾರೆ. ಕೇಂದ್ರದ ಮೂಲಕವೂ ಜರ್ಮನ್​ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ. ಅದರಲ್ಲೂ ಇಡೀ ದೇಶಾದ್ಯಂತ ಸಾವಿರಾರು ಮಂದಿ ಜೈನಾ ಸಮುದಾಯದವರು ಜರ್ಮನ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅರಿಹಾಳನ್ನು ವಾಪಾಸ್ ಭಾರತಕ್ಕೆ ಕರೆತರುವ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ಅರಿಹಾ ಕೇಸ್​​..?

ಮುಂಬೈ ಮೂಲದ ಭವೇಶ್ ಷಾ ಎಂಬಾತ ಜರ್ಮನಿಯಲ್ಲಿ ನೆಲೆಸಿದ್ದ ಭಾರತ ಮೂಲದ ಧಾರಾ ಎಂಬುವವರನ್ನು ಮದುವೆ ಆಗಿದ್ದರು. ವೃತ್ತಿಯಲ್ಲಿ ಇಂಜಿನಿಯರ್​ ಆಗಿದ್ದ ಜೋಡಿ ಬರ್ಲಿನ್‌ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿತ್ತು. ಈ ಜೋಡಿಗೆ ಅರಿಹಾ ಎಂಬ ಹೆಣ್ಣು ಮಗು ಜನಿಸಿದೆ. ಮಗು 7 ತಿಂಗಳಿದ್ದಾಗ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಜರ್ಮನಿ ವೈದ್ಯರಿಗೆ ತೋರಿಸಿದಾಗ ಮಗುವಿಗೆ ಯಾವುದೇ ಸಮಸ್ಯೆಯಿಲ್ಲ ಎಂದಿದ್ದರು. ಆದರೆ, ಅದೇ ವೈದ್ಯರು ಜರ್ಮನಿ ಅಧಿಕಾರಿಗಳನ್ನು ಕರೆಸಿ ಮಗುವಿನ ಮೇಲೆ ದಂಪತಿ ದೌರ್ಜನ್ಯ ಮಾಡಿದೆ ಎಂದು ಆರೋಪಿಸಿದ್ದರು. ಅಲ್ಲಿಂದ ಪೋಷಕರಿಗೆ ತರಾಟೆಗೆ ತೆಗೆದುಕೊಂಡ ಜರ್ಮನಿ ಅಧಿಕಾರಿಗಳು ಅರಿಹಾಳನ್ನು ವಶಕ್ಕೆ ಪಡೆದರು. ಅಂದು ಭಾಷೆ ಬಾರದ ಕಾರಣ ಪೋಷಕರು ಅಧಿಕಾರಿಗಳಿಗೆ ಸರಿಯಾಗಿ ಮನವರಿಕೆ ಮಾಡಲು ಆಗಲಿಲ್ಲ.

ತಮ್ಮ ಮೇಲಿನ ಆರೋಪದ ವಿರುದ್ಧ ಕಾನೂನು ಹೋರಾಟ

ಬಳಿಕ ತಮ್ಮ ಮೇಲಿನ ಆರೋಪದ ವಿರುದ್ಧ ಕಾನೂನು ಹೋರಾಟ ನಡೆಸಿದರು. ಇದರ ಪರಿಣಾಮ ಜರ್ಮನಿ ಕೋರ್ಟ್​ ದಂಪತಿ ಮೇಲಿನ ಆರೋಪ ತೆರೆವುಗೊಳಿಸಿತು. ಹೀಗಾಗಿ ಪೋಷಕರು ಜರ್ಮನಿ ವಶದಲ್ಲಿರುವ ಮಗುವನ್ನು ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರವೂ ಜರ್ಮನಿ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದರು. ಅಲ್ಲದೇ ಜರ್ಮನಿ ವಿದೇಶಾಂಗ ಸಚಿವೆ ಭಾರತಕ್ಕೆ ಭೇಟಿ ನೀಡಿದ್ದಾಗ ಮನವಿ ಮಾಡಿದ್ರೂ ಕ್ಯಾರೇ ಎನ್ನುತ್ತಿಲ್ಲ. ಮಗು ಪೋಷಕರಿಂದ ಬೇರ್ಪಟ್ಟು 20 ತಿಂಗಳಾಗಿದೆ. ಮುಂದೆ ಮಗು ಭಾರತವಲ್ಲದೇ ಜರ್ಮನ್​ನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಷಿಕ ಪರಿಸರದಲ್ಲೇ ಬೆಳೆಯುವ ಸಾಧ್ಯತೆ ಇರುವ ಕಾರಣ ಪೋಷಕರು ಈ ಬೇಡಿಕೆಯಿಟ್ಟಿದ್ದಾರೆ. ಕೂಡಲೇ ಮಗುವನ್ನು ಭಾರತಕ್ಕೆ ಕರೆಸಿ ಎಂದು ಪಟ್ಟು ಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜರ್ಮನಿ ಅಧಿಕಾರಿಗಳ ವಶದಲ್ಲಿ ಭಾರತದ ಮಗು; ಪುಟ್ಟ ಕಂದಮ್ಮನನ್ನು ಕರೆಸಲು ಕೇಂದ್ರದ ಪರದಾಟ

https://newsfirstlive.com/wp-content/uploads/2023/06/Parents.jpg

Load More