ಅಭಿಮಾನಿಗಳಲ್ಲಿ ವಿಶ್ವಕಪ್ ಬಗ್ಗೆ ಕುತೂಹಲ ಹುಟ್ಟಲು ಹಲವು ಕಾರಣ!
ಇಂಡೋ- ಆಸಿಸ್ ಹೈವೋಲ್ಟೆಜ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ
ಮುಯ್ಯಿಗೆ ಮುಯ್ಯಿ, ಜಿದ್ದಿಗೆ ಜಿದ್ದು, ಗೆಲುವೊಂದೇ ತಂಡಗಳ ಪರಮ ಗುರಿ
ಸೂಪರ್ ಸಂಡೇ ನಡೆಯೋ ಸೂಪರ್ ಕದನದ ಕಾವು ಕ್ರಿಕೆಟ್ ಲೋಕದಲ್ಲಿ ಕ್ಷಣ, ಕ್ಷಣಕ್ಕೆ ಹೆಚ್ಚಾಗ್ತಿದೆ. ಇಂಡೋ- ಆಸಿಸ್ ವಿಶ್ವಕಪ್ ಫೈನಲ್ ಫೈಟ್ ನೋಡಲು ಫ್ಯಾನ್ಸ್ ಕಾದು ಕುಳಿತಿದ್ದಾರೆ. ಅಭಿಮಾನಿಗಳಲ್ಲಿ ಈ ರೀತಿಯ ಕುತೂಹಲ ಹುಟ್ಟಲು ಹಲವು ಕಾರಣಗಳಿವೆ. ಫೈನಲ್ ಫೈಟ್ಗೆ ಹೈವೋಲ್ಟೇಜ್ ಟಚ್ ಕೊಟ್ಟ ಆ ಕಾರಣಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಇಂಡೋ- ಆಸಿಸ್ ಹೈವೋಲ್ಟೆಜ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಹಿಂದಾದ ಪಂದ್ಯಗಳಿಗಿಂತ ಅಹ್ಮದಾಬಾದ್ನಲ್ಲಿ ನಡೆಯೋ ಫೈನಲ್ ಪಂದ್ಯ ಇಡೀ ವಿಶ್ವದ ಗಮನವನ್ನ ಸೆಳೆದಿದೆ. ಚಾಂಪಿಯನ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಗೋದ್ರ ಜೊತೆ ಈ ಪಂದ್ಯದಲ್ಲಿ ಭರ್ಜರಿ ಎಂಟರ್ಟೈನ್ಮೆಂಟ್ ಕೂಡ ಸಿಗಲಿದೆ. ಫ್ಯಾನ್ಸ್ ಅಂತೂ ಭಾನುವಾರ ಭರ್ಜರಿ ಬಾಡೂಟದ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದಿನ ಹೋರಾಟಗಳಲ್ಲದ ಕೆಲ ವಿಚಾರಗಳು ಆ ನಿರೀಕ್ಷೆ ಹಿಂದಿನ ಕಾರಣಗಳಾಗಿವೆ.
ಫೈಟಿಂಗ್ ಸ್ಪಿರಿಟ್
ಇಂಡೋ- ಆಸಿಸ್ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಇದೆ. ವಿಶ್ವ ಕ್ರಿಕೆಟ್ ಲೋಕದ ಮದಗಜಗಳು ಸೋಲನ್ನ ಅಷ್ಟು ಸುಲಭವಾಗಿ ಒಪ್ಪೋ ಮಾತೇ ಇಲ್ಲ. ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರೋ ಈ ಎರಡೂ ತಂಡಗಳು ಆನ್ಫೀಲ್ಡ್ನಲ್ಲಿ ಸೇರಿಗೆ ಸವ್ವಾಸೇರು ಅನ್ನೋ ರೀತಿಯಲ್ಲೇ ಹೋರಾಟ ನಡೆಸ್ತಿವೆ. ಮುಯ್ಯಿಗೆ ಮುಯ್ಯಿ.. ಜಿದ್ದಿಗೆ ಜಿದ್ದು.. ಗೆಲುವೊಂದೇ ಉಭಯ ತಂಡಗಳ ಪರಮ ಗುರಿಯಾಗಿರುತ್ತೆ.
ಪ್ರತಿಷ್ಠೆಯ ಕದನ
ಫೈನಲ್ ಫೈಟ್ 2 ತಂಡಗಳ ಪಾಲಿನ ಪ್ರತಿಷ್ಠೆಯ ಕಣ. ದೇಶದ ಪ್ರತಿಷ್ಠೆಯ ಹೊರಾತಾಗಿ ಆಟಗಾರರ ಸ್ವ ಪ್ರತಿಷ್ಠೆ ಕೂಡ ಇಲ್ಲಿ ಅಡಗಿದೆ. ಸ್ಟಾರ್ ಆಟಗಾರರ ದಂಡೇ ಎರಡೂ ತಂಡಗಳಲ್ಲಿದೆ. ಆ ಸ್ಟಾರ್ಗಳಲ್ಲಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸುವ ಹಂಬಲವೂ ಹೆಚ್ಚಾಗಿದೆ. ಈ ಪ್ರತಿಷ್ಠೆಯಲ್ಲಿ ಯಾರು ಗೆಲ್ತಾರೆ ಅನ್ನೋ ವಿಚಾರವೇ ಸದ್ಯ ಮಿಲಿಯಲ್ ಡಾಲರ್ ಪ್ರಶ್ನೆಯಾಗಿದೆ.
