newsfirstkannada.com

ಹಿಟ್​ಮ್ಯಾನ್​ ರೋಹಿತ್​​ಗೆ ಬಿಗ್ ಶಾಕ್.. ಮುಂಬೈ ಬ್ಯಾಟರ್​​ಗಳಿಂದ ಟೀಮ್​ಗೆ ಭಾರೀ ಆಘಾತ

Share :

Published June 12, 2024 at 1:48pm

  ಇಂದಿನ ಮ್ಯಾಚ್ ಗೆದ್ರೆ ಸೂಪರ್​ -4 ಹಂತಕ್ಕೆ ಟೀಮ್ ಇಂಡಿಯಾ ಲಗ್ಗೆ

  ಟೂರ್ನಿಯಲ್ಲಿ ಆಡುತ್ತಿರುವ ಮುಂಬೈ ಹುಡುಗರು ಬ್ಯಾಟಿಂಗ್ ವೈಫಲ್ಯ

  ಮುಂಬೈಕರ್​ಗಳ ಕಳಪೆಯಾಟ ವಿಶ್ವಕಪ್​ ಅಖಾಡದಲ್ಲಿ ಭಾರತಕ್ಕೆ ಹಿನ್ನಡೆ

ಟಿ20 ವಿಶ್ವಕಪ್​ಗೆ ಟೀಮ್​ ಸೆಲೆಕ್ಷನ್​ ಆದಾಗ ಎಲ್ರೂ ಇದನ್ನ ಫರ್ಫೆಕ್ಟ್​ ಟೀಮ್​ ಅಂದಿದ್ರು. ಆದ್ರೆ, ಈಗ ಅಸಲಿ ಬಂಡವಾಳ ಬಯಲಾಗಿದೆ. ಅದ್ರಲ್ಲೂ ತಂಡದಲ್ಲಿರೋ ಬಾಂಬೆ ಬಾಯ್ಸ್​​ ವಿಚಾರದಲ್ಲಿ ಫ್ಯಾನ್ಸ್​​ ತೀವ್ರ ಬೇಸರಗೊಂಡಿದ್ದಾರೆ. ರೋಹಿತ್​ ಶರ್ಮಾ ಒಕೆ. ಆದ್ರೆ, ಇನ್ನುಳಿದ ಇಬ್ಬರು ಮುಂಬೈಕರ್​​ಗಳು ಯಾಕೆ ಬೇಕಿತ್ತು ಅನ್ನೋದು ಪ್ರಶ್ನೆ ಇದೀಗ ಎಲ್ಲರನ್ನೂ ಕಾಡ್ತಿದೆ.

ಚುಟುಕು ವಿಶ್ವಕಪ್​​​ ಟೂರ್ನಿಯ ಮತ್ತೊಂದು ಮಹಾಸಮರಕ್ಕೆ ಟೀಮ್​ ಇಂಡಿಯಾ ಸಜ್ಜಾಗಿದೆ. ಇಂದು ನಡೆಯೋ ಯುಎಸ್​​ಎ ವಿರುದ್ಧದ ಕದನದಲ್ಲಿ ಗೆಲುವು ದಾಖಲಿಸಿ ಸೂಪರ್​ -4 ಹಂತಕ್ಕೆ ಲಗ್ಗೆ ಇಡಲು ಟೀಮ್​ ಇಂಡಿಯಾ ತುದಿಗಾಲಲ್ಲಿ ನಿಂತಿದೆ. ಹ್ಯಾಟ್ರಿಕ್​ ಗೆಲುವಿನ ಕನಸು ಕಾಣ್ತಿರೋ ರೋಹಿತ್​ ಪಡೆ, ಗೆಲುವಿನ ನಗಾರಿ ಬಾರಿಸುವ ಕನಸು ಕಾಣ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮಾಡ್ತಿದ್ದ ಮೆಸೇಜ್ ಏನಾಗಿತ್ತು..? ಪವಿತ್ರಗೌಡ ತನಿಖೆಗೆ ಟ್ವಿಸ್ಟ್ ಕೊಡಲು ಮುಂದಾದ ಪೊಲೀಸ್..!

