newsfirstkannada.com

ವಿಂಡೀಸ್ ವಿರುದ್ಧ ಟೆಸ್ಟ್ ಫೈನಲ್.. ಟೀಂ ಇಂಡಿಯಾಗೆ ಮೊದಲ ಟೆಸ್ಟ್​ ಗೆದ್ದಂತೆ ಎರಡನೇ ಪಂದ್ಯ ಸುಲಭ ಇಲ್ಲ, ಯಾಕೆ..? ​

Share :

20-07-2023

  ಟೀಂ ಇಂಡಿಯಾದ ಪ್ಲೇಯಿಂಗ್-11 ರಲ್ಲಿ ಬದಲಾವಣೆ ಇದೆಯಾ?

  ಇವತ್ತಿನ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ವಿಶೇಷ ಸಾಧನೆ

  ಭಾರತ-ವಿಂಡೀಸ್​ ಮಧ್ಯೆ ಇದು ಎಷ್ಟನೇ ಟೆಸ್ಟ್ ಪಂದ್ಯ ಗೊತ್ತಾ?​

ಭಾರತ-ವೆಸ್ಟ್​ ವಿಂಡೀಸ್ 2ನೇ ಟೆಸ್ಟ್​ ಪಂದ್ಯಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಗೆಲುವಿನ ಓಟ ಮುಂದುವರೆಸೋ ಲೆಕ್ಕಾಚಾರದಲ್ಲಿ ರೋಹಿತ್​ ಶರ್ಮಾ ಪಡೆಯಿದ್ರೆ ಆತಿಥೇಯ ವಿಂಡೀಸ್​​​​​​​​​ಗೆ ಗೆಲುವು ಅನಿವಾರ್ಯವಾಗಿದೆ. ಆದ್ರೆ ಗೆಲುವಿನ ಲಯದಲ್ಲಿರೋ ರೋಹಿತ್ ಶರ್ಮಾ ಅಂಡ್ ಗ್ಯಾಂಗ್​​ ಟ್ರಿನಿಡಾಡ್​​​ನಲ್ಲಿ ಕಟ್ಟಿಹಾಕೋದು ಅಷ್ಟು ಸುಲಭದಲ್ಲಿಲ್ಲ.

ಜಸ್ಟ್​​​​ ಮೂರೇ ದಿನದಲ್ಲಿ ಮೊದಲ ಟೆಸ್ಟ್​​ನಲ್ಲಿ ಕೆರಿಬಿಯನ್ನರನ್ನು ಸದೆಬಡಿದ ಟೀಮ್ ಇಂಡಿಯಾ ಮತ್ತೊಂದು ಬೇಟೆಗೆ ಸಜ್ಜಾಗಿದೆ. ಒಂದು ವಾರ ವಿಶ್ರಾಂತಿಯ​ ಬಳಿಕ ರೋಹಿತ್ ಶರ್ಮಾ ಪಡೆ 2ನೇ ಟೆಸ್ಟ್​​ನಲ್ಲಿ ವಿಂಡೀಸ್​ ಎದುರು ಕಾದಾಡಲು ಸಜ್ಜಾಗಿದೆ. ಡೊಮಿನಿಕಾದಲ್ಲಿ ಸಂಪೂರ್ಣ ಡಾಮಿನೇಟ್ ಸಾಧಿಸಿದ್ದ ಭಾರತ ಟ್ರಿನಿಡಾಡ್​​​ನಲ್ಲೂ ಅದೇ ಅಬ್ಬರ ಮುಂದುವರಿಸುವ ಇರಾದೆಯಲ್ಲಿದೆ.

