newsfirstkannada.com

ಟಾಸ್ ಗೆದ್ದರೆ ರೋಹಿತ್ ಮೊದಲ ಆಯ್ಕೆ ಏನಾಗಿರುತ್ತೆ..? ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ರಿಪೋರ್ಟ್..!

Share :

19-11-2023

    ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಏನ್ ಮಾಡಬೇಕು..?

    ಟೀಂ ಇಂಡಿಯಾ ಪವರ್​ಪ್ಲೇ ಗೆದ್ರೆ, ವರ್ಲ್ಡ್​ಕಪ್ ಗೆದ್ದಂತೆ

    ಮಿಡಲ್ ಓವರ್ಸ್​ನಲ್ಲಿ ಜಡೇಜಾ ಮ್ಯಾಜಿಕ್ ಬೇಕು..!

ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಈಗಾಗಲೇ ಪಂದ್ಯ ಗೆಲ್ಲೋಕೆ ಟೀಮ್ ಇಂಡಿಯಾ ಕಠಿಣ ಸಮರಾಭ್ಯಾಸ ನಡೆಸಿದೆ. ತವರಿನಲ್ಲಿ ವಿಶ್ವಚಾಂಪಿಯನ್ ಆಗೋಕೆ ಪಣ ತೊಟ್ಟಿರುವ ರೋಹಿತ್ ಪಡೆ ಇಂದಿನ ಪಂದ್ಯ ಗೆಲ್ಲೋಕೆ ಗೇಮ್ ಪ್ಲಾನ್ ರೂಪಿಸಿಕೊಂಡಿದೆ. ಆಸಿಸ್ ವಿರುದ್ಧ ಗೆಲ್ಲೋಕೆ ಭಾರತ ಏನ್ ಮಾಡ್ಬೇಕು?

ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಸೋಲಿಸೋದು ಸುಲಭವಲ್ಲ. ಆಸಿಸ್ ಗತ್ತು ಟೀಮ್ ಇಂಡಿಯಾಗೂ ಗೊತ್ತು, ಹಾಗಾಗಿ ಇಂದಿನ ಹೈವೋಲ್ಟೇಜ್ ಫೈನಲ್ ಪಂದ್ಯವನ್ನು ಗೆಲ್ಲೋಕೆ, ರೋಹಿತ್ ಶರ್ಮಾ ಪಡೆ ಭರ್ಜರಿ ತಯಾರಿ ನಡೆಸಿಕೊಂಡಿದೆ. ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ, ಒಂದೇ ಒಂದು ಪಂದ್ಯ ಸೋತಿಲ್ಲ. ಲೀಗ್ ಮತ್ತು ಸೆಮೀಸ್ ಗೆದ್ದಿರುವ ಭಾರತ, ಇನ್ನೊಂದೇ ಒಂದು ಪಂದ್ಯ ಗೆದ್ದರೆ ವರ್ಲ್ಡ್​ಚಾಂಪಿಯನ್ಸ್. ಆದ್ರೆ ಅದು ಅಷ್ಟು ಸುಲಭವಲ್ಲ..! ಆಸ್ಟ್ರೇಲಿಯಾ ತಂಡವನ್ನು ಸೋಲಿಸಬೇಕಾದ್ರೆ ಟೀಮ್ ಇಂಡಿಯಾ ಈ ಐದು ಟಾಸ್ಕ್​ಗಳನ್ನ ಯಶಸ್ವಿಯಾಗಿ ನಿಭಾಯಿಸಬೇಕು.

ಟಾಸ್ ಗೆದ್ದು ಚೇಸ್ ಮಾಡಬೇಕು

ಅಹ್ಮದಾಬಾದ್​​ನಲ್ಲಿ ಟಾಸ್ ಗೆದ್ರೆ ಟೀಮ್ ಇಂಡಿಯಾ ಚೇಸಿಂಗ್ ಮಾಡಬೇಕು. ಯಾಕಂದ್ರೆ ಇಲ್ಲಿನ ಪಿಚ್, ಬ್ಲ್ಯಾಕ್ ಸಾಯಿಲ್​ನಿಂದ ಕೂಡಿರೋದ್ರಿಂದ ಪಿಚ್ ಸ್ಲೋ ಇರುತ್ತೆ. ಚೇಸಿಂಗ್ ಮಾಡೋದೇ ಬೆಸ್ಟ್. ಹಾಗೆ ಇತರೆ ಮೈದಾನಗಳಿಗೆ ಹೋಲಿಸಿದ್ರೆ ಅಹ್ಮದಾಬಾದ್​ನಲ್ಲಿ ಸ್ವಲ್ಪ ಡ್ಯೂ ಫ್ಯಾಕ್ಟರ್ ಇರುತ್ತೆ. ಅಂಡರ್​ ಲೈಟ್ಸ್​ ಬ್ಯಾಟಿಂಗ್ ಮಾಡೋದು ಈ ಪಿಚ್​ನಲ್ಲಿ ಸುಲಭ. ಹಾಗಾಗೇ ಚೇಸಿಂಗ್ ಬೆಸ್ಟ್ ಆಪ್ಶನ್ ಎನ್ನಬಹುದು.

ಪವರ್​ಪ್ಲೇನಲ್ಲಿ ಪವರ್​ಫುಲ್ ಆಟ ಆಡಬೇಕು

ಈ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್ ಪವರ್​ ಪ್ಲೇನಲ್ಲಿ, ಅದ್ಭುತ ಪ್ರದರ್ಶನ ನೀಡಿದೆ. ಪವರ್​​​ ಪ್ಲೇ ಗೆದ್ರೆ, ವರ್ಲ್ಡ್​ಕಪ್ ಗೆಲ್ಲಬಹುದು ಅಂತಾರೆ. ಹಾಗಾಗಿ ಟೀಮ್ ಇಂಡಿಯಾ ಪವರ್​ಪ್ಲೇನಲ್ಲಿ ಪವರ್​ಫುಲ್ ಪ್ರದರ್ಶನ ನೀಡಬೇಕು. ಪವರ್​​ಪ್ಲೇ ಗೆಲ್ಲೋಕೆ ಒಳ್ಳೆಯ ಸ್ಟ್ಯಾಟಿಕ್ಸ್​ ಮಾಡಿಕೊಳ್ಳಬೇಕು.

