25 ವರ್ಷ ಪ್ರತಿ ತಿಂಗಳು 5.5 ಲಕ್ಷ ರೂಪಾಯಿ ಗೆದ್ದಿರುವ ಭಾರತೀಯ
25 ವರ್ಷ ಈ ವ್ಯಕ್ತಿ ಏನೂ ಕೆಲಸ ಮಾಡದಿದ್ರೂ ಪ್ರತಿ ತಿಂಗಳು ದುಡ್ಡು
ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡುವ ಅದಿಲ್ ಖಾನ್
ನಿಜಕ್ಕೂ ಅದೃಷ್ಟ, ಲಾಟರಿ ಹೊಡೆದ್ರೆ ಹಿಂಗಿರಬೇಕು. ಒಂದಲ್ಲ, ಎರಡಲ್ಲ ಬರೋಬ್ಬರಿ 25 ವರ್ಷ ಈ ವ್ಯಕ್ತಿ ಏನೂ ಕೆಲಸ ಮಾಡಂಗಿಲ್ಲ. ಇವನಿಗೆ ಪ್ರತಿ ತಿಂಗಳು 5.5 ಲಕ್ಷ ರೂಪಾಯಿ ಹಣ ಸಿಗುತ್ತೆ. ಅಯ್ಯೋ ಯಾವುದಪ್ಪಾ ಇದು ಬಂಪರ್ ಆಫರ್ ಅಂತಾ ತಲೆಕೆಡಿಸಿಕೊಂಡ್ರಾ. ಆಶ್ಚರ್ಯ ಆದ್ರೂ ಇದು ನಿಜ. ದುಬೈನಲ್ಲಿ ಹೊಸದೊಂದು ಮೆಗಾ ಪ್ರೈಜ್ ಅವಾರ್ಡ್ ಘೋಷಣೆಯಾಗಿದೆ. ಅದರಲ್ಲಿ ಉತ್ತರಪ್ರದೇಶ ಮೂಲದ ಮೊಹಮ್ಮದ್ ಅದಿಲ್ ಖಾನ್ ಮೊಟ್ಟ ಮೊದಲ ಅವಾರ್ಡ್ ವಿನ್ನರ್ ಆಗಿದ್ದಾರೆ. ಅಂದ್ರೆ ಮೊಹಮ್ಮದ್ ಅದಿಲ್ ಖಾನ್ ಮುಂದಿನ 25 ವರ್ಷ ಏನೂ ಮಾಡದೇ ಸುಮ್ನೆ ಇದ್ರೂ ಪ್ರತಿ ತಿಂಗಳು 5.5 ಲಕ್ಷ ರೂಪಾಯಿ ಪಡೆಯಲಿದ್ದಾರೆ.
ಭಾರತೀಯ ಮೂಲದ ಮೊಹಮ್ಮದ್ ಅದಿಲ್ ಖಾನ್ ಸದ್ಯ ದುಬೈನ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಗಳ ಒಳಾಂಗಣ ವಿನ್ಯಾಸ ಸಲಹೆಗಾರನಾಗಿರುವ ಮೊಹಮ್ಮದ್ ಅದಿಲ್ ಖಾನ್, ದುಬೈನಲ್ಲಿ ಪರಿಚಯಿಸಿರುವ ಮೊಟ್ಟ ಮೊದಲ ಮೆಗಾ ಪ್ರೈಜ್ ಅವಾರ್ಡ್‌ಗೆ ಆಯ್ಕೆಯಾಗಿದ್ದಾರೆ. ಈ ಬಹುಮಾನದ ಪ್ರಕಾರ ಅದಿಲ್ ಖಾನ್, ದುಬೈನ Dh25,000 ಅಂದ್ರೆ ಭಾರತದ ರೂಪಾಯಿ ಪ್ರಕಾರ 5,59,822 ರೂಪಾಯಿಗಳನ್ನು ಪ್ರತಿ ತಿಂಗಳು ಮುಂದಿನ 25 ವರ್ಷಗಳ ಕಾಲ ಪಡೆಯಲಿದ್ದಾರೆ.
ಮೊಹಮ್ಮದ್ ಅದಿಲ್ ಖಾನ್ ಉತ್ತರ ಪ್ರದೇಶ ಮೂಲದವರಾಗಿದ್ದು, ಬಹುಮಾನ ಗೆದ್ದಾಗ ಬಹಳಷ್ಟು ಆಶ್ಚರ್ಯವಾಯಿತು. ನನ್ನ ಫ್ಯಾಮಿಲಿ ಸದಸ್ಯರಿಗೆ ಈ ವಿಷಯ ತಿಳಿಸಿದೆ. ಆಗ ಅವರೆಲ್ಲಾ ನಂಬಲೇ ಇಲ್ಲ. ಈ ಸುದ್ದಿಯನ್ನ ಮತ್ತೊಮ್ಮೆ ಖಚಿತಪಡಿಸಿಕೋ ಎಂದು ಸಲಹೆ ನೀಡಿದರು. ಬಹಳ ಕಷ್ಟದ ಸಮಯದಲ್ಲಿ ಈ ಬಹುಮಾನ ನನಗೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ನಾನು ನನ್ನ ಮನೆಗೆ ಆಧಾರಸ್ತಂಭ. ಕೊರೊನಾ ಕಾಲದಲ್ಲಿ ನನ್ನ ತಮ್ಮ ಸಾವನ್ನಪ್ಪಿದ್ದು, ನನ್ನ ತಂದೆ, ತಾಯಿಯನ್ನು ಕಷ್ಟ ಪಟ್ಟು ನೋಡಿಕೊಳ್ಳುತ್ತಿದ್ದೇನೆ. ನನಗೆ ವಯಸ್ಸಾದ ತಂದೆ, ತಾಯಂದಿರು, 5 ವರ್ಷದ ಹೆಣ್ಣು ಮಗಳು ಇದ್ದಾಳೆ. ಪ್ರತಿ ತಿಂಗಳ 5.5 ಲಕ್ಷ ರೂಪಾಯಿ ಬಹುಮಾನ ಗೆದ್ದಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ದುಬೈನಲ್ಲಿ ಕಳೆದ 2 ತಿಂಗಳಿಂದಷ್ಟೇ ಫಾಸ್ಟ್ 5 ಮೆಗಾ ಪ್ರೈಜ್ ವಿನ್ನರ್ ಆರಂಭವಾಗಿದೆ. ಈ ಕಂಪನಿ ಕೆಲವು ಅದೃಷ್ಟವಂತರನ್ನ ಆಯ್ಕೆ ಮಾಡಿದ್ದು, ಅದರಲ್ಲಿ ಮೊಹಮ್ಮದ್ ಅದಿಲ್ ಖಾನ್ ಸೆಲೆಕ್ಟ್ ಆಗಿದ್ದಾರೆ. 25 ವರ್ಷಕ್ಕೆ ಪ್ರತಿ ತಿಂಗಳು 5.5 ಲಕ್ಷ ರೂಪಾಯಿ ಗೆದ್ದಿರುವ ಅದಿಲ್ ಖಾನ್ ಸಂಭ್ರಮ ಆಚರಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