newsfirstkannada.com

ರೋಹಿತ್​ ಶರ್ಮಾ ಬತ್ತಳಿಕೆಯಲ್ಲಿರೋ ಬ್ರಹ್ಮಾಸ್ತ್ರಗಳು ಇವರೇ.. ಈ ಇಬ್ಬರಲ್ಲಿ ಯಾರ್​ ಆಗ್ತಾರೆ ಮ್ಯಾಚ್ ವಿನ್ನರ್ಸ್?

Share :

09-07-2023

    ರೋಹಿತ್​ ಶರ್ಮಾಗೆ ಸೂಪರ್ ಸ್ಟಾರ್​​ ಆಲ್​ರೌಂಡರ್ಸ್ ಬಲ..!

    ಆಲ್​ರೌಂಡರ್​​ಗಳಿಂದ ಟೀಮ್​ ಇಂಡಿಯಾಕ್ಕೆ ಮೂರು ವಿಶ್ವಕಪ್

    ವಿಶ್ವಕಪ್​ ಟೂರ್ನಿಗಳಲ್ಲಿ​​ ಆಲ್​​ರೌಂಡರ್​​ಗಳ ಪಾರುಪತ್ಯವೇ ಹೆಚ್ಚು

ಎಲ್ಲ ತಂಡಗಳ ಗುರಿಯೊಂದೇ ಅದು ವಿಶ್ವಕಪ್​ ಗೆಲ್ಲೋದು. ಅದರಲ್ಲೂ ವಿಶ್ವಕಪ್ ಗೆಲ್ಲಬೇಕಾದ್ರೆ, ಆಲ್​​​​​ರೌಂಡರ್​​ಗಳ ಪಾತ್ರ ಮಹತ್ವ ಅನ್ನೋದು ಫ್ರೂವ್ ಕೂಡ ಆಗಿದೆ. ಹೀಗಾಗಿ ಈ ಸಲ ಇಬ್ಬರು ಆಲ್​ರೌಂಡರ್​ಗಳನ್ನ ಹೊಂದಿರುವ ಟೀಮ್ ಇಂಡಿಯಾ, ವಿಶ್ವ ಕಿರೀಟಕ್ಕೆ ಮುತ್ತಿಡುವ ಲೆಕ್ಕಚಾರದಲ್ಲಿದೆ.

ಏಕದಿನ ವಿಶ್ವಕಪ್ ಬ್ಯಾಟಲ್​​ಗೆ ಜಸ್ಟ್​ ಮೂರೇ ತಿಂಗಳು ಬಾಕಿಯಿದೆ. ಈಗಾಗಲೇ ಯಾರು ವಿಶ್ವ ಕಿರೀಟಕ್ಕೆ ಮುತ್ತಿಡ್ತಾರೆ ಎಂಬ ಲೆಕ್ಕಚಾರ ಜೋರಾಗಿದೆ. ಬೌಲಿಂಗ್ ಆ್ಯಂಡ್​​ ಬ್ಯಾಟಿಂಗ್​​​ನಲ್ಲಿ ನೆರವಾಗಬಲ್ಲ ಆಲ್​ರೌಂಡರ್ಸ್​ ಮೇಲಿನ ಎಕ್ಸ್​ಪೆಕ್ಟೇಷನ್ಸ್​ ಡಬಲ್​​​ ಆಗಿದೆ. ಇದಕ್ಕೆ ಕಾರಣ ವಿಶ್ವಕಪ್​ ಟೂರ್ನಿಗಳಲ್ಲಿ​​ ಆಲ್​​ರೌಂಡರ್​​ಗಳ ಪಾರುಪತ್ಯ.

