Advertisment

IND vs NZ; 3ನೇ ದಿನದ ಕೊನೆ ಎಸೆತದಲ್ಲಿ ಕೊಹ್ಲಿ ಔಟ್.. ಶತಕದ ಹಾದಿಯಲ್ಲಿ ಸರ್ಫರಾಜ್

author-image
Bheemappa
Updated On
IND vs NZ; ಯುವ ಬ್ಯಾಟರ್ ಸರ್ಫರಾಜ್​ ಖಾನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಯಾಕೆ ಗೊತ್ತಾ?
Advertisment
  • ಅನಾವಶ್ಯಕವಾಗಿ ವಿಕೆಟ್​ ಒಪ್ಪಿಸಿದ ಯುವ ಬ್ಯಾಟರ್ ಜೈಸ್ವಾಲ್
  • ಕಿವೀಸ್​ ಬೌಲರ್ಸ್​ ಕಾಡಿದ ಸರ್ಫರಾಜ್​, ಹೇಗಿತ್ತು ಬ್ಯಾಟಿಂಗ್?
  • ಶತಕ ಸಿಡಿಸಿ ಮಿಂಚಿದ ‘ಬೆಂಗಳೂರು ಬಾಯ್’​ ರಚಿನ್ ರವೀಂದ್ರ

ಬೆಂಗಳೂರು ಟೆಸ್ಟ್​ ಪಂದ್ಯದ 3ನೇ ದಿನದಾಟದಲ್ಲಿ ನ್ಯೂಜಿಲೆಂಡ್​ ಬಿಗ್​ ಸ್ಕೋರ್​ ಕಲೆ ಹಾಕಿ ಆಲೌಟ್​ ಆದ್ರೆ, ಬಳಿಕ ಟೀಮ್​ ಇಂಡಿಯಾ ದಿಟ್ಟ ಹೋರಾಟ ನಡೆಸಿತು. ಉಭಯ ತಂಡಗಳ ಸಮಬಲದ ಹೋರಾಟದ ಪರಿಣಾಮ ಟೆಸ್ಟ್​ ಪಂದ್ಯ ಇದೀಗ ರೋಚಕ ಘಟ್ಟ ತಲುಪಿದೆ. ಹೇಗಿತ್ತು 3ನೇ ದಿನದ ಇಂಡೋ- ಕಿವೀಸ್​ ಸೆಣೆಸಾಟ?.

Advertisment

3 ವಿಕೆಟ್​​ ನಷ್ಟಕ್ಕೆ 180 ರನ್​ಗಳೊಂದಿಗೆ ದಿನದಾಟ ಆರಂಭಿಸಿದ ನ್ಯೂಜಿಲೆಂಡ್​​ ತಂಡ ಫಸ್ಟ್​ ಸೆಷನ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡಿತು. 49 ಎಸೆತ ಎದುರಿಸಿ ಕ್ರಿಸ್​​ನಲ್ಲಿ ಸೆಟಲ್​ ಆಗಿದ್ದ ಡೇರಿಲ್​ ಮಿಚೆಲ್​ ಮೊದಲ ಬಲಿಯಾದರು.

ಇದನ್ನೂ ಓದಿ: ಕೊಹ್ಲಿಯನ್ನ IPLನಲ್ಲಿ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಯಾರು.. ಯಾವ ಟೀಮ್​ನಲ್ಲಿದ್ದಾರೆ ಯುವ ಪೇಸರ್?

publive-image

ಜಡೇಜಾ ಮೋಡಿ.. ಕಿವೀಸ್​ಗೆ ಡಬಲ್​ ಶಾಕ್​.!

