ಪಾಂಡ್ಯ ಪಡೆಗೆ ಮಾಡು ಇಲ್ಲವೆ ಮಡಿ ಕದನ
ಬೌಲಿಂಗ್ ಒಕೆ, ಬ್ಯಾಟಿಂಗ್ನದ್ದೇ ಸಮಸ್ಯೆ
ಕಮ್ಬ್ಯಾಕ್ ಮಾಡ್ತಾರಾ ಫ್ಲಾಪ್ ಸ್ಟಾರ್..?
ಇಂಡೋ-ವಿಂಡೀಸ್ ನಡುವಿನ 4ನೇ ಟಿ-20 ಕದನಕ್ಕೆ ವೇದಿಕೆ ಸಜ್ಜಾಗಿದೆ. ಸರಣಿಯಲ್ಲಿ ಕಮ್ಬ್ಯಾಕ್ ಮಾಡಿರುವ ಟೀಮ್ ಇಂಡಿಯಾ, ಇಂದಿನ ಡು ಆರ್ ಡೈ ಕದನದಲ್ಲೂ ಗೆಲುವನ್ನೇ ಎದುರು ನೋಡ್ತಿದೆ. ಇಂದಿನ ಪಂದ್ಯದಲ್ಲಿ ವಿಂಡೀಸ್ ಪಡೆಯನ್ನ ಮಣಿಸೋದು ಪಾಂಡ್ಯ ಪಡೆಗೆ ಅಷ್ಟು ಸುಲಭ ಇಲ್ಲ.
ಟಿ20 ಸ್ಪೆಷಲಿಸ್ಟ್ VS ಐಪಿಎಲ್ ಸ್ಟಾರ್ಸ್, ಧಮಾಕ ಫಿಕ್ಸ್.!
ಭಾರತ-ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ 4ನೇ ಪಂದ್ಯ ಅಭಿಮಾನಿಗಳ ಕುತೂಹಲವನ್ನ ಹೆಚ್ಚಿಸಿದೆ. ಇಂದಿನ ಪಂದ್ಯದಲ್ಲಿ ರನ್ ಧಮಾಕಾ ಸೃಷ್ಟಿಯಾಗೋ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಫ್ಲೋರಿಡಾದ ಬ್ಯಾಟಿಂಗ್ ಪಿಚ್ನಲ್ಲಿ ಬ್ಯಾಟ್ಸ್ಮನ್ಗಳು ಅಬ್ಬರಿಸಿದ್ರೆ ಫ್ಯಾನ್ಸ್ಗೆ ಫುಲ್ ಟ್ರೀಟ್ ಪಕ್ಕಾ.
ಪಾಂಡ್ಯ ಪಡೆಗೆ ಡು ಆರ್ ಡೈ ಕದನ
ಟೀಮ್ ಇಂಡಿಯಾ ಪಾಳಯದಲ್ಲಿ ಸರಣಿ ಜೀವಂತವಾಗಿರಿಸಿಕೊಳ್ಳೋ ಲೆಕ್ಕಾಚಾರವಿದೆ. ಮೊದಲ 2 ಪಂದ್ಯದಲ್ಲಿ ಸೋತ ಟೀಮ್ ಇಂಡಿಯಾ 3ನೇ ಟಿ20ಯಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದೆ. 5 ಪಂದ್ಯಗಳಲ್ಲಿ ಸರಣಿಯಲ್ಲಿ ಸದ್ಯ 2-1 ಅಂತರದಲ್ಲಿ ವಿಂಡೀಸ್ ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯ ಗೆದ್ದು ಸರಣಿಯಲ್ಲಿ ಸಮಭಲ ಸಾಧಿಸುವ ಲೆಕ್ಕಾಚಾರ ಹಾರ್ದಿಕ್ ಪಾಂಡ್ಯಾ ಪಡೆಯದ್ದಾಗಿದೆ.
ಬೌಲಿಂಗ್ ಒಕೆ, ಬ್ಯಾಟಿಂಗ್ನದ್ದೇ ಸಮಸ್ಯೆ
ಟಿ-20 ಸರಣಿಯಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಬ್ಯಾಟ್ಸ್ಮನ್ಗಳ ವೈಫಲ್ಯ ತಂಡಕ್ಕೆ ತಲೆನೋವಾಗಿದೆ. ತಿಲಕ್ ವರ್ಮಾ ಜಬರ್ದಸ್ತ್ ಪ್ರದರ್ಶನ ನೀಡಿದ್ರೆ, ಕಳೆದ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಸ್ಫೋಟಕ ಆಟವಾಡಿರೋದು ಸಮಾಧಾನ ತರಿಸಿದೆ. ಉಳಿದ ಬ್ಯಾಟ್ಸ್ಮನ್ಗಳು ಸಿಡಿದೇಳಬೇಕಾದ ಅನಿವಾರ್ಯತೆಯಿದೆ.