ಇಮ್ರಾನ್​ ಖಾನ್, ಸ್ಟೀವ್​ ವಾ, ಕಪಿಲ್ ದೇವ್, ಮೊಹಿಂದರ್ ಅಮರನಾಥ್, ಸನತ್ ಜಯಸೂರ್ಯ, ಯುವರಾಜ್ ಸಿಂಗ್​, ಬೆನ್ ಸ್ಟೋಕ್ಸ್​ರ ಅತ್ಯದ್ಭುತ ಪ್ರದರ್ಶನ​, ವಿಶ್ವಕಪ್ ಪುಟದಲ್ಲಿ ದಾಖಲಾಗಿದೆ. ಇದೇ ಕಾರಣಕ್ಕೆ ತವರಿನಲ್ಲಿ ಟೀಮ್ ಇಂಡಿಯಾ, ವಿಶ್ವಕಪ್​ ಗೆದ್ದೇ ಗೆಲ್ಲುತ್ತೆ ಎಂಬ ನಂಬಿಕೆಯಲ್ಲಿದೆ. ಇದಕ್ಕೆ ರೀಸನ್ ಸೂಪರ್​ ಸ್ಟಾರ್​ ಆಲ್​ರೌಂಡರ್​​ಗಳಾದ ಹಾರ್ದಿಕ್ ಪಾಂಡ್ಯ & ಜಡೇಜಾ.

ಈ ಇಬ್ಬರಲ್ಲಿ ಯಾರ್​ ಆಗ್ತಾರೆ ಮ್ಯಾಚ್ ವಿನ್ನರ್ಸ್..?

ರೋಹಿತ್ ಬತ್ತಳಿಕೆಯಲ್ಲಿ ಪ್ರಮುಖ ಅಸ್ತ್ರಗಳೇ ಹಾರ್ದಿಕ್ ಪಾಂಡ್ಯ ಆ್ಯಂಡ್ ರವೀಂದ್ರ ಜಡೇಜಾ. ಯಾಕಂದ್ರೆ, ಕಪಿಲ್ ದೇವ್ ಹಾಗೂ ಯುವರಾಜ್ ಸಿಂಗ್ ನಿವೃತ್ತಿಯ ಬಳಿಕ ಟೀಮ್ ಇಂಡಿಯಾಗೆ ಸಿಕ್ಕ ಒನ್​​ ಆಫ್ ದಿ ಬೆಸ್ಟ್​ ಆಲ್​ರೌಂಡರ್ಸ್​ ಇವರು. ಕಪಿಲ್​ದೇವ್ ನಂತರ ಎದುರಾಗಿದ್ದ ವೇಗದ ಬೌಲಿಂಗ್ ಆಲ್​ರೌಂಡರ್​ ಸಮಸ್ಯೆಯನ್ನ ಹಾರ್ದಿಕ್ ನಿಭಾಯಿಸಿದ್ರೆ. ಯುವರಾಜ್ ನಂತರ ಸ್ಪಿನ್ ಆಲ್​ರೌಂಡರ್ ಆಗಿ ಜಡ್ಡು ಯಶಸ್ವಿಯಾಗಿ ನಿಭಾಯಿಸ್ತಿದ್ದಾರೆ.

ಮಿಡಲ್ ಆರ್ಡರ್​ ಆ್ಯಂಡ್ ಲೋವರ್ ಆರ್ಡರ್​ನಲ್ಲಿ ಬ್ಯಾಟ್ ಬೀಸೋ ಇವರು, ಮ್ಯಾಚ್ ಫಿನಿಷರ್, ಪವರ್ ಹಿಟ್ಟರ್​ಗಳಾಗಿ ತಂಡಕ್ಕೆ ನೆರವಾಗಿದ್ದಾರೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್​ನಲ್ಲೂ ಕಮಾಲ್ ಮಾಡೋ ಇವರು ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ ಪಾಲಿನ​ ಟ್ರಂಪ್ ಕಾರ್ಡ್ಸ್​. ಹೀಗಾಗಿ ಈ ರೆಟ್​ ಲೆಫ್ಟ್​ ಕಾಂಬಿನೇಷನ್ ವಿಶ್ವಕಪ್​​​​ನ ರಿಯಲ್ ಮ್ಯಾಚ್ ವಿನ್ನರ್ಸ್.