ಮೊದಲ 2 ಪಂದ್ಯಗಳಲ್ಲಿ ಗೆದ್ದಿರುವ ರೋಹಿತ್​ ಪಡೆ ಇಂದಿನ ಪಂದ್ಯದಲ್ಲಿ ಸುಲಭದ ಜಯ ಸಾಧಿಸುತ್ತೆ ಅನ್ನೋದು ಎಲ್ಲರ ನಿರೀಕ್ಷೆಯಾಗಿದೆ. ಆದ್ರೆ, ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಆತಂಕ ಕಾಡ್ತಿದೆ. ಬೌಲಿಂಗ್ ಅತ್ಯಾದ್ಭುತವಾಗಿದೆ. ಆದ್ರೆ, ಬ್ಯಾಟಿಂಗ್​ ದೊಡ್ಡ ಸಮಸ್ಯೆಯಾಗಿದೆ. ಅದ್ರಲ್ಲೂ ತಂಡದಲ್ಲಿರೋ ಬಾಂಬೆ ಬಾಯ್ಸ್​ಗಳಿಗೆ ಏನಾಯ್ತು.? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.

ರೋಹಿತ್​ ಶರ್ಮಾ- 2 ಪಂದ್ಯ, 65 ರನ್​​

ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ನಾಯಕತ್ವದಲ್ಲಿ ತಾನೆಂತ ಚಾಣಾಕ್ಷ ಅನ್ನೋದನ್ನ ಪ್ರೂವ್​ ಮಾಡಿದ್ದಾರೆ. ಆದ್ರೆ, ಬ್ಯಾಟಿಂಗ್​ನಲ್ಲಿ ಫೆಲ್ಯೂರ್​ ಆಗಿದ್ದಾರೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್​ನ ದಾಳಿಯನ್ನ ಮೆಟ್ಟಿ ನಿಂತ್ರೂ, 2ನೇ ಪಂದ್ಯದಲ್ಲಿ ಪಾಕ್​ನ ಬಲಿಷ್ಠ ಬೌಲಿಂಗ್​ ಮುಂದೆ ಮಂಕಾದ್ರು. 2 ಪಂದ್ಯಗಳಿಂದ 65 ರನ್​ಗಳಿಸಿರೋ ರೋಹಿತ್​​, ಹಿಟ್​ಮ್ಯಾನ್​ ಅವತಾರ ಎತ್ತಬೇಕಿದೆ.

ಸೂರ್ಯಕುಮಾರ್​- 2 ಪಂದ್ಯ, 9 ರನ್​​

ಮುಂಬೈನ ಮತ್ತೊಬ್ಬ ಬ್ಯಾಟ್ಸ್​​ಮನ್​, ಮಿಸ್ಟರ್​ 360 ಬ್ಯಾಟರ್​ ಸೂರ್ಯಕುಮಾರ್​ ಯಾದವ್​​ ಅತ್ಯಂತ ಹೀನಾಯ ಪ್ರದರ್ಶನ ನೀಡ್ತಿದ್ದಾರೆ. ಆಡಿದ 2 ಪಂದ್ಯಗಳಿಂದ ಜಸ್ಟ್​ 9 ರನ್​ಗಳಿಸಿರುವ ಸೂರ್ಯ,​ ಭಾರತದ ಬ್ಯಾಟಿಂಗ್​ ವಿಭಾಗಕ್ಕೆ ಬಲ ತುಂಬ್ತಾ ಇಲ್ಲ. ಬದಲಾಗಿ ಹೊರೆಯಾಗ್ತಿದ್ದಾರೆ. ತಂಡದಿಂದ ಗೇಟ್​ಪಾಸ್​ ನೀಡಲೂ ಆಗದೇ, ಸ್ಥಾನ ನೀಡಲೂ ಆಗದೇ ಮ್ಯಾನೇಜ್​ಮೆಂಟ್​ಗೆ ಸೂರ್ಯ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ.

ಇದನ್ನೂ ಓದಿ: ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಮಲಗಿದ್ದ ವೃದ್ಧನ ಮೇಲೆ ಕುಸಿದ ಮೇಲ್ಛಾವಣಿ.. ಇಂದು ಕೂಡ ವರುಣಾರ್ಭಟ ಫಿಕ್ಸ್..!

