ಫೈನಲ್ ಮ್ಯಾಚ್ ಹಿನ್ನಲೆ ಅಹಮದಾಬಾದ್ಗೆ ವಿಶೇಷ ರೈಲು
ಅಲ್ ದಿ ಬೆಸ್ಟ್ ಇಂಡಿಯಾ ಅಂತ ಅಭಿಮಾನಿಗಳಿಂದ ವಿಶ್
ವಿಶ್ವಕಪ್ ಮಹಾಸಮರಕ್ಕೆ ಸಾಕ್ಷಿಯಾಗಲಿದ್ದಾರೆ ಪ್ರಧಾನಿ ಮೋದಿ
ವರ್ಲ್ಡ್ ಕಪ್ ವಾರ್ನಲ್ಲಿ ದಶಕಗಳ ಕನಸನ್ನು ನನಸಾಗಿಸಿಕೊಳ್ಳಲು ಭಾರತ ಅದೃಷ್ಟದ ಪರೀಕ್ಷೆಗಿಳಿದಿದೆ. ಬ್ಯಾಟು-ಬಾಲ್ಗಳ ಕಾದಾಟವನ್ನು ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಕಣ್ಣುಗಳು ಕಾತುರತೆಯಿಂದ ಕಾದಿವೆ. ದೇಶದೆಲ್ಲಡೆ ವರ್ಲ್ಡ್ ಕಪ್ ಫೀವರ್ ಹೆಚ್ಚಾಗಿದ್ದು, ಸೋಲಿಲ್ಲದ ಸರದಾರರಂತೆ ಮುನ್ನುಗ್ಗುತ್ತಿರೋ ಭಾರತದ ಕ್ರಿಕೆಟ್ ಸೇನೆಗೆ ವಿಜಯಮಾಲೆ ಒಲಿಯಲಿ ಅಂತ ಅಭಿಮಾನಿಗಳ ಹೃದಯ ಮಿಡಿಯುತ್ತಿದೆ. ಇವತ್ತಿನ ಹೈವೋಲ್ಟೇಜ್ ಮ್ಯಾಚ್ ಮಧ್ಯೆ ಅಭಿಮಾನಿಗಳನ್ನ ಪುಳಕಿಸಲು ಬಿಸಿಸಿಐ ಸಹ ಭರ್ಜರಿ ಸಿದ್ಧತೆ ನಡೆಸಿದೆ.
ಕೋಟ್ಯಾನುಕೋಟಿ ಕ್ರಿಕೆಟ್ ಪ್ರೇಮಿಗಳ ಕನಸು. ಕೆಚ್ಚೆದೆಯ ಭಾರತೀಯ ಕ್ರಿಕೆಟ್ ಕಲಿಗಳ ಪಾಲಿನ ಅಗ್ನಿ ಪರೀಕ್ಷೆ. ವಿಶ್ವಕಪ್ ಅನ್ನೋ ಯುದ್ಧಕಾಂಡದ ಕದನ ವಿರಾಮವನ್ನು ಬ್ರೇಕ್ ಮಾಡಿ ಇಂದು ಸೆಣಸಾಟ ನಡೆಸಲು ಭಾರತ ಮತ್ತು ಆಸ್ಟ್ರೇಲಿಯಾ ಪಡೆಗಳು ಕಾಲ್ಕೆರೆದು ನಿಂತಿವೆ. ಬ್ಯಾಟ್ ಅನ್ನೋ ಆಯುಧ, ಬೆಂಕಿ-ಬಿರುಗಾಳಿಯ ಬೌಲಿಂಗ್, ತಡೆಗೋಡೆಯಂತ ಫೀಲ್ಡಿಂಗ್ ಮಾಡಿ ವಿಶ್ವಕಪ್ಗೆ ಮುತ್ತಿಕ್ಕಲು ಭಾರತೀಯ ಸೇನೆ ಅಣಿಯಾಗಿದೆ. ಬ್ಲೂ ಬಾಯ್ಸ್ಗೆ ಚಿಯರ್ ಅಪ್ ಮಾಡಿ, ರೋಹಿತ್ ಸೇನೆ ಗೆಲುವಿನ ದಡ ಸೇರುವ ಐತಿಹಾಸಿಕ ಕ್ಷಣವನ್ನ ಕಣ್ತುಂಬಿಕೊಳ್ಳುವ ಕಾತುರತೆ ಭಾರತೀಯರಲ್ಲಿ ಮನೆಮಾಡಿದೆ.
