newsfirstkannada.com

ಹಡಗು ನಿರ್ಮಾಣ ಕಾಂಟ್ರಾಕ್ಟ್ ಗೆದ್ದ ಭಾರತ.. ಬಲಿಷ್ಠ ರಷ್ಯಾಗೆ 25 ಸರಕು ಹಡಗುಗಳ ನಿರ್ಮಿಸಿಕೊಡಲು ಡೀಲ್..!

Share :

03-11-2023

  ಸ್ವದೇಶಿ ನಿರ್ಮಾಣದ ಕಡೆ ಹೆಚ್ಚಿನ ಗಮನ ಹರಿಸುತ್ತಿರುವ ಭಾರತ

  ಸಾಕಷ್ಟು ಯುದ್ಧ ಸಾಮಾಗ್ರಿಗಳನ್ನು ಸ್ವದೇಶಿಯವಾಗಿ ತಯಾರು

  ವಿದೇಶಿ ಅವಲಂಬನೆಯನ್ನು ಆದಷ್ಟು ಕಡಿಮೆ ಮಾಡಿದ ಭಾರತ

ನವದೆಹಲಿ: ಇತ್ತೀಚೆಗೆ ಭಾರತ ಸ್ವದೇಶಿ ನಿರ್ಮಾಣದ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದು ಸೇನೆಗೆ ಬೇಕಾದಂತಹ ಸಾಕಷ್ಟು ಸರಕುಗಳನ್ನು ದೇಶದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ. ನಮ್ಮಲ್ಲಿನ ಯುದ್ಧ ಸಾಮಾಗ್ರಿಗಳನ್ನು ಖರೀದಿಸಲು ವಿದೇಶಗಳಿಂದಲೂ ಬೇಡಿಕೆ ಹೆಚ್ಚುತ್ತಿರುವ ಕಾರಣ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ. ಭಾರತ ಹಡಗು ನಿರ್ಮಾಣ ಮಾಡುವ ಕಂಟ್ರ್ಯಾಕ್ಟ್ ಒಂದನ್ನು ಗೆದ್ದುಕೊಂಡಿದ್ದು ರಷ್ಯಾಕ್ಕೆ 25 ಹಡಗುಗಳನ್ನು ನಿರ್ಮಿಸಿಕೊಡಲಿದೆ.

ವಿಶ್ವದ ಜಾಗತಿಕ ಪಾಲುದಾರಿಕೆಯಲ್ಲಿ ಮೇಲುಗೈ ಸಾಧಿಸುತ್ತಿರುವ ಭಾರತ ಅದನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯೊಂದನ್ನು ಇಟ್ಟಿದೆ. ಭಾರತ ಇದೀಗ ಹಡಗು ನಿರ್ಮಾಣದ ಕಂಟ್ರ್ಯಾಕ್ಟ್ ಒಂದನ್ನು ಗೆದ್ದಿದ್ದು ರಷ್ಯಾಕ್ಕೆ 25 ಸರಕು ಸಾಗಿಸುವ ಹಡಗುಗಳನ್ನು ನಿರ್ಮಿಸಿಕೊಡಲಿದೆ. ಗೋವಾ ಶೀಪ್​ಯಾರ್ಡ್​​ ಲಿಮಿಟೆಡ್​​ನಲ್ಲಿ ಸರಕು ಹಡಗುಗಳ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಈ ಒಪ್ಪಂದವು ಭಾರತದ ಹಡಗು ನಿರ್ಮಾಣ ಉದ್ಯಮಕ್ಕೆ ಗಮನಾರ್ಹವಾದ ಉತ್ತೇಜನ ನೀಡಲಿದೆ.

ಹಾಗೆಯೇ ಇದು ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಇನ್ನಷ್ಟು ಬಲಪಡಿಸಲಿದೆ ಎಂದು ಹೇಳಲಾಗುತ್ತಿದೆ. ಈಗೀಗ ಭಾರತ ವಿದೇಶಿ ಅವಲಂಬನೆಯನ್ನು ಆದಷ್ಟು ಕಡಿಮೆ ಮಾಡಿದ್ದು ಭಾರತದಲ್ಲೇ ವಸ್ತುಗಳ ನಿರ್ಮಾಣ ಮಾಡುವ ಕಡೆಗೆ ಹೆಚ್ಚಿನ ಸಮಯ ಕೊಡುತ್ತಿದೆ. ಇದರಿಂದ ಬೇರೆ ದೇಶಗಳೊಂದಿಗೆ ವ್ಯಾಪಾರ-ವ್ಯವಹಾರ ವೃದ್ಧಿಸಲಿವೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಡಗು ನಿರ್ಮಾಣ ಕಾಂಟ್ರಾಕ್ಟ್ ಗೆದ್ದ ಭಾರತ.. ಬಲಿಷ್ಠ ರಷ್ಯಾಗೆ 25 ಸರಕು ಹಡಗುಗಳ ನಿರ್ಮಿಸಿಕೊಡಲು ಡೀಲ್..!

https://newsfirstlive.com/wp-content/uploads/2023/11/INDIAN_SHIP.jpg

Load More