ರೋಹಿತ್ ಕ್ಯಾಪ್ಟನ್ಸಿಯಲ್ಲಿ ಮತ್ತೊಂದು ಸರಣಿ ಗೆಲುವು
ಟೀಕಾಕಾರರಿಗೆ ಉತ್ತರ ನೀಡಿದ ಕ್ಯಾಪ್ಟನ್ ರೋಹಿತ್ ಶರ್ಮಾ
ಟೆಸ್ಟ್ ಸರಣಿ ಮುಕ್ತಾಯ.. ಇನ್ನೇನಿದ್ರೂ ಏಕದಿನ ಸರಣಿ
ವೆಸ್ಟ್ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತವು ತನ್ನದಾಗಿಸಿಕೊಂಡಿದೆ. ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನ ಮಳೆಯಿಂದಾಗಿ ಆಟ ನಡೆಯಲಿಲ್ಲ. ಹೀಗಾಗಿ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದ್ದು, ಈ ಮೂಲಕ 1-0 ಅಂತರದಿಂದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ.
ಕ್ವೀನ್ ಪಾರ್ಕ್ನ ಓವಲ್ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆದಿತ್ತು. ಐದನೇ ದಿನ ಭಾರೀ ಮಳೆಯಿಂದಾಗಿ ಪಂದ್ಯ ನಡೆಯಲಿಲ್ಲ. ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ, ಮೊದಲ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 438 ರನ್ಗಳಿಸಿ ಆಲೌಟ್ ಆಗಿತ್ತು. ಕೊಹ್ಲಿಯ ಆಕರ್ಷಕ ಶತಕ (121ರನ್), ಕ್ಯಾಪ್ಟನ್ ರೋಹಿತ್ 80, ಜೈಸ್ವಾಲ್ 57, ಜಡೇಜಾ 61, ಅಶ್ವಿನ್ ಅವರ 56 ರನ್ಗಳ ನೆರವಿನಿಂದ ಈ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿತ್ತು.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ್ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನೊಂದಿಗೆ 181 ರನ್ಗಳಿಸಿ ಡಿಕ್ಲೈರ್ ಮಾಡಿಕೊಂಡಿತ್ತು. ಇನ್ನು ಮೊದಲ ಇನ್ನಿಂಗ್ಸ್ ಆಡಿದ್ದ ವೆಸ್ಟ್ ವಿಂಡೀಸ್, 255 ರನ್ಗೆ ಸರ್ವಪತನ ಕಂಡಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ 4ನೇ ದಿನದ ಅಂತ್ಯಕ್ಕೆ 76 ರನ್ಗಳಿಸಿ 2 ವಿಕೆಟ್ ಕಳೆದುಕೊಂಡು ಆಡುತ್ತಿತ್ತು. ಮ್ಯಾನ್ ಆಫ್ ದಿ ಪ್ಲೇಯರ್ಗೆ ಸಿರಾಜ್ ಭಾಗಿಯಾದರು. ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್