ಟ್ರಿನಿಡಾಡ್​​​ನಲ್ಲಿ ಭಾರತ-ವಿಂಡೀಸ್ ಫೈನಲ್​ ಟೆಸ್ಟ್​

ಮೊದಲ ಟೆಸ್ಟ್​​​​ನಲ್ಲಿ ಇನ್ನಿಂಗ್ಸ್​ ಹಾಗೂ 141 ರನ್​​ಗಳ ಪ್ರಚಂಡ ಗೆಲುವು ದಾಖಲಿಸಿದ್ದ ಭಾರತ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಟ್ರಿನಿಡಾಡ್​​​ನಲ್ಲೂ ಗೆಲುವಿನ ಓಟ ಮುಂದುವರಿಸಿದ್ರೆ 2-0 ಅಂತರದಿಂದ ಸರಣಿ ಕ್ಲೀನ್​ಸ್ವಿಪ್​ ಸಾಧಿಸಲಿದೆ. ಆದರೆ ವಿಂಡೀಸ್​​ಗೆ ಸರಣಿ ಗೆಲ್ಲುವ ಆಸೆ ಕಮರಿದೆ. ಕೊನೆ ಟೆಸ್ಟ್​​ ಗೆದ್ದರೆ ಮಾತ್ರ ಸರಣಿಯಲ್ಲಿ ಸಮಬಲ ಸಾಧಿಸಬಹುದು.ಆದರೆ ಅದು ಸುಲಭವಲ್ಲ. ಯಾಕಂದ್ರೆ ಭಾರತ ಹಾಟ್ ಫಾರ್ಮ್​ನಲ್ಲಿದೆ. 2ನೇ ಟೆಸ್ಟ್​ ಸಹ ಏಕಪಕ್ಷೀಯವಾಗಿ ಗೆಲ್ಲುವ ಲೆಕ್ಕಚಾರದಲ್ಲಿದೆ.

ಕಿಂಗ್ ಕೊಹ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್​​..!

ಈ ಪಂದ್ಯದ ಸೆಂಟರ್​​ ಆಫ್​ ಅಟ್ರ್ಯಾಕ್ಷನ್​ ಅಂದ್ರೆ ವಿರಾಟ್ ಕೊಹ್ಲಿ. ಯಾಕಂದ್ರೆ ಟ್ರಿನಿಡಾಡ್​ ಟೆಸ್ಟ್​ ರನ್ ಮಷೀನ್​ ಪಾಲಿಗೆ 500ನೇ ಅಂತಾರಾಷ್ಟ್ರೀಯ ಪಂದ್ಯ. 110 ಟೆಸ್ಟ್​​, 274 ಏಕದಿನ ಹಾಗೂ 115 ಟಿ20 ಪಂದ್ಯ ಸೇರಿ ಮೂರು ಮಾದರಿಯಲ್ಲಿ ಈವರೆಗೆ 499 ಪಂದ್ಯಗಳನ್ನಾಡಿದ್ದಾರೆ. ಇಂದು ಕಣಕ್ಕಿಳಿದು ಬಿಟ್ರೆ 500 ಪಂದ್ಯದ ಕ್ಲಬ್​ಗೆ ಸೇರಲಿದ್ದಾರೆ. ಈ ಸಾಧನೆಗೈದ ಭಾರತದ 4ನೇ ಹಾಗೂ ವಿಶ್ವದ 8ನೇ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಲಿದೆ.

ಭಾರತ-ವಿಂಡೀಸ್ ನಡುವೆ 100ನೇ ಟೆಸ್ಟ್​

ಜೊತೆಗೆ ಭಾರತ-ವಿಂಡೀಸ್​​​ 100ನೇ ಟೆಸ್ಟ್​​ ಪಂದ್ಯ ಆಡುತ್ತಿವೆ. ಇಂತಹ ಮೈಲುಗಲ್ಲಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮೇಲೆ ಹೈ-ಎಕ್ಸ್​ಫೆಕ್ಟೇಶನ್ ಇದೆ. ಕಳೆದ ಪಂದ್ಯದಲ್ಲಿ 76 ರನ್ ಸಿಡಿಸಿ ಶೈನ್ ಆಗಿದ್ದ ವಿರಾಟ್ ಸೆಂಚುರಿಯನ್ನು ಮಿಸ್ ಮಾಡಿಕೊಂಡಿದ್ರು. ಬಟ್​ ಈ ಪಂದ್ಯದಲ್ಲಿ ಮೂರಂಕಿ ದಾಟಿ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿರಿಸಿಕೊಳ್ಳಲು ಹಪಹಪಿಸ್ತಿದ್ದಾರೆ.