ಹಠ VS ಛಲದ ಹೋರಾಟ
ಕಳೆದ 2 ಬಾರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಾಗಲೂ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಸರಣಿಯಲ್ಲಿ ಆಸಿಸ್ಗೆ ಟೀಮ್ ಇಂಡಿಯಾ ಮುಖಭಂಗ ಮಾಡಿದೆ. ತವರಿನಲ್ಲಾದ ಸೋಲಿನ ಸೇಡು ತೀರಿಸಿಕೊಳ್ಳೋ ಹಠ ಆಸ್ಟ್ರೇಲಿಯಾ ಕ್ಯಾಂಪ್ನಲ್ಲಿ ಜೋರಾಗಿದೆ. ಭಾರತದಲ್ಲಿ ಭಾರತೀಯರನ್ನ ಸೋಲಿಸಬೇಕು ಅನ್ನೋದು ಆಸಿಸ್ ಲೆಕ್ಕಾಚಾರವಾಗಿದೆ. ಆದ್ರೆ, ತವರಿನಲ್ಲಿ ಗೆಲ್ಲಲೇಬೇಕು ಎಂಬ ಛಲ ಟೀಮ್ ಇಂಡಿಯಾದಲ್ಲಿದೆ. ಅಜೇಯ ಟೀಮ್ ಇಂಡಿಯಾಗೆ ಟ್ರೋಫಿಗೆ ಮುತ್ತಿಕ್ಕೋವರೆಗೂ ಸಮಾಧಾನವೇ ಇಲ್ಲ.
ಹಾವು-ಮುಂಗುಸಿಗಳ ಕಾಳಗ
ಇಂಡೋ VS ಆಸಿಸ್ ನಡುವಿನ ಕ್ರಿಕೆಟ್ ಅಂದ್ರೆ ಅದು ಕೇವಲ ಪಂದ್ಯವಲ್ಲ, ಅದೊಂದು ಯುದ್ಧ. ರಣಕಣ ಕೇವಲ ಬ್ಯಾಟ್ ಮತ್ತು ಬಾಲ್ ವಾರ್ಗೆ ಮಾತ್ರ ಸೀಮಿತವಾಗಿರಲ್ಲ. ಇಲ್ಲಿ ಮಾತಿನ ಬ್ಯಾಟಲ್ ಕೂಡ ನಡೆಯುತ್ತೆ. ಅದು ಹಲ ಬಾರಿ ಅತಿರೇಕಕ್ಕೂ ಹೋಗಿದೆ. ಮಂಕಿಗೇಟ್ ವಿವಾದದಿಂದ ಹಿಡಿದು ಈವರೆಗೆ ಅದೆಷ್ಟೋ ಸ್ಲೆಡ್ಜಿಂಗ್ ವಾರ್ಗಳು ನಡೆದು ಹೋಗಿವೆ. ಮಾತಿನ ಚಕಮಕಿಗಳು ಪಂದ್ಯದ ಕಾವನ್ನ ಇನ್ನಷ್ಟು ಹೆಚ್ಚಿಸೋದಲ್ದೆ ಅಭಿಮಾನಿಗಳ ಕುತೂಹಲವನ್ನೂ ಡಬಲ್ ಮಾಡುತ್ವೆ.
ರನ್ಭೂಮಿಯಲ್ಲಿ ರಣರೋಚಕ ಯುದ್ಧ
ಇಂಡೋ -ಆಸಿಸ್ ಫೈಟ್ನಲ್ಲಿ ಟ್ವಿಸ್ಟ್ & ಟರ್ನ್ಗೆ ಏನು ಕೊರತೆ ಇರಲ್ಲ. ಬೌಲಿಂಗ್ ಬ್ಯಾಟಿಂಗ್, ಫೀಲ್ಡಿಂಗ್ ಮೂರು ವಿಭಾಗದಲ್ಲಿ ಎರಡೂ ತಂಡಗಳು ಬಲಿಷ್ಠವಾಗಿವೆ. ಯಾವುದೇ ಹಂತದಲ್ಲಿ ಬೇಕಾದ್ರೂ ಪಂದ್ಯಕ್ಕೆ ಟ್ವಿಸ್ಟ್ ಸಿಗಬಹುದು. ಅದ್ರಲ್ಲೂ ಫೈನಲ್ ಪಂದ್ಯ ಬೇರೆಯಾಗಿರೋದ್ರಿಂದ ಒನ್ ಸೈಡೆಡ್ ಗೇಮ್ ಆಗೋ ಸಾಧ್ಯತೆ ತೀರಾ ಕಡಿಮೆಯಿದೆ.
ಇಂಡೋ -ಆಸಿಸ್ ವಿಶ್ವಕಪ್ ಫೈನಲ್ ಬ್ಯಾಟಲ್ ಅಭಿಮಾನಿಗಳ ಕುತೂಹಲವನ್ನ ಕ್ಷಣ ಕ್ಷಣ ಹೆಚ್ಚಿಸ್ತಿರೋದಂತೂ ಸತ್ಯ. ಹೈವೋಲ್ಟೆಜ್ ಕದನದಲ್ಲಿ ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆ ಹುಸಿಯಾಗದಿರಲಿ. ಎರಡೂ ತಂಡಗಳು ಟಫ್ ಫೈಟ್ ನಡೆಸಲಿ. ಆದ್ರೆ, ಭಾರತವೇ ಗೆಲ್ಲಲಿ ಅನ್ನೋದು ಫ್ಯಾನ್ಸ್ ಮನದಾಳವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