newsfirstkannada.com

ಏಕದಿನ ವಿಶ್ವಕಪ್​ಗೆ ಈ ಸರಣಿ ರಹದಾರಿ.. ಇನ್ನೆರಡು ದಿನದಲ್ಲಿ ತಂಡ ಪ್ರಕಟ.. ಆದರೆ!

Share :

16-09-2023

    ಅತ್ತ ಏಷ್ಯಾಕಪ್..ಇತ್ತ ಟೀಮ್ ಅನೌನ್ಸ್​​​​..!

    ಈ​ ಸರಣಿ ಭಾರತಕ್ಕೆ ವೆರಿ ಇಂಪಾರ್ಟೆಂಟ್ ಏಕೆ..?

    ಅನ್​ಫಿಟ್ ಶ್ರೇಯಸ್​​​​ಗೆ ಚಾನ್ಸ್ ಸಿಗುತ್ತಾ..?

ಏಷ್ಯಾಕಪ್​​ನಲ್ಲಿ ಫೈನಲ್​​ ತಲುಪಿರೋ ಟೀಮ್ ಇಂಡಿಯಾ ಚರಿತ್ರೆ ಸೃಷ್ಟಿಸುವ ಹೊಸ್ತಿಲಲ್ಲಿದೆ. ಅತ್ತ ರೋಹಿತ್ ಪಡೆ ಪ್ರಶಸ್ತಿ ಗೆಲ್ಲಲು ತವಕಿಸ್ತಿದ್ರೆ ಇತ್ತ ಆಯ್ಕೆ ಸಮಿತಿ ಸದ್ದಿಲ್ಲದೇ ಆಸ್ಟ್ರೇಲಿಯಾ ಸರಣಿಗೆ ತಂಡ ಪ್ರಕಟಿಸಲು ಸಜ್ಜಾಗಿದೆ. ಇನ್ನೆರಡು ದಿನದಲ್ಲಿ ತಂಡ ಅನೌನ್ಸ್ ಅಗಲಿದೆ. ವಿಶ್ವಕಪ್​ ಮುನ್ನ ಆಡುವ ಕೊನೆ ಸರಣಿ ಇದ್ದಾಗಿದ್ದು ತುಂಬಾ ಮಹತ್ವ ಪಡೆದುಕೊಂಡಿದೆ.

ನಾನ್​ಸ್ಟಾಪ್​​​ ಕ್ರಿಕೆಟ್​​​.. ಬಿಡುವಿಲ್ಲದ ವೇಳಾಪಟ್ಟಿ. ಒಂದಾದ ಮೇಲೊಂದರಂತೆ ದ್ವಿಪಕ್ಷೀಯ ಸರಣಿ. ಈ ಕಾರಣಕ್ಕಾಗಿಯೇ ಟೀಮ್ ಇಂಡಿಯಾ ವಿಶ್ವದ ಮೋಸ್ಟ್​ ಬ್ಯುಸಿ ತಂಡವೆನಿಸಿದೆ. ಏಷ್ಯಾಕಪ್​ ದಂಗಲ್​​ ನಾಳೆ ಮುಗಿಯಲಿದೆ. ಆಗಲೇ ಟೀಮ್ ಇಂಡಿಯಾ ಮತ್ತೊಂದು ಅಸೈನ್​ಮೆಂಟ್​ಗೆ ರೆಡಿಯಾಗಿದೆ. ರೋಹಿತ್​​ ಪಡೆ ಫೈನಲ್​ಗೆ ಎಂಟ್ರಿಕೊಟ್ಟಿರುವ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿ ಮುಂಬರೋ ಆಸ್ಟ್ರೇಲಿಯಾ ಸರಣಿಗೆ ತಂಡ ಪ್ರಕಟಿಸಲು ಸಜ್ಜಾಗಿದೆ.

ಅತ್ತ ಏಷ್ಯಾಕಪ್​ ಫೈನಲ್​​​.. ಇತ್ತ ಟೀಮ್ ಅನೌನ್ಸ್​​​​..!