ಬಿಗ್​​ ಇನ್ನಿಂಗ್ಸ್ ಕಟ್ಟುವ ಒತ್ತಡದಲ್ಲಿ ರಹಾನೆ-ಗಿಲ್​​

ಫಸ್ಟ್ ಮ್ಯಾಚ್​ನಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿತ್ತೇನೋ ನಿಜ. ಆದ್ರೆ ಟೀಮ್ ಗೆದ್ರೂ ಅಜಿಂಕ್ಯ ರಹಾನೆ, ಶುಭ್​​ಮನ್ ಗಿಲ್ ಸೋತಿದ್ರು. ನಂಬಿಗಸ್ಥ ಬ್ಯಾಟ್ಸ್​​ಮನ್​​ಗಳು ಕ್ರಮವಾಗಿ 6 ಹಾಗೂ 3 ರನ್​ಗೆ ವಿಕೆಟ್ ಒಪ್ಪಿಸಿದ್ರು. ಸರಣಿ ನಿರ್ಣಾಯಕ ಪಂದ್ಯದಲ್ಲಿ ಗಿಲ್​ ಹಾಗೂ ರಹಾನೆ ಮೇಲೆ ಅಪಾರ ನಿರೀಕ್ಷೆಗಳಿವೆ. ಡೊಮಿನಿಕಾ ಟೆಸ್ಟ್ ಫೇಲ್ಯೂರ್​ನಿಂದ ಹೊರಬಂದು, ಟ್ರಿನಿಡಾಡ್​​​ನಲ್ಲಿ ರನ್ ಭರಾಟೆ ನಡೆಸಬೇಕಿದೆ.

ಆಡುವ ಹನ್ನೊಂದರ ಬಳಗದಲ್ಲಿ ನೋ ಚೇಂಜಸ್​​​

ಡೊಮೊನಿಕಾ ಗೆದ್ದ ತಂಡವನ್ನೇ ಟ್ರಿನಿಡಾಡ್​​​​​​ನಲ್ಲಿ ಆಡಿಸಲು ಕ್ಯಾಪ್ಟನ್ ರೋಹಿತ್ ಶರ್ಮಾ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಚೇಂಜಸ್ ಮಾಡುವ ಸಾಧ್ಯತೆ ಕಮ್ಮಿ. ಒಂದು ವೇಳೆ ಚೇಂಜಸ್ ಮಾಡಿದ್ರೆ ಓರ್ವ ವೇಗಿ ಬದಲು 3ನೇ ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್​​​ ಆಡಬಹುದು ಎಂದು ಹೇಳಲಾಗ್ತಿದೆ. ಟೀಮ್​​​ ಚೇಂಜ್​ ಮಾಡಿದ್ರೂ ಮಾಡದಿದ್ರೂ ಭಾರತಕ್ಕೆ ವಿಕ್ಟರಿ ಫಿಕ್ಸ್ ಅನ್ನೋದು ಕ್ರಿಕೆಟ್ ಅಭಿಮಾನಿಗಳ ನಂಬಿಕೆ. ಸರಣಿ ಗೆಲ್ಲುವ ಮೂಲಕ ರೋಹಿತ್ & ಗ್ಯಾಂಗ್ ಆ ನಂಬಿಕೆ ಉಳಿಸಿಕೊಳ್ಳುತ್ತಾ? ಅಥವಾ ಆತಿಥೇಯ ವಿಂಡೀಸ್​ ತಿರುಗೇಟು ಕೊಡುತ್ತಾ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಂಡೀಸ್ ವಿರುದ್ಧ ಟೆಸ್ಟ್ ಫೈನಲ್.. ಟೀಂ ಇಂಡಿಯಾಗೆ ಮೊದಲ ಟೆಸ್ಟ್​ ಗೆದ್ದಂತೆ ಎರಡನೇ ಪಂದ್ಯ ಸುಲಭ ಇಲ್ಲ, ಯಾಕೆ..? ​

https://newsfirstlive.com/wp-content/uploads/2023/07/Team-India-1-1.jpg

Load More