ವೆಸ್ಟ್ ವಿಂಡೀಸ್ಗೆ 8 ವಿಕೆಟ್ಗಳ ಭರ್ಜರಿ ಗೆಲುವು
166 ರನ್ಗಳ ಗುರಿಯನ್ನು ನೀಡಿದ್ದ ಭಾರತ ತಂಡ
ಎರಡು ಓವರ್ ಬಾಕಿ ಇರುವಾಗಲೇ ವಿಂಡೀಸ್ಗೆ ಗೆಲುವು
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಭಾರತ ಕಳೆದುಕೊಂಡಿದೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿ ನಡೆದ ನಿರ್ಣಾಯಕ ಐದನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಾಣುವ ಮೂಲಕ ಕೆರಿಬಿಯನ್ನರ ನಾಡಲ್ಲಿ ಭಾರೀ ಮುಜುಗರಕ್ಕೆ ಒಳಗಾಗಿದೆ.
ಎಂಟು ವಿಕೆಟ್ಗಳ ಜಯದೊಂದಿಗೆ ವೆಸ್ಟ್ ಇಂಡೀಸ್ 6 ವರ್ಷಗಳ ಬಳಿಕ ಭಾರತವನ್ನು ಟಿ20 ಸರಣಿಯಲ್ಲಿ ಸೋಲಿಸಿದ ಸಾಧನೆ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನತ್ತಿದ ವಿಂಡೀಸ್ ಪಡೆ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ವಿಂಡೀಸ್ ಪರ ಬ್ರಾಂಡನ್ ಕಿಂಗ್ 55 ಬಾಲ್ನಲ್ಲಿ 85 ರನ್ಗಳಿಸಿಕೊಟ್ಟರು. ನಿಕೊಲಸ್ ಪೂರನ್ 47, ಹೋಪ್ 22 ರನ್ಗಳಿಸಿದರು. ಈ ಮೂಲಕ ವಿಂಡೀಸ್ ನೆಲದಲ್ಲಿ ಟೀಂ ಇಂಡಿಯಾ ಮುಖಭಂಗಕ್ಕೆ ಒಳಗಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