ಕಮ್ಬ್ಯಾಕ್ ಮಾಡ್ತಾರಾ ಫ್ಲಾಪ್ ಸ್ಟಾರ್ಸ್
ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್, ಇವರಿಬ್ಬರ ಬ್ಯಾಟ್ ಈ ಸರಣಿಯಲ್ಲಿ ಸೈಲೆಂಟ್ ಆಗಿದೆ. ಇವರಿಬ್ಬರು ಅಟ್ಟರ್ ಪ್ಲಾಫ್ ಶೋ ನೀಡಿದ್ರೆ, ಕ್ಯಾಪ್ಟನ್ ಹಾರ್ದಿಕ್ ಪರ್ಫಾಮೆನ್ಸ್ ಕೂಡ ಒಕೆ ಒಕೆಯಾಗಿದೆ. ಇನ್ನೂ ಡೆಬ್ಯೂ ಮಾಡಿದ ಮೊದಲ ಪಂದ್ಯದಲ್ಲೇ ಯಶಸ್ವಿ ಜೈಸ್ವಾಲ್ ನಿರೀಕ್ಷೆ ಹುಸಿಯಾಗಿಸಿದ್ದಾರೆ. ಹೀಗಾಗಿ 4ನೇ ಪಂದ್ಯದಲ್ಲಾದ್ರೂ ಇವ್ರು ಕಮ್ಬ್ಯಾಕ್ ಮಾಡ್ತಾರಾ ಅನ್ನೋದು ಯಕ್ಷಪ್ರಶ್ನೆಯಾಗಿದೆ.
ಸುಲಭಕ್ಕೆ ಖೆಡ್ಡಾಗೆ ಬೀಳಲ್ಲ ಕೆರಿಬಿಯನ್ ದೈತ್ಯರು
3ನೇ ಟಿ20ಯಲ್ಲಿ ಗೆದ್ದ ಮಾತ್ರಕ್ಕೆ ಟಿ20 ಫಾರ್ಮೆಟ್ನಲ್ಲಿ ವಿಂಡೀಸ್ ಪಡೆಯನ್ನ ಕಡೆಗಣಿಸುವಂತಿಲ್ಲ. ಯಾವುದೇ ಸಂದರ್ಭದಲ್ಲೂ ಸಿಡಿದೇಳಬಲ್ಲ ವಿಂಡೀಸ್ ದೈತ್ಯರನ್ನ ಖೆಡ್ಡಾಗೆ ಕೆಡವೋದು ಟೀಮ್ ಇಂಡಿಯಾ ಮುಂದಿರೋ ಬಿಗ್ ಚಾಲೆಂಜ್.! ಸ್ಫೋಟಕ ಇನ್ನಿಂಗ್ಸ್ ಕಟ್ಟಬಲ್ಲ ಬ್ಯಾಟ್ಸ್ಮನ್ಗಳೇ ವೆಸ್ಟ್ ಇಂಡೀಸ್ ಪಡೆಯ ಸ್ಟ್ರೆಂಥ್ ಆಗಿದ್ದು, ಟೀಮ್ ಇಂಡಿಯಾ ಬೌಲರ್ಸ್ ಮುಂದೆ ಕಠಿಣ ಸವಾಲಿದೆ.
ಬೌಲಿಂಗ್ನಲ್ಲೂ ವಿಂಡೀಸ್ ಪಡೆ ಬಲಿಷ್ಟವಾಗಿದೆ. ಐಪಿಎಲ್ ಟೂರ್ನಿಯ ಸ್ಟಾರ್ಗಳಿಗೆ ಮೊದಲ 2 ಪಂದ್ಯಗಳಲ್ಲಿ ಚಳ್ಳೆಹಣ್ಣು ತಿನ್ನಿಸಿದ್ದೆ ಇದಕ್ಕೆ ಸಾಕ್ಷಿ. ಹೀಗಾಗಿ ಟೀಮ್ ಇಂಡಿಯಾ ಬ್ಯಾಟರ್ಸ್ ಎಚ್ಚರಿಕೆಯ ಆಟವಾಡಬೇಕಿದೆ. ಸ್ವಲ್ಪ ಯಾಮಾರಿದ್ರೂ ಸರಣಿ ಸೋಲಿನ ಮುಖಭಂಗ ಅನುಭವಿಸಬೇಕಾಗುತ್ತೆ.
ಒಂದೆಡೆ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಇದ್ದರೆ, ಇನ್ನೊಂದೆಡೆ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆಲ್ಲೋ ಲೆಕ್ಕಾಚಾರ ವಿಂಡೀಸ್ ಪಡೆಯದ್ದಾಗಿದೆ. ಕುತೂಹಲ ಕೆರಳಿಸಿರುವ ಈ ಕಾದಾಟದಲ್ಲಿ ಯಾರು ಗೆಲ್ತಾರೆ ಅನ್ನೋದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