newsfirstkannada.com

ಸತತ ಮೂರು ವಿಶ್ವಕಪ್​ನಲ್ಲೂ ಸೇಮ್ ಪ್ರಾಬ್ಲಂ; ಈ ಬಾರಿಯ ಟೂರ್ನಿಯಲ್ಲಾದ್ರೂ ಟೀಮ್ ಇಂಡಿಯಾಗೆ ಪರಿಹಾರ ಸಿಗುತ್ತಾ?

Share :

01-07-2023

    ಕಾಡುತ್ತಿದೆ ಟೀಮ್ ಇಂಡಿಯಾಕ್ಕೆ ಶ್ರೇಯಸ್ ಅಲಭ್ಯತೆ

    4ನೇ ಕ್ರಮಾಂಕದ ಸಮಸ್ಯೆಗೆ ಸಿಲುಕಿದ ಟೀಮ್ ಇಂಡಿಯಾ

    ಯಾರು​ ಆಗ್ತಾರೆ ಟೀಮ್ ಇಂಡಿಯಾ ಕಗ್ಗಂಟ್ಟಿಗೆ ಉತ್ತರ..?

ಟೀಮ್ ಇಂಡಿಯಾದಲ್ಲಿನ ಪ್ರತಿ ಸ್ಲಾಟ್​​ಗೆ ಪರಿಹಾರ ಸಿಕ್ಕಿದ್ರೂ, ಕ್ರೂಶಿಯಲ್ ಟೈಮ್​​ನಲ್ಲಿ ಕೈ ಕೊಡುತ್ತೆ. ಈಗ ಮತ್ತೆ ಅದೇ ಸ್ಲಾಟ್​​ ಟೀಮ್ ಇಂಡಿಯಾಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದು ಮತ್ತೆ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಮುಳ್ಳಾಗೋದು ಕನ್ಫರ್ಮ್. ಅಂದ್ಹಾಗೆ ಆ ಸ್ಲಾಟ್​ ಯಾವುದು..? ಆ ಸ್ಲಾಟ್​ಗೂ ವಿಶ್ವಕಪ್​​ಗೂ ಇರೋ ನಂಟೇನು?

ಟೀಮ್ ಇಂಡಿಯಾ ಅಂದ್ರೆನೇ ಸಮಸ್ಯೆಗಳ ಆಗರ. ಒಂದಿಲ್ಲೊಂದು ಸಮಸ್ಯೆಯ ಸುಳಿಗೆ ಸಿಲುಕಿ ನಲುಗುವ ಟೀಮ್ ಇಂಡಿಯಾಗೆ, ಈಗ ಮತ್ತದೇ ಸಮಸ್ಯೆ ಕಂಗ್ಗಂಟಾಗಿದೆ. ಆ ಸಮಸ್ಯೆಯೇ ನಂ.4 ಸ್ಲಾಟ್.

ಟೀಮ್ ಇಂಡಿಯಾಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿದ್ರೂ, ಈ 4 ಸ್ಲಾಟ್​​ಗೆ ಮಾತ್ರ ಪರಿಹಾರನೇ ಸಿಕ್ಕಿಲ್ಲ. ಪರಿಹಾರ ಸಿಕ್ತು ಎಂದಾಕ್ಷಣ ಮತ್ತದೇ ಸಮಸ್ಯೆ ವಿಶ್ವಕಪ್​​​ ವೇಳೆಗೆ ಉಲ್ಬಣಗೊಂಡು ವಿಶ್ವಕಪ್​ ಕಿರೀಟದ ಕನಸಿಗೆ ಕೊಳ್ಳಿ ಇಡುತ್ತೆ. ಈ ಸಲನೂ ಇದೇ ರಿಪೀಟ್ ಆಗ್ತಿದೆ. ಇದಕ್ಕೆಲ್ಲಾ ಕಾರಣ 4ನೇ ಸ್ಲಾಟ್​​ನ ಸಕ್ಸಸ್​​ಫುಲ್​​ ಪ್ಲೇಯರ್ ಶ್ರೇಯಸ್​.

