/newsfirstlive-kannada/media/post_attachments/wp-content/uploads/2023/11/YASHASWI_JAISWAL-1.jpg)
ಮೊದಲ ಪಂದ್ಯದಲ್ಲಿ ಕಾಂಗರೂಗಳನ್ನ ಕಾಡಿದ ಯಂಗ್​​ ಇಂಡಿಯಾ, 2ನೇ ಪಂದ್ಯದಲ್ಲಿ ಆಸಿಸ್​ ವಿರುದ್ಧ ಅಕ್ಷರಶಃ ಘರ್ಜಿಸಿತು. ಟೀಮ್​ ಇಂಡಿಯಾ ಆಲ್​​ರೌಂಡ್ ಆಟಕ್ಕೆ ಕಾಂಗರೂ ಪಡೆ ಬೆಚ್ಚಿ ಬಿತ್ತು. ತಿರುವನಂತಪುರಂ ಅಖಾಡದಲ್ಲಿ ಸೂರ್ಯ ಕುಮಾರ್​ನ ಬಳಗ ಗೆಲುವಿನ ನಗಾರಿ ಬಾರಿಸಿತು. ಹೇಗಿತ್ತು 2ನೇ ಟಿ20 ಪಂದ್ಯ ಅನ್ನೋ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ತಿರುವನಂತಪುರಂನ ಗ್ರೀನ್​ಫೀಲ್ಡ್​ ಅಖಾಡದಲ್ಲೂ ರನ್​ ಹೊಳೆ ಹರಿಯಿತು. ಬ್ಯಾಟ್ಸ್​ಮನ್​ಗಳ ಆರ್ಭಟದ ಮುಂದೆ ಆಸಿಸ್ ಬೌಲರ್ಸ್​ ತಬ್ಬಿಬ್ಬಾದ್ರು. ಟೀಮ್​ ಇಂಡಿಯಾದ ಘರ್ಜನೆ ನೆಕ್ಸ್ಟ್​​ ಲೆವೆಲ್​​ನಲ್ಲಿತ್ತು. ಇಂಡಿಯನ್​ ಟೈಗರ್ಸ್​ ಕೊಟ್ಟ ಏಟನ್ನ ಕಾಂಗರೂಗಳು ಸುಲಭಕ್ಕೆ ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ಟೀಮ್​ ಇಂಡಿಯಾದ ಅಬ್ಬರದ ಗೆಲುವು ಹಾಗಿತ್ತು.
/newsfirstlive-kannada/media/post_attachments/wp-content/uploads/2023/11/Jaiswal.jpg)
ಜೈಸ್ವಾಲ್​ ಸ್ಫೋಟಕ್ಕೆ ಬೆಚ್ಚಿಬಿದ್ದ ಕಾಂಗರೂಗಳು.!
ಟಾಸ್​ ಸೋತು ಬ್ಯಾಟಿಂಗ್​ಗಿಳಿದ್ರೂ, ಟೀಮ್​ ಇಂಡಿಯಾ ಆರ್ಭಟ ಏನು ಕಡಿಮೆ ಇರಲಿಲ್ಲ. ಯಂಗ್​ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್​ ಡೇರ್​ ಡೆವಿಲ್​ ಆಟವಾಡಿದ್ರು. ಗ್ರೀನ್​ ಫೀಲ್ಡ್​ ಮೈದಾನದಲ್ಲಿ ಘರ್ಜಿಸಿದ ಜೈಸ್ವಾಲ್​, ಸ್ಫೋಟಕ ಹಾಫ್​ ಸೆಂಚುರಿ ಸಿಡಿಸಿದ್ರು.
ಇಶಾನ್ ಕಿಶನ್​ ಆರ್ಭಟ, ಆಸಿಸ್​​ ತತ್ತರ.!
ಜೈಸ್ವಾಲ್​ ಹಾಫ್​ ಸೆಂಚುರಿ ಸಿಡಿಸಿ ಔಟಾದ ಬಳಿಕ ಕಣಕ್ಕಿಳಿದ ಇಶಾನ್​ ಕಿಶನ್ ಆಸಿಸ್​ ಬೌಲರ್​ಗಳ ಬೆವರಿಳಿಸಿದ್ರು. 3 ಬೌಂಡರಿ, 4 ಸಿಕ್ಸರ್ ಚಚ್ಚಿ ಆಸಿಸ್​ ಮೇಲೆ ಸವಾರಿ ಮಾಡಿದ ಕಿಶನ್, 52 ರನ್​ಗಳ ಅದ್ಭುತ ಇನ್ನಿಂಗ್ಸ್​ ಕಟ್ಟಿದ್ರು.
ಎಚ್ಚರಿಕೆಯ ಆಟವಾಡಿದ ಋತುರಾಜ್​ ಗಾಯಕ್ವಾಡ್​.!
ಆರಂಭಿಕನಾಗಿ ಕಣಕ್ಕಿಳಿದ ಋತುರಾಜ್​ ಗಾಯಕ್ವಾಡ್​ ಅಂತಿಮ ಹಂತದವರೆಗೂ ಎಚ್ಚರಿಕೆಯ ಆಟವಾಡಿದ್ರು. 3 ಬೌಂಡರಿ, 2 ಸಿಕ್ಸರ್​ ಸಹಿತ 58 ರನ್​ಗಳ ಇನ್ನಿಂಗ್ಸ್​ ಕಟ್ಟಿದ್ರು. ಇನ್ನು ನಾಯಕ ಸೂರ್ಯಕುಮಾರ್​ ಯಾದವ್​ 19 ರನ್​ಗಳ ಕಾಣಿಕೆ ನೀಡಿದ್ರು.
