ಬಲಿಷ್ಠ ಪಾಕಿಸ್ತಾನವನ್ನು ಮನೆಗೆ ಕಳುಹಿಸಿರುವ ಶ್ರೀಲಂಕಾ ಟೀಮ್
ರೋಹಿತ್ ಶರ್ಮಾ ಪಡೆ ಈಗಾಗಲೇ ಸಾಕಷ್ಟು ತಯಾರಿ ನಡೆಸಿದೆ
ಫೈನಲ್ ಮ್ಯಾಚ್ನಲ್ಲಿ ಗೆಲ್ಲುವ ಫೆವರಿಟ್ ಟೀಮ್ ಯಾವುದು..?
2023ರ ಏಷ್ಯಾಕಪ್ ಟೂರ್ನಿಯು ಕೊನೆ ಹಂತಕ್ಕೆ ತಲುಪಿದ್ದು ಫೈನಲ್ ಅಖಾಡಕ್ಕೆ ಕೊಲೊಂಬೋದ ಆರ್. ಪ್ರೇಮದಾಸ್ ಸ್ಟೇಡಿಯಂ ಸಿದ್ಧವಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಫೈನಲ್ ಮ್ಯಾಚ್ನಲ್ಲಿ ಶ್ರೀಲಂಕಾ- ಭಾರತ ಸೆಣಸಾಟ ನಡೆಸಲಿವೆ. ಈಗಾಗಲೇ ಸೂಪರ್- 4 ಹಂತದಲ್ಲಿ ಶ್ರೀಲಂಕಾವನ್ನು ಸೋಲಿಸಿರುವ ಟೀಮ್ ಇಂಡಿಯಾ ಕಪ್ ಗೆಲ್ಲುವ ಫೆವರಿಟ್ ಎನಿಸಿದೆ.
ಕ್ಯಾಪ್ಟನ್ ರೋಹಿತ್ ಶರ್ಮಾ ಪಡೆ ಬಲಿಷ್ಠ ಟೀಮ್ ಅನ್ನು ಹೊಂದಿದ್ದು ಬ್ಯಾಟಿಂಗ್, ಬೌಲಿಂಗ್ನಲ್ಲಿ ಪ್ರಬಲವಾದ ಆಟಗಾರರನ್ನು ಹೊಂದಿದೆ. ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸೆಂಚುರಿ ಬಾರಿಸಿ ತಮ್ಮ ತಾಖತ್ ಏನು ಅಂತ ತೋರಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಪ್ರಾರಂಭದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಉತ್ತಮ ಆರಂಭಕ್ಕೆ ಮುನ್ನುಡಿ ಬರೆಯಲಿದ್ದಾರೆ. ಬೌಲಿಂಗ್ ಪಡೆಯು ಬಲಯುತವಾಗಿದ್ದು ಬೂಮ್ರಾ, ಕುಲ್ದೀಪ್ ಯಾದವ್, ಶಮಿ, ಸಿರಾಜ್ ಎದುರಾಳಿಗಳನ್ನು ಕಟ್ಟಿ ಹಾಕುವಂತಹ ಶಕ್ತಿ ಹೊಂದಿದ್ದಾರೆ.
ಟೀಮ್ ಇಂಡಿಯಾ ಈಗಾಗಲೇ ಶ್ರೀಲಂಕಾವನ್ನು ಮಣಿಸಿ ಫೈನಲ್ಗೆ ಪ್ರವೇಶ ಪಡೆದಿತ್ತು. ಶ್ರೀಲಂಕಾ ಕೂಡ ಬಲಿಷ್ಠ ಪಾಕ್ ಅನ್ನು ಹೊಡೆದೊಡಿಸಿ 2 ನೇ ಬಾರಿಗೆ ಫೈನಲ್ಗೆ ಬಂದಿದೆ. ಹೀಗಾಗಿ ದಸುನ್ ಶನಕ್ ಸಾರಥ್ಯದ ಟೀಮ್ ಅನ್ನು ಅಷ್ಟು ಸುಲಭವಾಗಿ ಕಡೆಗಣಿಸಲಾಗಲ್ಲ. ಏಕೆಂದರೆ ಪಾಕ್ ವಿರುದ್ಧದ ಪಂದ್ಯದಲ್ಲಿ ಕೊನೆವರೆಗೆ ಹೋರಾಡಿ ಗೆದ್ದ ಹುಮ್ಮಸ್ಸು ಲಂಕನ್ನರಲ್ಲಿ ಇನ್ನು ಹಾಗೇ ಇದೆ. ಪಾತುಂ ನಿಸ್ಸಾಂಕ, ಕುಸಲ್ ಪೆರೇರ, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ದುನಿತ್ ವೆಲ್ಲಲಗೆ ಅವರು ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಎಲ್ಲದಕ್ಕೂ ಮಿಗಿಲಾಗಿ ಕಳೆದ ಬಾರಿ 2022ರ ಏಷ್ಯಾಕಪ್ ವಿನ್ನರ್ ಕೂಡ ಲಂಕಾವಾಗಿದೆ. ಹೀಗಾಗಿ ರೋಹಿತ್ ಶರ್ಮಾ ತಂಡವು ಜಾಗ್ರತೆಯಿಂದ ಫೈನಲ್ ಕಾರ್ಡ್ ಪ್ಲೇ ಮಾಡಿ ಚಾಂಪಿಯನ್ ಆಗಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