ಶ್ರೇಯಸ್ ಸ್ಫೋಟಕ ಆಟಕ್ಕೆ ಲಂಕಾ ಕಂಗಾಲ್
ಸಿರಾಜ್ ಸಿಡಿಗುಂಡು.. ಶಮಿ ಬೆಂಕಿ ಚೆಂಡು
ವೇಗಿಗಳ ಫೈರಿ ಸ್ಪೆಲ್ಗೆ ಲಂಕಾ ನಿರುತ್ತರ
ವಾಂಖೆಡೆಯಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ ನಿಜ. ಆದ್ರೆ ನಿನ್ನೆ ಟೀಮ್ ಇಂಡಿಯಾ ಗೆಲುವಿನ ಆ ಹೀರೋಗಳು. ಇವರು ಕೈಹಿಡಿಯಲಿಲ್ಲ ಅಂದಿದ್ರೆ ಬಿಗ್ ಮಾರ್ಜಿನ್ ಗೆಲುವು ಟೀಮ್ ಇಂಡಿಯಾಗೆ ಸಿಗ್ತಿರಲಿಲ್ಲ.
ವಾಂಖಡೆಯಲ್ಲಿ ಅಕ್ಷರಶಃ ನಡೆದಿದ್ದು ಟೀಮ್ ಇಂಡಿಯಾ ದರ್ಬಾರ್. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಅಗ್ರೆಸ್ಸಿವ್ ಪರ್ಫಾಮೆನ್ಸ್ ನೀಡಿದ ಟೀಮ್ ಇಂಡಿಯಾ, ಸಿಂಹಳೀಯರ ಬೇಟೆಯಾಡಿತು. ಈ ಬೇಟೆ ಹಿಂದಿನ ಅಸಲಿ ಸ್ಟಾರ್ಗಳು ಶುಭ್ಮನ್ ಗಿಲ್. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸಿರಾಜ್ ಅಂಡ್ ಬೂಮ್ರಾ.
ಶುಭ್ಮನ್.. ವಿರಾಟ್ ವೀರಾವೇಶ.. ಲಂಕಾ ಕಂಗಾಲ್!
ನಿನ್ನೆ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಟೀಮ್ ಇಂಡಿಯಾ, ಆರಂಭದಲ್ಲೇ ಆಘಾತ ಅನುಭವಿಸಿತ್ತು. ಈ ವೇಳೆ ಟೀಮ್ ಇಂಡಿಯಾಗೆ ನೆರವಾಗಿದ್ದೆ ಓಪನರ್ ಶುಭ್ಮನ್ ಗಿಲ್ ಆ್ಯಂಡ್ ವಿರಾಟ್ ಕೊಹ್ಲಿ. 2ನೇ ವಿಕೆಟ್ಗೆ ಜೊತೆಯಾದ ಈ ಜೋಡಿ, ಬರೋಬ್ಬರಿ 189 ರನ್ಗಳ ಜೊತೆಯಾಟವಾಡಿದರು. ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ರು. ಈ ವೇಳೆ 92 ರನ್ ಗಳಸಿದ್ದ ಶುಭ್ಮನ್, ಬೇಡವಾದ ಶಾಟ್ಗೆ ಕೈಹಾಕಿ ವಿಕೆಟ್ ಒಪ್ಪಿಸಿದ್ರು.
ಶುಭ್ಮನ್ ವಿಕೆಟ್ ಒಪ್ಪಿಸಿದ್ದೇ ತಡ 3 ರನ್ಗಳ ಅಂತರದಲ್ಲೇ ಕಿಂಗ್ ಕೊಹ್ಲಿ ಪೆವಿಲಿಯನ್ಗೆ ಹೆಜ್ಜೆಹಾಕಿದ್ರು. ಈವರಿಬ್ಬರು ಹಾಕಿದ ಭದ್ರಬುನಾದಿ ಟೀಮ್ ಇಂಡಿಯಾಗೆ ಫೌಂಡೇಷನ್ಗೆ ನೆರವಾಯ್ತು.
82ಕ್ಕೆ ಶ್ರೇಯಸ್ ಔಟ್.. ‘ತ್ರಿ’ ಶತಕ ಮಿಸ್..!
ಶುಭ್ಮನ್, ವಿರಾಟ್ ವಿರಾಟ ರೂಪದ ಬಳಿಕ ಲಂಕ ದಹನ ಮಾಡಿದ್ದೆ ಶ್ರೇಯಸ್ ಅಯ್ಯರ್.. ಮನಬಂದಂತೆ ಬೌಲರ್ಗಳನ್ನ ದಂಡಿಸಿದ ಶ್ರೇಯಸ್, 56 ಎಸೆತಗಳಲ್ಲಿ 6 ಸಿಕ್ಸರ್, 3 ಬೌಂಡರಿ ಒಳಗೊಂಡ 82 ರನ್ ಚಚ್ಚಿ ವಿಕೆಟ್ ಒಪ್ಪಿಸಿದ್ರು. ಇದರೊಂದಿಗೆ ಶುಭ್ಮನ್, ವಿರಾಟ್, ಶ್ರೇಯಸ್ ಅಯ್ಯರ್ ಶತಕ ಸಿಡಿಸುವ ಸುವರ್ಣಾವಕಾಶ ಮಿಸ್ ಮಾಡಿಕೊಂಡರು.
ಸಿರಾಜ್ ಸಿಡಿಗುಂಡು.. ಶಮಿ ಬೆಂಕಿ ಚೆಂಡು..!
ನಿನ್ನೆ ಒಂದೆಡೆ ಬ್ಯಾಟ್ಸ್ಮನ್ಸ್ ಅಬ್ಬರಿಸಿದ್ರೆ. ಮತ್ತೊಂದೆಡೆ ಬೌಲರ್ಗಳು ಬೆಂಕಿಯಂತ ಎಸೆತಗಳ ಮೂಲಕ ಸಿಂಹಳೀಯರ ಮೇಲೆ ಅಟ್ಯಾಕ್ ಮಾಡಿದ್ರು. ಈ ಪೈಕಿ ಸಿರಾಜ್ ಹಾಗೂ ಮೊಹಮ್ಮದ್ ಶಮಿಯ ಫೈರಿ ಸ್ಪೆಲ್.. 2023ರ ಏಷ್ಯಾಕಪ್ ಫೈನಲ್ ಅನ್ನೇ ನೆನಪಿಸಿತು.
ಮಿಸೈಲ್ನಂಥ ಎಸೆತಗಳಿಂದ ಸಿಂಹಳೀಯರ ಮೇಲೆ ಮುಗಿಬಿದ್ದ ಶಮಿ, ಬರೋಬ್ಬರಿ 5 ವಿಕೆಟ್ ಬೇಟೆಯಾಡಿದ್ರು. ಮತ್ತೊಂದೆಡೆ ಆರಂಭದಿಂದಲೇ ಮಿಂಚಿನ ದಾಳಿ ನಡೆಸಿದ ಸಿರಾಜ್, ಲಂಕಾ ಟಾಪ್ ಆರ್ಡರ್ಗೆ ಪೆಟ್ಟು ನೀಡಿದ್ರು. ಇದೇ ಲಂಕಾ ಪತನಕ್ಕೆ ನಾಂದಿ. ಪರಿಣಾಮ 55 ರನ್ಗಳಿಗೆ ಸರ್ವಪತನ ಕಾಣ್ತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್