ಅಂತಿಮ ಹಂತದಲ್ಲಿ ರಿಂಕು ಸಿಂಗ್​ ಸ್ಫೋಟ.!
ಅಂತಿಮ ಹಂತದಲ್ಲಿ ಕಣಕ್ಕಿಳಿದ ರಿಂಕು ಸಿಂಗ್​ ತಾನೆಂಥಾ ಫಿನಿಷರ್​ ಅನ್ನೋದನ್ನ ಮತ್ತೆ ನಿರೂಪಿಸಿದ್ರು. ಸ್ಪೋಟಕ ಆಟವಾಡಿದ ರಿಂಕು, ಕೇವಲ 9 ಎಸೆತಗಳಲ್ಲಿ 31 ರನ್​ ಸಿಡಿಸಿದ್ರು. ಅಂತಿಮವಾಗಿ 20 ಓವರ್​ಗಳ ಅಂತ್ಯಕ್ಕೆ ಟೀಮ್​ ಇಂಡಿಯಾ 4 ವಿಕೆಟ್​ ಕಳೆದುಕೊಂಡು 235 ರನ್​ಗಳ ಬಿಗ್​ ಸ್ಕೋರ್​ ಕಲೆಹಾಕಿತು.
ಚೇಸಿಂಗ್​ಗಿಳಿದ ಆಸಿಸ್​​ಗೆ ಶಾಕ್​​ ಕೊಟ್ಟ ಬಿಷ್ನೋಯ್​.!
236 ರನ್​ಗಳ ಬಿಗ್​ ಟಾರ್ಗೆಟ್​ ಚೇಸ್​ಗಿಳಿದ ಆಸಿಸ್​ಗೆ ರವಿ ಬಿಷ್ನೋಯ್​ ಶಾಕ್​ ನೀಡಿದ್ರು. ಬಿಷ್ನೋಯ್​ ಮ್ಯಾಜಿಕ್​ಗೆ ಮ್ಯಾಥ್ಯೂ ಶಾರ್ಟ್​ ಕ್ಲೀನ್​ ಬೋಲ್ಡ್​ ಆದ್ರು. ಬಳಿಕ ಕಣಕ್ಕಿಳಿದ ಕಳೆದ ಪಂದ್ಯದ ಶತಕ ವೀರ ಜೋಸ್​ ಇಂಗ್ಲಿಸ್​ಗೂ, ಬಿಷ್ನೋಯ್​ ಪೆವಿಲಿಯನ್​ ದಾರಿ ತೋರಿಸಿದ್ರು.
ಅಕ್ಷರ್​ ಪಟೇಲ್​ ಮೋಡಿಗೆ ಗ್ಲೇನ್​ ಮ್ಯಾಕ್ಸ್​ವೆಲ್​​​ ಆಟ ಅಂತ್ಯವಾಯ್ತು. ಸ್ಟೀವ್​ ಸ್ಮಿತ್​ ಆಟಕ್ಕೆ ಪ್ರಸಿದ್ಧ್ ಕೃಷ್ಣ ಬ್ರೇಕ್​ ಹಾಕಿದ್ರು. ಆದ್ರೆ, ಆ ಬಳಿಕ ಜೊತೆಯಾಟದ ಟಿಮ್​ ಡೇವಿಡ್​, ಮಾರ್ಕಸ್​ ಸ್ಟೋಯಿನಿಸ್​​ ಟೀಮ್​ ಇಂಡಿಯಾ ಬೌಲರ್​ಗಳನ್ನ ಕಾಡಿದ್ರು.
/newsfirstlive-kannada/media/post_attachments/wp-content/uploads/2023/11/ISHAN_KISHAN.jpg)
ಅಂತಿಮವಾಗಿ ಈ ಜೊತೆಯಾಟಕ್ಕೆ 13.3ನೇ ಓವರ್​ನಲ್ಲಿ ರವಿ ಬಿಷ್ನೋಯ್​ ಬ್ರೇಕ್​ ಹಾಕಿದ್ರು. ಅಬ್ಬರದ ಆಟವಾಡಿದ ಟಿಮ್​ ಡೇವಿಡ್​, 37 ರನ್​ಗಳಿಸಿ ಔಟಾದ್ರು. ಸ್ಟೋಯಿನಿಸ್ ಆಟ 45 ರನ್​ಗಳಿಗೆ ಅಂತ್ಯವಾಯ್ತು. ಆ ಬಳಿಕ ಕಣಕ್ಕಿಳಿದ ಶಾನ್ ಅಬಾಟ್​​ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು.
ನಥನ್​ ಎಲ್ಲೀಸ್​ ಹಾಗೂ ಆ್ಯಡಂ ಜಂಪಾಗೆ ಕ್ರಿಸ್​ನಲ್ಲಿ ನಿಲ್ಲಲು ಟೀಮ್​ ಇಂಡಿಯನ್ಸ್​ ಅವಕಾಶವನ್ನ ನೀಡಲಿಲ್ಲ. ನಾಯಕ ಮ್ಯಾಥ್ಯೂವೇಡ್​ ಕೊನೆಯವರೆಗೆ ಹೋರಾಡಿದ್ರೂ ಗೆಲುವಿನ ದಡ ಸೇರಿಸುವಲ್ಲಿ ಫೇಲ್​ ಆದ್ರು. 20 ಓವರ್​ಗಳ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡ ಆಸಿಸ್​, ಕೇವಲ 191 ರನ್​ಗಳಿಸಿತು. 44 ರನ್​ಗಳ ಗೆಲುವಿನೊಂದಿಗೆ ಟೀಮ್​ ಇಂಡಿಯಾ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us