ತವರಿನಲ್ಲಿ ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ರವಿಚಂದ್ರನ್ ಅಶ್ವಿನ್
2ನೇ ಇನ್ನಿಂಗ್ಸ್ನಲ್ಲಿ ಪರಾಕ್ರಮ ಮೆರೆದ ಅಶ್ವಿನ್ ಹಾಗೂ ಜಡೇಜಾ
514 ರನ್ಗಳಿಗೆ ಡಿಕ್ಲೈರ್ ಮಾಡಿಕೊಂಡಿದ್ದ ಕ್ಯಾಪ್ಟನ್ ರೋಹಿತ್
ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 2ನೇ ಇನ್ನಿಂಗ್ಸ್ನಲ್ಲಿ ಆರ್ ಅಶ್ವಿನ್ ಹಾಗೂ ಜಡೇಜಾ ಬೌಲಿಂಗ್ಗೆ ಬೆದರಿದ ಬಾಂಗ್ಲಾ ಕೇವಲ 234 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 280 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಬಾಂಗ್ಲಾಗೆ ಡಿಚ್ಚಿಕೊಟ್ಟ R ಅಶ್ವಿನ್.. ಇತಿಹಾಸ ನೆನಪಿಸಿದ ಸ್ಟಾರ್ ಆಲ್ರೌಂಡರ್..! ಏನದು
ಚೆನ್ನೈನ ಎಂ.ಎ ಚಿದಂಬರಂ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ನಲ್ಲಿ ಬಾಂಗ್ಲಾದೇಶ ಟಾಸ್ ವಿನ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ಗೆ ಆಗಮಿಸಿದ್ದ ಟೀಮ್ ಇಂಡಿಯಾ ವಿಫಲವಾಗಿತ್ತು. ಆದರೆ ಆರ್ ಅಶ್ವಿನ್ ಹಾಗೂ ಜಡೇಜಾ ಅವರ ಭರ್ಜರಿ ಜೊತೆಯಾಟದಿಂದ ಭಾರತ ದೊಡ್ಡ ಮೊತ್ತದ ರನ್ಗಳನ್ನು ಕಲೆ ಹಾಕಿತು. ಇದರಿಂದ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಮುನ್ನಡೆ ಸಾಧಿಸಲು ಕಾರಣವಾಯಿತು.
144 ರನ್ಗೆ 6 ವಿಕೆಟ್ ಕಳೆದುಕೊಂಡ ಭಾರತ ಅಲ್ಪಮೊತ್ತಕ್ಕೆ ಆಲೌಟಾಗುವ ಸ್ಥಿತಿಯಲ್ಲಿತ್ತು. ಆಗ ಕ್ರೀಸ್ಗಿಳಿದ ಅಶ್ವಿನ್ ಒತ್ತಡದಲ್ಲಿ ತಂಡವನ್ನು ಪಾರು ಮಾಡಿದರು. 108 ಎಸೆತಗಳಲ್ಲಿ ಬಿರುಸಿನ ಶತಕ ಬಾರಿಸಿದ ಆಲ್ರೌಂಡರ್ ಅಶ್ವಿನ್ ಸಂಕಷ್ಟಹರನಾದ್ರು. ರೆಡ್ಬಾಲ್ ಆಟವನ್ನ ವೈಟ್ಬಾಲ್ನಂತೆ ಆಡಿ ಚೆಪಾಕ್ ಮೈದಾನದಲ್ಲಿ 2ನೇ ಶತಕ ದಾಖಲಿಸಿದ್ರು. ಜಡೇಜಾ 86 ರನ್ ಗಳಿಸಿ ಮೆರೆದಾಡಿದ್ರು. ಪರಿಣಾಮ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 376 ರನ್ಗಳ ಬೃಹತ್ ಮೊತ್ತವನ್ನ ಕಲೆ ಹಾಕಿತ್ತು.
ಇದನ್ನೂ ಓದಿ: ಬಾಂಗ್ಲಾ ಆಟಗಾರರನ್ನ ಫೀಲ್ಡಿಂಗ್ ನಿಲ್ಲಿಸಿದ ರಿಷಬ್ ಪಂತ್.. ಕಾಮೆಂಟರಿ ಸೇರಿ ಎಲ್ಲರಿಗೂ ಶಾಕ್!
ಇನ್ನು ಟೀಮ್ ಇಂಡಿಯಾ 2ನೇ ಇನ್ನಿಂಗ್ಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರಿಷಬ್ ಪಂತ್ ಅವರ ಅಮೋಘ ಶತಕದಿಂದ 4 ವಿಕೆಟ್ಗೆ 287 ರನ್ಗಳನ್ನ ಗಳಿಸಿತ್ತು. ಆಗ ರೋಹಿತ್ ಶರ್ಮಾ ಡಿಕ್ಲೈರ್ ಮಾಡಿಕೊಂಡರು. ಇದರಿಂದ ಬಾಂಗ್ಲಾ ಗೆಲ್ಲಬೇಕೆಂದರೆ 515 ರನ್ಗಳನ್ನು ಗಳಿಸಬೇಕಿತ್ತು. ಆದರೆ ಬಾಂಗ್ಲಾ ಮೊದಲ ಇನ್ನಿಂಗ್ಸ್ನಲ್ಲಿ 149 ರನ್ಗೆ ಆಲೌಟ್ ಆಗಿತ್ತು. ಬಳಿಕ 2ನೇ ಇನ್ನಿಂಗ್ಸ್ನಲ್ಲಿ 234 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಆರ್ ಆಶ್ವಿನ್ ಮತ್ತೊಮ್ಮೆ 6 ವಿಕೆಟ್ ಪಡೆದು ಸಂಭ್ರಮಿಸಿದರು. ಇದು ಬಾಂಗ್ಲಾಗೆ ಭಾರೀ ಆಘಾತ ಉಂಟು ಮಾಡಿತು. ಇದರಿಂದ ಟೀಮ್ ಇಂಡಿಯಾ 280 ರನ್ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