newsfirstkannada.com

ಅವನೇ ಇವನು.. ಇವನೇ ಅವನು.. ಕೊಹ್ಲಿ ಕಂಡು ಮೈದಾನಕ್ಕೆ ನುಗ್ಗಿದವನು ಅಂತಿಂಥವನಲ್ಲ! ಇವನ ಚರಿತ್ರೆ ಬೇರೆಯೇ ಇದೆ

Share :

20-11-2023

    ಪಾಲೆಸ್ಟೈನ್​ ಟೀ ಶರ್ಟ್​ ಧರಿಸಿ ಮೈದಾನಕ್ಕೆ ನುಗ್ಗಿದ ವ್ಯಕ್ತಿ

    ಈತ ಮೈದಾನಕ್ಕೆ ನುಗ್ಗಿರೋದು ಇದೇ ಮೊದಲೇನಲ್ಲ

    ಕೊಹ್ಲಿ ಫ್ಯಾನ್​ ನಿಜ, ಆದರೆ ಆತನ ಯೋಚನೆ ಬೇರೆಯೇ ಇದೆ

ನಿನ್ನೆ ವಿಶ್ವಕಪ್​ ಪಂದ್ಯದ ಸಮಯದಲ್ಲಿ ಭದ್ರತಾ ಲೋಪವೊಂದು ನಡೆದ ವಿಚಾರ ಗೊತ್ತೇ ಇದೆ. ವಿರಾಟ್​ ಕೊಹ್ಲಿ ಬ್ಯಾಟಿಂಗ್​ ವೇಳೆ ವ್ಯಕ್ತಿಯೊಬ್ಬ ಮೈದಾನಕ್ಕೆ ನುಗ್ಗಿದ್ದನು. ಮಾತ್ರವಲ್ಲದೆ, ಕೊಹ್ಲಿಯನ್ನು ಕಂಡು ಓಡೋಡಿ ಬಂದು ಬಿಗಿದಪ್ಪಿಕೊಂಡಿದ್ದನು. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈತನ ಈತ ಯಾರು ಗೊತ್ತಾ? ಈ ರೀತಿಯ ವರ್ತನೆ ಇದೇ ಮೊದಲಲ್ಲ.

ಈತನ ಹೆಸರು ವೆನ್​ ಜಾನ್ಸನ್​. 24 ವರ್ಷದ ಈತ ಮೂಲತಃ ಆಸ್ಟ್ರೇಲಿಯಾದವನು. ಕ್ವೀನ್ಸ್​ಲ್ಯಾಂಡ್​ನ ಬ್ರಿಸ್ಬೇನ್​ ಉಪನಗರವಾದ ಟೂವಾಂಗ್​ನವನು. ಈತನಿಗೆ ಪೈಜಾಮ ಮ್ಯಾನ್​ ಎಂದು ಕರೆಯುತ್ತಾರೆ. ಅಚ್ಚರಿಯ ಸಂಗತಿ ಎಂದರೆ ಖ್ಯಾತ ಟಿಕ್​ಟಾಕ್​ ಬಳಕೆದಾರನು ಹೌದು. ಆದರೆ ನಿನ್ನೆ ಫೈನಲ್​ ಪಂದ್ಯಕ್ಕಾಗಿ ಭಾರತಕ್ಕೆ ಬಂದ ಜಾನ್ಸನ್​ ಕೊಹ್ಲಿಯನ್ನು ಕಂಡು ಮೈದಾನಕ್ಕೆ ನುಗ್ಗಿದ್ದಾನೆ. ಅಚ್ಚರಿಯ ಸಂಗತಿ ಎಂದರೆ ಪಾಲೆಸ್ಟೈನ್​ ಟೀ ಶರ್ಟ್​ ಧರಿಸಿಕೊಂಡು ಮೈದಾನದತ್ತ ಓಡೋಡಿ ಬಂದಿದ್ದಾನೆ. ಹೀಗಾಗಿ ಆತ ಪಾಲೆಸ್ಟೈನ್​ ಬೆಂಬಲಿಗ ಎಂಬುದು ಎಲ್ಲರಿಗೂ ತಿಳಿಯಿತು.

ಆಗಸ್ಟ್​ 20ರಂದು ಸಿಡ್ನಿಯಲ್ಲಿ ನಡೆದ 2023ರ ಫಿಪಾ ಮಹಿಳಾ ವಿಶ್ವಕಪ್​ ಫೈನಲ್​ನಲ್ಲೂ ಈತ ಇದೇ ರೀತಿಯ ವರ್ತನೆ ತೋರಿಸಿದ್ದನು. ‘ಸ್ಟಾಪ್​ ಪುಟಿನ್​’ ಎಂಬ ಟೀ ಶರ್ಟ್​ ಧರಿಸುವ ಮೂಲಕ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದನು. ಬಳಿಕ ಇಂಗ್ಲೆಂಡ್​ ಆಟಗಾರ್ತಿ ಲಾರೆನ್​ ಹೆಂಪ್​ ಅವರ ಬಳಿ ಓಡೋಡಿ ಬಂದಿದ್ದನು. ಬಳಿಕ ಆತನನ್ನು ಸೆಕ್ಯುರಿಟಿ ಹಿಡಿದು ಮೈದಾನದಿಂದ ಹೊರಹಾಕಿದ್ದಾರೆ. ಅಂದಹಾಗೆಯೇ ಜಾನ್ಸನ್​ 2022ರಲ್ಲಿ ಉಕ್ರೇನ್​ ಮೇಲೆ ರಷ್ಯಾದ ಆಕ್ರಮಣವನ್ನು ವಿರೋಧಿಸಿ ಪುಟಿನ್​ ವಿರುದ್ಧ ಟೀ ಶರ್ಟ್​ ಧರಿಸಿ ಜಾನ್ಸನ್​ ಆಕ್ರೋಶ ಹೊರಹಾಕಿದ್ದನು.

View this post on Instagram

A post shared by Pyjama Man (@pyjamamann)

ನಿನ್ನೆ ಕೂಡ ಜಾನ್ಸನ್​ ಮೈದಾನ ಪ್ರವೇಶಿಸಿದ್ದು, ಆತನ ಮೇಲೆ ಐಪಿಸಿ ಸೆಕ್ಷನ್​ 332,447 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಾತ್ರವಲ್ಲದೆ 39 ಸಾವಿರದಷ್ಟು ದಂಡವನ್ನು ವಿಧಿಸಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅವನೇ ಇವನು.. ಇವನೇ ಅವನು.. ಕೊಹ್ಲಿ ಕಂಡು ಮೈದಾನಕ್ಕೆ ನುಗ್ಗಿದವನು ಅಂತಿಂಥವನಲ್ಲ! ಇವನ ಚರಿತ್ರೆ ಬೇರೆಯೇ ಇದೆ

https://newsfirstlive.com/wp-content/uploads/2023/11/janson.jpg

Load More