ವಿಶ್ವಕಪ್​ಗಳಲ್ಲಿ 4ನೇ ಕ್ರಮಾಂಕವೇ ಭಾರತಕ್ಕೆ ಥ್ರೆಟ್​..!

ಟೀಮ್ ಇಂಡಿಯಾಗೆ ಉತ್ತರ ಇಲ್ಲದ ಪ್ರಶ್ನೆ ಅಂದ್ರೆ 4ನೇ ಕ್ರಮಾಂಕ ಅನ್ನೋದನ್ನ ಸ್ಪಷ್ಟವಾಗಿ ಹೇಳಬಹುದು. 2019ರ ವಿಶ್ವಕಪ್​​ ಬಳಿಕ ಟೀಮ್ ಇಂಡಿಯಾದ 4ರ ಸಮಸ್ಯೆಗೆ ಶ್ರೇಯಸ್ ಅಯ್ಯರ್​​ ಎಂಬ ಉತ್ತರ ಸಿಕ್ಕಿತ್ತು. ಸಾಲಿಡ್ ಬ್ಯಾಟಿಂಗ್ ಮಾಡುವ ಮೂಲಕ 4ರ ಕಗ್ಗಂಟ್ಟಿಗೆ ಉತ್ತರವಾಗಿದ್ದರು. ಆದ್ರೀಗ ಮತ್ತೆ ವಿಶ್ವಕಪ್​ ಸಮಯದಲ್ಲೇ ಇಂಜುರಿಗೆ ತುತ್ತಾಗಿರೋ ಶ್ರೇಯಸ್​ ಮತ್ತೆ ವಿಶ್ವಕಪ್ ಟೂರ್ನಿಗೆ ಲಭ್ಯರಾಗೋದು ಅನುಮಾನ. ಇದೇ ಏಕದಿನ ವಿಶ್ವಕಪ್​ನಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ.

2019ರ ಏಕದಿನ ವಿಶ್ವಕಪ್​ನಲ್ಲೂ ಕಾಡಿತ್ತು 4ರ ಕಗ್ಗಂಟ್ಟು.!

ಟೀಮ್ ಇಂಡಿಯಾಗೆ ಈ 4ರ ಸಮಸ್ಯೆ, ಇಂದು ನಿನ್ನೆಯದಲ್ಲ. ಬರೋಬ್ಬರಿ 5 ವರ್ಷಗಳ ಸಮಸ್ಯೆ. ಈ ಸಮಸ್ಯೆಗೆ ಟೀಮ್ ಇಂಡಿಯಾ ಬೆಲೆ ತೆತ್ತಿದ್ದು ಬರೋಬ್ಬರಿ 3 ವಿಶ್ವಕಪ್​ಗಳು.

ಹೌದು! 2019ರ ಏಕದಿನ ವಿಶ್ವಕಪ್​ನಲ್ಲೂ ಟೀಮ್ ಇಂಡಿಯಾಗೆ 4ನೇ ಕ್ರಮಾಂಕದ ಸಮಸ್ಯೆ ಕಾಡಿತ್ತು. ಅಂಬಾಟಿ ರಾಯುಡು, ಅಜಿಂಕ್ಯಾ ರಹಾನೆಯ ಹೊರತಾಗಿ ವಿಜಯ್​ ಶಂಕರ್​ಗೆ ಮಣೆ ಹಾಕಿದ್ದ ಬಿಸಿಸಿಐ, ಇನ್ನಿಲ್ಲದ ಸಮಸ್ಯೆ ಎದುರಿಸಿತ್ತು. ಪರಿಣಾಮ ವಿಶ್ವಕಪ್​ ಗೆಲುವಿನ ಕನಸು ಚಿದ್ರವಾಗಿತ್ತು. ಇದಿಷ್ಟೇ ಅಲ್ಲ, ನಂತರದ 2 ವಿಶ್ವಕಪ್​ಗಳಲ್ಲೂ ಟೀಮ್ ಇಂಡಿಯಾಗೆ 4ರದ್ದೇ ಸಮಸ್ಯೆಯಾಗಿತ್ತು.

