newsfirstkannada.com

Asia Cup: ಫಸ್ಟ್​ ಟೈಮ್​ ನೇಪಾಳ- ಭಾರತ ಮುಖಾಮುಖಿ.. ಆದ್ರೆ ಈ ಪಂದ್ಯ ನಡೆಯೋದೇ ಡೌಟ್​, ಯಾಕೆ?

Share :

04-09-2023

    ಕಳೆದ ಮ್ಯಾಚ್​ನಲ್ಲಿ ಕೈಕೊಟ್ಟಿದ್ದ ರೊಹಿತ್, ಗಿಲ್, ಕೊಹ್ಲಿ

    ಜಸ್​ಪ್ರೀತ್​ ಬೂಮ್ರಾ ಭಾರತಕ್ಕೆ ಬಂದಿರೋದು ಯಾಕೆ?

    ಇಂದಿನ ಮ್ಯಾಚ್​ನ ಪ್ರಮುಖ ಅಪ್​ಡೇಟ್​ಗಳು ಇಲ್ಲಿವೆ

ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ 2ನೇ ಮ್ಯಾಚ್ ಅನ್ನು ನೇಪಾಳ ಜೊತೆ ಆಡಲಿದೆ. ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವು ನೇಪಾಳ ವಿರುದ್ಧ ಕಣಕ್ಕೆ ಇಳಿಯುತ್ತಿದ್ದು ಪಂದ್ಯವು ಪಲ್ಲೆಕೆಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಭಾರತ-ನೇಪಾಳ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ ಪೆಲ್ಲೆಕೆಲೆ ಸ್ಟೇಡಿಯಂ ಸುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹೀಗಾಗಿ ಇಂದು ಕೂಡ ಮಳೆ ಬರುವ ಮುನ್ಸೂಚನೆ ಇದ್ದು ಪಂದ್ಯ ನಡೆಯುವುದು ಅನುಮಾನವಾಗಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೇ ಭಾರತ ಸೂಪರ್- 4ಗೆ ಎಂಟ್ರಿ ಕೊಡಲಿದೆ. ಈಗಾಗಲೇ ಪಾಕ್​ ಈ ಹಂತಕ್ಕೆ ಹೋಗಿದ್ದಾಗಿದೆ.

ಇಂದಿನ ಪಂದ್ಯವನ್ನು ಟೀಮ್​ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಿದ್ರೆ, ನೇಪಾಳವನ್ನು ರೋಹಿತ್ ಪೌಡೆಲ್ ಸಾರಥ್ಯದಲ್ಲಿ ಕಣಕ್ಕೆ ಇಳಿಯಲಿದೆ. ಪಾಕ್​ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್​​ಮನ್​ಗಳು ನೆಲಕಚ್ಚಿದ್ದರು. ಇದರಿಂದ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 5ನೇ ಸ್ಲಾಟ್​, 6ನೇ ಸ್ಲಾಟ್​ನಲ್ಲಿ ಕಣಕ್ಕೆ ಇಳಿದಿದ್ದ ಇಶನ್​ ಕಿಶನ್, ಹಾರ್ದಿಕ್​ ಪಾಂಡ್ಯ ಇಬ್ಬರು ಹಾಫ್​ಸೆಂಚುರಿ ಬಾರಿಸುವುದರ ಮೂಲಕ ತಂಡದ ದಿಕ್ಕನ್ನೇ ಬದಲಿಸಿದ್ದರು.

ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್, ವಿರಾಟ್ ಕೊಹ್ಲಿ ಔಟ್ ಆಗಿರುವ ಕ್ಷಣ.

ಏಷ್ಯಾಕಪ್​ನ ಹೈವೋಲ್ಟೇಜ್​ ಪಂದ್ಯವೆಂದೇ ಖ್ಯಾತಿ ಪಡೆದಿದ್ದ ಭಾರತ-ಪಾಕ್​ ನಡುವಿನ ಪಂದ್ಯವು ಮಳೆಯಿಂದ ರದ್ದಾಗಿತ್ತು. ಇದು ಕ್ರಿಕೆಟ್​ ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನುಂಟು ಮಾಡಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ರೋಹಿತ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದ್ರೆ ಗಿಲ್, ರೋಹಿತ್, ಕೊಹ್ಲಿ ಸೇರಿದಂತೆ ವಿಫಲ ಬ್ಯಾಟಿಂಗ್​ ಪ್ರದರ್ಶನ ಮಾಡಿದ್ದರು. ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚು ರನ್​ ಬಂದಿದ್ದರಿಂದ ಭಾರತ ದೊಡ್ಡ ಆಘಾತದಿಂದ ಪಾರಾಗಿತ್ತು. ಇವತ್ತಿನ ಪಂದ್ಯದಲ್ಲಿ ಕೂಡ ಇಶನ್ ದೊಡ್ಡ ಮೊತ್ತದ ರನ್​ ಗಳಿಸುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.

ಇನ್ನು ಇವತ್ತಿನ ಪಂದ್ಯದಲ್ಲಿ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರೀತ್ ಬೂಮ್ರಾ ಅವರು ಆಡುತ್ತಿಲ್ಲ. ಬೂಮ್ರಾ ದಂಪತಿ ಅವರು ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಹೀಗಾಗಿ ಶ್ರೀಲಂಕಾದಿಂದ ವಿಮಾನವೇರಿದ ಬೂಮ್ರಾ ಈಗಾಗಲೇ ಭಾರತಕ್ಕೆ ಆಗಮಿಸಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಅಥವಾ ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup: ಫಸ್ಟ್​ ಟೈಮ್​ ನೇಪಾಳ- ಭಾರತ ಮುಖಾಮುಖಿ.. ಆದ್ರೆ ಈ ಪಂದ್ಯ ನಡೆಯೋದೇ ಡೌಟ್​, ಯಾಕೆ?

https://newsfirstlive.com/wp-content/uploads/2023/09/ROHIT_NEPAL.jpg

Load More