ವಿಶ್ವಕಪ್ನಲ್ಲಿ ಮುಳುವಾಗುತ್ತಾ ಈ ವಿಕ್ನೇಸ್
ಏಕದಿನ ವಿಶ್ವಕಪ್ನಲ್ಲಿ ಎದುರಾಗ್ತಿದೆ ಬಿಗ್ ಚಾಲೆಂಜ್
10ಕ್ಕೂ ಹೆಚ್ಚು ಎಡಗೈ ವೇಗಿಗಳಿಗೆ ಭಾರತವೇ ಟಾರ್ಗೆಟ್
ಟೀಮ್ ಇಂಡಿಯಾಗೆ ಒಂದಿಲ್ಲೊಂದು ಪ್ರಾಬ್ಲಂ ಕಾಡ್ತಾನೇ ಇದೆ. ಬ್ಯಾಟಿಂಗ್, ಬೌಲಿಂಗ್, ಕಾಂಬಿನೆಷನ್ ಹೀಗೆ ಹಲವು ಸಮಸ್ಯೆಗಳಿವೆ. ಇದೆಲ್ಲದರ ಅಬ್ಬರದಲ್ಲಿ ಎಡಗೈ ಕಂಟಕ ಮರೆತೆ ಹೋಗಿದೆ. ಈ ವೀಕ್ನೆಸ್ಗೆ ಮದ್ದು ಹುಡುಕಿಕೊಳ್ಳದಿದ್ರೆ, ಎಡಗೈ ವೇಗಿಗಳೇ ಟೀಮ್ ಇಂಡಿಯಾ ಪಾಲಿಗೆ ವಿಲನ್ಗಳಾಗಲಿದ್ದಾರೆ.
ಕ್ರಿಕೆಟ್ನಲ್ಲಿ ಲೆಫ್ಟ್ ಆರ್ಮ್ ಬೌಲರ್ಸ್ VS ರೆಟ್ ಹ್ಯಾಂಡ್ ಬ್ಯಾಟ್ಸ್ಮನ್ಗಳ ಕಾಳಗ ನೋಡೋದೆ ಒಂದು ಮಜಾ. ಲೆಫ್ಟಿ ಅಟ್ಯಾಕರ್ಗಳ ದಾಳಿಗೆ ರೆಟ್ ಹ್ಯಾಂಡ್ ಬ್ಯಾಟ್ಸ್ಮನ್ಸ್ ಕನಸಲ್ಲೂ ಬೆಚ್ಚಿ ಬೀಳ್ತಾರೆ. ಈ ವಿಚಾರದಲ್ಲಿ ಟೀಮ್ ಇಂಡಿಯಾ ಹೊರತಾಗಿಲ್ಲ.
ಎಡಗೈ ವೇಗಿಗಳ ಎದುರು ಟೀಮ್ ಇಂಡಿಯಾ ಬ್ಯಾಟರ್ಗಳ ಪರದಾಟ ಓಪನ್ ಸಿಕ್ರೇಟ್. ಎಡಗೈ ಘಾತುಕ ವೇಗಿಗಳಿಗೆ ಸುಲಭದ ತುತ್ತಾಗುವ ಟೀಮ್ ಇಂಡಿಯಾ, 2022ರ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮುಗ್ಗರಿಸಿತ್ತು. ಇದೀಗ ಇದೇ ಥ್ರೆಟ್ ಏಕದಿನ ವಿಶ್ವಕಪ್ನಲ್ಲೂ ಟೀಮ್ ಇಂಡಿಯಾಗೆ ಎದುರಾಗ್ತಿದೆ.
ಲೆಫ್ಟ್ ಹ್ಯಾಂಡ್ ಪೇಸರ್ಸ್ಗೆ ಟೀಮ್ ಇಂಡಿಯಾ ರೆಡಿನಾ….?
ಲೆಫ್ಟಿಗಳ ಎದುರು ಭಾರತೀಯ ಬ್ಯಾಟ್ಸ್ಮನ್ಗಳ ಫ್ಲಾಫ್ ಶೋ, ವಿಶ್ವ ಕ್ರಿಕೆಟ್ ಮುಂದೆ ಪದೇ ಪದೇ ಜೋಕರ್ ಅನ್ನಾಗಿ ಮಾಡ್ತಿದೆ. ಇದೀಗ ಇದೇ ಲೆಫ್ಟಿಗಳ ಸವಾಲು ಏಕದಿನ ವಿಶ್ವಕಪ್ನಲ್ಲಿ ಮತ್ತೆ ಎದುರಾಗುತ್ತಿದೆ. ಅದು ಕೂಡ ಒಂದಿಬ್ಬರಿಂದ ಅಲ್ಲ. ಬರೋಬ್ಬರಿ 10 ಮಂದಿ ಎಡಗೈ ವೇಗಿಗಳು ಟೀಮ್ ಇಂಡಿಯಾ ಮೇಲೆ ಮುಗಿ ಬೀಳೋಕೆ ಸಜ್ಜಾಗಿದ್ದಾರೆ.