ಆಸಿಸ್ ಟಾಪ್ ಆರ್ಡರ್ ಮೇಲೆ ಶಮಿ ದಾಳಿ

ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್, ಆಸಿಸ್​​ನ ಡೇಂಜರಸ್ ಟಾಪ್ ಆರ್ಡರ್ ಬ್ಯಾಟರ್ಸ್​. ಇಬ್ಬರನ್ನು ಕಟ್ಟಿಹಾಕೋಕೆ ವೇಗಿ ಮೊಹಮ್ಮದ್ ಶಮಿನೇ ಬೆಸ್ಟ್. ಯಾಕಂದ್ರೆ ವಾರ್ನರ್ ಮತ್ತು ಹೆಡ್​​ ಇಬ್ಬರಿಗೂ ಔಟ್ ಸೈಡ್ ಆಫ್ ಸ್ಟಂಪ್ ವೀಕ್ನೆಸ್ ಇದೆ. ಹಾಗಾಗಿ ಶಮಿಯ ಸ್ಪೆಲ್ ತುಂಬಾನೇ ಪ್ರಮುಖವಾಗುತ್ತದೆ.

ಮಿಡಲ್ ಓವರ್​ಗಳಲ್ಲಿ ಜಡ್ಡು ಟೈಟ್ ಸ್ಪೆಲ್

ಮಿಡಲ್ ಓವರ್​ ಟೀಮ್ ಇಂಡಿಯಾಕ್ಕೆ ಅಡ್ವಾಂಟೇಜ್. ಯಾಕಂದ್ರೆ ಈ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಉತ್ತಮ ಸ್ಪೆಲ್ ಮಾಡಿದ್ದಾರೆ. ಅದ್ರಲ್ಲೂ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ, ಎದುರಾಳಿ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರಿದ್ದಾರೆ. ಈ ವಿಶ್ವಕಪ್​​ನಲ್ಲಿ ಜಡ್ಡು ಮಿಡಲ್​ ಓವರ್​ಗಳಲ್ಲಿ ಕೇವಲ 4.25 ಎಕಾನಮಿಯಲ್ಲಿ ರನ್​ ನೀಡಿದ್ದಾರೆ. ಜಡೇಜಾ ಆಸಿಸ್ ಮೇಲೂ, ಒತ್ತಡ ಹೇರಬೇಕು.
ಆಸ್ಟ್ರೇಲಿಯನ್ನರಿಗೆ ರಿಸ್ಕ್ ತೆಗೆದುಕೊಳ್ಳಲು ಚಾನ್ಸ್ ನೀಡಬಾರದು.

ಆಸ್ಟ್ರೇಲಿಯನ್ಸ್ ವರ್ಲ್ಡ್ ಕ್ಲಾಸ್ ಪ್ಲೇಯರ್ಸ್ ಅನ್ನೋದು, ಗೊತ್ತಿರೋ ವಿಚಾರ. ಅವ್ರು ಯಾವಾಗ ಹೇಗೆ ಸಿಡಿತಾರೆ ಅಂತ ಗೊತ್ತೇ ಆಗಲ್ಲ. ಆರಂಭದಲ್ಲೇ ಆಸಿಸ್ ಮೇಲೆ ಒತ್ತಡ ಹೇರಿದ್ರೆ, ಮ್ಯಾಚ್ ನಮ್ದೇ. ಒಂದು ವೇಳೆ ಆಸಿಸ್ ರಿಸ್ಕ್​ ತೆಗೆದುಕೊಳ್ಳೋಕೆ ಮುಂದಾದ್ರೆ ಅವ್ರಂತಹ ಡೇಂಜರಸ್ ಟೀಮ್ ಮತ್ತೊಂದು ಇಲ್ಲ ಬಿಡಿ. ಸೋ, ಆಸಿಸ್ ಮೇಲೆ ನಿರಂತರ ಒತ್ತಡ ಹೇರುತ್ತಿರಬೇಕು.

ಒಟ್ನಲ್ಲಿ..! ಟೀಮ್ ಇಂಡಿಯಾಗೆ ಈ ಮ್ಯಾಚ್ ಗೆಲ್ಲೋ ಎಲ್ಲಾ ಚಾನ್ಸಸ್ ಇದೆ. ಪಂದ್ಯದಲ್ಲಿ ಸರಿಯಾದ ಗೇಮ್​ಪ್ಲಾನ್, ಸ್ಟ್ರಾಟಜಿ ಮತ್ತು ಟ್ಯಾಕ್ಟಿಕ್ಸ್​ ಮಾಡಿದ್ರೆ ಅನ್​ಬೀಟಬಲ್ ಟೀಮ್​ ಇಂಡಿಯಾವನ್ನು ಬೀಟ್ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ.

ವಿಶೇಷ ವರದಿ: ಗಂಗಾಧರ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಾಸ್ ಗೆದ್ದರೆ ರೋಹಿತ್ ಮೊದಲ ಆಯ್ಕೆ ಏನಾಗಿರುತ್ತೆ..? ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ರಿಪೋರ್ಟ್..!

https://newsfirstlive.com/wp-content/uploads/2023/11/ROHITH-1.jpg

Load More