ವಿಕೆಟ್​​ ಕೀಪರ್​​ ಟಾಮ್​ ಬ್ಲಂಡೆಲ್​ ಆಟಕ್ಕೆ ಜಸ್​ಪ್ರಿತ್​ ಬೂಮ್ರಾಗೆ ಬಲಿಯಾದರು. ಬಳಿಕ ಕಣಕ್ಕಿಳಿದ ಗ್ಲೇನ್​ ಫಿಲಿಪ್ಸ್​ ಹಾಗೂ ಮ್ಯಾಟ್​ ಹೆನ್ರಿ, ರವೀಂದ್ರ ಜಡೇಜಾ ಸ್ಪಿನ್​ ಮೋಡಿಗೆ ಕ್ಲೀನ್​ಬೋಲ್ಡ್​ ಆಗಿ ನಿರ್ಗಮಿಸಿದರು.

Advertisment

ರಚಿನ್​ ರವಿಂದ್ರ -ಟಿಮ್​ ಸೌಥಿ.. ಬೊಂಬಾಟ್​ ಆಟ.!

8ನೇ ವಿಕೆಟ್​ಗೆ ಕ್ರಿಸ್​​ನಲ್ಲಿ ಜೊತೆಯಾದ ಟಿಮ್​ ಸೌಥಿ, ರಚಿನ್​ ರವೀಂದ್ರ 137 ರನ್​ಗಳ ಜೊತೆಯಾಟವಾಡಿದ್ರು. ಟಿಮ್​ ಸೌಥಿ ಅರ್ಧಶತಕ ಸಿಡಿಸಿ ಮಿಂಚಿದ್ರೆ, ಬೆಂಗಳೂರು ಮೂಲದ ರಚಿನ್​ ರವೀಂದ್ರ ಚಿನ್ನಸ್ವಾಮಿ ಅಂಗಳದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು.

402ಕ್ಕೆ ಕಿವೀಸ್​ ಆಲೌಟ್​, 356 ರನ್​ ಲೀಡ್​.!

ಈ ಜೊತೆಯಾಟಕ್ಕೆ ಮೊಹಮ್ಮದ್​ ಸಿರಾಜ್​ ಬ್ರೇಕ್​ ಹಾಕಿದರು. 65 ರನ್​ಗಳಿಸಿ ಟಿಮ್​ ಸೌಥಿ ಔಟ್ ಆದರು. ಬಳಿಕ ಕಣಕ್ಕಿಳಿದ ಅಜಾಝ್​ ಪಟೇಲ್​ ಕುಲ್​​ದೀಪ್​ ಯಾದವ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ರು. 91.3ನೇ ಓವರ್​ನಲ್ಲಿ ರಚಿನ್​ ರವೀಂದ್ರ ಔಟ್​ ಆಗೋದ್ರೊಂದಿಗೆ ನ್ಯೂಜಿಲೆಂಡ್​​ ಆಲೌಟ್​ ಆಯಿತು. 402 ರನ್​ಗಳಿಸಿದ ಕಿವೀಸ್​ ಪಡೆ 356 ರನ್​ಗಳ ಲೀಡ್​ ಪಡೆದುಕೊಂಡಿತು.

2ನೇ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾ ಉತ್ತಮ ಆರಂಭವನ್ನ ಪಡೆದುಕೊಂಡಿತು. ಆದ್ರೆ, 6 ಬೌಂಡರಿ ಸಿಡಿಸಿ ಭರವಸೆ ಹುಟ್ಟು ಹಾಕಿದ್ದ ಯಶಸ್ವಿ ಜೈಸ್ವಾಲ್​, ಅನಾವಶ್ಯಕ ಶಾಟ್​​ ಹೊಡೆಯಲು ಹೋಗಿ ವಿಕೆಟ್​ ಒಪ್ಪಿಸಿದರು.

Advertisment

ದುರಾದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್​.!

