newsfirstkannada.com

ಬೂಮ್ರಾ, ಶಮಿ ಡೆಡ್ಲಿ ಅಟ್ಯಾಕ್​.. ಕೇವಲ 129ರನ್​​ಗಳಿಗೆ ಇಂಗ್ಲೆಂಡ್ ತಂಡವನ್ನು ರೋಚಕವಾಗಿ ಕಟ್ಟಿಹಾಕಿದ ಭಾರತ..!

Share :

30-10-2023

    ಭಾರತದ ಡೆಡ್ಲಿ ಸ್ಪೆಲ್​ಗೆ ಇಂಗ್ಲೆಂಡ್ ಉಡೀಸ್

    ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ, ಕೆ.ಎಲ್‌ ರಾಹುಲ್ ಆಸರೆ

    ಇಂಗ್ಲೆಂಡ್ ಔಟ್.. ಸೆಮೀಸ್​ನತ್ತ ಇಂಡಿಯಾ ದಾಪುಗಾಲು

ಚೇಸಿಂಗ್​ ಮಾಸ್ಟರ್​ ಟೀಮ್ ಇಂಡಿಯಾಗೆ ನಿನ್ನೆಯ ಪಂದ್ಯ ಅಗ್ನಿಪರೀಕ್ಷೆಯ ಕಣವಾಗಿತ್ತು. ಆ ಅಗ್ನಿಪರೀಕ್ಷೆಯನ್ನು ಭೇದಿಸಿದ ಟೀಮ್ ಇಂಡಿಯಾ, ವಿಶ್ವಕಪ್​ನಲ್ಲಿ ಗೆಲುವಿನ ನಾಗಲೋಟ ಮುಂದುವರಿಸಿದೆ.

ನಿನ್ನೆ ಇಂಗ್ಲೆಂಡ್​ ವಿರುದ್ಧದ ಪಂದ್ಯ ಅಕ್ಷರಶಃ ಅಗ್ನಿಪರೀಕ್ಷೆಯಾಗಿತ್ತು. ಟಾಸ್ ಸೋತು ಬ್ಯಾಟಿಂಗ್​ ಇಳಿದಿದ್ದ ಟೀಮ್ ಇಂಡಿಯಾಗೆ ಆರಂಭದಲ್ಲೇ ಶಾಕ್ ಎದುರಾಗಿತ್ತು. ಟೀಮ್ ಇಂಡಿಯಾದ ಯುವರಾಜ ಗಿಲ್, 9 ರನ್​​​ಗೆ ವಿಕೆಟ್ ಒಪ್ಪಿಸಿ ಹೊರನಡೆದ್ರೆ, ಕಿಂಗ್ ಕೊಹ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿದ್ರೆ, ಶ್ರೇಯಸ್​ ಅಯ್ಯರ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು.

ಟೀಮ್ ಇಂಡಿಯಾ ರೋಹಿತ್-ರಾಹುಲ್ ಆಸರೆ!

ಟಫ್ ಪಿಚ್​ನಲ್ಲಿ 40 ರನ್​​ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಸಂಕಷ್ಟ ಸಿಲುಕಿತ್ತು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದೇ ರೋಹಿತ್ ಅಂಡ್ ಕೆ.ಎಲ್​.ರಾಹುಲ್​. ಕಂಡೀಷನ್ಸ್​ಗೆ ತಕ್ಕಂತ ಆಟವಾಡಿದ ಇವರು, 4ನೇ ವಿಕೆಟ್​ಗೆ 91 ರನ್​ಗಳ ಜೊತೆಯಾಟವಾಡಿದ್ರು. 39 ರನ್​ಗಳಿಸಿದ್ದಾಗ ರಾಹುಲ್, ಕ್ಯಾಚ್ ನೀಡಿ ಹೊರನಡೆದ್ರು. ಮತ್ತೊಂದೆಡೆ ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ರೋಹಿತ್, 87 ರನ್​ ಗಳಿಸಿದ್ದಾಗ ವಿಕೆಟ್ ಕೈಚೆಲ್ಲಿದ್ರು.

ರೋಹಿತ್ ನಿರ್ಗಮನದ ಬಳಿಕ ಜವಾಬ್ದಾರಿಯುತ ಆಟವಾಡಿದ ಸೂರ್ಯ 49 ರನ್​ ಸಿಡಿಸಿದ್ರೆ. ಅತ್ಯಮೂಲ್ಯ ಆಟವಾಡಿದ ಬೂಮ್ರಾ 16 ರನ್​ ದಾಖಲಿಸಿದ್ರು. ಪರಿಣಾಮ ಟೀಮ್ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 229 ರನ್​ ದಾಖಲಿಸಿತು.

