newsfirstkannada.com

×

ಭಾರತ-ಬಾಂಗ್ಲಾದೇಶದ 2ನೇ ಟೆಸ್ಟ್ ಪಂದ್ಯ; ಕೋತಿ ಪಡೆಯನ್ನು ಕಟ್ಟಿ ಹಾಕಲು ನೇಮಕ ಮಾಡಿದ ಆ ರಕ್ಷಣಾ ಪಡೆ ಯಾವುದು?

Share :

Published September 27, 2024 at 8:00pm

Update September 27, 2024 at 8:01pm

    ಭಾರತ ಬಾಂಗ್ಲಾ ಎರಡನೇ ಟೆಸ್ಟ್​ ಪಂದ್ಯಕ್ಕೆ ಅಡ್ಡಿಯಾಗಿದ್ದ ಕೋತಿ ಪಡೆ

    ಕೋತಿ ಪಡೆಯನ್ನು ಕಟ್ಟಿ ಹಾಕಿದ್ದು ಹೇಗೆ ಉತ್ತರ ಪ್ರದೇಶದ ಕ್ರಿಕೆಟ್ ಮಂಡಳಿ?

    ಪ್ರೇಕ್ಷಕರಿಗೆ ಕಿರಿಕಿರಿ ಕೊಡುತ್ತಿದ್ದ ಮಂಗಗಳು ಈ ಬಾರಿ ಗಪ್​ಚುಪ್ ಆಗಿದ್ದು ಹೇಗೆ?

ಉತ್ತರಪ್ರದೇಶದ ಗ್ರೀನ್​ ಪಾರ್ಕ್ ಮೈದಾನದಲ್ಲಿ ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಎರಡನೇ ಟೆಸ್ಟ್​ ಕಾಳಗ ಶುರುವಾಗಿದೆ. ಈ ಪಂದ್ಯ ನಿರ್ವಿಘ್ನವಾಗಿಯೇ ನಡೆಯುತ್ತಿದೆ. ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ರೋಹಿತ್ ಪಡೆ ಬಾಂಗ್ಲಾದೇಶವನ್ನು ಮೊದಲ ದಿನದಾಟಕ್ಕೆ ಮೂರು ವಿಕೆಟ್ ನಷ್ಟಕ್ಕೆ 107 ರನ್ ಕಲೆಹಾಕಲು ಮಾತ್ರ ಸಾಧ್ಯವಾಗಿದೆ. ಈ ಪಂದ್ಯ ಇಷ್ಟು ನಿರ್ವಿಘ್ನವಾಗಿ ನಡೆಯಬೇಕಾದರೆ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ತೆಗೆದುಕೊಂಡಿದ್ದ ಮುನ್ನೆಚ್ಚರಿಕೆಯೇ ಕಾರಣ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:‘ನಿಮ್ಮ ಗಡ್ಡದಲ್ಲಿ ಏನಿದೆ?’ ನಂಬಲಾಗದ ಬದಲಾವಣೆಯ ಇಂಟ್ರೆಸ್ಟಿಂಗ್ ಸ್ಟೋರಿ..!

ಗ್ರೀನ್ ಪಾರ್ಕ್ ಮೈದಾನದಲ್ಲಿ ಮಂಗಗಳ ಕಾಟ ವಿಪರೀತವಾಗಿದೆ. ಆಟ ನಡೆಯುವಾಗ ಮೈದಾನಕ್ಕೆ ನುಗ್ಗುವುದು. ಪ್ರೇಕ್ಷಕರ ಮೈಮೇಲೆ ಎಗರುವುದು. ತಿಂಡಿ ಪಾಕೆಟ್​ಗಳನ್ನು ಕಿತ್ತುಕೊಂಡು ಹೋಗುವುದು, ಮೊಬೈಲ್ ಫೋನ್​ಗಳನ್ನೂ ಸಹ ಕಿತ್ತುಕೊಂಡು ಹೋದಂತಹ ಘಟನೆಗಳು ಈ ಹಿಂದೆ ನಡೆದಿವೆ. ಯುಪಿಸಿಎಗೆ ಮಂಗಗಳ ನಿಯಂತ್ರಣವೇ ಒಂದು ದೊಡ್ಡ ಚಾಲೆಂಜ್ ಆಗಿತ್ತು. ಅದಕ್ಕೆ ಈ ಬಾರಿ ಬೇರೆಯದ್ದೇ ಪ್ಲ್ಯಾನ್ ಹಾಕಿಕೊಂಡು ಪಂದ್ಯವನ್ನು ನಿರಾತಂಕವಾಗಿ ನಡೆಯುವಂತೆ ಹಾಗೂ ಪ್ರೇಕ್ಷಕರು ನಿರಾಳವಾಗಿ ಪಂದ್ಯ ವೀಕ್ಷಣೆ ಮಾಡುವಂತೆ ಮಾಡಿದೆ.

