newsfirstkannada.com

ತವರಿನಲ್ಲಿ ಮಿಂಚಿದ RCB ಪ್ಲೇಯರ್​.. ಬೆಂಗಳೂರಿನಲ್ಲಿ ಭರ್ಜರಿ ಸೆಂಚುರಿ ಸಿಡಿಸಿದ ಸ್ಮೃತಿ ಮಂದನಾ

Share :

Published June 16, 2024 at 8:21pm

  ಕ್ಯಾಪ್ಟನ್ ಸೇರಿ ಎಲ್ಲರೂ ಪೆವಿಲಿಯನ್ ಪರೇಡ್ ನಡೆಸಿದ್ದರು

  ಸೆಂಚುರಿ ಸಿಡಿಸಿ ವಿಶೇಷ ದಾಖಲೆ ಬರೆದ ಸ್ಮೃತಿ ಮಂದನಾ

  ಚಿನ್ನಸ್ವಾಮಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ವಿನ್

ದಕ್ಷಿಣ ಆಫ್ರಿಕಾದ ಮಹಿಳಾ ತಂಡದ ವಿರುದ್ಧ ನಡೆದ ಐಸಿಸಿ ಚಾಂಪಿಯನ್​ಶಿಪ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡದ ಓಪನರ್ ಸ್ಮೃತಿ ಮಂದನಾ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಸ್ಮೃತಿ ಮಂದನಾ ಸೆಂಚುರಿ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ 143 ರನ್​ಗಳಿಂದ ಅಮೋಘವಾದ ಜಯ ಸಾಧಿಸಿದೆ.

ಇದನ್ನೂ ಓದಿ: ಕಂಬಿ ಹಿಂದೆ ದರ್ಶನ್.. ಮಾಧ್ಯಮ, ಪೊಲೀಸರ ಕಾರ್ಯಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ; ಏನಂದ್ರು?

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ನಾಯಕಿ ಹರ್ಮನ್​ಪ್ರೀತ್ ಕೌರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಓಪನರ್ ಆಗಿ ಕ್ರೀಸ್​ ಆಗಮಿಸಿದ ಸ್ಮೃತಿ ಮಂದನಾ ಹಾಗೂ ಶಫಾಲಿ ವರ್ಮಾ ಆರಂಭಿಕ ಪ್ರದರ್ಶನ ನೀಡಲಿಲ್ಲ. 15 ರನ್ ಇರುವಾಗಲೇ ಶಫಾಲಿ ಔಟ್ ಆದರು. ಬಳಿಕ ಬಂದ ಹೇಮಾಲತಾ ಕೂಡ 12 ರನ್​ಗೆ ಔಟ್ ಆದರು. ನಾಯಕಿ ಹರ್ಮನ್​ಪ್ರೀತ್ ಕೌರ್ 10, ರೋಡ್ರಿಗಸ್ 17, ರಿಚಾ ಘೋಷ್ 3 ರನ್​ಗೆ ಆಟ ಮುಗಿಸಿದರು. ಬಂದಷ್ಟೇ ವೇಗದಲ್ಲಿ ಮಹಿಳಾ ಆಟಗಾರ್ತಿಯರು ಪೆವಿಲಿಯನ್ ಸೇರಿದರು.

ಇದನ್ನೂ ಓದಿ: ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

ಆದರೆ ಇನ್ನೊಂದಡೆ ಕ್ರೀಸ್ ಕಚ್ಚಿ ನಿಂತ ಸ್ಮೃತಿ ಮಂದನಾ ಬ್ಯಾಟಿಂಗ್ ಮುಂದುವರೆಸಿದರು. ಭಾರತ ತಂಡಕ್ಕೆ ಆಸರೆಯಾಗಿ ನಿಂತ ಸ್ಮೃತಿ ಉತ್ತಮ ಹಂತದವರೆಗೆ ರನ್​ಗಳನ್ನು ಕೊಂಡೊಯ್ದರು. ದೀಪ್ತಿ ಶರ್ಮಾ 37, ಪೂಜಾ 31 ರನ್​ಗಳೊಂದಿಗೆ ಬ್ಯಾಟಿಂಗ್ ಮಾಡಿ ಸ್ಮೃತಿ ಮಂದನಾಗೆ ಸಾಥ್ ನೀಡಿದರು. ಈ ಮೂಲಕ ಆರಂಭಿಕವಾಗಿ ಬ್ಯಾಟಿಂಗ್ ಮಾಡಲು ಬಂದಿದ್ದ ಸ್ಮೃತಿ ಮಂದನಾ 46ನೇ ಓವರ್​​ವರೆಗೆ ಬ್ಯಾಟಿಂಗ್ ಮಾಡಿ ಭರ್ಜರಿ ಶತಕ ಸಿಡಿಸಿದ್ದಾರೆ. 127 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 117 ರನ್​ ಬಾರಿಸಿ ದಾಖಲೆ ಬರೆದಿದ್ದಾರೆ. ಈ ಸೆಂಚುರಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 7,000 ರನ್ ಪೂರೈಸಿದ ದಾಖಲೆಗೆ ಪಾತ್ರರಾದರು. ಇನ್ನು ಈ ಸಾಧನೆ ಮಾಡಿದ ಭಾರತ ಮಹಿಳಾ ಟೀಮ್​ನ 2ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮುದ್ದು ನಾಯಿಗಳ ಜೊತೆ ಟೈಮ್ ಸ್ಪೆಂಡ್ ಮಾಡಿದ MS ಧೋನಿ, ಝೀವಾ.. ಬರ್ತ್​​ಡೇ ಯಾವಾಗ?

ಈ ಮೂಲಕ ಭಾರತ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 265 ರನ್​ಗಳ ಬೃಹತ್ ಮೊತ್ತದ ಟಾರ್ಗೆಟ್ ಅನ್ನು ನೀಡಿತ್ತು. ಇನ್ನು ಭಾರತ ನೀಡಿದ್ದ ಟಾರ್ಗೆಟ್ ಬೆನ್ನು ಹತ್ತಿದ್ದ ಆಫ್ರಿಕಾ ಮಹಿಳಾ ಟೀಮ್ 122 ರನ್​​ಗೆ ತನ್ನೆಲ್ಲ ವಿಕೆಟ್​​ಗಳನ್ನು ಕಳೆದುಕೊಂಡು ಸೋಲೋಪ್ಪಿಕೊಂಡಿದೆ. ತಂಡದ ಪರ 33 ರನ್ ಸಿಡಿಸಿರುವುದೇ ವೈಯಕ್ತಿಕ ಅಧಿಕ ರನ್ ಆಗಿದೆ. ಉಳಿದೆಲ್ಲ ಆಟಗಾರ್ತಿಯರು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ಹೀಗಾಗಿ 37.4 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡ ಆಫ್ರಿಕಾ ತಂಡ ಕೇವಲ 122 ರನ್ ಮಾತ್ರ ಗಳಿಸಿ ಭಾರತಕ್ಕೆ ತಲೆ ಬಾಗಿತು. ಈ ಮೂಲಕ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ತವರಿನಲ್ಲಿ ಮಿಂಚಿದ RCB ಪ್ಲೇಯರ್​.. ಬೆಂಗಳೂರಿನಲ್ಲಿ ಭರ್ಜರಿ ಸೆಂಚುರಿ ಸಿಡಿಸಿದ ಸ್ಮೃತಿ ಮಂದನಾ

https://newsfirstlive.com/wp-content/uploads/2024/06/Smriti_Mandhana.jpg

Load More