newsfirstkannada.com

KL ರಾಹುಲ್​ ಬೆನ್ನಿನ ಮೇಲಿದೆ ಈ ಮುದ್ದು ಪ್ರಾಣಿಯ ಟ್ಯಾಟೂ.. ಎಡಗೈ, ಬಲಗೈ ಮೇಲಿರೋ ಹೆಸರು ಯಾರದ್ದು?

Share :

23-07-2023

    ರಾಹುಲ್‌ ಟೀಮ್ ಇಂಡಿಯಾದ ಸ್ಟೈಲಿಶ್​ ಬ್ಯಾಟ್ಸ್​ಮನ್​​

    ಸ್ಟಾರ್​ ಕ್ರಿಕೆಟರ್ ತಮ್ಮ ಟ್ಯಾಟೂಗಳಿಂದ ಅಷ್ಟೇ ಫೇಮಸ್

    ಮೈ ಮೇಲಿರೋ ಹಲವು ಟ್ಯಾಟೂಗಳ ವಿಶೇಷತೆ ಏನು?

ಕೆ.ಎಲ್ ರಾಹುಲ್​​ ಟ್ಯಾಟೂ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ, ಈ ಟ್ಯಾಟೂ ಪ್ರಿಯ ರಾಹುಲ್ ಬೆನ್ನ ಹಿಂದೆ ನಾಯಿಯ ಹಚ್ಚೆ ಹಾಕಿಸಿಕೊಂಡ ಹಿಂದಿನ ಸೀಕ್ರೇಟ್​ ಏನು ಅನ್ನೋದು ಇವತ್ತಿನ ಸಖತ್ ಸ್ಟೋರಿಯಲ್ಲಿದೆ.

ರಾಹುಲ್‌ ಟೀಮ್ ಇಂಡಿಯಾದ ಸ್ಟೈಲಿಶ್​ ಬ್ಯಾಟ್ಸ್​ಮನ್​​. ಸ್ಟೈಲಿಶ್​ ಬ್ಯಾಟಿಂಗ್​​ನಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರೋ ಕನ್ನಡಿಗ ಕೆ.ಎಲ್ ರಾಹುಲ್ ತಮ್ಮ ಟ್ಯಾಟೂಗಳಿಂದಲೂ ಅಷ್ಟೇ ಫೇಮಸ್​. ಮೈ ತುಂಬಾ ವಿವಿಧ ರೀತಿಯ ಟ್ಯಾಟೂಗಳನ್ನ ಹೊಂದಿರುವ ಕೆ.ಎಲ್.​ರಾಹುಲ್​ಗೆ ನಾಯಿ ಸಿಂಬಾ ಎಂದ್ರೆ ಪಂಚಪ್ರಾಣ.

ಹೀಗಾಗಿ ತಮ್ಮ ನೆಚ್ಚಿನ ನಾಯಿ ಸಿಂಬಾ ಮುಖವನ್ನ ಬೆನ್ನಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. 1 ವರ್ಷ ವಯಸ್ಸಿನ ಸಿಂಬಾನನ್ನ ದೆಹಲಿಯಿಂದ ತಂದಿರುವ ರಾಹುಲ್ ಸಿಂಬಾ ಜೊತೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಸಿಂಬಾ ಮೇಲಿನ ಪ್ರೀತಿಯನ್ನ ಟ್ಯಾಟೂ ಮೂಲಕ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ತ್ರಿವರ್ಣ ಧ್ವಜದಲ್ಲಿರುವ ಅಶೋಕ ಚಕ್ರವನ್ನ ಹಚ್ಚೆ ಹಾಕಿಸಿಕೊಂಡಿರುವ ಕೆ.ಎಲ್.ರಾಹುಲ್​, ಬಲಗೈನ ಹೆಬ್ಬೆರಳ ಭಾಗದಲ್ಲಿ ಓಂ, ಮಣಿಕಟ್ಟಿನಲ್ಲಿ ತಂದೆಯ ಹೆಸರು, ಎಡಗೈ ಮಣಿಕಟ್ಟಿನಲ್ಲಿ ತಾಯಿ ಹೆಸರನ್ನ ಬರೆಸಿಕೊಂಡಿರುವುದು ವಿಶೇಷ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್​ ಬೆನ್ನಿನ ಮೇಲಿದೆ ಈ ಮುದ್ದು ಪ್ರಾಣಿಯ ಟ್ಯಾಟೂ.. ಎಡಗೈ, ಬಲಗೈ ಮೇಲಿರೋ ಹೆಸರು ಯಾರದ್ದು?

https://newsfirstlive.com/wp-content/uploads/2023/07/KL_RAHUL_Tatoo_1.jpg

Load More