ಎಲ್ಲೆಡೆ ವರ್ಲ್ಡ್ಕಪ್ ಫೀವರ್.. ಹೊಸ ಉತ್ಸಾಹದ ಪವರ್
ವರ್ಲ್ಡ್ ಕಪ್ ಮಹಾಸಮರದ ಫೈನಲ್ ಮಜಲು ಇಂದು ಗುಜರಾತ್ ಅಹಮದಾಬಾದ್ನಲ್ಲಿ ಕಳೆಗಟ್ಟಲಿದೆ. ವಿಶ್ವದ ಚಿತ್ತ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದತ್ತ ನೆಟ್ಟಿದೆ. ಬ್ಯಾಟ್-ಬಾಲ್ಗಳ ಕಾದಾಟವನ್ನ ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಕಣ್ಣುಗಳು ಕಾತುರತೆಯಿಂದ ಕಾದಿವೆ. ದೇಶದೆಲ್ಲೆಡೆ ವರ್ಲ್ಡ್ಕಪ್ ಫೀವರ್ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಭಾರತ ಕ್ರಿಕೆಟ್ ಸೇನೆ ದಶಕಗಳ ಕನಸನ್ನ ನನಸಾಗಿಸಿಕೊಳ್ಳಲು ಅದೃಷ್ಟ ಪರೀಕ್ಷೆಗಿಳಿದಿದೆ. 5 ಬಾರಿ ವರ್ಲ್ಡ್ಕಪ್ ಮುಡಿಗೇರಿಸಿಕೊಂಡು 6ನೇ ಬಾರಿ ವಿಶ್ವಕಪ್ ವಾರ್ನಲ್ಲಿ ಅಸಲಿ ಆಟ ಆಡಲು ವಾರ್ನರ್ ಪಡೆ ಟೊಂಕ ಕಟ್ಟಿ ನಿಂತಿದೆ. ಆಸ್ಟ್ರೇಲಿಯಾ ಜೊತೆಗಿನ ಸೆಣಸಾಟದಲ್ಲಿ ಗೆದ್ದು ಬಾ ಭಾರತ ಅಂತ ಕೋಟ್ಯಾನುಕೋಟಿ ಮನಗಳು ಮಿಡಿಯುತ್ತಿವೆ.
ಹೈವೋಲ್ಟೇಜ್ ಮ್ಯಾಚ್ಗೂ ಮುನ್ನ ಲೋಹದ ಹಕ್ಕಿಗಳ ಕಲರವ
ಇಂದಿನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೋಲ್ಟೇಜ್ ಮ್ಯಾಚ್ ಮಧ್ಯೆ ಅಭಿಮಾನಿಗಳನ್ನ ಪುಳಕಿಸಲು ಬಿಸಿಸಿಐ ಭರ್ಜರಿ ಸಿದ್ಧತೆ ನಡೆಸಿದೆ. 2023ರ ವರ್ಲ್ಡ್ಕಪ್ ಫೈನಲ್ ಪಂದ್ಯವನ್ನು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಹಚ್ಚೆ ಹಾಕಲು ಬಿಸಿಸಿಐ ಭರ್ಜರಿ ಸಿದ್ದತೆ ನಡೆಸಿದೆ. ಗಾನ-ಬಜಾನ, ಕಣ್ಣು ಕುಕ್ಕುವ ಬೆಳಕಿನ ಜಳಕ, ಏರ್ ಶೋ ಪುಳಕ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆಗಟ್ಟಲಿದೆ. ಪಂದ್ಯ ಆರಂಭಕ್ಕೂ ಮುನ್ನ ಭಾರತೀಯ ವಾಯಪಡೆಯಿಂದ ಸ್ಟೇಡಿಯಂನಲ್ಲಿ ಏರ್ ಶೋ ನಡೆಯಲಿದೆ. ಮೊನ್ನೆಯಿಂದಲೇ ಸೇನಾಪಡೆ ವಿಮಾನಗಳು ಅಹಮದಾಬಾದ್ನಲ್ಲಿ ಬೀಡುಬಿಟ್ಟಿದ್ದು ಭರ್ಜರಿ ತಯಾರಿ ನಡೆಸಿದೆ. ಜೊತೆಗೆ ಸ್ಟೇಡಿಯಂನಲ್ಲಿ ಬಣ್ಣ-ಬಣ್ಣದ ಬೆಳಕಿನ ಚಿತ್ತಾರ ಮೂಡಿಸಲು ಸಿದ್ಧತೆ ನಡೆದಿದೆ.