ಭಾರತದ ಡೆಡ್ಲಿ ಸ್ಪೆಲ್​ಗೆ ಇಂಗ್ಲೆಂಡ್ ಉಡೀಸ್..!

230 ರನ್​​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಆರಂಭದಲ್ಲಿ ಹೊಡಿಬಡಿ ಆಟಕ್ಕೆ ಮುಂದಾಯ್ತು. 5ನೇ ಓವರ್​ನಲ್ಲಿ ಬೂಮ್ರಾ ಬಿರುಗಾಳಿ ಬೌಲಿಂಗ್​ಗೆ ನಲುಗಿದ ಇಂಗ್ಲೆಂಡ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಳ್ತು. ಇಲ್ಲಿಂದ ಶುರುವಾಗಿದ್ದೇ ಇಂಗ್ಲೆಂಡ್​ನ ಪೆವಿಲಿಯನ್ ಪರೇಡ್​. ಮಲನ್, ರೂಟ್ ವಿಕೆಟ್ ಬೆನ್ನಲ್ಲೇ ದಾಳಿಗಿಳಿದ ಶಮಿ, ಬೆನ್ ಸ್ಟೋಕ್ಸ್​ ಹಾಗೂ ಜಾನಿ ಬೈರ್​ಸ್ಟೋಗೆ ಪೆವಿಲಿಯನ್ ಹಾದಿ ತೋರಿದ್ರು.

ಮ್ಯಾಜಿಕಲ್ ಸ್ಪೆಲ್ ಮಾಡಿದ ಕುಲ್​ದೀಪ್, ಜೋಸ್ ಬಟ್ಲರ್​ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್​ಗೆ ವಿಕೆಟ್ ಬೇಟೆಯಾಡಿ ಮಿಡಲ್ ಆರ್ಡರ್​ಗೆ ಪೆಟ್ಟು ನೀಡಿದ್ರು. ಮತ್ತೊಂದೆಡೆ ಕ್ರೀಸ್​ನಲ್ಲಿ ನೆಲೆಯೂರಲು ಮುಂದಾಗಿದ್ದ ಮೊಯಿನ್ ಅಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಮೊಹಮ್ಮದ್ ಶಮಿ, ಮರು ಓವರ್​ನಲ್ಲೇ ಅದಿಲ್ ರಶೀದ್​​ಗೆ ಕ್ಲೀನ್​ ಬೌಲ್ಡ್ ಮಾಡಿದ್ರು. ಈ ಬೆನ್ನಲ್ಲೇ ಯಾರ್ಕರ್ ಕಿಂಗ್ ಬೂಮ್ರಾ, ಮಾರ್ಕ್​ವುಡ್​​ ವಿಕೆಟ್ ಬೇಟೆಯಾಡುವುದರೊಂದಿಗೆ ಇಂಗ್ಲೆಂಡ್ ಸೋಲಿಗೆ ಕೊನೆ ಮೊಳೆ ಹೊಡೆದ್ರು. ಪರಿಣಾಮ ಇಂಗ್ಲೆಂಡ್, 34.5 ಓವರ್​ಗಳಲ್ಲಿ 129 ರನ್​ಗಳಿಗೆ ಸರ್ವಪತನ ಕಂಡರೆ.. ಟೀಮ್ ಇಂಡಿಯಾ ಸತತ 6ನೇ ಗೆಲುವು ದಾಖಲಿಸಿತು.

ಇಂಗ್ಲೆಂಡ್ ಔಟ್.. ಸೆಮೀಸ್​ನತ್ತ ಇಂಡಿಯಾ ದಾಪುಗಾಲು!

ಇಂಗ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ಟೀಮ್ ಇಂಡಿಯಾ, ಸೆಮೀಸ್​​ನತ್ತ ದಾಪುಗಾಲಿಟ್ರೆ, 6ರ ಪೈಕಿ ಕೇವಲ ಒಂದನ್ನೇ ಜಯಿಸಿರುವ ಇಂಗ್ಲೆಂಡ್ ವಿಶ್ವಕಪ್​ನಿಂದ ಬಹುತೇಕ ಔಟ್ ಆಯ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬೂಮ್ರಾ, ಶಮಿ ಡೆಡ್ಲಿ ಅಟ್ಯಾಕ್​.. ಕೇವಲ 129ರನ್​​ಗಳಿಗೆ ಇಂಗ್ಲೆಂಡ್ ತಂಡವನ್ನು ರೋಚಕವಾಗಿ ಕಟ್ಟಿಹಾಕಿದ ಭಾರತ..!

https://newsfirstlive.com/wp-content/uploads/2023/10/SHAMI-1.jpg

Load More