2021, 2022ರ ಟಿ20 ವಿಶ್ವಕಪ್​ನಲ್ಲೂ ಸೇಮ್ ಪ್ರಾಬ್ಲಂ..!

ಹೌದು! 2021 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ನೋಡೋಕೆ ಬಲಾಢ್ಯವಾಗೇ ಕಾಣ್ತಿತ್ತು. ಆದ್ರೆ, ಇಂಗ್ಲೆಂಡ್ ಸರಣಿ ವೇಳೆ ಭುಜದ ಇಂಜುರಿಗೆ ತುತ್ತಾದ ಶ್ರೇಯಸ್​, ಟಿ20 ವಿಶ್ವಕಪ್ ರೇಸ್​ನಿಂದಲೇ ಹೊರ ಬೀಳಬೇಕಾಯ್ತು. ಇದರಿಂದ 4ನೇ ಕ್ರಮಾಂಕದ ಸಮಸ್ಯೆಗೆ ಸಿಲುಕಿದ ಟೀಮ್ ಇಂಡಿಯಾ, ಸೂರ್ಯಕುಮಾರ್ ಹಾಗೂ ಇಶಾನ್ ಕಿಶನ್​ಗೆ ಮಣೆಹಾಕಿತ್ತು. ಟೂರ್ನಿಯಲ್ಲಿ ಅಲ್ಲೊಂದು ಚಾನ್ಸ್, ಇಲ್ಲೊಂದು ಚಾನ್ಸ್​ ನೀಡಿದ ಪರಿಣಾಮ ಲೀಗ್​​​​ ಸ್ಟೇಜ್​ನಿಂದಲೇ ಔಟಾಗಿತ್ತು.

ಇಂಥದ್ದೆ ಸಮಸ್ಯೆ 2022ರ ಟಿ20 ವಿಶ್ವಕಪ್​ನಲ್ಲೂ ಮುಂದುವರಿದಿತ್ತು. ಈ ವಿಶ್ವಕಪ್​​ನಲ್ಲಿ ಸೂರ್ಯಕುಮಾರ್​ ಕೊನೆಯಲ್ಲಿ ಅಬ್ಬರಿಸಿದ್ದರು. ನಿರ್ಣಾಯಕ ಪಂದ್ಯಗಳಲ್ಲಿ ಕೈಕೊಟ್ಟಿದ್ದರು. ಪರಿಣಾಮ ಸೆಮೀಸ್​​ನಿಂದ ಹೊರಬಿತ್ತು. ಆದ್ರೀಗ ಇಂಥದ್ದೇ ಸಮಸ್ಯೆ ಟೀಮ್ ಇಂಡಿಯಾಗೆ ಎದುರಾಗ್ತಿದೆ.

ಈ ಏಕದಿನ ವಿಶ್ವಕಪ್​​ನಲ್ಲಿ ಸಿಗುತ್ತಾ ಸೂಕ್ತ ಪರಿಹಾರ..?

ಮತ್ತದೇ ಸಮಸ್ಯೆಗೆ ಸಿಲುಕಿರೋ ಟೀಮ್ ಇಂಡಿಯಾ, ಮತ್ತೆ 4ಮನೇ ಕ್ರಮಾಂಕದ ಕಗ್ಗಂಟ್ಟಿನ ಉತ್ತರ ಹುಡುಕುತ್ತಿದೆ. ಈಗಾಗಲೇ ಈ ಸ್ಲಾಟ್​ನಲ್ಲಿ ಬ್ಯಾಟ್​ ಬೀಸಿರುವ ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಕೆ.ಎಲ್.ರಾಹುಲ್ ಸಕ್ಸಸ್​ ಅನ್ನೇ ಕಂಡಿಲ್ಲ. ಹೀಗಾಗಿ ಬಿಗ್​ಬಾಸ್​ಗಳಿಗೆ ಬಿಗ್ ಟೆನ್ಶನ್​ ಆಗಿ ಮಾರ್ಪಟ್ಟಿದೆ.

