ಹೆಡ್ ಸ್ಫೋಟಕ ಆಟಕ್ಕೆ ಬಳಲಿದ ಟೀಮ್ ಇಂಡಿಯಾ
ಸ್ಮಿತ್-ಟ್ರಾವಿಸ್ ದ್ವಿಶತಕದಾಟ ಭಾರತಕ್ಕೆ ಸಂಕಷ್ಟ
ಇಂದು ವಿಕೆಟ್ ಬೇಟೆಯಾಡಬೇಕಿದೆ ಟೀಂ ಇಂಡಿಯಾ ಬೌಲರ್ಸ್
ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನ ಮೊದಲ ದಿನವೇ ಟೀಮ್ ಇಂಡಿಯಾ, ಬೌಲರ್ಗಳ ಭವಿಷ್ಯ ಬಟಾಬಯಲಾಗಿದೆ. ಸ್ಮಿತ್-ಟ್ರಾವಿಸ್ ಹೆಡ್ರ ಟೆರ್ರಿಫಿಕ್ ಆಟಕ್ಕೆ ಹಿಟ್ಮ್ಯಾನ್ ರೋಹಿತ್ ಪಡೆಯೀಗ ಸಂಕಷ್ಟದ ಕೂಪಕ್ಕೆ ಸಿಲುಕಿದೆ.
ಓವಲ್ನಲ್ಲಿ ನಡೀತಿರೋ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್ ಆಹ್ವಾನಿಸಿತು.
ಆರಂಭಿಕ ಯಶಸ್ಸು.. ತಲೆಕೆಳಗಾದ ರೋಹಿತ್ ಗೇಮ್ಪ್ಲಾನ್
ಟಾಸ್ ಗೆದ್ದು ಆಸ್ಟ್ರೇಲಿಯನ್ನ ಬ್ಯಾಟಿಂಗ್ಗೆ ಆಹ್ವಾನಿಸಿದ ರೋಹಿತ್, ಆರಂಭಿಕ ಯಶಸ್ಸು ಕಂಡರು. ಡೇಂಜರಸ್ ಉಸ್ಮಾನ್ ಖವಾಜ್ಗೆ ಕಿಕ್ ಕೊಟ್ಟ ಸಿರಾಜ್, ಟೀಮ್ ಇಂಡಿಯಾಗೆ ಬ್ರೇಕ್ ಥ್ರೂ ನೀಡಿದರು. ಆರಂಭಿಕ ಯಶಸ್ಸು ಪಡೆದ ಟೀಮ್ ಇಂಡಿಯಾಗೆ ನಂತ್ರ ಕಾಡಿದ್ದೇ ಡೇವಿಡ್ ವಾರ್ನರ್ ಆ್ಯಂಡ್ ಮಾರ್ನಸ್ ಲಬುಶೇನ್. 2ನೇ ವಿಕೆಟ್ಗೆ 69 ರನ್ಗಳ ಜೊತೆಯಾಟವಾಡಿದ ಈ ಜೋಡಿ, ಟೀಮ್ ಇಂಡಿಯಾವನ್ನ ಕೆಲ ಕಾಲಕಾಡಿದರು.
ಭಾರತಕ್ಕೆ ಮತ್ತೆ ಆಸರೆಯಾದ ಲಾರ್ಡ್ ಶಾರ್ದೂಲ್
ಹೌದು, 43 ರನ್ಗಳಿಸಿದ ಅರ್ಧಶತಕದತ್ತ ದಾಪುಗಾಲಿಡುತ್ತಿದ್ದ ವಾರ್ನರ್ಗೆ ಶಾರ್ದೂಲ್ ಪವಿಲಿಯನ್ ಹಾದಿ ತೋರಿಸಿದೆ. 26 ರನ್ಗಳಿಸಿ ಬ್ಯಾಟ್ ಬೀಸ್ತಿದ್ದ ಮಾರ್ನಸ್ಗೆ ಮೊಹಮ್ಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿದರು.