ವಿಶ್ವಕಪ್​ ಗೆಲುವುಗಳಲ್ಲಿ ಆಲ್​​ರೌಂಡರ್ಸ್​ ಪಾತ್ರ ಮಹತ್ವ!

ಭಾರತ 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆಲ್ಲೋಕೆ ಕಾರಣ ಕಪಿಲ್ ದೇವ್ ಆ್ಯಂಡ್ ಮೊಹಿಂದರ್ ಅಮರನಾಥ್. ಆ ಟೂರ್ನಿಯಲ್ಲಿ ಅಂಡರ್ ಡಾಗ್ಸ್​ ಆಗಿ ಕಣಕ್ಕಿಳಿದು ವಿಶ್ವಕಪ್​​ಗೆ ಮುತ್ತಿಟ್ಟಿದ್ದೇ ಒಂದು ರೋಚಕ. ಈ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ಕಪಿಲ್​ದೇವ್​​​​​​​​ 8 ಪಂದ್ಯಗಳಿಂದ 60.60ರ ಸರಾಸರಿಯಲ್ಲಿ 303 ರನ್ ಹಾಗೂ 12 ವಿಕೆಟ್ ಕಬಳಿಸಿದ್ದರು. ಮತ್ತೊಂದೆಡೆ ಇವರಿಗೆ ಸಾಥ್ ನೀಡಿದ್ದ ಅಮರ್​ನಾಥ್ 8 ಪಂದ್ಯಗಳಿಂದ 237 ರನ್ ಹಾಗೂ 8 ವಿಕೆಟ್ ಕಬಳಿಸಿದ್ದರು. ಪರಿಣಾಮ ಭಾರತ ವಿಶ್ವ ಕಿರೀಟಕ್ಕೆ ಮುತ್ತಿಟ್ಟಿತ್ತು.

ಇದೇ ಅಲ್ಲ, 2007 ಟಿ20 ವಿಶ್ವಕಪ್​, 2011ರ ಎಕದಿನ ವಿಶ್ವಕಪ್​​ನಲ್ಲೂ ಆಲ್​ರೌಂಡರ್​ ಯುವರಾಜ್ ಸಿಂಗ್​ರ ಕೆಚ್ಚೆದೆಯ ಆಟವನ್ನೂ ಮರೆಯಲು ಅಸಾಧ್ಯದ ಮಾತು. ಆದ್ರೀಗ ಟೀಮ್ ಇಂಡಿಯಾದಲ್ಲಿ ಡಿಫರೆಂಟ್ ಶೇಡ್ಸ್​ ಆಫ್ ಆಲ್​ರೌಂಡಗಳಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ವಿಶ್ವಕಪ್ ಗೆಲುವಿನ ಫ್ರಂಟ್ ರನ್ನರ್ ಅಂದ್ರೆ, ತಪ್ಪೇ ಇಲ್ಲ. ಇದಕ್ಕೆ ಕಾರಣ ರವೀಂದ್ರ ಜಡೇಜಾ ಆ್ಯಂಡ್ ಹಾರ್ದಿಕ್ ಪಾಂಡ್ಯ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

2023ರಲ್ಲಿ ಈ ಇಬ್ಬರು ಗೆಲ್ಲಿಸಿಕೊಡ್ತಾರಾ ಏಕದಿನ ವಿಶ್ವಕಪ್..?

