newsfirstkannada.com

‘ಮೋದಿ ಜೀ.. ನಿಮ್ಮ ಮೌನವನ್ನು ಭಾರತ ಯಾವತ್ತೂ ಕ್ಷಮಿಸಲ್ಲ’- ಮಣಿಪುರ ವಿಡಿಯೋ ವೈರಲ್ ಬೆನ್ನಲ್ಲೇ ಖರ್ಗೆ, ರಾಹುಲ್ ವಾಗ್ದಾಳಿ..!

Share :

20-07-2023

    ಮಣಿಪುರದಲ್ಲಿ ಹಿಂಸಾಚಾರ, ಕೇಂದ್ರದ ಮೌನದ ಬಗ್ಗೆ ಪ್ರಶ್ನೆ

    ಯುವತಿಯ ಬೆತ್ತಲೆಗೊಳಿಸಿ ಮೆರವಣಿಗೆ ವಿಡಿಯೋ ವೈರಲ್

    ವಿಡಿಯೋ ವೈರಲ್ ಬೆನ್ನಲ್ಲೇ ಮೋದಿ ವಿರುದ್ಧ ಹರಿಹಾಯ್ದ ‘ಕೈ’ನಾಯಕರು

ಮಣಿಪುರದ ಹಿಂಸಾಚಾರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡದಿರೋದಕ್ಕೆ ಕಾಂಗ್ರೆಸ್​ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. 19 ವರ್ಷದ ಯುವತಿಯೊಬ್ಬಳನ್ನು ಸಾಮೂಹಿಕವಾಗಿ ಅತ್ಯಾಚಾರಗೈದು, ನಡು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಬೆನ್ನಲ್ಲೇ ಕಾಂಗ್ರೆಸ್​ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಭುತ್ವವನ್ನು mobocracy ಆಗಿ ಬದಲಾವಣೆ

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಟ್ವೀಟ್ ಮಾಡಿ, ಮಣಿಪುರದಲ್ಲಿ ಮನುಷ್ಯತ್ವ ಸತ್ತು ಹೋಗಿದೆ. ಮೋದಿ ಸರ್ಕಾರ, ಬಿಜೆಪಿ ರಾಜ್ಯದ ಕೆಲವು ಸೂಕ್ಷ್ಮವಾದ ಸಾಮಾಜಿಕ ರಚನೆಯನ್ನು ನಾಶ ಮಾಡುವ ಮೂಲಕ ಪ್ರಜಾಭುತ್ವವನ್ನು mobocracy ಯಾಗಿ ಬದಲಾವಣೆ ಮಾಡಿದೆ. ನಿಮ್ಮ ಮೌನವನ್ನು ಭಾರತ ಯಾವತ್ತೂ ಕ್ಷಮಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಮುಂದುವರಿದು ಟ್ವೀಟ್ ಮಾಡಿರುವ ಖರ್ಗೆ, ನಿಮ್ಮ ಸರ್ಕಾರಕ್ಕೆ ಆತ್ಮಸಾಕ್ಷಿ, ಮರ್ಯಾದೆ ಇದ್ದರೆ ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡಿ. ದಯವಿಟ್ಟು ಭಾರತಕ್ಕೆ ನೀವು ಉತ್ತರ ನೀಡಿ, ಅಲ್ಲಿ ಏನಾಗಿದೆ ಅನ್ನೋದನ್ನು ದೇಶದ ಜನರ ಮುಂದೆ ಇಡಿ. ಸಂಕಷ್ಟದ ಪರಿಸ್ಥಿತಿಯಲ್ಲಿ ಮಣಿಪುರ ಜನರ ಜೊತೆ ನಾವು ಇದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೂವರು ಮಹಿಳೆಯರ ವಿವಸ್ತ್ರಗೊಳಿಸಿದರು..19 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್.. ಬಳಿಕ ನಗ್ನಸ್ಥಿತಿಯಲ್ಲಿ ಮೆರವಣಿಗೆ ಮಾಡಿ ವಿಕೃತಿ

ರಾಹುಲ್ ಗಾಂಧಿ ಟ್ವೀಟ್ ಮಾಡಿ,  ಪ್ರಧಾನಿ ನರೇಂದ್ರ ಮೋದಿಯ ಮೌನ ಮಣಿಪುರದ ಅರಾಜಕತೆಗೆ ಕಾರಣವಾಯಿತು. ಅವರ ಈ ರೀತಿಯ ನಡವಳಿಕೆ ಸರಿಯಲ್ಲ. ಭಾರತದ ಕಲ್ಪನೆ ದಕ್ಕೆಯಾಗುವ ಯಾವುದನ್ನೂ INDIA ಸಹಿಸಲ್ಲ. ನಾವು ಮಣಿಪರ ನಾಗರಿಕರ ಜೊತೆಗೆ ಇದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಮಣಿಪುರಲ್ಲಿ ಮೇ 4 ರಂದು ನಡೆದಿದೆ ಎನ್ನಲಾಗಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಗ್ರಾಮವೊಂದಕ್ಕೆ ನುಗ್ಗಿದ ಅಪರಿಚಿತರು, ಮನೆಯಲ್ಲಿದ್ದ ಐವರನ್ನು ಅಪಹರಿಸಿಕೊಂಡು ಕಾಡಿಗೆ ಕರೆದೊಯ್ದಿದ್ದಾರೆ. ಅಲ್ಲಿ ಮೂವರು ಮಹಿಳೆಯರನ್ನು ನಗ್ನಗೊಳಿಸಿದ್ದಾರೆ. ನಂತರ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ. ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗಿದೆ. ವೈರಲ್ ಬೆನ್ನಲ್ಲೇ ಕಾಂಗ್ರೆಸ್​ ನಾಯಕರು ಸಿಡಿಮಿಡಿಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮೋದಿ ಜೀ.. ನಿಮ್ಮ ಮೌನವನ್ನು ಭಾರತ ಯಾವತ್ತೂ ಕ್ಷಮಿಸಲ್ಲ’- ಮಣಿಪುರ ವಿಡಿಯೋ ವೈರಲ್ ಬೆನ್ನಲ್ಲೇ ಖರ್ಗೆ, ರಾಹುಲ್ ವಾಗ್ದಾಳಿ..!

https://newsfirstlive.com/wp-content/uploads/2023/07/MODI-1-4.jpg

Load More