ಹೆಡ್ ಸ್ಫೋಟಕ ಆಟಕ್ಕೆ ಬಳಲಿದ ಟೀಮ್ ಇಂಡಿಯಾ
76 ರನ್ಗೆ ಮೂರು ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾಗೆ ನಿಜಕ್ಕೂ ಆಸರೆಯಾಗಿದ್ದೇ ಸ್ಟೀವನ್ ಸ್ಮಿತ್ ಆ್ಯಂಡ್ ಟ್ರಾವಿಡ್ ಹೆಡ್. ಒಂಡೆಡೆ ಸ್ಟೀವನ್ ಸ್ಮಿತ್, ಸ್ಲೋ ಆ್ಯಂಡ್ ಸ್ಟಡಿ ಇನ್ನಿಂಗ್ಸ್ ಆಡಿದ್ರೆ, ಮತ್ತೊಂದು ತುದಿಯಲ್ಲಿ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಟ್ರಾವಿಸ್, ನೋಡ ನೋಡುತ್ತಿದಂತೆ ಶತಕ ಸಿಡಿಸಿ ಸಂಭ್ರಮಿಸಿದರು.

ಟೀಮ್ ಇಂಡಿಯಾ ಬೌಲರ್ಗಳನ್ನು ಗೋಳಾಡಿದ ಈ ಇಬ್ಬರೂ, ಮುರಿಯದ 4ನೇ ವಿಕೆಟ್ಗೆ 251 ರನ್ಗಳ ಜೊತೆಯಾಟದೊಂದಿಗೆ ವಿಕೆಟ್ ಕಾಯ್ದುಕೊಂಡಿದ್ದಾರೆ. 91 ರನ್ಗಳಿಸಿದ ಸ್ಟೀವನ್ ಸ್ಮಿತ್, ಇಂದು ಶತಕದ ಹೊಸ್ತಿಲಲ್ಲಿದ್ರೆ, 146 ರನ್ಗಳಿಸಿ ಕ್ರೀಸ್ ಕಾಯ್ದುಕೊಂಡಿರೋ ಟ್ರಾವಿಸ್ ಹೆಡ್, ಡಬಲ್ ಸೆಂಚೂರಿಯುತ್ತ ಮುನ್ನಗ್ಗುವ ಆತ್ಮವಿಶ್ವಾಸದಲ್ಲಿದ್ದಾರೆ. ದಿನದ ಅಂತ್ಯಕ್ಕೆ 3 ವಿಕೆಟ್ಗಳ ನಷ್ಟಕ್ಕೆ 327 ರನ್ ಕಲೆಹಾಕಿರೋ ಆಸ್ಟ್ರೇಲಿಯಾ, ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಇಂದು ವಿಕೆಟ್ ಬೇಟೆಯಾಡಬೇಕಿದೆ ಬೌಲರ್ಸ್
ನಿನ್ನೆ ರನ್ ನೀಡಿ ಉದಾರತೆ ಮೆರೆದಿರೋ ಟೀಮ್ ಇಂಡಿಯಾ ಬೌಲರ್ಸ್, ಇಂದು ಕಾಂಗರೂಗಳನ್ನ ಬೇಟೆಯಾಡಬೇಕಿದೆ. ಅದರಲ್ಲೂ ಇಂದಿನ ಫಸ್ಟ್ ಸೆಷನ್ನಲ್ಲೇ ಆಸೀಸ್ ಬ್ಯಾಟರ್ಗಳನ್ನ ಆಲೌಟ್ ಮಾಡಬೇಕಾದ ಅನಿವಾರ್ಯತೆ ಇದೆ. ಅಕಸ್ಮಾತ್ ನಿನ್ನೆಯಂತೆ ಆಸೀಸ್ ಬ್ಯಾಟರ್ಗಳ ಪರಾಕ್ರಮ ಮೆರೆದರೆ, ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಕಿರೀಟಕ್ಕೆ ಮುತ್ತಿಡೋ ಕನಸು ಭಗ್ನವಾಗೋದು ಗ್ಯಾರಂಟಿ. ಹೀಗಾಗಿ ಬೌಲರ್ಸ್ ಎಫೆಕ್ಟೀವ್ ಸ್ಪೆಲ್ ಮೂಲಕ ಆಸೀಸ್ಗೆ ಬ್ರೇಕ್ ಹಾಕಬೇಕು. ಒಟ್ನಲ್ಲಿ, ಮೊದಲ ದಿನ ಮಕಾಡೆ ಮಲಗಿರೋ ಟೀಮ್ ಇಂಡಿಯಾ, ಪುಟಿದೇಳುತ್ತಾ ಇಲ್ವಾ ಜಸ್ಟ್ ಕಾದುನೋಡಬೇಕಷ್ಟೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