ಡೆಫನೆಟ್ಲಿ ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ & ಸರ್​. ಜಡೇಜಾ. ಈ ಹಿಂದಿನ ವಿಶ್ವಕಪ್​ಗಳಲ್ಲಿ ಒಬ್ಬೊಂಟಿ ಆಲ್​ರೌಂಡರ್​​ಗಳಿಂದ ಭಾರತ ವಿಶ್ವಕಪ್​ ಗೆದ್ದಿದೆ. ಆದ್ರೆ, ಈ ಸಲ ಟೀಮ್ ಇಂಡಿಯಾ ಇಬ್ಬರೂ ಸೂಪರ್ ಸ್ಪೆಷಲಿಟಿ ಆಲ್​ರೌಂಡರ್​ಗಳನ್ನ ಹೊಂದಿದೆ. ಒಬ್ಬರು ವೇಗದ ಬೌಲಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲಿ ಚಿಂದಿ ಉಡಾಹಿಸಿದ್ರೆ. ಮತ್ತೊಬ್ಬ ಸ್ಪಿನ್ ಪಿಚ್​ನಲ್ಲಿ ಬ್ಯಾಟ್ಸ್​ಮನ್​​ನ ಗಿರಿಗಿಟ್ಲೆ ಹೊಡೆಸಿ ಬ್ಯಾಟಿಂಗ್​​ನಲ್ಲೂ ಝಲಕ್​​ ತೋರಿಸಿದ್ದಾನೆ. ಈ ಮಾತ್ ಸ್ವತಃ ಅಂಕಿ ಅಂಶಗಳೇ ​ ಹೇಳ್ತಿವೆ.

2019ರ ಏಕದಿನ ವಿಶ್ವಕಪ್​ ನಂತರ ಪಾಂಡ್ಯ, ಜಡೇಜಾ..!

2019ರ ಏಕದಿನ ವಿಶ್ವಕಪ್​ ಬಳಿಕ ಜಡೇಜಾ 21 ಏಕದಿನ ಪಂದ್ಯಗಳಿಂದ 51.75ರ ಸರಾಸರಿಯಲ್ಲಿ 414 ರನ್ ಗಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ 20 ಏಕದಿನ ಪಂದ್ಯಗಳಿಂದ 39.18ರ ಸರಾಸರಿಯಲ್ಲಿ 624 ರನ್ ಕಲೆಹಾಕಿದ್ದಾರೆ. ಇನ್ನು ಜಡೇಜಾ 15 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ರೆ, ಹಾರ್ದಿಕ್ ಪಾಂಡ್ಯ 18 ವಿಕೆಟ್ಸ್ ಬೇಟೆಯಾಡಿದ್ದಾರೆ.

ಗೇಮ್ ಫಿನಿಷರ್​ಗಳಾಗಿ, ಮ್ಯಾಚ್ ವಿನ್ನರ್​​​ಗಳಾಗಿ ತಮ್ಮನ್ನ ತಾವೂ ಫ್ರೂವ್ ಮಾಡಿಕೊಂಡಿರೋ ಈ ಇಬ್ಬರು ಭಾರತದ ಆತಿಥ್ಯದಲ್ಲಿ ನಡೆಯೋ ಈ ವಿಶ್ವಕಪ್​ನಲ್ಲೇ ರೋಹಿತ್ ಬತ್ತಳಿಕೆಯಲ್ಲಿನ ಮೇನ್ ವೆಪನ್ಸ್​. ಆದ್ರೆ, ಬ್ಯಾಟಿಂಗ್ ಆ್ಯಂಡ್ ಸ್ಪಿನ್​ ಸ್ನೇಹಿ ಪಿಚ್​ನಲ್ಲಿ ಎಷ್ಟರ ಮಟ್ಟಿಗೆ ಕಮಾಲ್ ಮಾಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​ ಶರ್ಮಾ ಬತ್ತಳಿಕೆಯಲ್ಲಿರೋ ಬ್ರಹ್ಮಾಸ್ತ್ರಗಳು ಇವರೇ.. ಈ ಇಬ್ಬರಲ್ಲಿ ಯಾರ್​ ಆಗ್ತಾರೆ ಮ್ಯಾಚ್ ವಿನ್ನರ್ಸ್?

https://newsfirstlive.com/wp-content/uploads/2023/07/HARDIK_ROHIT.jpg

Load More