newsfirstkannada.com

ಐದು ರನ್​ನಿಂದ ಕೊಹ್ಲಿ ಶತಕ ವಂಚಿತ; 20 ವರ್ಷಗಳ ಸೇಡಿಗೆ ಫುಲ್​ಸ್ಟಾಪ್ ಇಟ್ಟ ಭಾರತ..!

Share :

23-10-2023

  ಮಿಚೆಲ್-ರಚಿನ್​ಗೆ ಜೀವದಾನ.. ಬೌಲರ್​ಗಳಿಗೆ ಸಂಕಟ

  ಟಾರ್ಗೆಟ್ ಬೆನ್ನತ್ತಿದ್ದ ಭಾರತಕ್ಕೆ ಸಾಲಿಡ್ ಓಪನಿಂಗ್

  ಕೊಹ್ಲಿ​-ಜಡೇಜಾ ಜವಾಬ್ದಾರಿಯುತ ಆಟಕ್ಕೆ ಒಲಿದ ಜಯ

ಟೀಮ್ ಇಂಡಿಯಾ ಫೀಲ್ಡರ್​ಗಳ ಜೀವದಾನ. ಡ್ಯಾರಿಲ್ ಮಿಚೆಲ್-ರಚಿನ್ ರವೀಂದ್ರ ಬ್ಯಾಟಿಂಗ್ ಆರ್ಭಟ. ಮೊಹಮ್ಮದ್ ಶಮಿಯ ಮಿಂಚಿನಾಟ. ರನೌಟ್​​ ಹೈಡ್ರಾಮಾದ ನಡುವೆ ಕಿಂಗ್ ಕೊಹ್ಲಿಯ ಜವಾಬ್ದಾರಿಯುತ ಆಟ. ಮುಂದುವರೆದ ಟೀಮ್ ಇಂಡಿಯಾದ ಗೆಲುವಿನ ನಾಗಲೋಟ. ಅಂತ್ಯವಾಗಿದ್ದು 20 ವರ್ಷಗಳ ಸೇಡು. ಇದೆಲ್ಲಕ್ಕೂ ನಿನ್ನೆ ಧರ್ಮಶಾಲಾ ಸ್ಟೇಡಿಯಂ ಸಾಕ್ಷಿಯಾಯ್ತು.

ಧರ್ಮಶಾಲಾ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್​​, ಎದುರಾಳಿ ನ್ಯೂಜಿಲೆಂಡ್​ಗೆ ಬ್ಯಾಟಿಂಗ್ ಆಹ್ವಾನಿಸಿದರು. ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ದಾಳಿ ನಡೆಸಿದ ಭಾರತೀಯ ಬೌಲರ್​ಗಳು, ಬ್ಯಾಕ್ ಟು ಬ್ಯಾಕ್ ವಿಕೆಟ್​​ ಪಡೆದ್ರು. ಅಪಾಯಕಾರಿ ಡಿವೋನ್ ಕಾನ್ವೆಯನ್ನ ಶೂನ್ಯಕ್ಕೆ ಪೆವಿಲಿಯನ್​ಗೆ ಕಳುಹಿಸಿದ ಸಿರಾಜ್ ಮೊದಲ ಬ್ರೇಕ್ ಥ್ರೂ ನೀಡಿದ್ರೆ, ಶಮಿ, ವಿಲ್ ಯಂಗ್​​ಗೆ ಶಾಕ್ ನೀಡಿದರು. ಪರಿಣಾಮ ಕಿವೀಸ್​ 19 ರನ್​​ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮಿಚೆಲ್-ರಚಿನ್​ಗೆ ಜೀವದಾನ.. ಬೌಲರ್​ಗಳಿಗೆ ಸಂಕಟ..!

ಆರಂಭಿಕ ಮೇಲುಗೈ ಸಾಧಿಸಿದ್ದ ಟೀಮ್ ಇಂಡಿಯಾ, ಕಿವೀಸ್​ ಮೇಲೆ ಬಿಗಿ ಹಿಡಿತ ಸಾಧಿಸುವ ಲೆಕ್ಕಚಾರದಲ್ಲಿತ್ತು. ಆದರೆ ಜೀವದಾನದ ಲಾಭ ಪಡೆದ ಡ್ಯಾರಿಲ್ ಮಿಚೆಲ್-ರಚಿನ್ ರವೀಂದ್ರ 3ನೇ ವಿಕೆಟ್​ಗೆ 159 ರನ್​ಗಳ ಜೊತೆಯಾಟವಾಡಿದ್ರು. ಈ ವೇಳೆ 75 ರನ್​ಗಳಿಸಿ ಮುನ್ನುಗ್ಗುತ್ತಿದ್ದ ರವೀಂದ್ರ ಆಟಕ್ಕೆ ಶಮಿ ಬ್ರೇಕ್ ಹಾಕಿದ್ರು. ಇಲ್ಲಿಂದ ಶುರುವಾಯ್ತು ಕಿವೀಸ್ ಕುಸಿತ. ರಚಿನ್ ಔಟಾದ ಬೆನ್ನಲ್ಲೇ ಟಾಮ್ ಲಾಥಮ್, ಗ್ಲೆನ್ ಫಿಲಿಫ್ಸ್​ಗೆ ಕುಲ್​ದೀಪ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದ್ರು. ನಂತರ ಬಂದ ಚಾಂಪ್ಮನ್​​​, ಸ್ಯಾಂಟ್ನರ್​, ಮ್ಯಾಟ್ ಹೆನ್ರಿ ಬಂದಷ್ಟೇ ವೇಗವಾಗಿ ಹಿಂತಿರುಗಿದರು. ಇತ್ತ 130 ರನ್​​​​​​​ಗಳೊಂದಿಗೆ ಏಕಾಂಗಿ ಹೋರಾಟ ನಡೆಸ್ತಿದ್ದ ಡ್ಯಾರೆಲ್ ಮಿಚೆಲ್​​ಗೆ​​ ಶಮಿ ಬ್ರೇಕ್ ಹಾಕಿದರು. ಪರಿಣಾಮ ನಿಗದಿತ 50 ಓವರ್​ಗಳಲ್ಲಿ 273ಕ್ಕೆ ಆಲೌಟ್ ಆಯ್ತು.