ಇದನ್ನೂ ಓದಿ: ಕಾನ್ಪುರ ಪಿಚ್​​ನ ಮಣ್ಣಿನಲ್ಲಿ ವಿಶೇಷ ಗುಣ; ಏನಿದು ಉನ್ನಾವೋ ಕಪ್ಪು ಮಣ್ಣು..?

ಉತ್ತರಪ್ರದೇಶದ ಕ್ರಿಕೆಟ್ ಆಡಳಿತ ಮಂಡಳಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆದಿದೆ. ಮಂಗಗಳ ಕಾಟ ತಡೆಯಲು ಅವರು ಲಂಗೂರ್​​ಗಳನ್ನ ಹಾಗೂ ಅವುಗಳ ಹ್ಯಾಂಡ್ಲರ್​ಗಳನ್ನ ಬಾಡಿಗೆ ಪಡೆದಿದ್ದು. ಮಂಗಗಳನ್ನು ಲಂಗೂರ್​ಗಳು ( ಉದ್ದನೆಯ ಬಾಲದ ಕಪ್ಪು ಕೋತಿಗಳು) ಓಡಿಸಲು ಸಹಾಯಕವಾಗುತ್ತವೆ. ಹೀಗಾಗಿ ಲಂಗೂರ್ ಪಡೆಯನ್ನ ಹಾಗೂ ಅದರ ಹ್ಯಾಂಡ್ಲರ್​​ನ್ನು ನೇಮಿಸಿ ಮಂಗಗಳ ಕಾಟವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲಂಗೂರ್ ಪಡೆಗಳ ಜೊತೆ ಸೆಕ್ಯೂರಿಟಿ ಗಾರ್ಡ್​ಗಳನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿದ್ದರಿಂದ ಈ ಒಂದು ಸಮಸ್ಯೆಯಿಂದ ಪಾರಾಗಲು ಸರಳವಾಯ್ತು ಎಂದು ಆಯೋಜಕ ನಿರ್ದೇಶಕ ಸಂಜಯ್ ಕಪೂರ್ ಹೇಳಿದ್ದಾರೆ.
ಇನ್ನು ಸಂಜಯ್ ಕಪೂರ್ ಹೇಳುವ ಪ್ರಕಾರ ಕ್ಯಾಮರಾ ಪರ್ಸನ್​ಗಳು ಸ್ಟಾಂಡ್​ಗಳಿಗೆ ಮಂಗಗಳು ನುಗ್ಗಿ ಕೈಯಲ್ಲಿದ್ದ ಫುಡ್ ಪ್ಯಾಕೆಟ್​ಗಳನ್ನೆಲ್ಲಾ ಕಿತ್ತುಕೊಂಡು ಹೋಗುತ್ತಿದ್ದವಂತೆ.

ಈ ಎಲ್ಲಾ ವಿಷಯಗಳನ್ನ ಗಂಭೀರವಾಗಿ ಪರಿಗಣಿಸಿ ಪಂದ್ಯ ಶುರುವಾಗುವ ಕೆಲವು ದಿನಗಳ ಮುಂಚೆಯೇ ಮೈದಾನವನ್ನು ಪರಿಶೀಲಿಸಲಾಗಿದೆ. ಸ್ಟೇಡಿಯಂನ ಸಿ ಬ್ಲಾಕ್​ನಲ್ಲಿ ಹೆಚ್ಚು ಮಂಗಗಳ ಕಾಟ ಇರುವುದು ಕಂಡು ಬಂದಿದ್ದು. ಆ ಬ್ಲಾಕ್​ನಲ್ಲಿ ಯಾವ ಪ್ರೇಕ್ಷಕರಿಗೂ ಕೂಡ ಟಿಕೆಟ್ ನೀಡಲಾಗಿಲ್ಲ. ಈಗಲೂ ಕೂಡ 1750 ಸೀಟ್​ಗಳು ಅಲ್ಲಿ ಖಾಲಿಯೇ ಇವೆಯಂತೆ. ಈ ಎಲ್ಲಾ ಯೋಜನೆಗಳನ್ನ ಸರಿಯಾದ ರೀತಿಯಲ್ಲಿ ಅಳವಡಿಸಿದ್ದಕ್ಕೆ ಮಂಗಗಳ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಯ್ತು ಎಂದು ಸಂಜಯ್ ಕಪೂರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತ-ಬಾಂಗ್ಲಾದೇಶದ 2ನೇ ಟೆಸ್ಟ್ ಪಂದ್ಯ; ಕೋತಿ ಪಡೆಯನ್ನು ಕಟ್ಟಿ ಹಾಕಲು ನೇಮಕ ಮಾಡಿದ ಆ ರಕ್ಷಣಾ ಪಡೆ ಯಾವುದು?

https://newsfirstlive.com/wp-content/uploads/2024/09/India-vs-Bangla-1.jpg

Load More