4ನೇ ಕ್ರಮಾಂಕದ ಆಟಗಾರರ ಪ್ರದರ್ಶನ

ಯಾಕಂದ್ರೆ, 4ನೇ ಕ್ರಮಾಂಕದಲ್ಲಿ ಆಡಿರೋ ಸೂರ್ಯಕುಮಾರ್ ಯಾದವ್ 5 ಪಂದ್ಯಗಳಿಂದ 6ರ ಸರಾಸರಿಯಲ್ಲಿ ಜಸ್ಟ್​ 30 ರನ್ ಗಳಿಸಿದ್ರೆ. 6 ಪಂದ್ಯಗಳನ್ನು ಆಡಿರುವ ಇಶಾನ್ ಕಿಶನ್ 21.20 ಸರಾಸರಿಯಲ್ಲಿ 106 ರನ್ ಗಳಿಸಿದ್ದಾರೆ. ಇವರ ಬಳಿಕ 7 ಪಂದ್ಯಗಳನ್ನು ಆಡಿರುವ ಕೆ.ಎಲ್.ರಾಹುಲ್ 40.16ರ ಸರಾಸರಿಯಲ್ಲಿ 241 ರನ್ ಗಳಿಸಿದ್ದಾರೆ. ಆ ಮೂಲಕ 4ನೇ ಸ್ಲಾಟ್ ತುಂಬುವ ಭರವಸೆ ಮೂಡಿಸಿದ್ದಾರೆ.

ಆದ್ರೆ, ಇಂಜುರಿಯಿಂದ ಬಳಲುತ್ತಿರುವ ಕೆ.ಎಲ್.ರಾಹುಲ್, 5ನೇ ಕ್ರಮಾಂಕದಲ್ಲಿ ಕ್ರೂಶಿಯಲ್ ಇನ್ನಿಂಗ್ಸ್​ ಆಡಿದ್ದಾರೆ. ಹೀಗಾಗಿ 4ನೇ ಕ್ರಮಾಂಕಕ್ಕೆ ಬಿಸಿಸಿಐ ಯಾರನ್ನ ಆಯ್ಕೆ ಮಾಡುತ್ತೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಯಾಕಂದ್ರೆ, 4ನೇ ಕ್ರಮಾಂಕ ಮೋಸ್ಟ್​ ಕ್ರೂಶಿಯಲ್ ರೋಲ್​.. ಟಾಪ್ ಆರ್ಡರ್​ ವೈಫಲ್ಯದ ವೇಳೆ ತಡೆಗೊಡೆಯಾಗಿ ನಿಲ್ಲಬೇಕಾದ ಜವಾಬ್ದಾರಿಯ ಜೊತೆಗೆ ತಂಡವನ್ನ ಗೆಲುವಿನ ದಡ ಸೇರಿಸುವ ಹೊಣೆ ಈ 4ನೇ ಕ್ರಮಾಂಕದ ಬ್ಯಾಟರ್​ಗಳೇ ಹೊರಬೇಕಾಗುತ್ತೆ. ಈ ಕ್ರಮಾಂಕದ ಸಕ್ಸಸ್​ ಮೇಲೆ ತಂಡದ ಭವಿಷ್ಯ ಅಡಗಿರುತ್ತೆ. ಹೀಗಾಗಿ ಕಗ್ಗಂಟ್ಟಿನ ಉತ್ತರಕ್ಕೆ ಸ್ಪಷ್ಟ ಉತ್ತರ ಕಂಡುಕೊಳ್ಳಬೇಕಾದ ಅವಶ್ಯಕತೆ ಟೀಮ್ ಇಂಡಿಯಾಗೆ ಇದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸತತ ಮೂರು ವಿಶ್ವಕಪ್​ನಲ್ಲೂ ಸೇಮ್ ಪ್ರಾಬ್ಲಂ; ಈ ಬಾರಿಯ ಟೂರ್ನಿಯಲ್ಲಾದ್ರೂ ಟೀಮ್ ಇಂಡಿಯಾಗೆ ಪರಿಹಾರ ಸಿಗುತ್ತಾ?

https://newsfirstlive.com/wp-content/uploads/2023/07/RAHUL_ISHAN_SURYA.jpg

Load More