ಏಷ್ಯಾಕಪ್​​ ಬ್ಯಾಟಲ್​ ನಾಳೆಗೆ ಕೊನೆಗೊಳ್ಳಲಿದೆ. ಮುಂದೆನಪ್ಪಾ ಅಂತ ನೀವು ಯೋಚಿಸಬೇಕಿಲ್ಲ. ಯಾಕಂದ್ರೆ ನಿಮ್ಮನ್ನ ರಂಜಿಸಲು ಮತ್ತೊಂದು ಮೆಗಾ ದ್ವಿಪಕ್ಷೀಯ ಸರಣಿ ಬರ್ತಿದೆ. ಅದುವೇ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ. ಸೆಪ್ಟೆಂಬರ್​ 22 ರಿಂದ ಕ್ರಿಕೆಟ್​​ನ ಮದಗಜಗಳಾದ ಇಂಡೋ-ಆಸಿಸ್ ನಡುವೆ ಫಿಫ್ಟಿ ಓವರ್​​ ಬ್ಯಾಟಲ್ ಆರಂಭಗೊಳ್ಳಲಿದ್ದು, ಇನ್ನೆರಡು ದಿನದಲ್ಲಿ ಟೀಮ್ ಇಂಡಿಯಾ ಅನೌನ್ಸ್ ಆಗಲಿದೆ.

ಒನ್ಡೇ ವಿಶ್ವಕಪ್​ಗೆ ಈ ಸರಣಿ ರಹದಾರಿ..!

ಇಂಡೋ-ಆಸೀಸ್​ ಕಾಳಗ ಒನ್ಡೇ ವಿಶ್ವಕಪ್​ಗೆ ರಹದಾರಿ ಅಂದ್ರು ತಪ್ಪಲ್ಲ. ಯಾಕಂದ್ರೆ ಮಹಾಸಮರಕ್ಕೂ ಮುನ್ನ ಟೀಮ್ ಇಂಡಿಯಾ ಆಡುವ ಕೊನೆ ಸರಣಿ ಇದಾಗಿದೆ. ಸೆಪ್ಟೆಂಬರ್​ 27ಕ್ಕೆ ಸರಣಿ ಮುಗಿಸಿಕೊಂಡು ನೇರವಾಗಿ ಒನ್ಡೇ ವಿಶ್ವಕಪ್​ ಅಖಾಡಕ್ಕೆ ಧುಮುಕಲಿದೆ. ಹೀಗಾಗಿ ರೋಹಿತ್ ಪಡೆ ಏನೇ ಪ್ರಯೋಗ ಮಾಡೋದಿದ್ರೂ ಈ ಸರಣಿಯಲ್ಲೇ ಮಾಡಬೇಕಿದೆ.

ಯಾಕಂದ್ರೆ ವಿಶ್ವಕಪ್​​ನಂತ ಬಿಗ್ ಸ್ಟೇಜ್​​ನಲ್ಲಿ ಪ್ರಯೋಗಕ್ಕೆ ಕೈ ಹಾಕಿದ್ರೆ ಅದರಿಂದ ತಂಡಕ್ಕೆ ಆಪತ್ತೆ ಹೆಚ್ಚು. ಸಾಕಷ್ಟು ಅಳೆದು ತೂಗಿ ಪರ್ಫೆಕ್ಟ್​ ತಂಡವನ್ನು ಕಣಕ್ಕಿಳಿಸಬೇಕಿದೆ. ಆಡುವ ಹನ್ನೊಂದರ ಬಳಗದಲ್ಲಿ ಸ್ವಲ್ಪ ಯಾಮಾರಿದ್ರೂ ಟ್ರೋಫಿ ಆಸೆ ಕೈಚೆಲ್ಲಬೇಕಾಗುತ್ತೆ. ಅದಕ್ಕೆ ಆಸ್ಪದ ನೀಡಬಾರದು ಅಂದರೆ ಕೊನೆ ಚಾನ್ಸ್ ಅನ್ನಪ್ರಯೋಗದ ಸರಣಿಯನ್ನಾಗಿ ಬಳಸಿಕೊಳ್ಳಬೇಕಿದೆ.