ಹೈವೋಲ್ಟೇಜ್ ವರ್ಲ್ಡ್ಕಪ್ ವಾರ್ ಮಧ್ಯೆ ಗಾನ-ಬಜಾನ
ವರ್ಲ್ಡ್ಕಪ್ ಫೈನಲ್ ಮ್ಯಾಚ್ನಲ್ಲಿ ಬಾಲಿವುಡ್ನ ಖ್ಯಾತ ಗಾಯಕರು ಹಾಗೂ ಸಿನಿ ತಾರೆಯರ ಮನಮೋಹಕ ದೃಶ್ಯ ಕಾವ್ಯ ಅಭಿಮಾನಿಗಳಿಗೆ ಮುದ ನೀಡಲಿದೆ. ಮೊದಲ ಇನ್ನಿಂಗ್ಸ್ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ಕೋಕ್ ಸ್ಟುಡಿಯೋದ ಗುಜರಾತ್ ‘ಗೋಟಿಲೋ’ ಖ್ಯಾತಿಯ ಅದಿತ್ಯ ಗಾಧವಿ ಅವರಿಂದ ಸಖತ್ ಸಾಂಗ್ಗಳ ಪ್ರದರ್ಶನವಿರಲಿದೆ. ಜೊತೆಗೆ ಬಾಲಿವುಡ್ನ ಹಲವು ಗಾಯಕರ ಗಾನಸುಧೆ ಸಹ ಸ್ಟೇಡಿಯಂನಲ್ಲಿ ಸದ್ದುಮಾಡಲಿದೆ. 500 ಹೆಚ್ಚು ನೃತ್ಯಗಾರರು ಗಾಯಕರ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ.
ಫೈನಲ್ ಮ್ಯಾಚ್ ಹಿನ್ನೆಲೆ ಅಹಮದಾಬಾದ್ಗೆ ವಿಶೇಷ ರೈಲು
ಇಂದು ಅಹಮಾದಾಬಾದ್ನ ನರೇಂದ್ರ ಮೋದಿ ಮೈದಾನ ವರ್ಲ್ಡ್ಕಪ್ ವಾರ್ಗೆ ವೇದಿಕೆಯಾಗಲಿದೆ. ಅಭಿಮಾನಿಗಳ ಸಾಗರ ಅಹಮದಾಬಾದ್ನತ್ತ ಹರಿದು ಬರಲಿದೆ. 1 ಲಕ್ಷದ 30 ಸಾವಿರ ಪ್ರೇಕ್ಷಕರು ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ. ಕ್ರಿಕೆಟ್ ಪ್ರೇಮಿಗಳ ಪ್ರಯಾಣಕ್ಕೆ ಅನುಕೂಲವಾಗೋ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಇಲಾಖೆ ಅಹಮದಾಬಾದ್ಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ವಿಶೇಷ ರೈಲು ಇಂದು ದೆಹಲಿ ಮತ್ತು ಮುಂಬೈನಿಂದ ಅಹಮದಾಬಾದ್ಗೆ ಸಂಪರ್ಕ ಕಲ್ಪಿಸಲಿದೆ. ದೆಹಲಿಯಿಂದ ಅಹಮದಾಬಾದ್ಗೆ ಒಂದು ರೈಲು ಸಂಚರಿಸಿದ್ರೆ, ಮುಂಬೈನಿಂದ ಅಹಮದಾಬಾದ್ಗೆ ಮೂರು ರೈಲು ಸಂಚರಿಸಲಿವೆ.
