newsfirstkannada.com

Video: ಗಾಯದ ಬರೆಯಿಂದ ಬೂಮ್ರಾ ಜಸ್ಟ್​ ಮಿಸ್​..!! ‘ಥ್ಯಾಂಕ್ ಗಾಡ್’ ಎಂದ ಅಭಿಮಾನಿಗಳು

Share :

19-08-2023

  ಬರೋಬ್ಬರಿ 11 ತಿಂಗಳ ಬಳಿಕ ಬೂಮ್ರಾ ಕಂಬ್ಯಾಕ್

  ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕ್ಯಾಪ್ಟನ್ ಆಗಿ ವಾಪಸ್

  ಮೊದಲ ಪಂದ್ಯ DLS ನಿಯಮದ ಪ್ರಕಾರ ಭಾರತಕ್ಕೆ ಗೆಲುವು

ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್​ಪ್ರಿತ್ ಬೂಮ್ರಾ ತಂಡಕ್ಕೆ ಸ್ಟ್ರಾಂಗ್ ಕಂಬ್ಯಾಕ್ ಮಾಡಿದ್ದಾರೆ. ಐರ್ಲೆಂಡ್​ ವಿರುದ್ಧದ ಟಿ-20 ಪ್ರವಾಸದಲ್ಲಿ ಕ್ಯಾಪ್ಟನ್ ಆಗಿ, ಮೊದಲ ಪಂದ್ಯವನ್ನು ಎದುರಿಸಿ ಶೈನ್ ಆಗಿದ್ದಾರೆ.

ಬರೋಬ್ಬರಿ 11 ತಿಂಗಳ ಬಳಿಕ ತಂಡಕ್ಕೆ ಕಂಬ್ಯಾಕ್ ಮಾಡಿರುವ ಬೂಮ್ರಾ, ನಿನ್ನೆ ದೊಡ್ಡ ಮೊಟ್ಟದಲ್ಲಿ ಮತ್ತೊಮ್ಮೆ ಗಾಯಕ್ಕೆ ತುತ್ತಾಗಬೇಕಿತ್ತು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭೂಮ್ರಾ ಅಪಾಯದಿಂದ ಪಾರಾಗಿದ್ದು, ಅಭಿಮಾನಿಗಳು ‘ಥ್ಯಾಂಕ್ ಗಾಡ್’ ಎಂದು ಉದ್ಘಾರ ತೆಗೆಯುತ್ತಿದ್ದಾರೆ.

ಹೌದು, ಐರ್ಲೆಂಡ್ ವಿರುದ್ಧದ 14ನೇ ಓವರ್​ನಲ್ಲಿ ಬಾಲ್ ಬೌಂಡರಿ ಲೈನ್​​​ಗೆ ಬರುತ್ತಿತ್ತು. ಅದನ್ನು ತಡೆಯಲು ಬೂಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ರವಿ ಬಿಷ್ಣೋಯಿ ಚೇಸಿಂಗ್ ಮಾಡುತ್ತಿದ್ದರು. ಬಾಲ್ ಬೌಂಡರಿ ಲೈನ್ ಬಳಿ ಬರುತ್ತಿದ್ದಂತೆಯೇ, ಸುಂದರ್ ಬಾಲ್ ಹಿಡಿಯಲು ಡಿಫ್ರೆಂಟ್ ಡೈರೆಕ್ಷನ್​ನಿಂದ ಬಂದು ಡೈ ಹೊಡೆದರು. ಆದರೆ ಬಾಲ್​ನ ಬೆನ್ನು ಹಿಂದೆ ಬಿದ್ದಿದ್ದ ಬೂಮ್ರಾ, ಸುಂದರ್​​ಗೆ ಡಿಕ್ಕಿ ಹೊಡೆಯುವ ಪರಿಸ್ಥಿತಿ ಎದುರಾಗಿತ್ತು. ಅನಾಹುತ ಆಗುವುದನ್ನು ಎಚ್ಚೆತ್ತುಕೊಂಡ ಬೂಮ್ರಾ, ಜಂಪ್​ ಮಾಡಿ ಬೌಂಡರಿಲೈನ್ ಆಚೆ ಜಿಗಿಯುತ್ತಾರೆ. ಈ ಮೂಲಕ ದೊಡ್ಡ ಗಾಯದ ಸಮಸ್ಯೆಯಿಂದ ಬೂಮ್ರಾ ಪಾರಾಗಿದ್ದಾರೆ.

ಟೀಂ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ ತುಂಬಾ ಗಂಭೀರವಾಗಿ ಕಾಡುತ್ತಿದೆ. ಸದ್ಯ ಭಾರತ ತಂಡವು ಏಷ್ಯಾ ಕಪ್, ವಿಶ್ವಕಪ್​ ಪಂದ್ಯಗಳನ್ನು ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಓರ್ವ ಆಟಗಾರ ಕೂಡ ಗಾಯಗೊಂಡರೂ ಕೂಡ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇನ್ನು ನಿನ್ನೆಯ ಪಂದ್ಯವನ್ನು ಭಾರತ ಗೆದ್ದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಗಾಯದ ಬರೆಯಿಂದ ಬೂಮ್ರಾ ಜಸ್ಟ್​ ಮಿಸ್​..!! ‘ಥ್ಯಾಂಕ್ ಗಾಡ್’ ಎಂದ ಅಭಿಮಾನಿಗಳು

https://newsfirstlive.com/wp-content/uploads/2023/08/Team-India-3.jpg

Load More