ಕ್ಯಾಪ್ಟನ್​ ರೋಹಿತ್​ ಶರ್ಮಾ ಅಬ್ಬರದ ಆಟವಾಡಿದರು. ನ್ಯೂಜಿಲೆಂಡ್​ ಬೌಲರ್​​ಗಳನ್ನ ದಿಟ್ಟವಾಗಿ ಎದುರಿಸಿ ಲೀಲಾಜಾಲವಾಗಿ ರನ್​ಗಳಿಸಿದರು. 1 ಸಿಕ್ಸರ್​, 8 ಬೌಂಡರಿ ಸಿಡಿಸಿದ ರೋಹಿತ್​, ಅರ್ಧಶತಕ ಸಿಡಿಸಿದರು.

ಕಿವೀಸ್​ ಬೌಲರ್ಸ್​ ಕಾಡಿದ ಕೊಹ್ಲಿ -ಸರ್ಫರಾಜ್​.!

ಅರ್ಧಶತಕದ ಬೆನ್ನಲ್ಲೇ ದುರಾದೃಷ್ಟಕರ ರೀತಿಯಲ್ಲಿ ರೋಹಿತ್​ ಔಟಾದ್ರು. ಬಳಿಕ ಕ್ರಿಸ್​ನಲ್ಲಿ ಜೊತೆಯಾದ ವಿರಾಟ್​ ಕೊಹ್ಲಿ, ಸರ್ಫರಾಜ್​ ಖಾನ್​ ಅದ್ಭುತ ಜೊತೆಯಾಟವಾಡಿದರು. 3ನೇ ವಿಕೆಟ್​ಗೆ 136 ರನ್​ಗಳು ಹರಿದುಬಂದವು.

publive-image

ಕೊನೆಯ ಎಸೆತದಲ್ಲಿ ಕೊಹ್ಲಿಗೆ ಕಾದಿತ್ತು ನಿರಾಸೆ.!

ಮೊದಲ ಇನ್ನಿಂಗ್ಸ್​​​ನಲ್ಲಿ ಡಕೌಟ್​​ ಆಗಿದ್ದ ವಿರಾಟ್​ ಕೊಹ್ಲಿ 2ನೇ ಇನ್ನಿಂಗ್ಸ್​ನಲ್ಲಿ ಸಾಲಿಡ್​ ಬ್ಯಾಟಿಂಗ್​ ನಡೆಸಿದರು. ಪಾಸಿಟಿವ್​ ಇಂಟೆಂಟ್​ನಲ್ಲಿ ಬ್ಯಾಟಿಂಗ್​ ನಡೆಸಿದ ಕೊಹ್ಲಿ, 8 ಬೌಂಡರಿ, 1 ಸಿಕ್ಸರ್​ ಸಹಿತ ಹಾಫ್​ ಸೆಂಚುರಿ ಸಿಡಿಸಿದರು. 70 ರನ್​ಗಳಿಸಿದ್ದ ಕೊಹ್ಲಿ, ದಿನದಾಟದ ಕೊನೆಯ ಎಸೆತದಲ್ಲಿ ಔಟ್ ಆದರು.

Advertisment

ಅದ್ಭುತ ಫಾರ್ಮ್​ನಲ್ಲಿ ಬ್ಯಾಟಿಂಗ್​ ನಡೆಸ್ತಿರೋ ಸರ್ಫರಾಜ್​ ಖಾನ್​, 70 ರನ್​ಗಳೊಂದಿಗೆ ಅಜೇಯರಾಗುಳಿದಿದ್ದಾರೆ. 2ನೇ ದಿನದ ಅಂತ್ಯಕ್ಕೆ 3 ವಿಕೆಟ್​ ನಷ್ಟಕ್ಕೆ ಟೀಮ್​ ಇಂಡಿಯಾ 231 ರನ್​ಗಳಿಸಿದ್ದು, 125 ರನ್​ಗಳ ಹಿನ್ನಡೆಯಲ್ಲಿದೆ. ಇಂದಿನ ದಿನದಾಟದಲ್ಲಿ ಟೀಮ್​ ಇಂಡಿಯಾ ಬಿಗ್ ಇನ್ನಿಂಗ್ಸ್​ ಕಟ್ಟಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment