newsfirstkannada.com

ಭಾರತ vs​ ಕೆನಡಾ ನಡುವಿನ ಮ್ಯಾಚ್ ರದ್ದು.. ಆದ್ರೂ ಪಾಯಿಂಟ್​ ಪಟ್ಟಿಯಲ್ಲಿ ರೋಹಿತ್ ಟೀಮ್ ಟಾಪರ್

Share :

Published June 15, 2024 at 9:56pm

  ಫ್ಲೋರಿಡಾದಲ್ಲಿ ನಡೆದ ಎಷ್ಟು ಪಂದ್ಯಗಳು ರದ್ದು ಆಗಿವೆ ಗೊತ್ತಾ?

  ಪಾಯಿಂಟ್ ಟೇಬಲ್​​ನಲ್ಲಿ ಟಾಪ್​​ನಲ್ಲಿರುವ ರೋಹಿತ್ ಬಳಗ

  ಮುಂದಿನ ಪಂದ್ಯವನ್ನು ಟೀಮ್ ಇಂಡಿಯಾ ಯಾವಾಗ ಆಡಲಿದೆ?

T20 ವಿಶ್ವಕಪ್​ ಟೂರ್ನಿಯ ಭಾರತ ಮತ್ತು ಕೆನಡಾ ನಡುವಿನ 33ನೇ ಪಂದ್ಯವನ್ನು ಮಳೆ ಕಾರಣದಿಂದ ರದ್ದು ಮಾಡಲಾಗಿದೆ. ಈ ಮೂಲಕ ಎರಡು ತಂಡಗಳಿಗೆ ಒಂದೊಂದು ಅಂಕಗಳನ್ನು ನೀಡಲಾಗಿದೆ. ಭಾರತ ಮುಂದಿನ ಸೂಪರ್-8 ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಜೂನ್ 20 ರಂದು ಆಡಲಿದೆ.

ಇದನ್ನೂ ಓದಿ: ಸಿನಿಮಾ ಫೈಟ್​ ರೀತಿಯಲ್ಲೇ ರೇಣುಕಾಸ್ವಾಮಿಗೆ ದರ್ಶನ್​ ಡಿಚ್ಚಿ.. ಹೇಗಿದೆ ಗೊತ್ತಾ ದಾಸನ ಅಟ್ಟಹಾಸ?

ಕೆನಡಾ ಮತ್ತು ಟೀಮ್ ಇಂಡಿಯಾದ ಮಧ್ಯೆ ಪಂದ್ಯವು ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ ನಿರಂತರ ಮಳೆಯಿಂದಾಗಿ ಮೈದಾನವು ಒದ್ದೆಯಾದ ಔಟ್‌ಫೀಲ್ಡ್​​ನಿಂದ ಕೂಡಿದೆ. ಹೀಗಾಗಿ ಭಾರತ ಮತ್ತು ಕೆನಡಾ ನಡುವಿನ ಪಂದ್ಯಕ್ಕೆ ನಡೆಯಬೇಕಿದ್ದ ಟಾಸ್ ಅನ್ನು ವಿಳಂಬ ಮಾಡಲಾಗಿತ್ತು. ಪಂದ್ಯವನ್ನು ಹೇಗದರೂ ಮಾಡಿ ಆಡಿಸಬೇಕು ಎಂದು ಒಂದು ಗಂಟೆ ಸಮಯ ಕಾದು ಕಾದು ಸುಸ್ತಾಯಿತು. 2 ಬಾರಿ ಅಂಪೈರಿಗಳು ಮೈದಾನವನ್ನು ವೀಕ್ಷಣೆ ಮಾಡಿದರು ಪ್ರಯೋಜನಾ ಆಗಲಿಲ್ಲ. ಕೆಟ್ಟ ಮೋಡ ಮುಸುಕಿದ ವಾತಾವರಣ ಹಾಗೂ ಮಳೆಯ ಪ್ರಭಾವದಿಂದ ಪಂದ್ಯನ್ನೇ ರದ್ದು ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಕೆನಡಾ ವಿರುದ್ಧದ ಟೀಮ್ ಇಂಡಿಯಾ ಪಂದ್ಯ ದಿಢೀರ್ ರದ್ದು ಆಯ್ತಾ.. ಕಾರಣವೇನು?