274 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಭಾರತಕ್ಕೆ ರೋಹಿತ್ ಹಾಗೂ ಗಿಲ್, 71 ರನ್​​ಗಳ ಸಾಲಿಡ್ ಓಪನಿಂಗ್ ನೀಡಿದರು. ಈ ವೇಳೆ 46 ರನ್​​ಗಳಿಸಿ ಮುನ್ನುಗ್ಗುತ್ತಿದ್ದ ರೋಹಿತ್, 26 ರನ್ ಗಳಿಸುತ್ತಿದ್ದ ಗಿಲ್​ಗೆ ಲೂಕಿ ಫರ್ಗೂಸನ್ ಓವರ್​​ನಲ್ಲಿ ವಿಕೆಟ್ ಒಪ್ಪಿಸಿದ ಹೊರನಡೆದ್ರು. ಈ ಬಳಿಕ ವಿರಾಟ್​ ಕೊಹ್ಲಿ ಜೊತೆ ಸೇರಿದ ಶ್ರೇಯಸ್,​ ಬಿಗ್ ಇನ್ನಿಂಗ್ಸ್​ ಕಟ್ಟೋ ಮುನ್ಸೂಚನೆ ನೀಡಿದರು. ಶ್ರೇಯಸ್​ ಇನ್ನಿಂಗ್ಸ್ 33 ರನ್​ಗಳಿಗೆ ಅಂತ್ಯವಾದ್ರೆ, ನಂತರ ಬಂದ ಕೆ.ಎಲ್.ರಾಹುಲ್ ಆಟ 27ಕ್ಕೆ ಮುಕ್ತಾಯವಾದ್ರೆ, ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಸೂರ್ಯನ ರನೌಟ್​, ಗೆಲುವಿನ ಆಸೆ ಕಮರಿಸಿತ್ತು.

ಸೂರ್ಯ ರನೌಟ್ ಬೆನ್ನಲ್ಲೇ ಎಲ್ಲರ ಕಣ್ಮುಂದೆ ಬಂದಿದ್ದೆ 2019ರ ರನೌಟ್. 6ನೇ ವಿಕೆಟ್​​ಗೆ ಜವಾಬ್ದಾರಿ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ-ಜಡೇಜಾ ಜೋಡಿ, 78 ರನ್​​ ಜೊತೆಯಾಟವಾಡಿದ್ರು. ಶತಕದ ಅಂಚಿನಲ್ಲಿ ಎಡವಿದ ಕೊಹ್ಲಿ, ಮ್ಯಾಟ್​ ಹೆನ್ರಿ ಎಸೆತದಲ್ಲಿ ಬಾರಿ ಹೊಡೆತಕ್ಕೆ ಕೈಹಾಕಿ ಕೈಸುಟ್ಟುಕೊಂಡ್ರು. ಬೌಂಡರಿಯೊಂದಿಗೆ ಜಡೇಜಾ ಗೆಲುವಿನ ದಡ ಸೇರಿಸಿದ್ರು. ಇರೊಂದಿಗೆ ವಿಶ್ವಕಪ್​ನಲ್ಲಿ ಸತತ 5ನೇ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಟೇಬಲ್ ಟಾಪರ್ ಎನಿಸಿತು. 20 ವರ್ಷಗಳ ವನವಾಸಕ್ಕೆ ಬ್ರೇಕ್ ಹಾಕಿತು. 2003ರ ಏಕದಿನ ವಿಶ್ವಕಪ್​ ಬಳಿಕ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೂರ್ನಮೆಂಟ್​​ನಲ್ಲಿ ಗೆದ್ದಿರಲಿಲ್ಲ. ಇದೀಗ ಧರ್ಮಶಾಲಾದಲ್ಲಿ ಈ ಒಂದು ಕೊರಗಿಗೆ ಬ್ರೇಕ್ ಬಿತ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಐದು ರನ್​ನಿಂದ ಕೊಹ್ಲಿ ಶತಕ ವಂಚಿತ; 20 ವರ್ಷಗಳ ಸೇಡಿಗೆ ಫುಲ್​ಸ್ಟಾಪ್ ಇಟ್ಟ ಭಾರತ..!

https://newsfirstlive.com/wp-content/uploads/2023/10/Kohli_123.jpg

Load More