ಶಿವಂ ದುಬೆ- 2 ಪಂದ್ಯ, 3 ರನ್​​

ಐಪಿಎಲ್​ನಲ್ಲಿ ಶಿವತಾಂಡವವಾಡಿದ್ದ ಶಿವಂ ದುಬೆ, ಟಿ20 ವಿಶ್ವಕಪ್​​ನಲ್ಲಿ ತಡಬಡಾಯಿಸ್ತಿದ್ದಾರೆ. ಸ್ಫೋಟಕ ಬ್ಯಾಟರ್​​ ಅನ್ನಿಸಿಕೊಂಡಿದ್ದ ದುಬೆ, ಬೌಲರ್​ಗಳಿಗೆ ಸುಲಭವಾಗಿ ತುತ್ತಾಗಿದ್ದಾರೆ. ರನ್​ಗಳಿಕೆಗೆ ಎಷ್ಟರಮಟ್ಟಿಗೆ ಪರದಾಡ್ತಿದ್ದಾರೆ ಅನ್ನೋದಕ್ಕೆ ಮೊದಲ 2 ಪಂದ್ಯಗಳಲ್ಲಿ ಗಳಿಸಿರುವ 3 ರನ್​​ಗಳೇ ಸಾಕ್ಷಿಯಾಗಿವೆ.

ಇದನ್ನೂ ಓದಿ: ತೊಟ್ಟಿಲಲ್ಲಿ ಹಾಕಿದ್ದ ಕೈ ಮಣ್ಣಲ್ಲಿಯೂ ಹಾಕ್ತಿದೆ ಎಂದ ಹೆತ್ತ ತಾಯಿ.. ಕರುಳು ಹಿಂಡುವ ಕ್ಷಣಗಳ ಕಂಡು ಕಣ್ಣೀರಿಟ್ಟ ಜನ..

ರೋಹಿತ್​ ಶರ್ಮಾ ಇಂದಿನ ಯುಎಸ್​ಎ ಎದುರಿನ ಪಂದ್ಯದಲ್ಲಿ ಕಮ್​​ಬ್ಯಾಕ್​ ಮಾಡಬಹುದು ಅನ್ನೋ ಭರವಸೆ ಅಭಿಮಾನಿಗಳ ವಲಯದಲ್ಲಿದೆ. ಆದ್ರೆ, ಸೂರ್ಯಕುಮಾರ್​, ಶಿವಂ ದುಬೆ ಮೇಲೆ ಫ್ಯಾನ್ಸ್,​ ವಲಯದಲ್ಲೂ ಭರವಸೆ ಹೋಗಿದೆ. ಅಷ್ಟು ಹೀನಾಯ ಪ್ರದರ್ಶನವನ್ನ ಸೂರ್ಯ, ದುಬೆ ನೀಡ್ತಿದ್ದಾರೆ. ಮುಂಬೈಕರ್​ಗಳ ಕಳಪೆಯಾಟ ವಿಶ್ವಕಪ್​ ಅಖಾಡದಲ್ಲಿ ಟೀಮ್​ ಇಂಡಿಯಾಗೆ ಹಿನ್ನಡೆಯುಂಟು ಮಾಡ್ತಿದ್ದು. ಇಂದಿನ ಪಂದ್ಯದಲ್ಲಾದ್ರೂ, ಈ ಸ್ಟಾರ್​ಗಳು ಕಮ್​​ಬ್ಯಾಕ್​ ಮಾಡಿ ಭಾರತದ ಬ್ಯಾಟಿಂಗ್​ ವಿಭಾಗಕ್ಕೆ ಬಲ ತುಂಬ್ತಾರಾ.?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಿಟ್​ಮ್ಯಾನ್​ ರೋಹಿತ್​​ಗೆ ಬಿಗ್ ಶಾಕ್.. ಮುಂಬೈ ಬ್ಯಾಟರ್​​ಗಳಿಂದ ಟೀಮ್​ಗೆ ಭಾರೀ ಆಘಾತ

https://newsfirstlive.com/wp-content/uploads/2024/06/ROHITH.jpg

Load More