ವಿಶ್ವಕಪ್ ಮಹಾಸಮರಕ್ಕೆ ಸಾಕ್ಷಿಯಾಗಲಿದ್ದಾರೆ ಮೋದಿ!
ಭಾರತ ಮತ್ತು ಆಸ್ಟ್ರೇಲಿಯಾ ವರ್ಲ್ಡ್ಕಪ್ ಫೈನಲ್ ಮ್ಯಾಚ್ ವೀಕ್ಷಣೆಗೆ ಅತಿರಥ ಮಹಾರಥ ನಾಯಕರು ಆಗಮಿಸಲಿರೋದು ಮ್ಯಾಚ್ನ ಕಾವನ್ನ ಮತ್ತಷ್ಟು ಹೆಚ್ಚಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಉಪ ಪ್ರಧಾನಿ ರಿಚರ್ಡ್ ಮಾರ್ಲೆಸ್ ಅವರು ಇಂದು ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲಿದ್ದಾರೆ. ಈ ಹಿನ್ನೆಲೆ ನರೇಂದ್ರ ಮೋದಿ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಭದ್ರತಾ ವ್ಯವಸ್ಥೆಗಳ ಕುರಿತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉನ್ನತಮಟ್ಟದ ಸಭೆ ನಡೆಸಿ ಭದ್ರತಾ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರರು, ಬಾಲಿವುಡ್ ನಟ-ನಟಿಯರು, ರಾಜಕೀಯ ನಾಯಕರು ಸೇರಿ ಹಲವರು ಇಂದು ವಿಶ್ವಕಪ್ ಫೈನಲ್ ಪಂದ್ಯವನ್ನ ಕಣ್ತುಂಬಿಕೊಳ್ಳಿದ್ದಾರೆ. ವಿಶ್ವಕಪ್ ಮಹಾಸಮರ ಕಳೆಗಟ್ಟಲು ಕ್ಷಣಗಣನೆ ಆರಂಭವಾಗಿದ್ದು, ಕ್ರಿಕೆಟ್ ಅಭಿಮಾನಿಗಳ ಕಾತುರತೆ ಹೆಚ್ಚಿದೆ. ಸೋಲಿಲ್ಲದ ಸರದಾರರಂತೆ ಮುನ್ನುಗ್ಗುತ್ತಿರೋ ಭಾರತದ ಕ್ರಿಕೆಟ್ ಸೇನೆಗೆ ವಿಜಮಾಲೆ ಒಲಿಯಲಿ ಅಂತ ಅಭಿಮಾನಿಗಳ ಹೃದಯ ಮಿಡಿಯುತ್ತಿದೆ. ದಶಗಳ ಕನಸನ್ನು ನನಸಾಗಿಸಿಕೊಂಡು ಅಭಿಮಾನಿಗಳಿಗೆ ಗೆಲುವಿನ ಸಿಹಿ ನೀಡಲು ರೋಹಿತ್ ಪಡೆಯೂ ಸಜ್ಜಾಗಿದೆ. ಅಲ್ ದಿ ಬೆಸ್ಟ್ ಇಂಡಿಯಾ ಅನ್ನೋ ಮಾತು ದೇಶದ ದಶ ದಿಕ್ಕುಗಳಲ್ಲೂ ಪ್ರತಿಧ್ವನಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