ಸ್ಟ್ರೆಂಥ್​ ಅಂಡ್ ವೀಕ್ನೆಸ್​​ ಅರಿಯಲು ಇದು ಕೊನೆ ಚಾನ್ಸ್

ವಿಶ್ವಕಪ್​​ನಂಥ ಪ್ರತಿಷ್ಠೆ ಟೂರ್ನಿ ಗೆಲ್ಲಬೇಕಾದ್ರೆ ಕ್ಯಾಪ್ಟನ್ ಆದವರಿಗೆ ತಂಡದ ಸ್ಟ್ರೆಂಥ್​​ ಮತ್ತು ವೀಕ್ನೆಸ್ ಚೆನ್ನಾಗಿ ಗೊತ್ತಿರಬೇಕು. ಆಗಲಷ್ಟೇ ನಿರೀಕ್ಷಿತ ಪ್ರದರ್ಶನ ಮೂಡಿಬರಲು ಸಾಧ್ಯ. ಭಾರತ ತಂಡ ಮೇಲ್ನೊಟಕ್ಕೆ ಸ್ಟ್ರಾಂಗ್ ಆಗಿ ಕಾಣಿಸಬಹುದು. ಹಾಗಂತ ತಂಡ ಪರ್ಫೆಕ್ಟ್ ಆಗಿದೆ ಎಂದಲ್ಲ. ಹಲವು ನ್ಯೂನತೆಗಳಿವೆ. 4 ಮತ್ತು 5ನೇ ಸ್ಲಾಟ್​ ಆಯ್ಕೆಗೆ ಇಲ್ಲಿಯತನಕ ಕ್ಲಾರಿಟಿ ಸಿಕ್ಕಿಲ್ಲ. ಕೆಳ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಹಾಗೂ ತಂಡದ ಫೀಲ್ಡಿಂಗ್ ಬಗ್ಗೆ ಪ್ರಶ್ನೆ ಎದ್ದಿದೆ. ಜತೆಗೆ ಬೌಲಿಂಗ್ ಕಾಂಬಿನೇಷನ್ ಬಗ್ಗೆಯೂ ಗೊಂದಲ ಇದೆ. ಈ ಎಲ್ಲದಕ್ಕೂ ​​ ಆಸಿಸ್ ಸಿರಿಸ್​​ನಲ್ಲೇ ಆನ್ಸರ್​​ ಕಂಡುಕೊಳ್ಳಬೇಕಿದೆ.

ಸ್ಟಾರ್ಸ್​ ಪ್ಲೇಯರ್ಸ್​ ಆಡ್ತಾರಾ? ರೆಸ್ಟ್ ನೀಡ್ತಾರಾ?

ಆಸೀಸ್ ಏಕದಿನ ಸರಣಿಯಲ್ಲಿ ಮೇನ್​​ ಪ್ಲೇಯರ್ಸ್​ ಆಡ್ತಾರಾ? ಅಥವಾ ಇಲ್ವಾ ಅನ್ನೋ ಪ್ರಶ್ನೆ ಕಾಡ್ತಿದೆ. ಟೀಮ್ ಇಂಡಿಯಾದ ಬಿಡುವಿಲ್ಲದೇ ಕ್ರಿಕೆಟ್ ಆಡ್ತಿದೆ. ಇದರಿಂದ ಆಟಗಾರರು ಸಾಕಷ್ಟು ಬಳಲಿದ್ದಾರೆ. ಹಾಗಾಗಿ ಬಾಂಗ್ಲಾ ಎದುರಿನ ಏಷ್ಯಾಕಪ್​ ಸೂಪರ್​​​-4 ಪಂದ್ಯದಿಂದ ಐವರಿಗೆ ರೆಸ್ಟ್ ನೀಡಲಾಗಿತ್ತು. ಇದೇ ಸ್ಟ್ರಾಟಜಿಯನ್ನು ಆಸೀಸ್​ ಸರಣಿಯಲ್ಲಿ ಫಾಲೋ ಮಾಡಿದ್ರೂ ಆಶ್ಚರ್ಯವಿಲ್ಲ. ಯಾಕಂದ್ರೆ ವಿಶ್ವಕಪ್​​​​ ಒಂದು ತಿಂಗಳಿಗೂ ಅಧಿಕ ಕಾಲ ನಡೆಯಲಿದೆ. ಈ ಅವಧಿಯಲ್ಲಿ ಇಂಜುರಿಯಾಗುವ ಸಾಧ್ಯತೆ ಇರುತ್ತೆ. ಇದನ್ನ ಗಮನದಲ್ಲಿರಿಸಿ ತಂಡದಲ್ಲಿನ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ರೂ ನೀಡಬಹುದು.

ಅನ್​ಫಿಟ್ ಶ್ರೇಯಸ್​​​​ಗೆ ಚಾನ್ಸ್ ಸಿಗುತ್ತಾ?

ಬೆನ್ನನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್​ ಆಸೀಸ್ ಸರಣಿಗೆ ಸೆಲೆಕ್ಟ್​ ಆಗ್ತಾರಾ ? ಇಲ್ವ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಏಷ್ಯಾಕಪ್ ಸೂಪರ್​​-4 ಪಂದ್ಯದಿಂದ ಶ್ರೇಯಸ್​ ಹೊರಗುಳಿದಿದ್ದಾರೆ. ಫೈನಲ್​​​ ಪಂದ್ಯ ಆಡುವುದು ಅನುಮಾನ ಎಂದು ಹೇಳಲಾಗ್ತಿದೆ. ಇಂತಹ ಅನ್​ಫಿಟ್ ಆಟಗಾರನಿ ಆಸೀಸ್ ಸರಣಿಯಲ್ಲಿ ಆಡಲು ಚಾನ್ಸ್ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.
ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾಗೆ ಕೊಕ್​ ನೀಡುವುದು ಪಕ್ಕಾ ಆಗಿದೆ. ಯಾಕಂದ್ರೆ ಇಬ್ಬರು ಹೊಡಿಬಡಿ ಆಟಗಾರರನ್ನು ವಿಶ್ವಕಪ್​ಗೆ ಪರಿಗಣಿಸಿಲ್ಲ. ಬಹುತೇಕ ಅದೇ ತಂಡವನ್ನೇ ಆಸೀಸ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೊಂದು ವೇಳೆ ಶ್ರೇಯಸ್​​​ ಫಿಟ್ ಆಗದಿದ್ದಲ್ಲಿ ತಿಲಕ್ ವರ್ಮಾಗೆ ಅದೃಷ್ಟ ಖುಲಾಯಿಸಬಹುದು. ಬಿಟ್ಟರೆ ಆಸ್ಟ್ರೇಲಿಯಾ ಸರಣಿಗೆ ಪ್ರಕಟಗೊಳ್ಳುವ ತಂಡದಲ್ಲಿ ಹೆಚ್ಚೇನೂ ಸರ್ಪ್ರೈಸ್ ನಿರೀಕ್ಷಿಸಲು ಸಾಧ್ಯವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಏಕದಿನ ವಿಶ್ವಕಪ್​ಗೆ ಈ ಸರಣಿ ರಹದಾರಿ.. ಇನ್ನೆರಡು ದಿನದಲ್ಲಿ ತಂಡ ಪ್ರಕಟ.. ಆದರೆ!

https://newsfirstlive.com/wp-content/uploads/2023/06/Team-India-1-1.jpg

Load More