ಪಾಕ್ ಬತ್ತಳಿಕೆಯಲ್ಲಿ ಶಾಹೀನ್ ಶಾ ಆಫ್ರಿದಿ
ಟಿ20 ವಿಶ್ವಕಪ್ ಹಾಗೂ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾವನ್ನ ಕಂಗೆಡಿಸಿದ್ದ ಶಾಹೀನ್ ಶಾ, ಮುಂದಿನ ಎರಡು ಮೆಗಾ ಟೂರ್ನಿಗಳ ಮೈನ್ ವಿಲನ್. ದಿ ಹಂಡ್ರೆಡ್ ಲೀಗ್ನಲ್ಲಿ ಘಾತುಕ ವೇಗದಿಂದ ಎದುರಾಳಿಯನ್ನ ಚಿಂದಿ ಉಡಾಯಿಸ್ತಿರೋ ಶಾಹೀನ್, ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳನ್ನ ಕಾಡೋಕೆ ಸಜ್ಜಾಗಿದ್ದಾರೆ.
The moment we have all been waiting for. @Jaspritbumrah93 like we have always known him. 🔥🔥 #TeamIndia pic.twitter.com/uyIzm2lcI9
— BCCI (@BCCI) August 16, 2023
ಮಿಸೈಲ್ ಮಿಚೆಲ್ ಸ್ಟಾರ್ಕ್ ವೇಗಕ್ಕೆ ಇದೆಯಾ ಪ್ಲಾನ್?
ಆಸ್ಟ್ರೇಲಿಯಾ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಟೀಮ್ ಇಂಡಿಯಾಗೆ ಥ್ರೆಟ್ ಆಗ್ತಾರೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಯಾರ್ಕರ್ ಎಸೆತಗಳಿಂದ ನಿದ್ದೆಗೆಡಿಸುವ ಈ ಸ್ಟಾರ್ಕ್, ಮಿಸೈಲ್ನಂಥಹ ಎಸೆತಗಳಿಂದಲೆ ಎದುರಾಳಿ ಗೇಮ್ಪ್ಲಾನ್ ಉಡೀಸ್ ಮಾಡಬಲ್ಲರು.
ಟ್ರೆಂಟ್ ಬೋಲ್ಟ್ ಸ್ವಿಂಗ್ಗೆ ಉತ್ತರ ಏನು ?
ಸ್ಟಾರ್ ವೇಗಿ ಟ್ರೆಂಟ್ ಬೋಲ್ಟ್, ನ್ಯೂಜಿಲೆಂಡ್ನ ಮೇನ್ ವೆಪನ್. ಇಂಡಿಯನ್ ಕಂಡೀಷನ್ಸ್ ಬಗ್ಗೆ ಚೆನ್ನಾಗಿ ಅರಿತಿರುವ ಬೋಲ್ಟ್, ನಿಜಕ್ಕೂ ಟೀಮ್ ಇಂಡಿಯಾಗೆ ಕಂಟಕ. ಲೈನ್ ಆ್ಯಂಡ್ ಲೆನ್ತ್ ಜೊತೆ ಜೊತೆಗೆ ವೇರಿಯೆಷನ್ ಎಸೆತಗಳನ್ನ ಎಸೆಯಬಲ್ಲ ಬೋಲ್ಟ್, ಬ್ಯಾಟ್ಸ್ಮನ್ಗಳ ಪಾಲಿಗೆ ಅಕ್ಷರಶಃ ಯಮ.!
ಇಂಗ್ಲೆಂಡ್ನ ಟಾಲ್ ಮ್ಯಾನ್ ರೀಸ್ ಟಾಪ್ಲಿಯನ್ನ ಮರೆಯುವಂತಿಲ್ಲ. ಎರಡೂ ಕಡೆ ಸ್ವಿಂಗ್ ಮಾಡಬಲ್ಲ ಟಾಪ್ಲಿ, ಯಾರ್ಕರ್ ಹಾಕೋದ್ರಲ್ಲಿ ಪಂಟರ್.! ಹೀಗಾಗಿ ಭಾರತದ ಬ್ಯಾಟಿಂಗ್ ಆರ್ಡರ್ಗೆ ಟಾಪ್ಲಿ ನಿಜಕ್ಕೂ ಸವಾಲಾಗಬಲ್ಲರು.
