Advertisment

ಕಿಶನ್, ರಿಂಕು, ಜೈಸ್ವಾಲ್ ಭರ್ಜರಿ ಸಿಕ್ಸರ್ಸ್​.. 2ನೇ ಪಂದ್ಯದಲ್ಲಿ ಕಾಂಗರೂಗೆ ಸೋಲು; ವಿಶ್ವಕಪ್​ ಗೆಲುವು ಮರೆತ್ರಾ?

author-image
Bheemappa
Updated On
IND v/s AUS: ಟೈಗರ್ಸ್​ ಮುಂದೆ ಬಾಲ ಮುದುಡಿದ ಕಾಂಗರೂಸ್​.. ಭಾರತದ ಯಂಗ್ ಪ್ಲೇಯರ್ಸ್​ ಆಟಕ್ಕೆ ಬೆಚ್ಚಿ ಬಿದ್ದ ಆಸಿಸ್​​
Advertisment
  • ಆಸಿಸ್​ ಪ್ಲೇಯರ್ಸ್​ಗೆ ನಕ್ಷತ್ರಗಳನ್ನು ತೋರಿಸಿದ ಭಾರತದ ಆಟಗಾರರು
  • ನಾ ಹೊಡಿ, ನೀ ಹೊಡಿ ಎನ್ನುತ್ತ ಭಾರತದ ಆಟಗಾರರ ಸಖತ್ ಬ್ಯಾಟಿಂಗ್
  • ವಿಶ್ವಕಪ್ ಗೆಲುವು ಮರೆಯುವಂತೆ ಮಾಡಿದ ಕಿಶನ್, ರಿಂಕ್, ಜೈಸ್ವಾಲ್ ಆಟ

ಯಶಸ್ವಿ ಜೈಸ್ವಾಲ್​ ಅವರ ಸಕ್ಸಸ್ ಆಟ, ರುತುರಾಜ್ ಗಾಯಕ್ವಾಡ್ ಯೋಚನೆಯಾಟ, ಇಶನ್ ಕಿಶನ್​, ರಿಂಕು ಅವರ ಭರ್ಜರಿ ಬ್ಯಾಟಿಂಗ್​ನಿಂದ ಆಸಿಸ್​ ವಿರುದ್ಧ ಟೀಮ್ ಇಂಡಿಯಾ 44 ರನ್​ಗಳಿಂದ ವಿಜಯಮಾಲೆ ಧರಿಸಿಕೊಂಡಿದೆ. ಇದರಿಂದ 5 ಪಂದ್ಯಗಳ T20 ಸರಣಿಯಲ್ಲಿ 2-0 ದಿಂದ ಭಾರತ ಮುನ್ನಡೆ ಕಾಯ್ದುಕೊಂಡಿದೆ.

Advertisment

ನಿನ್ನೆ ಕೇರಳದ ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ T20 ಪಂದ್ಯದಲ್ಲಿ ಭಾರತದ ಯುಂಗ್ ಗನ್​ ಬ್ಯಾಟ್ಸ್​​ಮನ್​ಗಳು ಆಸಿಸ್​​ ಪ್ಲೇಯರ್ಸ್​ಗೆ ನಕ್ಷತ್ರಗಳನ್ನು ತೋರಿಸಿದರು. ನಾ ಹೊಡಿ, ನೀ ಹೊಡಿ ಎನ್ನುತ್ತ ಟೀಮ್​ ಇಂಡಿಯಾ ಆಟಗಾರರು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​​ಗೆ 235 ರನ್​ಗಳ ಬೃಹತ್​ ಮೊತ್ತವನ್ನು ಕಲೆ ಹಾಕಿತು.

ಭಾರತದ ಪರ ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಯಶಸ್ವಿ ಜೈಸ್ವಾಲ್​ ಮತ್ತು ರುತುರಾಜ್ ಗಾಯಕ್ವಾಡ್ ಕಾಂಗರೂ ಪಡೆಗೆ ಹೇಗಂದರೆ ಹಾಗೇ ಚಚ್ಚಿದರು. ಯಶಸ್ವಿ ಜೈಸ್ವಾಲ್​ ಬ್ಯಾಟಿಂಗ್ ಹೇಗಿತ್ತು ಎಂದರೆ ಆಸ್ಟ್ರೇಲಿಯಾ ಪ್ಲೇಯರ್ಸ್​ ವರ್ಲ್ಡ್​​ಕಪ್​ ಗೆದ್ದಿರೋದೆ ಮರೆಯುವಂತೆ ಇತ್ತು. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಓಪನರ್ ಜೈಸ್ವಾಲ್​ 25 ಎಸೆತಗಳಲ್ಲಿ 9 ಫೋರ್​, 2 ಸಿಕ್ಸರ್​​ ಸಮೇತ 53 ರನ್​ಗಳನ್ನು ಬಾರಿಸಿ ಆಡುವಾಗ ಜಂಪಾಗೆ ಕ್ಯಾಚ್ ಕೊಟ್ಟು ಔಟ್​ ಆದರು. ಇತ್ತು ತಾಳ್ಮೆಯ ಆಟವಾಡುತ್ತಿದ್ದ ರುತುರಾಜ್ ಗಾಯಕ್ವಾಡ್ ಪಂದ್ಯ ಕೊನೆ ಹಂತದವರೆಗೆ ಇದ್ದು 3 ಬೌಂಡರಿ, 2 ಸಿಕ್ಸರ್​ನಿಂದ 58 ರನ್​ ಗಳಿಸಿದರು.