ಟೀಂ ಇಂಡಿಯಾದ ಕೊನೆಯ ಲೀಗ್‌ ಹಂತದ ಪಂದ್ಯ ಇದಾಗಿತ್ತು. ಈಗಾಗಲೇ ಟಿ20 ವರ್ಲ್ಡ್​​​ಕಪ್​ನಲ್ಲಿ ಹ್ಯಾಟ್ರಿಕ್ ಗೆಲುವು ಪಡೆದ ರೋಹಿತ್ ಶರ್ಮಾ ಟೀಮ್ 6 ಅಂಕಗಳನ್ನು ಪಡೆದು ಪಾಯಿಂಟ್ ಟೇಬಲ್​​ನಲ್ಲಿ ಟಾಪ್ ಸ್ಥಾನ ಪಡೆದುಕೊಂಡಿದೆ. ಅಲ್ಲದೇ ಇಂದಿನ ಕೆನಡಾ ವಿರುದ್ಧದ ಮ್ಯಾಚ್ ಮಳೆಯಿಂದ ರದ್ದಾದ ಕಾರಣ ಒಂದು ಅಂಕವನ್ನು ರೋಹಿತ್ ಬಳಗಕ್ಕೆ ನೀಡಲಾಗಿದೆ. ಸದ್ಯ ಭಾರತ ಒಟ್ಟು 4 ಪಂದ್ಯಗಳಿಂದ 7 ಅಂಕಗಳನ್ನು ಪಡೆದುಕೊಂಡಂತೆ ಆಗಿದೆ. ಇನ್ನೇನಿದ್ದರೂ ಸೂಪರ್-8 ಪಂದ್ಯಗಳನ್ನ ಆಡಬೇಕಿದೆ. ಇನ್ನು ಕೆನಡಾ ಟೀಮ್ ಕೂಡ 1 ಪಂದ್ಯ ಮಾತ್ರ ಗೆದ್ದಿದ್ದು ಎರಡು ಪಂದ್ಯಗಳನ್ನ ಸೋತಿದೆ. ಇಂದಿನ ಭಾರತದ ಜೊತೆಗಿನ ಮ್ಯಾಚ್ ರದ್ದು ಆಗಿದೆ. ಇದರಿಂದ ಕೆನಡಾ ಒಟ್ಟು 4 ಪಂದ್ಯಗಳಿಂದ 3 ಅಂಕಗಳನ್ನು ಪಡೆದುಕೊಂಡಿದೆ.

ಗ್ರೂಪ್​-ಎ ನಿಂದ ಭಾರತ ಮತ್ತು ಅಮೆರಿಕ ಮಾತ್ರ ಸೂಪರ್-8ಗೆ ಎಂಟ್ರಿ ಕೊಟ್ಟಿವೆ. ಆದರೆ ಪಾಕಿಸ್ತನಾ, ಕೆನಡಾ ಹಾಗೂ ಐರ್ಲೆಂಡ್ ತಂಡಗಳು ಎ ಗುಂಪಿನಿಂದ ಹೊರ ಬಿದ್ದಿವೆ.

ಫ್ಲೋರಿಡಾದಲ್ಲಿ ನಡೆದ ಯಾವ್ಯಾವ ​ ಪಂದ್ಯಗಳು ರದ್ದಾಗಿವೆ?

 • ಶ್ರೀಲಂಕಾ vs ನೇಪಾಳ -ರದ್ದು
 • ಅಮೆರಿಕ vs ಐರ್ಲೆಂಡ್ -ರದ್ದು
 • ಭಾರತ vs ಕೆನಡಾ -ರದ್ದು

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತ vs​ ಕೆನಡಾ ನಡುವಿನ ಮ್ಯಾಚ್ ರದ್ದು.. ಆದ್ರೂ ಪಾಯಿಂಟ್​ ಪಟ್ಟಿಯಲ್ಲಿ ರೋಹಿತ್ ಟೀಮ್ ಟಾಪರ್

https://newsfirstlive.com/wp-content/uploads/2024/06/ROHIT_SHARMA_KOHLI-1.jpg

Load More