ಅಫ್ಘನ್ ಪಡೆಯ ವೆಪನ್ ಫಜಲ್ ಫಾರೂಕಿ..!
ಇಷ್ಟು ದಿನ ಅಫ್ಗಾನ್ ಸ್ಪಿನ್ನರ್ಗಳು ಮಾತ್ರವೇ ಡೇಂಜರಸ್ ಅನ್ನೋ ಮಾತಿತ್ತು. ಇದೀಗ ಅಫ್ಗಾನ್ ಪಡೆಯಲ್ಲಿ ಫಜಲ್ ಫಾರೂಕಿ ಎಂಬ ಫೈರಿ ಮ್ಯಾನ್ ಇದ್ದಾರೆ. ಸೀಸನ್-16 ಐಪಿಎಲ್ನಲ್ಲಿ ಸನ್ ರೈಸರ್ಸ್ ಕ್ಯಾಂಪ್ನಲ್ಲಿದ್ದ ಈತ, ಬ್ಯಾಟ್ಸ್ಮನ್ಗಳಲ್ಲಿ ಮಕ್ಕರ್ ಮಾಡೋದ್ರಲ್ಲಿ ನಿಸ್ಸೀಮ..
ಐರಿಷ್ ಎಡಗೈ ವೇಗಿ ಜೋಶ್ ಲಿಟ್ಲ್, ಸೌತ್ ಆಫ್ರಿಕಾದ ಮಾರ್ಕೋ ಯಾನ್ಸನ್ ಕೂಡ ಕಬ್ಬಿಣದ ಕಡಲೆಯೇ ಆಗಿದ್ದಾರೆ. ಗುಜರಾತ್ ಪರ ಕಮಾಲ್ ಮಾಡಿದ್ದ ಐರ್ಲೆಂಡ್ನ ಜೋಶ್ ಲಿಟ್ಲ್ರನ್ನ ಕಡಿಮೆಯಾಗಿ ಪರಿಗಣಿಸುವಂತೇ ಇಲ್ಲ. ಬಾಂಗ್ಲಾದ ಮುಸ್ತಾಫಿಜುರ್ ರಹಮಾನ್, ಸೌತ್ ಆಫ್ರಿಕಾದ ಮತ್ತೊಬ್ಬ ಎಡಗೈ ವೇಗಿ ವೇಯ್ನ್ ಪಾರ್ನೆಲ್ ಹಾಗೂ ನೆದರ್ಲೆಂಡ್ಸ್ ತಂಡದಲ್ಲಿರುವ ಫ್ರೆಡ್ ಕ್ಲಾಸೆನ್ ಟೀಮ್ ಇಂಡಿಯಾಗೆ ಸವಾಲಾಗಲಿದ್ದಾರೆ.
ಎಡಗೈ ವೇಗಿಗಳಿಗೆ ಕೌಂಟರ್ ನೀಡಲು ಇದ್ಯಾ ಪ್ಲಾನ್..?
ಸದ್ಯ ಏಕದಿನ ವಿಶ್ವಕಪ್ ಹೋರಾಟಕ್ಕೆ ಸಜ್ಜಾಗ್ತಿರುವ ತಂಡಗಳಲ್ಲಿ ಎಡಗೈ ವೇಗಿಗಳಿದ್ದಾರೆ. ಇವರೆಲ್ಲರ ಮೇನ್ ಟಾರ್ಗೆಟ್ ಟೀಮ್ ಇಂಡಿಯಾ. ಒಂದ್ಕಡೆ ಎಡಗೈ ವಿಕ್ನೇಸ್ ಎಕ್ಸ್ಪೋಸ್ ಮಾಡಿರುವ ಹಿಟ್ಮ್ಯಾನ್ ಪಡೆ, 12 ವರ್ಷಗಳ ಬಳಿಕ ಏಕದಿನ ವಿಶ್ವ ಕಿರೀಟಕ್ಕೆ ಮುತ್ತಿಡುವ ಕನಸು ಕಾಣ್ತಿದೆ. ಆ ಕನಸು ನನಸಾಗಬೇಕಾದ್ರೆ, ಈ ಎಡಗೈ ವೇಗಿಗಳ ಸಂಹಾರಕ್ಕೆ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಸಜ್ಜಾಗಿರಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