publive-image

ಜೈಸ್ವಾಲ್​ ನಂತರ ಕ್ರೀಸ್​ಗೆ ಬಂದ ಇಶನ್​ ಕಿಶನ್​ ಕಾಂಗರೂಗಳ ಎದೆಯಲ್ಲಿ ಭಯವನ್ನಿಟ್ಟರು ಎನ್ನಬಹುದು. ಏಕೆಂದರೆ ಪ್ರತಿ ಬಾಲ್ ಶಾಟ್ ಮಾಡುವ ಮೂಲಕ ಗ್ಯಾಲರಿಯಲ್ಲಿ ಕುಳಿತ್ತಿದ್ದ ಫ್ಯಾನ್ಸ್​ಗೆ ಸಖತ್ ಮನರಂಜನೆ ನೀಡಿದರು. ಕಿಶನ್ 3 ಬೌಂಟರಿ, 4 ಆಕಾಶದೆತ್ತರ ಸಿಕ್ಸರ್​ಗಳಿಂದ 32 ಎಸೆತಗಳಲ್ಲಿ 52 ರನ್​ ಗಳಿಸಿದರು. ಹೊರ ಹೋಗುತ್ತಿದ್ದ ಬಾಲ್​ನ್ನ ಸಿಕ್ಸರ್ ಬಾರಿಸಲು ಹೋಗಿ ನಾಥಮ್​ಗೆ ಕ್ಯಾಚ್ ನೀಡಿ ಪೆವಿಲಿಯನ್​ಗೆ ನಡೆದರು. ಬಳಿಕ ಬ್ಯಾಟಿಂಗ್​ಗೆ ಬಂದ ಕ್ಯಾಪ್ಟನ್ ಸೂರ್ಯ ಸಿಕ್ಸ್​ ಬಾರಿಸುವ ಮೂಲಕ ಖಾತೆ ಓಪನ್ ಮಾಡಿದರು. ಇವರು ಕೂಡ 19 ರನ್ ಗಳಿಸಿದ್ದಾಗ ಹೊರ ಹೋಗೋ ಬೌಲ್​ ಬಾರಿಸಲು ಹೋಗಿ ಕೈ ಸುಟ್ಟುಕೊಂಡರು. ನಂತರ ಬಂದ ರಿಂಕು ಸಿಂಗ್ ಅಭಿಮಾನಿಗಳಿಗೆ ಭರ್ಜರಿ ಫಿನಿಷಿಂಗ್ ನೀಡಿದರು. ಕೇವಲ 9 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ಗಳಿಂದ 31 ರನ್ ಗಳಿಸಿದರು, ತಿಲಕ್ ವರ್ಮಾ ಬರುತ್ತಿದ್ದಂತೆ ಸಿಕ್ಸರ್​ ಬಾರಿಸಿದರು. ಇದರಿಂದ ಭಾರತ 20 ಓವರ್​ಗಳಲ್ಲಿ 4 ವಿಕೆಟ್​​ಗೆ 235 ರನ್​ಗಳ ಬೃಹತ್ ಟಾರ್ಗೆಟ್​ ನೀಡಿತು.

Advertisment

ಈ ಟಾರ್ಗೆಟ್ ಬೆನ್ನತ್ತಿದ್ದ ಆಸ್ಟ್ರೇಲಿಯಾ 20 ಓವರ್​​ಗಳಲ್ಲಿ 9 ವಿಕೆಟ್​ಗೆ 191 ರನ್ ಮಾತ್ರ ಗಳಿಸಿತು. ಹೀಗಾಗಿ 5 ಪಂದ್ಯಗಳ T20 ಸರಣಿಯಲ್ಲಿ 2ನೇ ಪಂದ್ಯವನ್ನು ಕೂಡ ಸೋತು ಹೋಯಿತು. ಮುಂದಿನ ಪಂದ್ಯವನ್ನು ಆಸಿಸ್ ಗೆದ್ದರೇ ಮಾತ್ರ ಸರಣಿ ಜೀವಂತ ಆಗಿರಲಿದೆ. ಒಂದು ವೇಳೆ ಭಾರತ ಪಂದ್ಯ ಗೆದ್ದರೇ ಸರಣಿ ಭಾರತದ ಕೈವಶವಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment